ಹುಡುಗಿಯರು ಧರ್ಮದ ಬ್ರೇನ್‌ ವಾಶಿಂಗ್‌ ನ ಅಸಹಾಯಕ ಬೇಟೆಗಳು

ಬಡತನದ ಗೋಳನ್ನು ಶ್ರೀಮಂತರೂ ತೋಡಿಕೊಳ್ಳುತ್ತಾರೆ. ಅಮೆರಿಕಾದಂಥ ಕಡು ಶ್ರೀಮಂತ ದೇಶದಲ್ಲೂ ಇದಕ್ಕೆ ಕೊರತೆಯಿಲ್ಲ. ಅಲ್ಲಿ ವಾರ್ಷಿಕ 35 ಕೋಟಿ ರೂ. ಗಳಿಸುವವರೂ ಸಹ ಇದಕ್ಕೆ ಹೊರತಲ್ಲ. ಅದರಲ್ಲೂ ಮುಖ್ಯವಾಗಿ ಅವರಲ್ಲಿ 40% ಮಂದಿ ಸದಾ ಗೋಳಾಡುವುದೆಂದರೆ, ತಾವು ಜೀವನವಿಡೀ ಚೆಕ್‌ ನಿಂದ ಚೆಕ್‌ ಗೆ ಕಾಯುವುದರಲ್ಲಿ ಆಗಿಹೋಗುತ್ತದೆ ಎನ್ನುತ್ತಾರೆ. ವ್ಯವಹಾರದಿಂದ ಇವರುಗಳಿಗೆ ಸಿಗುವ ಚೆಕ್‌ ಪಾಸಾದರೆ ಮಾತ್ರ ತಮಗೆ ಲಾಭ ಎಂದು ಬೊಬ್ಬಿಡುತ್ತಾರೆ. ಹೀಗಾಗಿ ತಮ್ಮ ಬಳಿ ಉಳಿತಾಯವೇನೂ ಇಲ್ಲ ಎಂದು ಕೊರಗುತ್ತಾರೆ. ಇಲ್ಲಿನ ವಿಡಂಬನೆ ಎಂದರೆ, ಯಾವ ಮಂದಿ ಪ್ರತಿ ವರ್ಷ 5 ಕೋಟಿಗೂ ಅಧಿಕ ಗಳಿಸುತ್ತಿದ್ದಾರೋ, ಅವರಲ್ಲೂ 40% ಮಂದಿಯ ದೂರವೆಂದರೆ, ತಿಂಗಳ ಕೊನೆ ಆಯ್ತು ಅಂದ್ರೆ ಕೈ ಖಾಲಿಯಂತೆ!

ಈ ಗೋಳು ನಮ್ಮಲ್ಲೂ ತಪ್ಪಿದ್ದಲ್ಲ. ನಮ್ಮಲ್ಲಿನ ಶ್ರೀಮಂತರ ಮನೆ ಮುಂದೆ ಡ್ರೈವರ್‌ ಸಹಿತ 2-3 ಐಷಾರಾಮೀ ಕಾರುಗಳೇ ನಿಂತಿದ್ದರೂ ಸಹ, ಹಲವು ಐಫೋನುಗಳಿದ್ದರೂ, ಆ್ಯಪಲ್ ಲ್ಯಾಪ್‌ ಟಾಪಿದ್ದರೂ, ಎಸಿ ಬೆಡ್‌ ರೂಮಿನಲ್ಲಿ 50 ಇಂಚಿನ ಆ್ಯಂಡ್ರಾಯ್ಡ್ ಟಿವಿಗಳಿದ್ದರೂ ಗೋಳಿಗೆ ಕಡಿಮೆ ಇಲ್ಲ. ಇವರ ಮಕ್ಕಳು ಅತಿ ದುಬಾರಿ ಕಾನ್ವೆಂಟ್‌ ಗೇ ಹೋಗುವುದು, ಮನೆಯಲ್ಲಿ ವಾರದಲ್ಲಿ 4 ದಿನ ಹೊರಗೇ ಪಂಚತಾರಾ ಹೋಟೆಲ್ ‌ಗಳಲ್ಲಿ ಊಟತಿಂಡಿಗಳಾದರೆ, ಇನ್ನುಳಿದ ದಿನ ಸ್ವಿಗ್ಗಿ, ಝೋಮೆಟೋಗಳಿಗೆ ಶರಣಾಗುತ್ತಾರೆ. ಇಂಥವರೂ ಸಹ ದೂರುವುದೆಂದರೆ, ಎಲ್ಲಾ ಇಎಂಐಗಳನ್ನೂ ತೀರಿಸಿದ ನಂತರ ಕೈಲೇನೂ ಉಳಿಯುವುದೇ ಇಲ್ಲ. ಈ ರೀತಿ ಶ್ರೀಮಂತರೂ ಗೋಳಾಡಬೇಕಾದ್ದೇ, ಆಗ ಮಾತ್ರ ಅವರು ಬಡವರ ಬಾಯಿ ಬಡಿಯಲು ಸಾಧ್ಯ! ಆಗ ಮಾತ್ರ ಬಡವರು ಬೆಲೆಗಳು ಗಗನಕ್ಕೇರಿವೆ ಎಂದು ಬೊಬ್ಬಿಡುವುದಿಲ್ಲ, ಎಥೆನಾಲ್ ‌ಕಾರಣ ಗಾಡಿಗಳ ಮೈಲೇಜ್‌ ಕಡಿಮೆ ಆಗಿದೆ, ಮನೆ ಬಾಡಿಗೆ ಹೆಚ್ಚಾಗಿದೆ, ಮಕ್ಕಳ ಶಿಕ್ಷಣದ ಖರ್ಚು, ಮನೆ ನಡೆಸುವುದು, ಪೆಟ್ರೋಲ್ ‌ದುಬಾರಿ ಇತ್ಯಾದಿ ಗೊಣಗಲಾರರು.

ಈ ರೀತಿ ಶ್ರೀಮಂತರು ಸದಾ ಗೋಳಿಡುವುದು ಇದ್ದದ್ದೇ. ಎಷ್ಟೇ ಆರ್ಥಿಕ ನೀತಿ ಸಾರು ಎಕನಾಮಿಕ್‌ ನ್ಯೂಸ್‌ ಪೇಪರ್ಸ್‌ ಇರಲಿ, ಅವುಗಳ ತಲೆಬರಹದಲ್ಲಿ, ಸೆನ್ಸೆಕ್ಸ್ ನ 100 ಪಾಯಿಂಟ್ಸ್ ಬಿದ್ದುಹೋದ್ದರಿಂದ 2 ಲಕ್ಷ ಕೋಟಿಗಳಷ್ಟು ವಾಸ್‌ ಶೇರ್‌ಹೂಡಿಕೆದಾರರದಾಗಿದೆ. ಸರ್ಕಾರವೇ ಏನಾದರೂ ಮಾಡಬೇಕು.... ಇತ್ಯಾದಿ. ಇವರು ತಮ್ಮ ಹೈಫೈ ಕಾರು ಚಲಿಸುವ ರಸ್ತೆಗಳ ಕುರಿತು ಮಾತ್ರ ಮಾತನಾಡುತ್ತಾರೆಯೇ ಹೊರತು, ಬ್ಯಾಟರಿ ರಿಕ್ಷಾಗಳು ಏಕೆ ಒಂದು ರಸ್ತೆಗಳಲ್ಲಿ ಟ್ರಾಫಿಕ್‌ ಜಾಮ್ ಮಾಡುತ್ತವೆಂದು ಶಾಪ ಹಾಕುತ್ತಿರುತ್ತಾರೆ.

ಶ್ರೀಮಂತರ ಈ ಗೋಳಾಟ ತಪ್ಪಲ್ಲ ಸರಿ, ಆದರೆ ಬಡರವನ್ನು ತುಳಿದು ಹೀಗೆ ಬೊಬ್ಬಿಡವುದು ಎಷ್ಟು ಸರಿ? ತಮ್ಮ ಪರಿಶ್ರಮದಿಂದ ಮೇಲೇರಿ ಶ್ರೀಮಂತರಾಗುವುದು ನಿಜಕ್ಕೂ ಪ್ರಶಂಸನೀಯ ವಿಷಯ. ಸಮಾಜಕ್ಕೆ ಅವರೇನೋ ನೀಡಿದ್ದಾರೆ ಎಂಬುದಕ್ಕೆ ಇದು ಸಮಾಜದ ಸರ್ಟಿಫಿಕೇಟ್‌ ಆಗಿದೆ. ಆದರೆ ಭಾರತ ಯಾ ಅಮೆರಿಕಾ ಇರಲಿ, ಎಲ್ಲಾ ಕಡೆ ಅಸಲಿಗೆ ಹಣ ದೊರಕುವುದೇ ವಸೂಲು ಮಾಡಲಾದ ತೆರಿಗೆ, ಚಂದಾ ಹಂಚಿಕೊಳ್ಳುವುದರಿಂದ. ಯಾರು ಶ್ರೀಮಂತರೋ ಅವರಲ್ಲಿ ಬಹುತೇಕರಿಗೆ ಸರ್ಕಾರಿ ಟೆಂಡರ್ ಸಿಗುತ್ತದೆ. ಕೆಲವರಿಗೆ ಡಿಫೆನ್ಸ್ ಕಾಂಟ್ರಾಕ್ಟ್ ಸಿಕ್ಕರೆ, ಹಲವರಿಗೆ ಸರ್ಕಾರಿ ಭವನಗಳ ಕಾಂಟ್ರಾಕ್ಟ್. ಇನ್ನುಳಿದವರಿಗೆ ಸರ್ಕಾರದ ಸರ್ವಿಲೆನ್ಸ್ ಗಾಗಿ ಕ್ಯಾಮೆರಾ ಸಪ್ಲೈ ಮಾಡುವುದರಿಂದ, ಭ್ರಷ್ಟಾಚಾರಿಗಳನ್ನು ಹಿಡಿಯುವ ಏಜೆನ್ಸಿಗಳಲ್ಲಿ ಕೆಲಸ ಮಾಡುವುದರಿಂದ.... ಇತ್ಯಾದಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ