ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹತ್ತರವಾಟ ಎಂಬ ಪುಟ್ಟ ಗ್ರಾಮದ ಯುವಕ ಕಿರಣ್ ಕಮತೆ ಇಂದು ಈಡೀ ದೇಶವೇ ತಿರುಗಿ ನೋಡುವಂತೆ ಮಾಡಿದ್ದಾರೆ. ನಾಗರಿಕ ಸೇವಾ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 53ನೇ ರ್ಯಾಂಕ್ ಪಡೆಯುವ ಮೂಲಕ ಕರ್ನಾಟಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಯಾವುದೇ ಕೋಚಿಂಗ್ ಪಡೆಯದೆ ಮನೆಯಲ್ಲೇ ಕುಳಿತು ಓದಿ ಯಶಸ್ವಿಯಾಗಿದ್ದಾರೆ.
ಕಿರಣ್ ಕಮತೆ ಮೊದಲ ಐದು ಪ್ರಯತ್ನಗಳಲ್ಲಿ ಸೋತರೂ, 6ನೇ ಪ್ರಯತ್ನದಲ್ಲಿ ತಮ್ಮIAS ಕನಸನ್ನು ನನಸು ಮಾಡಿಕೊಂಡಿದ್ದಾರೆ. ತಂದೆ ರೈತರು ಮತ್ತು ತಾಯಿ ಗೃಹಿಣಿ. ಮಗನ ಈ ಸಾಧನೆಯಿಂದ ಈಡೀ ಹತ್ತರವಟಗಿ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ.
ಬೆಳಗಾವಿಯ ಗೋಗಟೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಸಿವಿಲ್ ಪದವಿ ಅಧ್ಯಯನ ಮಾಡಿದ ಕಿರಣ್, ಸದ್ಯ ಪಿಡಬ್ಲ್ಯೂಡಿ ಮುಖ್ಯ ಕಚೇರಿಯಲ್ಲಿ ಸಹಾಯಕ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಛಲವಿದ್ದರೆ ಎಂತಹ ಗುರಿಯನ್ನಾದರೂ ತಲುಪಬಹುದು ಎಂಬುದನ್ನು ಕಿರಣ್ ಸಾಬೀತುಪಡಿಸಿದ್ದಾರೆ.
ಕಿರಣ್ ಅವರ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಬಡ ಕೃಷಿಕ ಕುಟುಂಬದಿಂದ ಬಂದ ಅವರು, ಆರಂಭಿಕ ಐದು ಪ್ರಯತ್ನಗಳಲ್ಲಿ ಮುಗ್ಗರಿಸಿದ್ದರು. ಆರನೇ ಪ್ರಯತ್ನದಲ್ಲಿ ಐಎಎಸ್ ಗುರಿ ಮುಟ್ಟಿದ್ದಾರೆ. ಯಾವುದೇ ದೊಡ್ಡ ಕೋಚಿಂಗ್ ಸೆಂಟರ್ಗಳ ಹಂಗಿಲ್ಲದೆ, ಸ್ವಂತ ಪರಿಶ್ರಮದಿಂದಲೇ ಈ ಯಶಸ್ಸು ಕಂಡಿದ್ದಾರೆ.
ಕರ್ನಾಟಕದ 22 ಅಭ್ಯರ್ಥಿಗಳು ಉತ್ತೀರ್ಣ
ಸಂದೀಪ್ ಬಡದ್ (82ನೇ ರ್ಯಾಂಕ್), ಸೂರ್ಯ (162), ಕೃಪಾ ಜೈನ್ (190), ಚಿನ್ಮಯಿ ಪಿ (310), ಮನೋಜ್ (389), ಮಧು (436), ವರುಣ್ ಗೌಡ (462), ನಿವೇದಿತಾ ಭಾವಿಮನಿ (469), ವಿಶಾಖ ಕದಂ (504), ಸೂರಜ್ (525), ಧನಂಜಯ (554), ಉಲ್ಲಾಸ್ ಎಂ ಎಸ್ (556), ಮುತ್ತೇಶ್ ಗೌಡ (622), ಸಾಗರ್ ಎ (641), ಪಾಂಡುರಂಗ ಎಸ್ ಕಂಬಳಿ (660), ಚಂದನ್ ವೈ (661), ಬಸವರಾಜ್ ಎಂ ಜವಳಿ (664), ಪ್ರವೀಣ್ ಎಚ್ ಟಿ (720), ಯತೀಶ್ (732), ಬಸವರಾಜ್ ಎಂ ಪಾಟೀಲ್ (739), ಅನಿರುದ್ಧ ಕಟ್ಟಿಮನಿ (786), ಚಂದ್ರಶೇಖರ್ (880) ಹಾಗೂ ನೇಹಾ (925) ರಾಜ್ಯದಿಂದ ಯುಪಿಎಸ್ಸಿಗೆ ಆಯ್ಕೆಯಾಗಿದ್ದಾರೆ.





