ಕೇಂದ್ರ ಲೋಕಸೇವಾ ಆಯೋಗ (UPSC) ಪ್ರಕಟಿಸಿದ 2025ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಅಂತಿಮ ಫಲಿತಾಂಶದಲ್ಲಿ ತಮಿಳುನಾಡು ಮೂಲದ ರಾಜೇಶ್ವರಿ ಸುವೆ ಎಂ. ಇಡೀ ದೇಶಕ್ಕೇ ಎರಡನೇ ರ್ಯಾಂಕ್​ ಪಡೆದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಅವರು ಈ ಬಾರಿಯ “ಮಹಿಳಾ ಟಾಪರ್” ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ರಾಜೇಶ್ವರಿ ಅವರು ವೃತ್ತಿಜೀವನ ಮತ್ತು ಉನ್ನತ ಕನಸುಗಳನ್ನು ಒಟ್ಟಿಗೆ ಸರಿದೂಗಿಸುವ ಪ್ರತಿಯೊಬ್ಬರಿಗೂ ಅತ್ಯುತ್ತಮ ಉದಾಹರಣೆಯಾಗಿದ್ದಾರೆ. ತಮಿಳುನಾಡು ಲೋಕಸೇವಾ ಆಯೋಗದ (TNPSC) ಗ್ರೂಪ್ 1 ಪರೀಕ್ಷೆಯಲ್ಲಿ ಟಾಪರ್ ಆಗಿದ್ದ ಅವರು, ಪ್ರಸ್ತುತ ‘ಡೆಪ್ಯುಟಿ ಕಲೆಕ್ಟರ್’ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ರಾಜ್ಯಮಟ್ಟದ ಅತ್ಯುನ್ನತ ಹುದ್ದೆಯಲ್ಲಿದ್ದರೂ ತಮ್ಮ ಗುರಿಯನ್ನು ಅಲ್ಲಿಗೆ ಮಾತ್ರ ಸೀಮಿತಗೊಳಿಸಿಕೊಳ್ಳದೆ, ತಮ್ಮ ಕನಸನ್ನು ಮತ್ತಷ್ಟು ವಿಸ್ತರಿಸಿಕೊಂಡವರು. ಆಡಳಿತಾತ್ಮಕ ಅಧ್ಯಯನದಲ್ಲಿ ತಮಗಿದ್ದ ಬಲವಾದ ತಳಹದಿಯನ್ನು ಬಳಸಿಕೊಂಡು, ಇದೀಗ ಭಾರತದ ಸ್ಪರ್ಧಾತ್ಮಕ ಪರೀಕ್ಷೆ ಯುಪಿಎಸ್‌ಸಿಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.

ತಮ್ಮ ಗುರಿಯನ್ನು ಉನ್ನತೀಕರಿಸಿಕೊಂಡು ಸತತ ಶ್ರಮದಿಂದ ಐಎಎಸ್  ಕನಸು ನನಸು ಮಾಡಿಕೊಂಡಿರುವ ರಾಜೇಶ್ವರಿ ಸುವೆ ಅವರ ಈ ಸಾಧನೆ, ವಿಶೇಷವಾಗಿ ತಮಿಳುನಾಡಿನ ಲಕ್ಷಾಂತರ ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ದೊಡ್ಡ ಸ್ಫೂರ್ತಿಯಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ