ಅರ್ಥ ಆಗದ ವಿಷಯ : ಸಿಂಗರ್‌ ಟೇಲರ್‌ ಸ್ವಿಫ್ಟ್ ಳ ಹೆಸರು ಯಾರಿಗೆ ತಿಳಿಯದು? ಆದರೆ ಅವಳನ್ನು ದೇವತೆಯ ತರಹ ಗೋಡೆಗಳ ಮೇಲೆ ಚಿತ್ರಗಳಿಂದ ಹುದುಗಿಸಲಾಗಿರುವುದು ಮಾತ್ರ ಯಾಕೋ ಅರ್ಥವಾಗದ ವಿಷಯವಾಗಿದೆ. ಸ್ಟಾರ್‌ ವರ್ಶಿಪ್ ನಮ್ಮ ದೇಶಕ್ಕೆ ಮಾತ್ರ ಅಂಟಿದ ರೋಗವಲ್ಲ, ಎಲ್ಲೆಲ್ಲೂ ಇದೆ. ಆದರೆ ಇದು ಅತಿರೇಕಕ್ಕೆ ಹೋದರೆ ಮಾತ್ರ ಹಿಂಸೆ ಎನಿಸುತ್ತದೆ. ಇಲ್ಲಿನ ಪೇಂಟಿಂಗ್‌ ಚಿತ್ರಗಳನ್ನು ನೋಡಿದರೆ ಇದು ಸುಸ್ಪಷ್ಟ. ಇದು ಅಲ್ಲಿನ ಪಬ್ಲಿಕ್‌ ಬಿಲ್ಡಿಂಗ್‌ ಗಳಲ್ಲಿ ಎದ್ದು ಕಾಣಿಸುತ್ತಿದೆ. ಆದರೆ ಬಹುತೇಕ ನಮ್ಮಲ್ಲಿ ಲತಾ ಮಂಗೇಷ್ಕರ್‌, ಎಸ್‌.

the-legacy-100-club ಜಾನಕಿಯವರಿಗೆ ಯಾರೂ ಹೀಗೆಲ್ಲ ಮಾಡಿರಲಿಲ್ಲ. ಅವರನ್ನು ಗ್ಲಾಮರಸ್‌ ಸ್ಟಾರ್ ಆಗಿ ಯಾರೂ ಕಾಣಲಿಲ್ಲ. ನೀವು ಈ ಸ್ವಿಫ್ಟ್ ಳ ಮ್ಯೂಸಿಕ್‌ ಎಂಜಾಯ್‌ ಮಾಡಿ, ಆದರೆ ಆಕೆಯ ಪೇಂಟಿಂಗ್‌ ನ್ನು ಹೀಗೆ ಗುಲ್ಲೋಗುಲ್ಲು ಮಾಡುವುದರ ಅಗತ್ಯವೇನಿದೆ? ಆಕೆ ಕಡು ಮೋಟಿವೇಶನ್‌ ಮೆಸೇಜ್‌ ನೀಡುವಂಥ ಸಿಂಗರ್‌ ಏನೂ ಅಲ್ಲ.

1784877024410

ಮಿರಾಕಲ್ಸ್ ಫಾರ್‌ ಟಿಫ್ಸ್ : ಅಮೆರಿಕಾ ಶ್ರೀಮಂತ ದೇಶ ಎಂಬುದರಲ್ಲಿ 2 ಮಾತಿಲ್ಲ. ಹಾಗೆಂದ ಮಾತ್ರಕ್ಕೆ ಅಲ್ಲಿ ಬಡತನ, ಸಣ್ಣ ಮನೆಗಳಲ್ಲಿ ವಾಸಿಸುವ ಬಡ ರೋಗಿಷ್ಟ ಮಕ್ಕಳಿಗೆ ಕೊರತೆ ಇಲ್ಲ. ಅಲ್ಲಿನ ಸಮಾಜದ ಶ್ರೀಮಂತರು ಒಂದು ಕಡೆ ಮಹಾನ್‌ದಾನಿಗಳು, ಮತ್ತೊಂದು ಕಡೆ ಸಿರಿವಂತರು ಲೋನ್‌ ಹೆಸರಲ್ಲಿ ಶಾರ್ಕ್‌ ಸಿಂಗ್‌ ಮದರ್ಸ್‌ ಗೆ ಒದಗಿಸುವುದರಲ್ಲಿ ಸಾಕಾಗುತ್ತಾರೆ. ಇಂಥ ತಾಯಂದಿರ ಮಕ್ಕಳಿಗಾಗಿ ಚ್ಯಾರಿಟಿ ಪ್ರೋಗ್ರಾಂ ಬಹಳಷ್ಟು ನಡೆಯುತ್ತಿರುತ್ತದೆ. ಸ್ಟಾರ್ಕ್‌ಸ್ಟ್ರೈಪ್ಸ್ ಹಾಗೂ ಮಿರಾಕಲ್ಸ್ ಫಾರ್‌ ಕಿಡ್ಸ್ ಸಂಸ್ಥೆಗಳು ಸೇರಿ, ಸೆಲೆಬ್ರಿಟಿ ಸಿಂಗರ್ಸ್‌, ಡ್ಯಾನ್ಸರ್ಸ್‌, ಪರ್ಫಾಮರ್ಸ್‌ ಎಲ್ಲರನ್ನೂ ಒಟ್ಟುಗೂಡಿಸಿ, ಪೆಯ್ಡ್ ಇವೆಂಟ್ ಗಳಿಂದ ಹಣ ಸಂಗ್ರಹಿಸುತ್ತಾರೆ. ಅದನ್ನು ಈ ನಿಸ್ಸಾಹಯಕ ಮಕ್ಕಳು, ತಾಯಂದಿರಿಗೆ ನೀಡಿ ಅವರ ಕಷ್ಟ ನಿವಾರಿಸುತ್ತವೆ. ಆಟಮ್ಸ್  ಸ್ಟ್ರೈರ್‌ ಮಿರಾಕಲ್ಸ್ ಫಾರ್‌ ಕಿಡ್ಸ್ ಸಂಸ್ಥೆಯ ಇಂಥ ಅನಾಥ ಮಕ್ಕಳ ಜೊತೆ!

2 (8)

ಯಾರೂ ಅನಕ್ಷರಸ್ಥರಾಗಿ ಉಳಿಯಬಾರದು : ಸರ್ಕಾರಿ ಅನುದಾನಿತ ಶಾಲೆಗಳು ವಿಶ್ವದಲ್ಲಿ ಎಲ್ಲೆಡೆ ಹಣದ ಕೊರತೆಯಿಂದಾಗಿ ಕಂಗೆಟ್ಟಿವೆ. ಏಕೆಂದರೆ ಶಿಕ್ಷಣದ ಹೆಸರಲ್ಲಿ ಎಲ್ಲಾ ಹಣ ಒಂದು ಷಡ್ಯಂತ್ರದಂತೆ ಖಾಸಗಿ ಶಾಲೆಗಳ ಪಾಲಾಗುತ್ತಿದೆ. ನಮ್ಮಲ್ಲಂತೂ ಮಧ್ಯಮ ವರ್ಗದವರೂ ಸಹ ಖಾಸಗಿ ಕಾನ್ವೆಂಟ್‌ ಗಳಿಗೆ ಪ್ರತಿಷ್ಠೆಯ ಹೆಸರಲ್ಲಿ ಮಕ್ಕಳನ್ನು ಸೇರಿಸಲು ಹೈರಾಣಾಗುತ್ತಾರೆ. ಅದೇ ಪಾಶ್ಚಿಮಾತ್ಯ ದೇಶಗಳಲ್ಲಿ ಮಧ್ಯಮ, ಕೆಳ ವರ್ಗದ ಜನರು ಮಕ್ಕಳನ್ನು ಸರ್ಕಾರಿ ಶಾಲೆಗೇ ಸೇರಿಸುತ್ತಾರೆ. ಈ ಶಾಲೆಗಳ ಆರ್ಥಿಕ ಸ್ಥಿತಿ ಸುಧಾರಿಸಲೆಂದೇ ಶಾಲೆಗಳು ಚ್ಯಾರಿಟಿ ಪ್ರೋಗ್ರಾಂ ನಡೆಸುತ್ತವೆ. ಮಿಯಾಮೀ ದೇಶದಲ್ಲಿ ಹೀಗೆ ಒಂದು ಶಾಲೆ ಮುಖಾಂತರ ಮಕ್ಕಳ ತೈಲಚಿತ್ರಗಳನ್ನು ಲಿಲಾವು ಮಾಡಿತು. ಶ್ರೀಮಂತರು ಬಂದು ಇವನ್ನು ಕೊಂಡು ಆ ಶಾಲಾ ಪ್ರಬಂಧಕರಿಗೆ ಧನ್ಯವಾದ ಸಲ್ಲಿಸಿದರು. ಈ ಪರಂಪರೆ ಅಲ್ಲಿ ಮಾತ್ರವಲ್ಲ, ನಮ್ಮಲ್ಲೂ ನಡೆದಾಗ ಮಾತ್ರ, ಯಾರೂ ಅನಕ್ಷರಸ್ಥರಾಗಿ ಉಳಿಯುವುದಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ