ಇಂದಿನಿಂದಲೇ (ಮಾರ್ಚ್​ 7) ಜಾರಿಗೆ ಬರುವಂತೆ ಎಲ್‌ಪಿಜಿ ಗೃಹ ಬಳಕೆಯ ಸಿಲಿಂಡರ್ ಮತ್ತು ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಇದು ನೇರವಾಗಿ, ಇಸ್ರೇಲ್ - ಇರಾನ್ ನಡುವಿನ ಯುದ್ದದ ಎಫೆಕ್ಟ್ ಆಗಿದ್ದು, ಮುಂದಿನ ದಿನಗಳಲ್ಲಿ ಇತರ ತೈಲ ಉತ್ಪನ್ನಗಳ ಬೆಲೆಯಲ್ಲೂ ಏರಿಕೆಯಾಗಲಿದೆಯೇ ಎಂಬ ಭೀತಿ ಜನಸಾಮಾನ್ಯರಲ್ಲಿ ಎದುರಾಗಿದೆ.

ಗೃಹ ಬಳಕೆಯ ಸಿಲಿಂಡರ್ (14.2 ಕೆಜಿ) ಬೆಲೆ ದೇಶಾದ್ಯಂತ 60 ರೂ. ಏರಿಕೆಯಾಗಿದೆ. ಇನ್ನು, ವಾಣಿಜ್ಯ ಬಳಕೆಯ ಸಿಲಿಂಡರ್ 115 ರೂ. ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಮನೆಬಳಕೆಯ ಸಿಲಿಂಡರ್ ಬೆಲೆ ಏರಿಕೆಯ ನಂತರ - 915.50 ರೂಪಾಯಿ ಆಗಿದೆ.

ಇರಾನ್ ಮತ್ತು ಇಸ್ರೇಲ್ ನಡುವಿನ ಸಮರ ಮಧ್ಯಪ್ರಾಚ್ಯ ದೇಶಗಳಿಗೂ ಹರಡಿರುವ ಹಿನ್ನಲೆಯಲ್ಲಿ, ತೈಲ ಉತ್ಪನ್ನಗಳ ಬೆಲೆಯಲ್ಲಿ ಏರಿಕೆಯಾಗಬಹುದು ಎಂಬ ನಿರೀಕ್ಷೆಯಿತ್ತು. ಇದರ ಭಾಗವಾಗಿ, ಸಿಲಿಂಡರ್ ಬೆಲೆಯಲ್ಲಿ ಏರಿಕೆಯಾಗಿದೆ. ಇನ್ನು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲೂ ಏರಿಕೆಯಾಗಬಹುದು ಎನ್ನಲಾಗಿದೆ.

ಆದರೆ, ದೇಶದಲ್ಲಿ ಇಂಧನದ ಕೊರತೆಯಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಪುರಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಗೃಹಬಳಕೆ ಸಿಲಿಂಡರ್ ಬೆಲೆ 855.50 ರೂ. ಇದ್ದದ್ದು 915.50 ರೂ.ಗೆ ಏರಿಕೆಯಾಗಿದೆ. ಇದು ತಕ್ಷಣದಿಂದಲೇ ಜಾರಿಗೆ ಬರುವಂತೆ ಅನ್ವಯವಾಗಿದೆ. ಐಒಸಿ ಕೂಡಾ, ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಎದುರಾಗಿದೆ ಎಂಬ ವದಂತಿಗಳನ್ನು ತಳ್ಳಿಹಾಕಿದ್ದು, ದೇಶದಲ್ಲಿ ಇಂಧನ ದಾಸ್ತಾನು ಸಾಕಷ್ಟಿದೆ ಎಂದಿದೆ.

ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವ ತೈಲ ಸಾಗಣಿಕೆಯಲ್ಲಿ ಕೆಲವು ದಿನಗಳಿಂದ ಭಾರೀ ವ್ಯತ್ಯಯ ಉಂಟಾಗಿದೆ. ಆದರೆ, ಯುರೋಪ್, ಅಮೆರಿಕಾ ಮತ್ತು ಇಸ್ರೇಲ್ ದೇಶದ ಹಡುಗಗಳ ಸಂಚಾರಕ್ಕೆ ಮಾತ್ರ ನಮ್ಮ ನಿರ್ಬಂಧ ಎಂದು ಇರಾನ್ ಸಚಿವಾಲಯ ಸ್ಪಷ್ಟಪಡಿಸಿದೆ. ಭಾರತದ ಶೇ. 30ರಷ್ಟು ತೈಲ ಬೇಡಿಕೆಗೆ ಈ ಜಲಸಂಧಿ ಭಾರೀ ಮಹತ್ವದ್ದಾಗಿದೆ.

ಭಾರತವು ರಷ್ಯಾದಿಂದ ಹೆಚ್ಚುವರಿ ತೈಲ ಖರೀದಿಸುತ್ತಿದೆ. ತೈಲವನ್ನು ತುಂಬಿಸಿಕೊಂಡು ಬಂದಿರುವ ರಷ್ಯಾದ ಹಡಗುಗಳು, ಗುಜರಾತ್ ಕರಾವಳಿಗೆ ಈಗಾಗಲೇ ಬಂದು ತಲುಪಿವೆ. ಅಮೆರಿಕಾ ಕೂಡಾ, ಭಾರತಕ್ಕೆ ತೈಲ ನೀಡಲು ಮುಂದೆ ಬಂದಿದೆ. ಸಿಲಿಂಡರ್ ಬೆಲೆ ಏರಿಕೆಯು ಸಾಮಾನ್ಯ ಜನರ ಮತ್ತು ಸಣ್ಣ ವ್ಯಾಪಾರಸ್ಥರ ಬಜೆಟ್ ಮೇಲೆ ಗಮನಾರ್ಹ ಪರಿಣಾಮ ಬೀರಲಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ