ಚರ್ಮದ ನಳನಳಿಸುವ ಆರೋಗ್ಯ ಹಾಗೂ ಹೊಳೆ ಹೊಳೆಯುವ ಕಾಂತಿಗಾಗಿ, ಪರಂಗಿ ಹಣ್ಣಿನ ಫೇಸ್ಪ್ಯಾಕ್ಹೇಗೆ ಕೆಲಸ ಮಾಡುತ್ತದೆಂದು ನೋಡೋಣವೇ…..?

ವಿಷಯ ನಮ್ಮ ಗಟ್‌ ಹೆಲ್ತ್ ಗೆ ಸಂಬಂಧಪಟ್ಟದ್ದಿರಲಿ ಯಾ ಸ್ಕಿನ್‌ ಕೇರಿನದಿರಲಿ, ಪರಂಗಿ ಹಣ್ಣು ಎರಡಕ್ಕೂ ಬೆಸ್ಟ್! ಇದರಲ್ಲಿ ಲಭ್ಯವಿರುವ ವಿಟಮಿನ್ಸ್  ಎನ್‌ ಝೈಮ್ಸ್ ಸ್ಕಿನ್‌ ಹೆಲ್ತ್ ನ್ನು ಬೂಸ್ಟ್ ಮಾಡುವಲ್ಲಿ ಪರಂಗಿ ಹಣ್ಣಿನ ಗುಣಾಂಶಗಳು ಇದ್ದರೆ, ಆಗ ನಿಮ್ಮ ಸ್ಕಿನ್‌ ರೇಂಜ್‌ ಎಲ್ಲಕ್ಕಿಂತಲೂ ಬೆಸ್ಟ್ ಎಂದೇ ತಿಳಿಯಿರಿ. ಹಾಗಾದರೆ ಇದರ ಬಳಕೆಯಿಂದ ಸಿಗುವ ಲಾಭಗಳೇನು ಎಂದು ತಿಳಿಯೋಣವೇ….?

ಪರಂಗಿ ಹಣ್ಣಿನಲ್ಲಿ ಲೈಕೋಪೆನ್‌ ಆ್ಯಂಟಿ ಆಕ್ಸಿಡೆಂಟ್‌ ಲಭ್ಯವಿದ್ದು, ಇದು ಏಜಿಂಗ್‌ ಸೈನ್ಸ್ ನ್ನು ಕಡಿಮೆ ಮಾಡುತ್ತದೆ. ಇದು ಫ್ರೀ ರಾಡಿಕಲ್ಸ್ ಡ್ಯಾಮೇಜ್‌ ವಿರುದ್ಧ ಸಕ್ರಿಯವಾಗಿ ಹೋರಾಡುತ್ತದೆ, ರಿಂಕಲ್ಸ್ ನ್ನು ತಡೆಯುತ್ತದೆ.

ಇದರಲ್ಲಿರುವಂಥ ಪೆಪೈನ್‌ ಕೈಮೋಪೆಪೈನ್‌ ಗಳಂಥ ಎನ್‌ ಝೈಮ್, ಚರ್ಮದಲ್ಲಿನ ಡೆಡ್‌ ಸ್ಕಿನ್‌ ತೊಲಗಿಸಿ, ಕ್ಲೋಸ್ಡ್ ಪೋರ್ಸ್ ನ್ನು ಓಪನ್‌ ಮಾಡುತ್ತವೆ. ಇದರಿಂದ ಆ್ಯಕ್ನೆಯಂಥ ಸಮಸ್ಯೆ ತಂತಾನೇ ತಗ್ಗುತ್ತದೆ. ಇದರಲ್ಲಿ ವಿಟಮಿನ್‌ಸಮೃದ್ಧವಾಗಿದ್ದು, ಆ್ಯಕ್ನೆ, ಮೊಡವೆಗಳನ್ನು ನಿಗ್ರಹಿಸುವಲ್ಲಿ ಉತ್ತಮ ಪಾತ್ರ ನಿರ್ವಹಿಸುತ್ತದೆ.

ಎನ್‌ ಝೈಮ್ಸ್, ಬೀಟಾ ಕೆರಾಟಿನ್‌, ಫೈಟೋಕೆಮಿಕಲ್ಸ್, ಮಿನರಲ್ಸ್, ವಿಟಮಿನ್‌ ಗಳಿಂದ ಸಮೃದ್ಧವಾಗಿರುವ ಪರಂಗಿ ಹಣ್ಣಿನಲ್ಲಿ ಸ್ಕಿನ್‌ ಲೈಟನಿಂಗ್‌ ನ ಗುಣಗಳೂ ಅಡಗಿದೆ. ಇಂಥ ಗುಣಾಂಶಗಳು ತುಂಬಿರುವ ಸ್ಕಿನ್‌ ಲೈಟನಿಂಗ್‌ ಪ್ರಾಡಕ್ಟ್, ಡಾರ್ಕ್‌ ಸ್ಪಾಟ್ಸ್ ನ್ನು ಕಡಿಮೆಗೊಳಿಸಲು ಸಹಾಯಕ.

ಇದರ ಗುಣಾಂಶಗಳಿಂದ ಸಮೃದ್ಧ ಫೇಸ್‌ ವಾಶ್‌ ನ ನಿಯಮಿತ ಬಳಕೆ, ಮುಖದಿಂದ ಪೊಲ್ಯೂಟೆಂಟ್ಸ್ ಓಡಿಸುತ್ತದೆ ಹಾಗೂ ಫೀಸ್ ಸದಾ ಗ್ಲೋಯಿಂಗ್‌ ಆಗಿರುವಂತೆ ಮಾಡುತ್ತದೆ.

ಪರಂಗಿ ಹಣ್ಣಿನ ಉತ್ತಮಿಕೆಯ ಗುಣಾಂಶಗಳಿರುವ ಹೇರ್‌ ರಿಮೂವ್ ‌ಕ್ರೀಂ, ದೈನಂದಿನ ಬಳಕೆಗೆ ಅತಿ ಸೂಕ್ತವಾಗಿದ್ದು, ಇದು ಸ್ಕಿನ್ ಇರಿಟೇಶನ್‌ ಸಮಸ್ಯೆಯನ್ನು ತಗ್ಗಿಸಬಲ್ಲದು. ಇದರಿಂದ ಚರ್ಮ ಎಂದೂ ಡ್ರೈ ಆಗದು.

ಇದರಲ್ಲಿ ಸಸ್ಯಮೂಲದ ಆ್ಯಂಟಿ ಆಕ್ಸಿಡೆಂಟ್ಸ್ ಧಾರಾಳ ಅಡಗಿದ್ದು, ಸ್ಕಿನ್‌ ಕ್ಲೆನ್ಸಿಂಗ್‌ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತದೆ.

ಆ್ಯಂಟಿ ಆಕ್ಸಿಡೆಂಡ್ಸ್ ಹಾಗೂ ಎನ್‌ ಝೈಮ್ಸ್ ನಿಂದ ಸಮೃದ್ಧವಾಗಿರುವ ಪರಂಗಿ ಹಣ್ಣಿನ ಫೇಸ್‌ ಪ್ಯಾಕ್‌ ಬಳಕೆಯಿಂದ, ಚರ್ಮ ದೀರ್ಘಕಾಲ ಮಾಯಿಶ್ಚರೈಸ್ಡ್ ಆಗಿರುತ್ತದೆ. ಈ ಗುಣಗಳು ತುಂಬಿರುವ ಮಾಯಿಶ್ಚರೈಸರ್‌ ನ್ನು ಬಳಸುತ್ತಾ ಡ್ರೈ ಸ್ಕಿನ್ ಸಮಸ್ಯೆಗಳಿಂದ ಪಾರಾಗಬಹುದು.

ಈ ಹಣ್ಣಿನ ಹದನಾದ ತಿರುಳನ್ನು ಚೆನ್ನಾಗಿ ಮಸೆದು, ಮುಖಕ್ಕೆ ಸವರಿ, 40-45 ನಿಮಿಷ ಬಿಟ್ಟು, ನಂತರ ಮುಖ ತೊಳೆಯುವುದರಿಂದ ಹೆಚ್ಚಿನ ಲಾಭವಿದೆ. ಹಾಗೆಯೇ ಇದರ ತಾಜಾ ಬೀಜಗಳನ್ನೂ ಸಹ ಇದೇ ರೀತಿ ಉಪಯೋಗಿಸಬಹುದು. ಇದನ್ನು ಸ್ಕಿನ್‌ ಕೇರ್‌ ಕಾಸ್ಮೆಟಿಕ್ಸ್ ನಲ್ಲಿಯೂ ಬಳಸುತ್ತಾರೆ.

ಈ ಬಿರು ಬೇಸಿಗೆಯ ದಿನಗಳಲ್ಲಿ ನೀವು ನಿಮ್ಮ ಚರ್ಮ ಸದಾ ತಾಜಾ, ನಳನಳಿಸುವಂತೆ ಕಾಣಿಸಲಿ ಎಂದು ಬಯಸಿದರೆ, ಅಗತ್ಯವಾಗಿ ಪರಂಗಿ ಹಣ್ಣಿನ ಫೇಸ್‌ ಪ್ಯಾಕ್‌ ಯಾ ಇದರ ಅಂಶಗಳನ್ನು ಒಳಗೊಂಡ ಕಾಸ್ಮೆಟಿಕ್ಸ್ ಬಳಸಲು ಮರೆಯದಿರಿ!

ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ