ಭಿಕ್ಖುಗಳ ಚೀವರ ಮತ್ತು ವಿಹಾರದ ಅವಶ್ಯಕ ವಸ್ತುಗಳನ್ನು ದಾನಮಾಡುವ ಕಠಿಣ ಚೀವರ ದಾನೋತ್ಸವ ನಾಳೆ (ಅಕ್ಟೋಬರ್ 19ರಂದು) ಬೆಂಗಳೂರಿನ ಮಹಾಬೋಧಿ ಸೊಸೈಟಿಯಲ್ಲಿ ನಡೆಯಲಿದೆ.
ಬೆಳಗ್ಗೆ 10.30ಕ್ಕೆ ಭಿಕ್ಖು ಸಂಘವನ್ನು ಪಿಂಡಾಚಾರಕ್ಕೆ ಸ್ವಾಗತಿಸುವುದು, ಭಿಕ್ಖು ಸಂಘಕ್ಕೆ ಆಹಾರ ದಾನ, ಬೋಧಿ ವೃಕ್ಷದಿಂದ ವಿಹಾರವರೆಗೆ ಭಿಕ್ಖುಗಳ ಮೆರವಣಿಗೆ, ವಿಹಾರದಲ್ಲಿ ಬುದ್ಧವಂದನೆ ಮತ್ತು ಪರಿತ್ತ ಪಠನೆ, ಉಪಾಸಕ, ಉಪಾಸಕಿಯರಿಂದ ತ್ರಿಸರಣ, ಪಂಚಶೀಲ ಮತ್ತು ಅಟ್ಟಶೀಲ ಯಾಚನೆ, “ಕಠಿಣ ಚೀವರ ದಾನದ ಮಹತ್ವ ಮತ್ತು ಬುದ್ಧ, ಧಮ್ಮ ಹಾಗೂ ಸಂಘದಲ್ಲಿ ಬೆಳೆಯುವುದು” ಮತ್ತು “ಭಿಕ್ಖುಗಳು ಧಮ್ಮದಲ್ಲಿ ಬೆಳೆಯಲು ಗೃಹಸ್ಥರ ಕರ್ತವ್ಯಗಳು” ಎನ್ನುವ ವಿಷಯ ಕುರಿತು ಧಮ್ಮ ಪ್ರವಚನ ನಡೆಯಲಿದೆ.ಮಧ್ಯಾಹ್ನ 1 ಗಂಟೆಯ ನಂತರ ಉಪಾಸಕ, ಉಪಾಸಕಿಯರಿಂದ ಪವಿತ್ರ ಕಠಿಣ ಚೀವರ ಮತ್ತು ಇನ್ನಿತರ ದಿನನಿತ್ಯದ ವಸ್ತುಗಳನ್ನು ಭಿಕ್ಖು ಸಂಘಕ್ಕೆ ದಾನವಾಗಿ ಅರ್ಪಿಸುವುದು, ಆಶೀರ್ವಚನ, ಬುದ್ಧ ಪೂಜೆ ಮತ್ತು ಧ್ಯಾನ ಕಾರ್ಯಕ್ರಮಗಳು ನಡೆಯಲಿವೆ.
ಇದು ಅತ್ಯಂತ ಹೆಚ್ಚಿನ ಪುಣ್ಯ ಕಾರ್ಯಗಳಲ್ಲಿ ಒಂದಾಗಿದ್ದು, ಕಠಿಣ ಚೀವರವನ್ನುಭಿಕ್ಖು ಸಂಘಕ್ಕೆ ಸಮರ್ಪಿಸಲು ಎಲ್ಲರೂ ಪಾಲ್ಗೊಂಡು ಪುಣ್ಯ ಪ್ರಾಪ್ತಿ ಪಡೆಯುವಂತೆ ಬೆಂಗಳೂರು ಮಹಾಬೋಧಿ ಸೊಸೈಟಿ ಕೋರಿದೆ.