ಮಳೆಗಾಲದ ದಿನಗಳಲ್ಲಿ ಬೀದಿ ಬದಿ ಚಾಟ್ಸ್ ರುಚಿ ರುಚಿಯಾಗಿ ಬಲು ಪ್ರಿಯವೆನಿಸುತ್ತವೆ. ಅದಕ್ಕೆ ಮುನ್ನ ನಿಮ್ಮ ಆರೋಗ್ಯದತ್ತ ಮೊದಲು ಗಮನ ಕೊಡಿ.....

ಮಳೆಗಾಲ ಬಂತು ಎಂದೊಡನೆ ಜನ ಈ ಸೀಸನ್ನಿನ ಮಜಾ ಪಡೆಯಲು ಬೀದಿ ಬದಿ ಮಾರಾಟ ಮಾಡುವ ಬೋಂಡ, ಬಜ್ಜಿ, ಪಕೋಡ, ಚಾಟ್ಸ್ ಇತ್ಯಾದಿಗಳಿಗೆ ಮುಗಿಬೀಳುತ್ತಾರೆ. ಮಳೆಗಾಲದಲ್ಲಿ ಹೊರಗಿನಿಂದ ದುಡಿದು ದಣಿದು ಬಂದಿರುವಾಗ, ಬಾಯಿಗೆ ಹಿತಕರ ಎನಿಸುವ, ರುಚಿ ರುಚಿಯಾದ ಈ ಬಿಸಿ ಬಿಸಿ ಹುಳಿ, ಸಿಹಿ, ಖಾರಖಾರದ ಚಾಟ್ಸ್ ಎಲ್ಲರಿಗೂ ಹೆಚ್ಚಿನ ಖುಷಿ ನೀಡುತ್ತದೆ. ಆಗ ಮನೆಯಲ್ಲೇ ಇದನ್ನು ತಯಾರಿಸಿಕೊಳ್ಳುವಷ್ಟು ಸಹನೆ, ಪುರಸತ್ತು ಇರುವುದಿಲ್ಲ. ಆದರೆ ನಮ್ಮ ಆರೋಗ್ಯದ ಮೇಲೆ ಇದರ ದುಷ್ಪರಿಣಾಮ ತಪ್ಪಿದ್ದಲ್ಲ.

ಅತ್ಯಾಕರ್ಷಕ ಬೀದಿ ಬದಿ ತಿನಿಸುಗಳು : ಈ ಕುರಿತಾಗಿ ಗ್ಯಾಸ್ಟ್ರೋ ಎಂಟಿರಾಲಜಿಯ ತಜ್ಞರು ಹೇಳುವುದೆಂದರೆ, ಅಸಲಿಗೆ ಮಳೆಗಾಲದಲ್ಲಿ ನಾವು ಬಾಯಿಚಪಲಕ್ಕೆ ಬಲಿಯಾಗಿ ಈ ಬೀದಿ ಬದಿಯ ತಿನಿಸನ್ನು ಸೇವಿಸಲೇಬಾರದು. ಆಗ ಮಳೆಗಾಲದ ರೋಗಗಳಿಂದ ಪಾರಾಗಬಹುದು. ಹಾಗೇ ನೋಡಿದರೆ, ಬೀದಿ ಬದಿಯ ಫುಡ್‌ ಬಲು ಆಕರ್ಷಕ, ರುಚಿಕರ ಹೌದು. ಆದರೆ ಇದು ಯಾವಾಗ ಮಾಡಲ್ಪಟ್ಟಿತ್ತೋ? ಹೇಗೆ ತಯಾರಾಗಿದ್ದೋ ಗೊತ್ತಿಲ್ಲ. ಹೀಗಾಗಿ ಮಳೆಗಾಲದಲ್ಲಿ ಸ್ಟ್ರೀಟ್‌ ಫುಡ್‌ ಸೇವಿಸುವ ಮುನ್ನ ಕೆಲವು ಮುನ್ನೆಚ್ಚರಿಕೆ ವಹಿಸಲೇ ಬೇಕು. ಸುರಕ್ಷತೆಯ ದೃಷ್ಟಿಯಿಂದ ಈ ತಿನಿಸು ಬಹಳ ರಿಸ್ಕ್ ಕಪ್‌ ಎಂಬುದರಲ್ಲಿ ಸಂದೇಹವಿಲ್ಲ. ಅದರಲ್ಲೂ ಮಳೆಗಾಲದಲ್ಲಿ ತೆರೆದಿಟ್ಟ ಈ ತಿನಿಸುಗಳು ಅಗಾಧ ಬ್ಯಾಕ್ಟೀರಿಯಾ ವೈರಸ್‌ ಗಳ ತವರೂರಾಗಿರುತ್ತವೆ. ಇದರಿಂದ ಸೋಂಕಿನ ಭೀತಿ ತಪ್ಪಿದ್ದಲ್ಲ. ಹೀಗಾಗಿ ಈ ಕುರಿತು ಎಚ್ಚರ ವಹಿಸಲೇಬೇಕು.

ಕಲುಷಿತ ನೀರು ಎಲ್ಲ ರೋಗಗಳಿಗೂ ಮೂಲ : ಮಳೆಗಾಲದಲ್ಲಿ ಸ್ಟ್ರೀಟ್‌ ಫುಡ್‌ ಸವಿಯುವುದರಿಂದ ಎಲ್ಲಕ್ಕೂ ದೊಡ್ಡ ಸಮಸ್ಯೆ ಆಗುವುದೆಂದರೆ ಫುಡ್‌ ಪಾಯಿಸನಿಂಗ್‌ಗ್ಯಾಸ್ಟ್ರೋಎಂಟೆರೈಟಿಸ್‌ ನ ತೊಂದರೆಗಳು. ಏಕೆಂದರೆ ಮಳೆಗಾಲದಲ್ಲಿ ನೀರು ಅತ್ಯಧಿಕ ಕಲುಷಿತಗೊಳ್ಳುತ್ತದೆ. ಬಹಳಷ್ಟು ಕಡೆ ವಾಟರ್‌ ಸಪ್ಲೈ ಪೈಪುಗಳಲ್ಲಿ ಬ್ರೇಕ್‌ ಡೌನ್‌ ಆಗುವುದರಿಂದ, ಕೊಳಕು ನೀರು ಕುಡಿಯುವ ನೀರಿಗೆ ಬೆರೆತು ಹೋಗುವ ಸಂಭವವನ್ನು ಅಲ್ಲಗಳೆಯಲಾಗುವುದಿಲ್ಲ. ಹೀಗಾಗಿ ಕುಡಿಯುವ ನೀರಿಗೆ ರಾಶಿ ರಾಶಿ ವೈರಸ್ ಬ್ಯಾಕ್ಟೀರಿಯಾಗಳ ಆಕ್ರಮಣವಾಗುತ್ತದೆ. ಹೀಗಾಗಿ ಅಂಥ ನೀರಿನಿಂದ ತಯಾರಾದ ಆಹಾರ ಪದಾರ್ಥಗಳಿಂದ ಬ್ಯಾಕ್ಟೀರಿಯಲ್/ವೈರಲ್ ಇನ್‌ ಫೆಕ್ಷನ್‌ ಆಗದೆ ಇರುತ್ತದೆಯೇ? ಇದರಿಂದ ಸಹಜವಾಗಿ ಫುಡ್‌ ಪಾಯಿಸನಿಂಗ್ ಗ್ಯಾಸ್ಟ್ರೋಎಂಟೆರೈಟಿಸ್‌ ಸಮಸ್ಯೆ ಹೆಚ್ಚುತ್ತವೆ. ಇದರಿಂದ ವಾಂತಿ, ಭೇದಿ ತಪ್ಪಿದ್ದಲ್ಲ. ಇದನ್ನು ನಿರ್ಲಕ್ಷಿಸಿದರೆ ಅತಿ ಭೇದಿಗೆ ತಿರುಗಿ, ಅತ್ಯಧಿಕ ಸುಸ್ತು ಹೆಚ್ಚಿ, ರೋಗಿ ಓಡಾಡುವುದಕ್ಕೂ ಆಗದೇ ಮಲಗಿಯೇ ಇರಬೇಕಾಗುತ್ತದೆ. ಜೊತೆಗೆ ಹೊಟ್ಟೆ ತೊಳಸುವಿಕೆ, ನುಲುಚುವುದು, ಹೊಟ್ಟೆನೋವು ತಪ್ಪಿದ್ದಲ್ಲ. ಫುಡ್‌ ಪಾಯಿಸನಿಂಗ್‌ ಎರಡು ವಿಧದಲ್ಲಿ ಆಗುತ್ತದೆ. ಯಾವ  ಆಹಾರವನ್ನು ನೀವು ಬೀದಿ ಬದಿ ತಿಂದಿರೋ, ಅದರಲ್ಲಿ ಮೊದಲೇ ಬ್ಯಾಕ್ಟೀರಿಯಾ ಪ್ರೀ ಫಾರ್ಮ್ಸ್ ಟಾಕ್ಸಿಕ್‌ ಆಗಿರಬಹುದು. ಅಂದ್ರೆ ಮೊದಲೇ ಇದರಲ್ಲಿ ಕೋವೈ ಬ್ಯಾಕ್ಟೀರಿಯಾ ಫಾರ್ಮೇಶನ್‌ ಆಗಿಹೋಗಿರುತ್ತದೆ. ಇದರ ಪರಿಣಾಮ ಬೇಗ ಕಾಣಿಸುತ್ತದೆ. 2ನೇ ವಿಧ ಅಂದ್ರೆ, ಬ್ಯಾಕ್ಟೀರಿಯಾ ನಂತರ ಫಾರ್ಮ್ ಆಗುವುದು, ಇದರ ಪರಿಣಾಮ ಮಾರನೇ ದಿನ ಕಾಣಿಸಬಹುದು. ಆದರೆ ಎರಡರ ಲಕ್ಷಣಗಳೂ ಒಂದೇ ತರಹ ಇರುತ್ತವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ