ಫ್ಯಾಕ್ಟ್ ನ್ನು ಅಡಗಿಸಿ ಇಡಬಹುದು : ಬೆನಿನ್ ವೈಟ್ ಪಾಡ್ ಕಾಸ್ಟ್ ಕ್ರಿಯೇಟರ್ ಆಗಿ ಫೇಮಸ್. ಆಕೆ ಹೇಳುವುದೆಂದರೆ, ತಾನು ಹೇಳುವುದೆಲ್ಲ ಸತ್ಯ ಸಂಗತಿ ಮಾತ್ರ! ಈ ಸತ್ಯ ಶೋಧನೆಗಾಗಿ ಆಕೆ ಬಹಳ ಕಷ್ಟಪಡಬೇಕು. ಸಣ್ಣಪುಟ್ಟ ಸ್ಟುಡಿಯೋಗಳಲ್ಲಿ ಗಂಟೆಗಟ್ಟಲೆ ಕಾಯಬೇಕು. ಬಿಸ್ ನೆಸ್ ಇಂಡಸ್ಟ್ರಿಯ ತೆರೆಮರೆಯ ಗ್ರೀನ್ ರೂಮಿನಲ್ಲಿ ಬಹಳಷ್ಟು ನೈಜ ಘಟನೆಗಳು ನಡೆದುಹೋಗುತ್ತವೆ. ಅಲ್ಲಿ ಬಹಳಷ್ಟು ಫ್ಯಾಕ್ಟ್ ಅಡಗಿಹೋಗುತ್ತವೆ. ಬಹಳಷ್ಟು ಡೀಲ್ಸ್ ಆಗಿ, ಎಷ್ಟೋ ಕೆಡುತ್ತವೆ, ಎಷ್ಟೋ ಕೊಳಕು ಕಾರ್ಪೆಟ್ ಕೆಳಗೆ ಅಡಗಿಹೋಗುತ್ತವೆ. ಸ್ಕ್ರೀನ್ ಮೇಲೆ ಕಂಡಿದ್ದನ್ನು ಮಾತ್ರ ಆಡಿಯೆನ್ಸ್ನಿಜ ಅಂದುಕೊಳ್ಳುತ್ತಾರೆ. ತೆರೆಮರೆಯ ವಿಚಾರ ತಿಳಿಯ ಬಯಸುತ್ತಾರೆ, ಆದರೆ ತಿಳಿಯುವುದು ಹೇಗೆ? ಆಕೆ ಎಷ್ಟೋ ಜನರೊಂದಿಗೆ ವಿಚಾರವಿಮರ್ಶೆ ನಡೆಸಿ, ಫ್ಯಾಕ್ಟ್ಸ್ ಸಂಗ್ರಹಿಸುತ್ತಾರೆ. ಅವು ಮಾಮೂಲಿ ಆಡಿಯೆನ್ಸ್ ಜೊತೆ, ಇಂಡಸ್ಟ್ರಿಯ ಒಳಗುಟ್ಟು ಹಂಚಿಕೊಳ್ಳಬಲ್ಲವು. ಈಗ ವಿಶ್ವದೆಲ್ಲೆಡೆ ಪತ್ರಿಕೆ ಓದುವವರೇ ಕಡಿಮೆ ಆಗಿರುವಾಗ, ಗಾಸಿಪ್ ಉಣಬಡಿಸುವ ಪಾಡ್ ಕಾಸ್ಟ್ ಗಳಿಂದ ಜನ ಮಜಾ ಪಡೆಯುತ್ತಾರೆ.

ಮನಸ್ಸಿಗೆ ಮುದ ನೀಡುವ ನೆಪದಲ್ಲಿ : ಸೀಸಮ್ ಸ್ಟ್ರೀಟ್ ಡಿಕೇಡ್ಸ್ ನಿಂದ ಮಕ್ಕಳಿಗೆ ಮನರಂಜನೆ ಒದಗಿಸುವ ಟಿವಿ ಪ್ರೋಗ್ರಾಮ್ ಅಮೆರಿಕಾ ಹಾಗೂ ಇನ್ನಿತರ ಬಹಳಷ್ಟು ದೇಶಗಳಲ್ಲಿ ಬಲು ಜನಪ್ರಿಯ. ಇವರ ಪಪೆಟ್ಸ್ ಹಾಗೂ ಅವುಗಳ ಮನರಂಜನೀಯ ಆ್ಯಕ್ಷನ್ಸ್ ಸಣ್ಣ ಮಕ್ಕಳನ್ನು ಸದಾ ಟಿವಿಗೇ ಅಂಟಿಕೊಂಡಿರುವಂತೆ ಮಾಡುವಲ್ಲಿ ಯಶಸ್ವಿಯಾಗಿವೆ. ಇದೀಗ ಈ ಕಾರ್ಯಕ್ರಮಗಳು ಟಿವಿ ಬಿಟ್ಟು ವೇದಿಕೆಗಳಿಗೆ ನೇರ ಪರ್ಫಾರ್ಮೆನ್ಸ್ ನೀಡಲು ಬಂದಿವೆ! ಹಲವಾರು ನಗರಗಳಲ್ಲಿ ಮಕ್ಕಳು, ಪೋಷಕರನ್ನು ಸೇರಿಸಿಯೇ ಇಂಥ ಪರ್ಫಾರ್ಮೆನ್ಸ್ ಇರುತ್ತವೆ. ಬದಲಾಗುತ್ತಿರುವ ಪೀಳಿಗೆ ಹಾಗೂ ಒಬ್ಬಂಟಿ ಸಂತಾನದ ಕುಟುಂಬಗಳೇ ಹೆಚ್ಚಾಗಿರುವ ಈ ಕಾಲದಲ್ಲಿ ಸೀಸಮ್ ಸ್ಟ್ರೀಟ್ ಕ್ಯಾರೆಕ್ಟರ್ಸ್ ಇಂದು ಮಕ್ಕಳಿಗೆ ಪೋಷಕರಿಗಿಂತ ಹೆಚ್ಚು ಪ್ರಿಯ! ಏಕೆಂದರೆ ಪೋಷಕರಂತೂ ಆಫೀಸ್, ಪಾರ್ಟಿ, ಮೊಬೈಲ್‌ಗಳಲ್ಲಿ ಸದಾ ಬಿಝಿ. ಹಾಗಾಗಿ ಮಕ್ಕಳಿಗೆ ಈ ಕ್ಯಾರೆಕ್ಟರ್ ಗಳೇ ಇಷ್ಟ!

ಸರ್ಕಾರವನ್ನು ನಂಬುವ ಹಾಗಿಲ್ಲ : ಇವರೆಲ್ಲರೂ ಅಥ್ಲೆಟಿಕ್ಸ್ ನಲ್ಲಿ ಮಹಾನ್ ಅಚೀವರ್ಸ್! ಮುಂದಿನ ಪೀಳಿಗೆಗೆ ಅಥ್ಲೆಟಿಕ್ಸ್ ಸಹ ದೊಡ್ಡ ಕೆರಿಯರ್ ಆಗಲಿದೆ ಎಂದು ಡಾ. ಕಿಕೀ ಬೇಕರ್ ಹೇಳುತ್ತಿದ್ದಾರೆ, ಇವರ ಪ್ರಕಾರ, ಜೆನ್Z ನವರಿಗೆ ಫಿಟ್ನೆಸ್ ಭೂತ ಮೆಟ್ಟಿಕೊಂಡಾಗಿನಿಂದ, ಅಥ್ಲೆಟಿಕ್ಸ್ ಚಾಂಪಿಯನ್ ಗಾಗಿ ಹೊಸ ನೌಕರಿಗಳು ಸಿಗತೊಡಗಿವೆ. ಅಥ್ಲೆಟಿಕ್ಸ್ ನಲ್ಲಿ ಯಶಸ್ವಿಯಾಗಲು ಬಾಡಿ ಪರ್ಫೆಕ್ಟ್ ಆಗಿರಬೇಕು. ಯಾರ ಬಾಡಿ ಇದಕ್ಕೆ ಸೂಕ್ತವೋ, ಅವರ ಬಳಿ ಕಲಿಯುವವರಿಗೇನೂ ಕಡಿಮೆ ಇಲ್ಲ. ಇಷ್ಟೆಲ್ಲ ಅಥ್ಲೆಟಿಕ್ಸ್ ನಡುವೆ ಯಶಸ್ಸು ಕಂಡ ಹುಡುಗಿಯರು, ಕಿಕೀ ಬಳಿ ಕಲಿಯಲು ಬಂದರು, ತಮ್ಮ ಪ್ರತಿಭೆಗೆ ಹೇಗೆ ಒರೆಹಚ್ಚಬೇಕೆಂದು ಕಲಿತರು. ಕೇವಲ ಸರ್ಕಾರ ನಂಬಿ ಕುಳಿತರೆ ಆಗದು, ಮಾಡೆಲ್ಸ್ ಗೆ ಫಿಟ್ ಆಗಿರಲು ಇಂಥವರ ತರಬೇತಿ ಅಗತ್ಯ ಬೇಕು.





