ಸಾಯಂಕಾಲದ ಎಂಟು ಗಂಟೆಯ ಸಮಯ, ಪಾದರಕ್ಷೆಯ ಅಂಗಡಿಯವ ಇನ್ನೇನು ಸ್ವಲ್ಪ ಹೊತ್ತಿನಲ್ಲಿ ಅಂಗಡಿಯನ್ನು ಮುಚ್ಚಬೇಕು ಎನ್ನುವಾಗ, ಇಪ್ಪತ್ತರ ಹರೆಯದ ಹುಡುಗ ಅಂಗಡಿಯೊಳಗೆ ಬಂದ. ಮಾಲೀಕ ಅವನನ್ನು ನೋಡಿ, ಆತನನ್ನು ಮತ್ತು ಆತನ ಕಾಲನ್ನು ನೋಡಲು ಆತ ಸುಂದರವಾದ ಪಾದರಕ್ಷೆಯನ್ನು ಹಾಕಿಕೊಂಡಿದ್ದ, ನೋಡಲು ಹಳ್ಳಿಯವನಂತೆ ಕಂಡರೂ ಓದು ಬರಹ ಬಲ್ಲವನಂತಿದ್ದ.

ಮಾಲೀಕ, ಸರ್ ಏನಾಗಬೇಕಿತ್ತು. ಎನ್ನಲು ಅಂಗಡಿಯೊಳಗೆ ಗಿರಾಕಿಯಾಗಿ ಬಂದವನು, ನನ್ನ ತಾಯಿಗೆ ಒಂದು ಜೊತೆ ಪಾದರಕ್ಷೆ ಬೇಕಾಗಿತ್ತು ಎಂದ. ಆಗ ಅಂಗಡಿ ಮಾಲೀಕ, ಆಯ್ತು ಸರ್ ನಿಮ್ಮ ತಾಯಿಯವರು ಎಲ್ಲಿ ಎನ್ನಲು, ಗಿರಾಕಿಯು ಅವರು ಇಲ್ಲಿಲ್ಲ ಊರಲ್ಲಿದ್ದಾರೆ ಎಂದ. ಆಗ ಅಂಗಡಿ ಮಾಲೀಕ, ಸರಿ ಹಾಗಾದರೆ ನಿಮಗೆ ಯಾವ ಸೈಜಿನ ಪಾದರಕ್ಷೆ ಬೇಕು ಎನ್ನಲು ಗಿರಾಕಿಯು, ತನ್ನ ಪರ್ಸ್ ತೆಗೆದು ಅದರಿಂದ ಸುಂದರವಾದ ಬಿಳಿ ಹಾಳೆಯನ್ನು ತೆಗೆದು ಮಾಲೀಕನ ಮುಂದೆ ಇಟ್ಟ.

ಅದರಲ್ಲಿ ಎರಡು ಪಾದದ ನಕ್ಷೆ ಇತ್ತು. ಇದು ನನ್ನ ತಾಯಿಯ ಪಾದದ ನಕ್ಷೆ. ನಾನು ಪಾದರಕ್ಷೆ ಖರೀದಿಸುವುದು ಅವರಿಗೆ ಗೊತ್ತಿಲ್ಲ ಎಂದ. ಮಾಲೀಕನು ಗಿರಾಕಿಯನ್ನು ನೋಡಿ, ಸರಿ ನಿಮಗೆ ಎಷ್ಟು ಬೆಲೆಯ ಪಾದರಕ್ಷೆ ಬೇಕು ಎನ್ನಲು, ಗಿರಾಕಿಯು, ಇದು ನನ್ನ ಮೊದಲನೆಯ ಸಂಬಳ. ನನಗೆ 12 ಸಾವಿರ ಬರುತ್ತದೆ ಅದರಲ್ಲಿ ಅದು ಇದು ಎಂದು ಹೋಗಿ, ಕೈಗೆ ಹತ್ತು ಸಾವಿರ ಬರುತ್ತದೆ. ಅದರಲ್ಲಿ ಮೂರು ಸಾವಿರ ಮನೆಗೆ ಕೊಡಬೇಕು. ಈಗ ಒಳ್ಳೆಯ ಪಾದರಕ್ಷೆಯನ್ನು ಕೊಡಿ ಬೆಲೆ ಒಂದು ವಿಚಾರವೇ ಅಲ್ಲ. ನನ್ನ ತಾಯಿ ಕೂಲಿ ಕೆಲಸ ಮಾಡುತ್ತಾರೆ ಅವರೆಂದೂ ಪಾದರಕ್ಷೆ ಹಾಕಿದವರಲ್ಲ. ಕಲ್ಲು ಮುಳ್ಳುಗಳಲ್ಲಿ ಬರಿಗಾಲಲ್ಲಿ ನಡೆದು ಕಷ್ಟಪಟ್ಟು ದುಡಿದು ನನ್ನನ್ನು ಓದಿಸಿ ಕೆಲಸ ಸಿಗುವಂತೆ ಮಾಡಿದ ದೇವತೆ. ಅವರಿಗೆ ಸರಿಯಾಗುವ ಪಾದರಕ್ಷೆ ಕೊಡಿಸಬೇಕು ಎಂದ.

ಮಾಲೀಕ ಒಂದು ಜೊತೆ ಒಳ್ಳೆಯ ಪಾದರಕ್ಷೆಯನ್ನು ಕೊಟ್ಟು ಇದರ ಬೆಲೆ 800 ರೂಪಾಯಿಗಳು ಎನ್ನುತ್ತಲೇ ಗಿರಾಕಿ ಸಂತೋಷದಿಂದ ಅದನ್ನು ಪ್ಯಾಕ್ ಮಾಡಲು ಹೇಳಿ ತನ್ನ ಮೊದಲ ಸಂಬಳದಿಂದ ಹಣವನ್ನು ಕೊಟ್ಟು ಸಂತಸದಿಂದ ಅಂಗಡಿಯಿಂದ ಹೊರಡಬೇಕೆನ್ನುವ ಆತುರದಲ್ಲಿದ್ದಾಗ, ಅಂಗಡಿ ಮಾಲೀಕ ಸಾರ್, ನಿಮಗೆ ಅಭ್ಯಂತರವಿಲ್ಲವಾದರೆ ನನಗೆ ಆ ಪಾದರಕ್ಷೆಯ ನಕ್ಷೆ ಬರೆದ ಕಾಗದವನ್ನು ಕೊಡಿ ಎನ್ನುತ್ತಾರೆ, ಆಗ ಗಿರಾಕಿಯು ತನ್ನ ತಾಯಿಯ ಕಾಲಿನ ನಕ್ಷೆಯನ್ನು ಕೊಡಲು. ಮಾಲೀಕ ಮತ್ತೊಂದು ಜೊತೆ ಸುಂದರವಾದ ಪಾದರಕ್ಷೆಯನ್ನು ಕೊಟ್ಟು ಇದನ್ನು ನಿಮ್ಮ ತಾಯಿ. ನನ್ನ ತಂಗಿಗೆ ನನ್ನ ಉಡುಗೊರೆಯಾಗಿ ಕೊಡಿ. ನಿಮ್ಮಂತ ಒಳ್ಳೆಯ ಮಗನನ್ನು ಹೆತ್ತು ಸರಿದಾರಿಯಲ್ಲಿ ಬೆಳೆಸಿದ ಅವರು ಮಹಾತಾಯಿ ಎಂದ‌.

ಗಿರಾಕಿ ಅದನ್ನು ಸಂತಸದಿಂದ ಪಡೆದು ಅಂಗಡಿಯಿಂದ ಹೊರಡುತ್ತಾನೆ. ಅಂಗಡಿಯಲ್ಲಿದ್ದ ಕೆಲಸದ ಹುಡುಗ ಮಾಲೀಕನನ್ನು ಒಂದು ವಿಧವಾಗಿ ಅಚ್ಚರಿಯಿಂದ ನೋಡಲು, ಮಾಲೀಕ ನೋಡು ಇದನ್ನು ನಾವು ದಿನಾಲು ಪೂಜೆ ಮಾಡುವ ದೇವರ ಮೂರ್ತಿಯ ಬಳಿಯಿಡು. ಇದು ಮಹಾಲಕ್ಷ್ಮಿಯ ಪಾದಗಳು. ಇದಕ್ಕೆ ಪೂಜೆ ಮಾಡಿದರೆ ನಮ್ಮ ವ್ಯಾಪಾರ ವ್ಯವಹಾರ ವೃದ್ಧಿಯಾಗಬಹುದು. ಎಷ್ಟು ಜನ ತಾಯಂದಿರು ಮಕ್ಕಳಿಗೆ ಸರಿದಾರಿ ತೋರಿ ಅವರನ್ನು ಉತ್ತಮ ಪ್ರಜೆಯಾಗಿ ಮಾಡುತ್ತಾರೋ ಆ ನಾಡು ದೇಶ ಸಮೃದ್ಧವಾಗಿ ಬೆಳೆದು ಅಭಿವೃದ್ಧಿಯಾಗುತ್ತದೆ ಎನ್ನುತ್ತಾ, ಅದನ್ನು ದೇವರ ಫೋಟೋ ಕೆಳಗೆ ಇಟ್ಟು ಅದಕ್ಕೂ ಪೂಜೆ ಮಾಡಲಾರಂಭಿಸಿದ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ