ಒಂದು ಭೇಟಿ… ಒಂದು ಮಾತು… ಜೀವಮಾನವಿಡೀ ಉಳಿದ ನೆನಪು

ಅದು ಎಂಭತ್ತರ ದಶಕ. ಆಗ ತಾನೇ ಕಾಲೇಜು ಸೇರಿದ್ದ ವಿದ್ಯಾರ್ಥಿ ನಾನು. ನಮ್ಮ ಮನೆಯ ಆವರಣದಲ್ಲಿ ಒಂದು ಭಾವಿ ಇತ್ತು. ಪ್ರತಿದಿನ ಬೆಳಿಗ್ಗೆ ಅಥವಾ ಸಂಜೆ ಅದರಿಂದ 30 ಕೊಡ ನೀರು ಸೇದುವುದು ನನ್ನ ಪಾಲಿನ ಅಲಿಖಿತ ಜವಾಬ್ದಾರಿ. ಆದರೆ, ಆ ವಯಸ್ಸಿನ ಹುಡುಗನಿಗೆ ಕೆಲಸಕ್ಕಿಂತ ಮೈಗಳ್ಳತನವೇ ಹೆಚ್ಚು! “ಬೆಳಿಗ್ಗೆ ಸೇದುತ್ತೇನೆ” ಎಂದರೆ ಸಂಜೆ, “ಸಂಜೆ ಸೇದುತ್ತೇನೆ” ಎಂದರೆ ನಾಳೆ ಬೆಳಿಗ್ಗೆ ಎಂದು ಮುಂದೂಡುತ್ತಾ ತಪ್ಪಿಸಿಕೊಳ್ಳುತ್ತಿದ್ದ ದಿನಗಳು. ಅಂತಹದ್ದೇ ಒಂದು ದಿನ ನನ್ನ ಕಳ್ಳಾಟ ಮಿತಿ ಮೀರಿತು. ತಂದೆಯವರೊಂದಿಗೆ ಮಾತಿಗೆ ಮಾತು ಬೆಳೆದು ವಾಗ್ವಾದ ನಡೆಯಿತು. ಕೊನೆಗೆ ಬೇಸರಗೊಂಡ ತಂದೆಯವರೇ ಕೋಪದಿಂದ ಭಾವಿಯಲ್ಲಿ ನೀರು ಸೇದುತ್ತಿದ್ದರು.

ಅಷ್ಟರಲ್ಲಿ ನಮ್ಮ ಕುಟುಂಬದ ಆತ್ಮೀಯರು ಹಾಗೂ ಹಿರಿಯ ಸ್ವಯಂಸೇವಕರಾದ ಶ್ರೀ ಲಕ್ಷ್ಮೀನರಸಿಂಹಯ್ಯನವರು ಮನೆಗೆ ಬಂದು, ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆ ಪ್ರಚಾರಕ್ಕೆ ಬರಬೇಕೆಂದು ತಂದೆಯವರನ್ನು ಕೇಳಿದರು. ಆಗಲೇ ಸಿಟ್ಟಿನಲ್ಲಿದ್ದ ತಂದೆಯವರು, ಅಯ್ಯೋ ಬಿಡ್ರಿ ನರಸಿಂಹಯ್ಯನವರೇ… ಯಾರು ಗೆದ್ದರೂಸೋತರೂ ನಮ್ಮ ಕಷ್ಟವೇನು ಕರಗೋದಿಲ್ಲಅದಲ್ಲದೆ ವ್ಯಕ್ತಿ ನನಗೆ ವೈಯಕ್ತಿಕವಾಗಿ ಪರಿಚಯವೇ ಇಲ್ಲ…” ಎಂದು ನೇರವಾಗಿ ಹೇಳಿ ಅವರನ್ನು ಕಳುಹಿಸಿದ್ದರು.

ಆ ಘಟನೆ ನಡೆದು ಕೇವಲ 24 ಗಂಟೆಗಳೂ ಕಳೆದಿರಲಿಲ್ಲ. ಮಾರನೇ ದಿನ ಸಂಜೆ ನಮ್ಮ ಮನೆಯ ಮುಂದೆ ಒಂದು ಬಜಾಜ್ ಚೇತಕ್ ಸ್ಕೂಟರ್ ಬಂದು ನಿಂತಿತು. ಅದರ ಮೇಲೆ ಶ್ರೀ ಲಕ್ಷ್ಮೀನರಸಿಂಹಯ್ಯನವರ ಜೊತೆ, ಎತ್ತರದ ಹಣೆಯ ಮೇಲೆ ದೊಡ್ಡ ಕುಂಕುಮದ ತಿಲಕವಿಟ್ಟಿದ್ದ, ಮುಗುಳ್ನಗೆಯ ಮುಖದ ವ್ಯಕ್ತಿಯೊಬ್ಬರು ಬಂದರು. ಅವರೇ ಶ್ರೀ ರಾಮಚಂದ್ರಗೌಡರು. ಕಾಂಪೌಂಡ್ ಒಳಗೆ ಕಾಲಿಟ್ಟು, ನಮಸ್ಕಾರ… ಚೆನ್ನಾಗಿದ್ದೀರಾ?” ಎಂದು ಅತ್ಯಂತ ಆತ್ಮೀಯವಾಗಿ ಮಾತು ಆರಂಭಿಸಿದರು. ಮೊದಲ ಬಾರಿಗೆ ಮನೆಗೆ ಬಂದ ಅತಿಥಿಗಳೆಂದು ಯಥಾಶಕ್ತಿ ಸತ್ಕರಿಸಿ ಕುಳ್ಳಿರಿಸಿದ್ದೆವು. ಮಾತು ಮಾತಿನಲ್ಲೇ ಅವರು ತಮ್ಮ ಮೂಲ ಊರು ಕುಣಿಗಲ್ ಸಮೀಪದ ಅಮೃತೂರು ಎಂದು ಹೇಳಿದರು. ನಮ್ಮ ಸೋದರತ್ತೆ ಕುಟುಂಬದ ಶ್ಯಾನುಭೋಗತನವೂ ಅದೇ ಭಾಗಕ್ಕೆ ಸೇರಿದ್ದರಿಂದ, ಕೆಲವೇ ನಿಮಿಷಗಳಲ್ಲಿ ಎರಡೂ ಕುಟುಂಬಗಳಿಗೆ ಪರಿಚಿತರಾದ ಹಲವರ ಹೆಸರುಗಳು ಒಂದರ ಹಿಂದೆ ಒಂದರಂತೆ ಹೊರಬಂದವು. ಅದರಲ್ಲೂ, ಮಲ್ಲೇಶ್ವರದಲ್ಲಿ ವಾಸವಾಗಿದ್ದ ನಮ್ಮ ಚಿಕ್ಕಪ್ಪನವರಿಗೆ ಅವರು ವೈಯಕ್ತಿಕವಾಗಿ ನೆರವಾದ ಘಟನೆಯನ್ನು ಹೇಳಿದಾಗ, ತಂದೆಯವರ ಮನಸ್ಸೇ ಬದಲಾಯಿತು. ಅವರ ಸರಳತೆ, ಆತ್ಮೀಯತೆ ಮತ್ತು ಯಾವುದೇ ಹಿಂಜರಿಕೆಯಿಲ್ಲದೆ ಒಬ್ಬ ಸಾಮಾನ್ಯ ಕಾರ್ಯಕರ್ತನ ಮನೆಗೆ ಬಂದು ಮಾತನಾಡಿದ ವಿನಯ—ಇವೆಲ್ಲವೂ ತಂದೆಯವರ ಮೇಲೆ ಅಪಾರ ಪ್ರಭಾವ ಬೀರಿದವು. ಅದರ ಫಲವೇನೆಂದರೆ, ಮಾರನೇ ದಿನದಿಂದ ಚುನಾವಣೆ ಮುಗಿಯುವವರೆಗೂ ತಂದೆಯವರು ಶ್ರೀ ರಾಮಚಂದ್ರಗೌಡರ ಪರ ಪ್ರಚಾರದಲ್ಲಿ ಸಂಪೂರ್ಣ ತೊಡಗಿಸಿಕೊಂಡರು.

ಇಂದು ರಾಜಕಾರಣದಲ್ಲಿ ನಾಯಕರನ್ನು ಭೇಟಿ ಮಾಡಲು ಸಾಮಾನ್ಯ ಕಾರ್ಯಕರ್ತನೇ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ. ಆದರೆ, ಆಗ ಒಬ್ಬ ವಿಧಾನ ಪರಿಷತ್ ಅಭ್ಯರ್ಥಿಯೇ ಮತದಾರನ ಮನೆ ಬಾಗಿಲಿಗೆ ಬಂದು, ಸಂಬಂಧಗಳನ್ನು ಕಟ್ಟಿಕೊಂಡು, ವಿಶ್ವಾಸ ಗಳಿಸುತ್ತಿದ್ದ ಕಾಲವಿತ್ತು. ಅದೇ ಶ್ರೀ ರಾಮಚಂದ್ರಗೌಡರ ವ್ಯಕ್ತಿತ್ವ. ಸರಳತೆ ಅವರ ಅಲಂಕಾರವಾಗಿತ್ತು. ಸ್ನೇಹ ಅವರ ಸ್ವಭಾವವಾಗಿತ್ತು. ಕಾರ್ಯಕರ್ತರನ್ನು ಗೆಲ್ಲುವುದು ಭಾಷಣಗಳಿಂದಲ್ಲ, ಹೃದಯದಿಂದ ಎಂಬುದನ್ನು ಬದುಕಿನುದ್ದಕ್ಕೂ ತೋರಿಸಿದ ಅಪರೂಪದ ನಾಯಕರು ಅವರು. ಅಂತಹ ಸಜ್ಜನ, ಸಂಘಟನಾ ಶಿಲ್ಪಿ ಮತ್ತು ಆತ್ಮೀಯ ಹಿರಿಯರಾದ ಶ್ರೀ ರಾಮಚಂದ್ರಗೌಡರು ವಯೋಸಹಜ ಅನಾರೋಗ್ಯದ ಕಾರಣದಿಂದಾಗಿತಮ್ 87ನೇ ವಯಸ್ಸಿನಲ್ಲಿ 2026 ಜುಲೈ 14ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದ ಸುದ್ದಿ ಕೇಳಿ ನಿಜಕ್ಕೂ ಮನಸ್ಸಿಗೆ ತೀವ್ರ ಬೇಸರವನ್ನುಂಟು ಮಾಡಿದೆ.

ಕರ್ನಾಟಕ   ಬಿಜೆಪಿಯ ಭೀಷ್ಮ. ಜನಸಂಘದ ದಿನಗಳಿಂದಲೇ ಬೆಂಗಳೂರಿನಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಭದ್ರ ಅಡಿಪಾಯ ಹಾಕಿದ ಸಂಘಟನಾ ಶಿಲ್ಪಿ. ಸಾವಿರಾರು ಕಾರ್ಯಕರ್ತರಿಗೆ ಮಾರ್ಗದರ್ಶಕರಾಗಿದ್ದ ಅಪರೂಪದ ಹಿರಿಯ ನಾಯಕ.

ಜನಸಂಘದಿಂದ ಬಿಜೆಪಿ ಹೆಮ್ಮರದವರೆಗೆ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ