ಸೀರೆಗೆ ಮಾಡರ್ನ್ಟಚ್ನೀಡಿ, ಲುಕ್ಸ್ಟೈಲ್ ಸುಧಾರಿಸಬಹುದಾಗಿದೆ, ಹೇಗೆಂದು ತಿಳಿಯೋಣವೇ.....?

ಇಂದಿನ ಫಾಸ್ಟ್ ಯುಗದ ದೈನಂದಿನ ಬಿಝಿ ಶೆಡ್ಯೂಲ್ ‌ನಲ್ಲಿ ಹೆಂಗಸರು ನಿಧಾನವಾಗಿ ನೆರಿಗೆ ಹಿಡಿದು ಸಾಂಪ್ರದಾಯಿಕವಾಗಿ ಸೀರೆಯುಟ್ಟು ರೆಡಿ ಆಗುವುದು, ನಿಜಕ್ಕೂ ತ್ರಾಸದಾಯಕ. ಆದರೆ ಹಬ್ಬ, ಹರಿದಿನ, ಶುಭ ಸಮಾರಂಭಗಳಿಗೆ ಹೋಗಬೇಕಾದಾಗ ಇದಂತೂ ಅನಿವಾರ್ಯ. ಭಾರತೀಯ ನಾರಿಯ ಸ್ಟೇಟಸ್‌ ಸಿಂಬಲ್ ಆಗಿರುವ ಸೀರೆ, ಹಲವು ಶತಮಾನಗಳ ಹಿನ್ನೆಲೆ ಹೊಂದಿದೆ, ಹೀಗಾಗಿ ಇಂದಿಗೂ ಅದೇ ಭಾರತೀಯ ಹೆಣ್ಣಿನ ಮೊದಲ ಆಯ್ಕೆಯಾಗಿ ಉಳಿಯುತ್ತದೆ. ಪ್ರತಿ ಹಬ್ಬಕ್ಕೂ, ಇವೆಂಟ್‌ ಗೂ ಸೀರೆಯ ಅಂದಚೆಂದ ಬೇಕೇಬೇಕು.

ಆದರೆ ಇಂದಿನ ಬದಲಾಗುತ್ತಿರುವ ಆಧುನಿಕ ಫ್ಯಾಷನ್ನಿನ ದೃಷ್ಟಿಯಿಂದ ಸೀರೆ ಅನೇಕ ಟ್ರೆಂಡ್‌ ಗಳಲ್ಲಿ ಕಂಡುಬರುತ್ತಿವೆ. ಹೀಗಾಗಿ ಮಾಡರ್ನ್‌ ಝಮಾನಾಗೆ ತಕ್ಕಂತೆ ನೀವು ಸಹ ಈ ದೀಪಾವಳಿ ಹಬ್ಬದಲ್ಲಿ ಟ್ರೆಡಿಶನಲ್ ಸೀರೆಗೆ ಏಕೆ ಮಾಡರ್ನ್‌ ಟಚ್ ಕೊಡಬಾರದು? ಇದರಿಂದ ನಿಮ್ಮ ಲುಕ್ಸ್, ಸ್ಟೈಲ್‌, ಗ್ಲಾಮರ್‌ ನಲ್ಲಿ ಎಷ್ಟೋ ಸುಧಾರಣೆ ತಂದುಕೊಳ್ಳಬಹುದು. ಇಂಥ ಟ್ರೆಂಡಿಂಗ್ ಫ್ಯಾಷನ್‌ ಬಿಟ್ಟೋರಂಟೇ?

ಫ್ಯಾಷನ್‌ ಎಕ್ಸ್ ಪರ್ಟ್ಸ್ ಪ್ರಕಾರ, ಫೆಸ್ಟಿವ್ ‌ಸೀಸನ್‌ ನಲ್ಲಿ ಪ್ರತಿ ಮಹಿಳೆಗೂ ಹೊಂದು ಏಕೈಕ ಔಟ್‌ ಫಿಟ್‌ ಅಂದ್ರೆ ಸೀರೆ! ಆದರೆ ಸಮಯ ಸಂದರ್ಭ, ಫ್ಯಾಷನ್‌ ಗೆ ತಕ್ಕಂತೆ ಸೀರೆಯಲ್ಲಿ ಅನೇಕ ಬದಲಾವಣೆಗಳಾಗಿವೆ. ಇತ್ತೀಚೆಗೆ ಫ್ಯೂಷನ್‌ ಸೀರೆಗಳ ಟ್ರೆಂಡ್ ಅಧಿಕವಾಗುತ್ತಿದೆ. ನೀವು ಸಹ ಈ ಬದಲಾವಣೆ ಫಾಲೋ ಮಾಡಿ, ಫೆಸ್ಟಿವಲ್ ‌ಸೀಸನ್‌ ನಲ್ಲಿ ಬಲು ಸ್ಪೆಷಲ್, ಸ್ಟೈಲಿಶ್‌, ಗ್ಲಾಮರಸ್‌, ಟ್ರೆಂಡಿಂಗ್‌ ಆಗಿ ಮಿಂಚಿರಿ!

ಇಂಡೋವೆಸ್ಟರ್ನ್ಪ್ಯಾಂಟ್ಸ್ಟೈಲ್ಸೀರೆ

ಇದು ಇಂಡೋವೆಸ್ಟರ್ನ್‌ ಔಟ್‌ ಫಿಟ್‌ ಆಗಿದ್ದು, ಟ್ರೆಡಿಶನಲ್ ಇಂಡಿಯನ್‌ವೆಸ್ಟರ್ನ್‌ ಔಟ್‌ ಫಿಟ್‌ ಎರಡಕ್ಕೂ ಸೇತುವೆಯಾಗಿದೆ. ಪ್ಯಾಂಟ್‌ ಸ್ಟೈಲ್ ‌ನ ಸೀರೆ ಎಷ್ಟೋ ಫ್ಯಾಷನ್‌ ಪ್ರಿಯ ಮಹಿಳೆಯರ ಅಚ್ಚುಮೆಚ್ಚಿನ ಆಯ್ಕೆಯಾಗಿದೆ. ಇಂಡಿಯನ್‌ ಟ್ರೆಡಿಶನ್‌ ಡ್ರೆಸೆಸ್ ಮೆಚ್ಚುವವರಿಗೆ ಇದು ಬಹಳ ಇಷ್ಟವಾಗುತ್ತದೆ. ಈ ಸ್ಟೈಲ್ ‌ನಲ್ಲಿ ನಾರ್ಮಲ್ ಪೆಟಿಕೋಟ್‌ ಬದಲು, ಪ್ಯಾಂಟ್‌ ಯಾ ಲೆಗ್ಗಿಂಗ್‌ ಮೇಲೆ ಸೀರೆ ಡ್ರೇಪ್‌ ಮಾಡಲಾಗುತ್ತದೆ. ಇದರಿಂದ ಒಂದು ಹೊಸ ಸ್ಟೈಲಿಶ್‌ ಫ್ಯೂಷನ್‌ ಲುಕ್‌ ಸಿಗುತ್ತದೆ. ಇದು ಎಲ್ಲಾ ಹೆಂಗಸರಿಗೂ ಇಷ್ಟವೆಂದರೂ ತಪ್ಪಲ್ಲ. ಈ ಸೀರೆ ಡ್ರೆಸ್‌ ನಲ್ಲಿ 3 ಮುಖ್ಯ ಅಂಶ ಎಂದರೆ ಪ್ಯಾಂಟ್‌, ಸೀರೆ ಹಾಗೂ ಟಾಪ್‌. ಸೊಂಟದಪಟ್ಟಿಯೊಂದಿಗೆ ಈ ಡ್ರೆಸ್‌ ಲಭ್ಯ. ಇದರಲ್ಲಿ ಸೀರೆಯನ್ನು ದೇಹದ ಎಲ್ಲಾ ಬದಿಗೂ ಬರುವಂತೆ ಅಳವಡಿಸಿ, ಭುಜದ ಮೇಲೆ ಸೆರಗಿನ ತರಹ ಸೆಟ್‌ ಮಾಡಲಾಗುತ್ತದೆ. ನಂತರ ಇದರಲ್ಲಿ ಒಂದು ಫಿಟೆಡ್‌ ಶಾರ್ಟ್‌ ಸ್ಲೀವ್ ಲೆಸ್ ಟಾಪ್‌ ನಂಥ ಬ್ಲೌಸ್‌ ನ್ನು ಸೀರೆ ಪ್ಯಾಂಟ್‌ ಗೆ ಮ್ಯಾಚ್‌ ಆಗುವಂತೆ ಕ್ಯಾರಿ ಮಾಡಲಾಗುತ್ತದೆ.

high-fashion-look-glamor-smiling-beautiful-model-artist-young-girl-photo-name-nusraat-faria

ಸ್ಟೈಲಿಶ್ಧೋತಿ ಸೀರೆ

ಇದು ಮಾರ್ಕೆಟ್‌ ನಲ್ಲಿ ಬಗೆಬಗೆಯ ಬಣ್ಣ, ಪ್ಯಾಟರ್ನ್‌ ಹಾಗೂ ಡಿಸೈನ್‌ ಗಳಲ್ಲಿ ಲಭ್ಯ. ಧೋತಿ (ಪಂಚೆ) ಸೀರೆ ಧರಿಸಲು ಬಲು ಸ್ಟೈಲಿಶ್‌ ಎನಿಸುತ್ತದೆ. ಈ ಸೀರೆಯ ಒಳಭಾಗದಲ್ಲಿ ಪೆಟಿಕೋಟ್‌ ಧರಿಸುವ ಅಗತ್ಯವಿಲ್ಲ. ಬದಲಿಗೆ ನೀವು ಲೆಗ್ಗಿಂಗ್‌ ಯಾ ಪಾಜಾಮ ಧರಿಸಬಹುದು. ಗಂಡಸರು ಧರಿಸುವ ಟ್ರೆಡಿಶನಲ್ ಧೋತಿಯಿಂದ ಪ್ರಭಾವಿತ ಈ ಸ್ಟೈಲ್ ‌ನಲ್ಲಿ ಸೀರೆಯನ್ನೇ ಧೋತಿ ತರಹ ಉಡಿಸಲಾಗುತ್ತದೆ. ಇದರಲ್ಲಿ ಕಾಲುಗಳ ನಡುವೆ ಪ್ಲೀಟ್ಸ್ (ಕಚ್ಚೆ) ಬರುವಂತೆ ಮಾಡಿ, ಟಕ್‌ ಗೊಳಿಸುತ್ತಾರೆ. ಸೆರಗನ್ನು ಹೆಗಲಿನ ಮೇಲೆ ಅಳವಡಿಸುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ