ಮಿನಿ ಕಥೆ - ರಮಾಶ್ರೀ ನಾಡಿಗೇರ್

ಮಧ್ಯಮ ವರ್ಗದ ಜೀವನವೇ ಹಾಗೆ. ತುಂಬಿದ ಮನೆಯ ಸೊಸೆಯಾಗಿ ಗೃಹಿಣಿಗೆ ಸದಾ ಸರ್ವದಾ ಬಿಡುವಿಲ್ಲದ ಕೆಲಸ. ಅವಳೂ ಒಬ್ಬ ಮನುಷ್ಯಳು ಎಂದು ಮನೆಯವರು ತಿಳಿಯುವುದಾದರೂ ಯಾವಾಗ.....?

``ಸೊಸೆ ಬಂದ ಮೇಲೆ ನಿಮ್ಮಮ್ಮ ಸೋಮಾರಿಯಾಗಿ ಹೋದ್ಲು ನೋಡು....'' ಎಂದು ಆಡಿಕೊಳ್ಳುತ್ತಾ ನಗುತ್ತಿದ್ದ ಗಂಡನ ನಗುವನ್ನು ಕೇಳಲಾರದೆ, ಕಣ್ಣು ಕಿವಿ ಮುಚ್ಚಿಕೊಂಡು ಮಲಗಿಬಿಟ್ಟೆ.

ದಿನದಂತೆ ಇಂದು ಎದ್ದು ಕಾಫಿ ಮಾಡಿಕೊಡದೆ ಮಲಗಿದ್ದೇ ಇವರ ಈ ಮಾತಿಗೆ ಕಾರಣ. ನನಗೂ ಈಗ 66 ವರ್ಷ. ಮದುವೆಯಾಗಿ ಬಂದ ದಿನದಿಂದಲೂ ಒಂದು ದಿನ ರಜೆಯಿಲ್ಲದಂತೆ ಈ ಮನೆಗೆ ದುಡಿದಿದ್ದೇನೆ. ಆರೋಗ್ಯ ಸರಿ ಇದ್ದರೂ, ಇಲ್ಲದಿದ್ದರೂ, ಮನಸ್ಸಿಗೆ ಬೇಸರವಾದರೂ, ಖುಷಿಯಾದರೂ ಲೆಕ್ಕಕ್ಕಿರದಂತೆ ಸುಮ್ಮನೆ ಮೂಕ ಎತ್ತಿನಂತೆ ದುಡಿದಿದ್ದು ಯಾರೂ ಗಮನಿಸಿಯೇ ಇಲ್ವಾ.....ನನಗೂ ಬೇಸರವಾಗುತ್ತದೆ, ನನಗೂ ಮನಸ್ಸಿದೆ ಎಂದು ಯಾರಿಗೂ ಅನಿಸುವುದೇ ಇಲ್ವಾ..... ನಾನು ಸೊಸೆಯಾಗಿ ಬಂದಾಗ ಅತ್ತೆ ಮಾವಂದಿರಿಗೆ ಅಂಜಿ ನಡೆದೆ. ನನ್ನನ್ನು ಕಟ್ಟಿಕೊಂಡ ಪುಣ್ಯಾತ್ಮನಿಗೋ ಮೂಗಿನ ತುದಿಯಲ್ಲೇ ಸಿಟ್ಟು. ಕೆಲಸ ಮಾಡಿ ಅಭ್ಯಾಸವಿಲ್ಲದ್ದಕ್ಕೆ ಅತ್ತೆಯ ಕಟುನುಡಿ, ನಾದಿನಿಯ ವ್ಯಂಗ್ಯ, ವಾರಗಿತ್ತಿಯರ ಅಸಡ್ಡೆ ಎಲ್ಲವನ್ನೂ ಸಹಿಸಿಕೊಂಡೇ ಇದ್ದೆ.

ನನಗೂ ಕನಸುಗಳಿದ್ದವು. ದಿನಾ ಸಂಜೆ ಗಂಡನೊಡನೆ ಮಲ್ಲಿಗೆ ಹೂ ಮುಡಿದುಕೊಂಡು ತಿರುಗಾಡಬೇಕೆಂಬ ಮನಸ್ಸಿತ್ತು. ತುಂಬಿದ ಮನೆಯಲ್ಲಿ ಇಬ್ಬಿಬ್ಬರೇ ತಿರುಗಾಡೋಕೆ ಹೋಗೋದು ಚೆಂದವಲ್ಲ ಅಂದರು. ಆ ಕನಸು ಬಿಟ್ಟೆ. ಎಲ್ಲೇ ಪ್ರಯಾಣಕ್ಕೆ  ಹೊರಟರೂ ಕೂಡು ಕುಟುಂಬದ ಜೊತೆಯಲ್ಲೇ ಪಯಣ. ದೊಡ್ಡವರೆದುರು ಗಂಡನ ಜೊತೆ ಮಾತಾಡಿದರೆ, ನಾಚಿಕೆಯಿಲ್ಲದ ಹೆಣ್ಣೆಂದಾರು, ಮಾತೇನಿದ್ದರೂ ಕತ್ತಲೆಯಲ್ಲಿ ಪಿಸುಪಿಸು ಗುಸುಗುಸು.

ಆಮೇಲೆ ಸಾಲಾಗಿ ಮಕ್ಕಳ ಜನನ. ಒಂದು ವರ್ಷ ನಾನು ಬಸುರಿ, ಇನ್ನೊಂದು ವರ್ಷ ವಾರಗಿತ್ತಿ, ಮತ್ತೊಂದು ವರ್ಷ ನಾದಿನಿ. ಬಸಿರು ಬಾಣಂತನದ ಚಕ್ರದಲ್ಲಿ ಕನಸುಗಳು ಎಲ್ಲಿ ಕಳೆದುಹೋದವೋ ತಿಳಿಯಲೇ ಇಲ್ಲ.

ಬೆಳಗಾಯ್ತು, ಸಂಜೆಯಾಯ್ತು.... ತಿಂಗಳುಗಳು ಕಳೆದವು, ವರ್ಷಗಳು ಉರುಳಿದವು. ಗಾಣಕ್ಕೆ ಕಟ್ಟಿದ ಎತ್ತಿನಂತೆ ಒಂದೇ ಸಮನೆ ದುಡಿದೆ. ಯಾವ ಅಪೇಕ್ಷೆಯೂ ಇಲ್ಲದೆ ದುಡಿದೆ. ನನ್ನ ಸಂಸಾರ ತಾನೇ, ಮುಂದೊಂದು ದಿನ ನಾನೂ ವಿರಮಿಸುತ್ತೇನೆ, ಮಕ್ಕಳನ್ನು ದಡ ಸೇರಿಸಿದ ಮೇಲೆ ವಿಶ್ರಾಂತಿ ಎಂಬ ನಿರೀಕ್ಷೆಯಲ್ಲಿದ್ದೆ.

ಅತ್ತೆ ಮಾವ ಹೋದ ಮೇಲೆ ಮನೆ ಯಜಮಾನಿ ಎಂಬ ಪಟ್ಟದೊಡನೆ ದುಡಿತ. ಪತಿದೇವರಿಗೆ ನಿವೃತ್ತ ಜೀವನವಿದೆ. ನನಗೂ ಮಕ್ಕಳ ಮದುವೆಯಾದ ಮೇಲೆ ನಿವೃತ್ತಿಯೇ ಅಲ್ಲವೇ...? ಮನೆಗೆ ಸೊಸೆ ಬಂದ ಮೇಲೆ ಎಲ್ಲಾ ಜವಾಬ್ದಾರಿ ಅವಳಿಗೆ ವಹಿಸಿ ನಾನು ವಿರಮಿಸುತ್ತೇನೆ ಎಂದುಕೊಂಡಿದ್ದು, ಎಲ್ಲರಿಗೂ ಅತ್ತೆ ಕೊಡುವ ಕಾರಣವೆನಿಸಿತು. ಇನ್ನು ಮೇಲಾದರೂ ನಾನು ಉಟ್ಟುತೊಟ್ಟು ನಲಿಯುವೆ ಎಂದುಕೊಂಡಿದ್ದು ಹೊಟ್ಟೆಕಿಚ್ಚು ಎನಿಸಿಕೊಂಡಿತು. ವಯೋಸಹಜ ಸುಸ್ತಿಗೆ ಸೋಮಾರಿತನದ ಪಟ್ಟ.

ತನ್ನ ಹೆಗಲಿಗೆ ಹೆಗಲು ಕೊಟ್ಟು ಹೊರಗೆ ದುಡಿಯುವ ಹೆಂಡತಿ ಮಗನ ಹೆಮ್ಮೆ. ತನಗೆ ಸರಿಸಮಾನವಾಗಿ ರಾಜಕೀಯ, ಕ್ರೀಡೆ, ಸಿನಿಮಾ ಎಲ್ಲದರ ಬಗ್ಗೆ ಚರ್ಚೆ ಮಾಡುವ ಸೊಸೆ ಮಾವನಿಗೆ ಅಚ್ಚುಮೆಚ್ಚು. ತನ್ನ ಓದು, ಉಡುಗೆ, ತೊಡುಗೆ ತಿರುಗಾಟ ಎಲ್ಲದಕ್ಕೂ ಜೊತೆ ನೀಡುವ ಅತ್ತಿಗೆ ಮಗಳಿಗೆ ಬೆಸ್ಟ್ ಫ್ರೆಂಡ್‌.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ