ಆಯುಷ್ಎಂ ಟರ್‌ಪ್ರೈಸಸ ಲಾಂಛನದಲ್ಲಿ ಅದ್ಧೂರಿಯಾಗಿ ಮೂಡಿಬಂದಿರುವ ' ಉರಬ್ಬ ಚಲನಚಿತ್ರವು ಕರ್ನಾಟಕದಾದ್ಯಂತ ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿ,
ಈಗ ಅತ್ಯಂತ ಯಶಸ್ವಿಯಾಗಿ 50ನೇ ದಿನದತ್ತ ಮುನ್ನುಗ್ಗುತ್ತಿದೆ. ಕೌಟುಂಬಿಕ ಪ್ರೇಕ್ಷಕರು ಸೇರಿದಂತೆ ಎಲ್ಲಾ ವರ್ಗದ ಚಿತ್ರಪ್ರೇಮಿಗಳಿಂದ ಚಿತ್ರಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಾ ಯಶಸ್ಸಿನ ಹೆಜ್ಜೆಯನ್ನಿಟ್ಟಿದೆ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಐತಿಹಾಸಿಕ ಪುಣ್ಯಕ್ಷೇತ್ರ 'ಉಜ್ಜನಿ' ಗ್ರಾಮದಲ್ಲಿ 800 ವರ್ಷಗಳ ಇತಿಹಾಸ ಇರುವ. ಶ್ರದ್ಧಾ-ಭಕ್ತಿಯಿಂದ ಆಚರಿಸಲಾಗುವ ಶ್ರೀ ಚೌಡೇಶ್ವರಿ ದೇವಿಯ ಗ್ರಾಮೋತ್ಸವದ (ಜಾತ್ರೆ) ಹಿನ್ನೆಲೆಯನ್ನು ಒಳಗೊಂಡ ವಿಭಿನ್ನ ಕಥಾಹಂದರ ಈ ಚಿತ್ರದಲ್ಲಿದೆ. ಭಕ್ತಿ ಮತ್ತು ರೋಚಕತೆಯನ್ನು ಹದವಾಗಿ ಬೆರೆಸಿ ನಿರ್ದೇಶಕರು ಕಥೆಯನ್ನು ತೆರೆಯ ಮೇಲೆ ತಂದಿದ್ದಾರೆ. ಹಳ್ಳಿಯ ಸೊಗಡು, ಆಚರಣೆಗಳು ಹಾಗೂ ಸಾಂಸ್ಕೃತಿಕ ಆಯಾಮಗಳನ್ನು ಅತ್ಯಂತ ಆಕರ್ಷಕವಾಗಿ ಚಿತ್ರೀಕರಿಸಲಾಗಿದೆ.

ಚಿತ್ರದ ವಿಭಿನ್ನ ಮೇಕಿಂಗ್ ಹಾಗೂ ಗ್ರಾಮೀಣ ಸಂಸ್ಕೃತಿಯನ್ನು ಯಥಾವತ್ತಾಗಿ ಬಿಂಬಿಸಿರುವ ಪ್ರಯತ್ನಕ್ಕೆ ಪ್ರೊಫೆಸರ್‌ಗಳು, ಚಿತ್ರರಂಗದ ಹಿರಿಯ ಗಣ್ಯರು ಹಾಗೂ ಜನಪದ ತಜ್ಞರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಮರೆಯಾಗುತ್ತಿರುವ ಹಳ್ಳಿಯ ಆಚರಣೆಗಳನ್ನು ಇಂದಿನ ಪೀಳಿಗೆಗೆ ದಾಟಿಸುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ ಎಂದು ಸಾಂಸ್ಕೃತಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ.

ಚಿತ್ರದ ಈ ನಿರಂತರ ಯಶಸ್ಸಿನ ಹಿಂದೆ ಅನುಭವಿ ತಾಂತ್ರಿಕ ತಂಡದ ಶ್ರಮವಿದೆ. ನರೇಶ್ ಗೌಡ ಅವರು ಈ ಚಿತ್ರಕ್ಕೆ ಬಂಡವಾಳ ಹೂಡುವುದರ ಜೊತೆಗೆ ಪ್ರಮುಖ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಲಕ್ಕಿ ಶಂಕರ್ ಅವರ ಚೊಕ್ಕದಾದ ಕಥೆ ಮತ್ತು ನಿರ್ದೇಶನ ಚಿತ್ರದ ಜೀವಾಳವಾಗಿದೆ. ಎಂ. ಡಿ. ಶ್ರೀಧರ್ ಅವರ ಚಿತ್ರಕಥೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡರೆ, ಎಚ್. ವಾಸು ಅವರ ಸಂಭಾಷಣೆಗಳು ತೂಕವಾಗಿವೆ.

ಕೃಷ್ಣಕುಮಾರ್ ಎ. ವಿ. ಅವರ ಆಕರ್ಷಕ ಛಾಯಾಗ್ರಹಣ, ಆರ್. ಡಿ. ರವಿ ಅವರ ಅಚ್ಚುಕಟ್ಟಾದ ಸಂಕಲನ ಹಾಗೂ ಅಕ್ಷಯ್ ರಿಷಬ್ ಅವರ ಹಿನ್ನೆಲೆ ಸಂಗೀತ ಚಿತ್ರದ ಗಾಂಭೀರ್ಯವನ್ನು ಹೆಚ್ಚಿಸಿದೆ. ಪಿ.ಆರ್.ಓ ನಾಗೇಂದ್ರ ಅವರು ಚಿತ್ರದ ಪ್ರಚಾರ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.. ತನಿಷಾ ಕುಪ್ಪಾಂಡ. ಮಿತ್ರ. ಮಿಮಿಕ್ರಿ ಗೋಪಿ. ದೊಡ್ಡಣ್ಣ. ಬಿರಾದರ್. ಬಾಲರಾಜ್ ವಾಡಿ. ಪಾಯಲ್. ಸಿದ್ದು, ಮೈಕೋ ನಾಗರಾಜ್ ಇನ್ನು ಅನೇಕ ಕಲಾವಿದರ ದಂಡೆ ಇಧು ಸದ್ಯ ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ಪ್ರದರ್ಶನಗೊಳ್ಳುತ್ತಾ 50 ದಿನಗಳ ಮೈಲಿಗಲ್ಲಿನತ್ತ ಮುನ್ನುಗ್ಗುತ್ತಿರುವ 'ಉರಬ್ಬ' ಸಿನಿಮಾ, ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಸದಭಿರುಚಿಯ ಯಶಸ್ವಿ ಚಿತ್ರವಾಗಿ ಹೊರಹೊಮ್ಮಿದೆ.





