ಇಎಂಐ ರೂಪದಲ್ಲಿ ಮಾಡಿದ ಸಾಲದ ಹೊರೆಯನ್ನು ಕಡಿಮೆ ಮಾಡಲು ಈ ವಿಷಯಗಳಿಗೆ ಗಮನಕೊಡಿ......!
ನಿಶಾಳ ತಂದೆ ಅನಳ ಹುಟ್ಟುಹಬ್ಬದಂದು 80 ಸಾವಿರ ರೂ. ಮೌಲ್ಯದ ಐಫೋನ್ 14 ಪ್ರೊಪ್ಲಸ್ ನ್ನು ಉಡುಗೊರೆಯಾಗಿ ನೀಡಿದರು. ಮರುದಿನ ನಿಶಾ ತನ್ನ ಹೊಸ ಬ್ರಾಂಡ್ ಗೆ ಫೋನ್ ನೊಂದಿಗೆ ಕಾಲೇಜಿಗೆ ಹೋದಾಗ, ಅವಳ ಫೋನ್ ನೋಡಿ ಅವಳ ಸ್ನೇಹಿತರೆಲ್ಲರೂ ಆಶ್ಚರ್ಯಚಕಿತರಾದರು. ಸುಮನಾಗಂತೂ ಇದನ್ನು ನೋಡಿ ಬಹಳ ಅಚ್ಚರಿಯಾಯಿತು.
ಸುಮನಾ ನಿಶಾಳ ಸಹಪಾಠಿ. ಅವಳ ಹುಟ್ಟುಹಬ್ಬದ ದಿನ ಹತ್ತಿರ ಬರುತ್ತಿತ್ತು. ತಾನೂ ಕೂಡ ಇಂತಹದೇ ಫೋನ್ ತೆಗೆದುಕೊಳ್ಳಬೇಕು ಎಂದುಕೊಂಡಳು ಸುಮನಾ. ಆದರೆ, ಅವಳ ತಂದೆ ಆಟೋರಿಕ್ಷಾ ಚಾಲಕ. ಅಂತಹ ಪರಿಸ್ಥಿತಿಯಲ್ಲಿ ಅವರಿಗೆ ಅಷ್ಟು ಆದಾಯವಿಲ್ಲದ ಕಾರಣ ಅವರಿಗೆ ಐಫೋನ್ 14 ಪ್ರೊಪ್ಲಸ್ ನಂಥ ಫೋನ್ ಕೊಡಿಸುವುದು ದೂರದ ಮಾತಾಗಿತ್ತು.
ಈಗ ಸಮಸ್ಯೆ ಏನೆಂದರೆ ಸುಮನಾ ಬಳಿ ಈ ಫೋನ್ ಖರೀದಿಸಲು ಸಾಕಷ್ಟು ಹಣವಿರಲಿಲ್ಲ. ಏಕೆಂದರೆ ಸುಮನಾ ಪಾರ್ಟ್ ಟೈಮ್ ಧ್ವನಿ ಕಲಾವಿದೆಯಾಗಿ ಕೆಲಸ ಮಾಡುತ್ತಿದ್ದಳು. ಹಾಗಾಗಿ ಅವಳು ಇಎಂಐನಲ್ಲಿ ಈ ಫೋನ್ ಖರೀದಿಸಲು ಯೋಚಿಸಿದಳು. ಇಎಂಐ ಮೂಲಕ ಪಾತಿಸುವುದು ಹೆಚ್ಚಿನ ಹೊರೆಯಾಗುವುದಿಲ್ಲ ಎಂದು ಯೋಚಿಸಿ, ಐಫೋನ್ 14 ಪ್ರೊಪ್ಲಸ್ ನ್ನು ಕೊಂಡುಕೊಂಡಳು. ಮೂರು ಇಎಂಐಗಳನ್ನು ಪಾವತಿಸಿದ ನಂತರ ಸುಮನಾಳ ಆರೋಗ್ಯ ಹದಗೆಟ್ಟಿತು. ವೈದ್ಯರು ಬೆಡ್ ರೆಸ್ಟ್ ಪಡೆಯುವಂತೆ ಅವಳಿಗೆ ಸಲಹೆ ನೀಡಿದರು. ಅಂದಿನಿಂದ ಸುಮನಾ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರಬೇಕಾಯಿತು. ಕೆಲಸ ಮಾಡದ ಕಾರಣ, ಫೋನ್ ನ ಇಎಂಐ ಪಾವತಿಸಲು ಅವಳಿಗೆ ಸಾಧ್ಯವಾಗಲಿಲ್ಲ. ಇತ್ತ ಸಾಲ ಕೊಟ್ಟ ಬ್ಯಾಂಕ್ ಸಿಬ್ಬಂದಿ, ಅವಳಿಗೆ ಪದೇ ಪದೇ ಕರೆ ಮಾಡಿ ಇಎಂಐ ಪಾವತಿಸುವಂತೆ ಒತ್ತಡ ಹೇರಲು ಆರಂಭಿಸಿದರು.
ಕೆಲವು ದಿನಗಳ ನಂತರ ಬ್ಯಾಂಕ್ ಸಿಬ್ಬಂದಿಗಳು ಅವಳಿಗೆ ಬೆದರಿಕೆ ಕರೆ ಮಾಡಲು ಪ್ರಾರಂಭಿಸಿದರು. ಬ್ಯಾಂಕ್ ನಿಂದ ಸ್ನೇಹಿತರಿಗೆ, ಕುಟುಂಬದವರಿಗೆ ಮತ್ತು ಸಂಬಂಧಿಕರಿಗೆ ಕರೆಗಳು ಹೋಗಲು ಆರಂಭವಾದ. ಇದೆಲ್ಲದರಿಂದ ಸುಮನಾ ಬೇಸರಗೊಂಡಳು. ಅಂತಿಮವಾಗಿ ಅವಳ ತಂದೆ ಹಾಗೂ ಹೀಗೂ ಬೇರೆ ಕಡೆ ಚಕ್ರಬಡ್ಡಿ ಸಾಲ ಮಾಡಿ ಉಳಿದ ಹಣವನ್ನು ಹೊಂದಿಸಿ ಇಎಂಐ ಕಟ್ಟುವಂತಾಯಿತು.
ಇಎಂಐ ಮೂಲಕ ಸಾಲ
ಸುಮನಾಳ ಹಾಗೆ ಸಮಸ್ಯೆಯಲ್ಲಿ ಸಿಲುಕಿಕೊಳ್ಳಬಾರದು ಎಂದು ನೀವು ಬಯಸಿದರೆ, ಸಾಲವನ್ನು ಇಎಂಐ ಭಾಗಗಳಲ್ಲಿ ನೀಡಲಾಗಿದೆ ಎಂದು ತಿಳಿಯಿರಿ. ನೀವು ಎಷ್ಟು ಭಾಗಗಳಲ್ಲಿ ಇಎಂಐ ಪಾವತಿಸಬೇಕು ಎಂಬುದನ್ನು ನಿಮ್ಮ ಮತ್ತು ಬ್ಯಾಂಕ್ ನ್ನು ಅವಲಂಬಿಸಿರುತ್ತದೆ. ನೀವು 2 ತಿಂಗಳಿನಿಂದ 2 ವರ್ಷಗಳವರೆಗೆ ಯಾವುದೇ ಅವಧಿಗೆ ಇಎಂಐ ಕಂತುಗಳನ್ನು ಪಾವತಿಸಬಹುದು ಅಥವಾ ಅದು ಇನ್ನು ಹೆಚ್ಚೂ ಆಗಬಹುದು. ಆದ್ದರಿಂದ ನೀವು ಇಎಂಐ ಮೂಲಕ ಸಾಲವನ್ನು ಮರುಪಾವತಿಸಲು ಯೋಚಿಸುತ್ತಿದ್ದರೆ, ಅದನ್ನು ಲೋನ್ ಎಂದು ಪರಿಗಣಿಸಿ.
ನಾವು ಬಹಳಷ್ಟು ವಸ್ತುಗಳನ್ನು ಖರೀದಿಸುತ್ತೇವೆ, ಕ್ರಮೇಣ ಇಎಂಐ ಪಾತಿಸುತ್ತೇವೆ ಎಂದುಕೊಳ್ಳಿ, ಇಎಂಐನ ಆಮಿಷದಿಂದ ಒಂದೇ ಬಾರಿಗೆ ಹಲವಾರು ವಸ್ತುಗಳನ್ನು ಖರೀದಿಸಬೇಡಿ. ನೀವು ಇಎಂಐ ಸಾಲದ ಬವಣೆಯಲ್ಲಿ ಸಿಲುಕದಂತೆ, ನಿಮಗೆ ಅಗತ್ಯವಿರುವ ವಸ್ತುಗಳನ್ನು ಮಾತ್ರ ಖರೀದಿಸಿ.





