ಪ್ರ : ನಾನು 38 ವರ್ಷದ ಅವಿವಾಹಿತೆ, ನೌಕರಿಯಲ್ಲಿದ್ದೇನೆ. ಮನೆಯ ಪರಿಸ್ಥಿತಿ ಏನೇನೂ ಚೆನ್ನಾಗಿರಲಿಲ್ಲ, ಹೀಗಾಗಿ ನನ್ನ ಮದುವೆ ಕನಸಿನ ಮಾತಾಯಿತು. ಇದಕ್ಕೆ 100% ನಾನೇ ಹೊಣೆ. ತಾಯಿ ತಂದೆ ಇರುವವರೆಗೂ ಸಹಾಯ ದೊರಕುತ್ತಿತ್ತು, ಈಗ ಅಣ್ಣ ಅತ್ತಿಗೆ ತಮ್ಮದೇ ಲೋಕದಲ್ಲಿ ನೆಮ್ಮದಿಯಾಗಿದ್ದಾರೆ. ಇದರಿಂದ ನಾನು ಒಬ್ಬಂಟಿ ಎಂದು ಮನದಲ್ಲೇ ಕೊರಗುತ್ತೇನೆ. ನಾನು ಮದುವೆಯಾದರೆ ನನ್ನ ಒಂಟಿತನ ಕಳೆಯುತ್ತದೆಯೇ? ಅದರಿಂದಾದರೂ ನನ್ನ ಜೀವನಕ್ಕೆ ಒಂದು ಗುರಿ ಸಿಕ್ಕಬಹುದೇ? ಹೀಗೇ ಕಳೆದ ತಿಂಗಳು ನನಗಿಂತಲೂ 5 ವರ್ಷ ಚಿಕ್ಕವನಾದ ಒಬ್ಬ ವರ ನನಗೆ ಪ್ರಪೋಸ್ಮಾಡಿದ. ಮದುವೆಗೆ ನಾನು ಒಪ್ಪಿದರೆ ಸಮಾಜ ಏನು ಹೇಳುತ್ತದೋ ಏನೋ? ನಾನು ಏನು ಮಾಡಲಿ ಹೇಳಿ?

ಉ :  ಕ್ಷಣ ಕ್ಷಣ ಬದಲಾಗುವ ಈ ಪ್ರಪಂಚದಲ್ಲಿ ಎಷ್ಟೋ ಸಲ ನಾವು ಒಬ್ಬಂಟಿ ಎಂಬ ಬೇಸರ ನಮ್ಮನ್ನು ಕಾಡುತ್ತದೆ. ನಿಮ್ಮೊಂದಿಗೆ ಆಗಿರುವುದೂ ಇದೇ ಸಮಸ್ಯೆ. ನಿಮ್ಮ ತಾಯಿ ತಂದೆ ತೀರಿಕೊಂಡ ನಂತರ, ಸಹಜವಾಗಿಯೇ ನೀವು ನಿಮ್ಮ ಚಿಂತೆಗಳನ್ನು ಯಾರ ಜೊತೆಗೂ ಹಂಚಿಕೊಳ್ಳಲು ಸಾಧ್ಯವಾಗಿಲ್ಲ ಎಂಬುದು ಇಲ್ಲಿ ಸುಸ್ಪಷ್ಟ.

ನಿಮ್ಮ ಆಪ್ತ ಗೆಳತಿ ಅಥವಾ ಹತ್ತಿರದ ನೆಂಟರಿಷ್ಟರೇ ಇರಲಿ, ಅವರ ಬಳಿ ಎಷ್ಟೋ ವಿಷಯಗಳನ್ನು ಹೆಣ್ಣಾಗಿ ನೀವು ಹಂಚಿಕೊಳ್ಳಲು ಸಾಧ್ಯವಿಲ್ಲ ಎಂಬುದು ನಿಜ. ಒಂಟಿತನ ನೀಗಲು ಎಷ್ಟೋ ಸಾಧನಗಳಿವೆ, ನಿಜ. ಇದೀಗ ನಿಮ್ಮ ಮನಸ್ಸು ಮದುವೆ ಕಡೆ ತಿರುಗಿದೆ ಎಂದ ಮೇಲೆ, ನೀವು ಯಾರು ಏನು ಹೇಳುತ್ತಾರೋ, ಸಮಾಜ ಏನು ಹೇಳುತ್ತದೋ ಎಂದೆಲ್ಲ ಮೀನಮೇಷ ಎಣಿಸುತ್ತಾ ಕೂರಬೇಡಿ, ಮೊದಲು ಮದುವೆ ಮಾಡಿಕೊಳ್ಳಿ.

ನಿಮಗಿಂತ ಆ ವರ 5 ವರ್ಷ ಚಿಕ್ಕವನಾದರೆ ಏನೀಗ? ನಿಮ್ಮಿಬ್ಬರ ಮನಸ್ಸು ಬೆರೆತು ಮದುವೆಗೆ ರಾಜಿ ಅಂದ ಮೇಲೆ ಬೇರೆಯವರದೇನು ಹಂಗು? ಇದರಿಂದ ನಿಮ್ಮ ಒಂಟಿತನ ನೀಗುವುದು ಮಾತ್ರವಲ್ಲ, ನಿಮ್ಮ ಬದುಕಿಗೊಂದು ಸ್ಪಷ್ಟ ಗುರಿ ಸಹ ಸಿಗುತ್ತದೆ. ಆ ಹುಡುಗ ನಿಮಗಿಂತ ಬಹಳ ಚಿಕ್ಕವನೇನಲ್ಲ, ನಿಮ್ಮಿಬ್ಬರದೂ ಇಜ್ಜೋಡು ಎಂದು ಆಗುವುದಿಲ್ಲ. ನಮ್ಮ ಸಮಾಜದಲ್ಲಿ ಇಂಥ ಎಷ್ಟೋ ಮದುವೆಗಳು ನಡೆದು, ಅವು ಯಶಸ್ವಿ ಎನಿಸಿವೆ. ಹೀಗೆ ಗಂಡು-ಹೆಣ್ಣಿನ ವಯಸ್ಸಿನಲ್ಲಿ ಇಷ್ಟು ಅಂತರವಿದ್ದರೂ, ದಾಂಪತ್ಯ ಜೀವನ ಸುಗಮವಾಗಿ ಸಾಗಲು ಏನೂ ಅಡ್ಡಿ ಇಲ್ಲ ಎಂದೇ ಆಧುನಿಕ ವೈದ್ಯಕೀಯ ಸಾರುತ್ತದೆ. ಇಬ್ಬರೂ ಖುಷಿಯಾಗಿ ಒಪ್ಪಿರುವಾಗ ಅನಗತ್ಯ ಚಿಂತೆ ಬಿಡಿ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ