ಸ್ಟೋನ್ಸ್, ಬೀಡ್ಸ್ ಹಾಗೂ ಲೇಸ್ ವರ್ಕ್ ನಿಂದ ಸುಸಜ್ಜಿತಗೊಳಿಸಲಾದ ಪಿಂಕ್‌ಯೆಲ್ಲೋ ಕಲರ್ ನ ಅತ್ಯಾಕರ್ಷಕ ಫೆಸ್ಟಿವ್ ಡ್ರೆಸೆಸ್!
ಮೆಜೆಂತಾ ಗೋಲ್ಡನ್ ಕಲರ್ ಕಾಂಬಿನೇಶನ್ ನಲ್ಲಿ ಕಶೀದಾಕಾರಿ ಕಸೂತಿಯಿಂದ ಸುಸಜ್ಜಿತಗೊಳಿಸಲಾದ ಈ ಲೆಹಂಗಾ ಚೋಲಿ, ದೀಪಾವಳಿ ಹಬ್ಬದ ಆಚರಣೆಗೆ ಹೊಸ ರಂಗು ತುಂಬುತಿದೆ!

ಸ್ಟೋನ್ಸ್ ಬ್ಯೂಟಿಫುಲ್ ಎಂಬ್ರಾಯಿಡರಿ ವರ್ಕ್ ನಿಂದ ಅಚ್ಚುಕಟ್ಟುಗೊಳಿಸಲಾದ ಕ್ರೀಂ ಕಲರ್ ನ ಹೆವಿ ಸೀರೆಯೊಂದಿಗೆ ಇವಳು ದೀಪಾವಳಿಯ ಹಬ್ಬಕ್ಕೆ ಸ್ವಾಗತ ಕೋರುತ್ತಿದ್ದರೆ, ಇವಳ ಗೆಳತಿ ಫ್ರಂಟ್ ನಲ್ಲಿ ಅತ್ಯಾಕರ್ಷಕ ವರ್ಕ್ ವುಳ್ಳ ಮೆರೂನ್ ಕುರ್ತಾದೊಂದಿಗೆ, ಸೂಕ್ತ ಆ್ಯಕ್ಸೆಸರೀಸ್‌ಧರಿಸಿ ಎಲ್ಲರಿಗೂ ದೀಪಾವಳಿಯ ಶುಭಾಶಯ ಕೋರುತ್ತಿದ್ದಾಳೆ!
ಡಿಫರೆಂಟ್ ಲುಕ್ಸ್ ವುಳ್ಳ ಕಲರ್ ಫುಲ್ ಲೆಹಂಗಾ ಚೋಲಿ ಯಾ ಸ್ಲೀವ್ ಲೆಸ್ ಜೊತೆ ಬ್ಯೂಟಿಫುಲ್ ಸೀರೆಯೊಂದಿಗೆ ಗೆಳತಿಯರಿಬ್ಬರೂ ದೀಪಾವಳಿ ಹಬ್ಬದ ನೆಪದಲ್ಲಿ, ಎಲ್ಲರಿಗೂ ಗಿಫ್ಟ್ ಹಂಚಲು ಹೊರಟಿದ್ದಾರೆ!

ವೀನೆಕ್, ಫುಲ್ ಸ್ಲೀವ್ ಚೋಲಿ ಹಾಗೂ ಲೆಹಂಗಾದಲ್ಲಿ ಸ್ಟೋನ್ಸ್ ಬೀಡ್ಸ್, ಲೇಸ್ ವರ್ಕ್ ನ ಅದ್ಭುತ ಹಸ್ತಕಲೆಯಿಂದ ಈ ಡ್ರೆಸ್ ಈ ಸಲದ ದೀಪಾವಳಿಗೆ ವಿಶೇಷ ಮೆರುಗು ನೀಡಲಿದೆ!
ದೀಪಾವಳಿಯಂಥ ದೊಡ್ಡ ಹಬ್ಬದ ಸಂದರ್ಭದಲ್ಲಿ ಜರ್ದೋಜಿ ಕಸೂತಿಯಿಂದ ಸುಸಜ್ಜಿತಗೊಳಿಸಲಾದ ಸೀರೆ ಇರಲಿ ಅಥವಾ ಸ್ಟೈಲಿಶ್ ಕೆಲಸದಿಂದ ಮಿಂಚುತ್ತಿರುವ ಸ್ವಾರ್ ಸೂಟ್ ಇರಲಿ, ಹಬ್ಬಕ್ಕೆ ಹೆಚ್ಚಿನ ಕಳೆ ತಂದುಕೊಡುತ್ತವೆ!





