ಮೆನೋಪಾಸ್ಅಥವಾ ಮುಟ್ಟಂತ್ಯ ಯಾವುದೇ ರೋಗ ಆಗಿರದೆ ಹೆಣ್ಣಿನ ಜೀವನದ ಒಂದು ಪ್ರಮುಖ ಘಟ್ಟವಾಗಿದೆ. ಇದನ್ನು ನೀವು ಸಹಜವಾಗಿ ಸ್ವೀಕರಿಸಲು ಕೆಳಗಿನ ಸೂಕ್ಷ್ಮ ಮಾಹಿತಿಗಳ ಬಗ್ಗೆ ವಿವರವಾಗಿ ತಿಳಿಯಿರಿ.......!

ಜಯಶ್ರೀ ಸಣ್ಣಪುಟ್ಟ ಮಾತುಗಳಿಗೂ ಬಹಳ ರೇಗಾಡುವುದನ್ನು ಶುರು ಹಚ್ಚಿಕೊಂಡಿದ್ದಳು. ಆಫೀಸ್‌ ಅಥವಾ ಮನೆಯ ಅಕ್ಕಪಕ್ಕದವರು ಅಥವಾ ದೈನಂದಿನ ಕೆಲಸದ ಸಲುವಾಗಿ ಯಾರೊಡನೆ ವ್ಯವಹರಿಸುವುದೇ ಇರಲಿ, ಅನಗತ್ಯವಾಗಿ ಎಲ್ಲರ ಮೇಲೆ ಸಿಡುಕುವಳು. ಇದರಿಂದ ಅವಳ ನೆಮ್ಮದಿ ಪೂರ್ತಿ ಹಾಳಾಗಿತ್ತು. ತನಗೇನೋ ಆಂತರಿಕ ರೋಗ ತಗುಲಿದೆ, ಇಲ್ಲದಿದ್ದರೆ ಹೀಗೆಲ್ಲ ತಾನು ಆಡುತ್ತಿರಲಿಲ್ಲ ಎಂದು ವಿಶ್ಲೇಷಿಸುವಳು.

ಮೊದಲಿನಿಂದ ಬಹಳ ಸಹನಶೀಲೆಯಾಗಿದ್ದ ಅವಳಲ್ಲಿ ಇದ್ದಕ್ಕಿದ್ದಂತೆ ಈ ಪರಿರ್ತನೆ ಆದದ್ದು ಹೇಗೆ? ಇದನ್ನೇ ಯೋಚಿಸಿ ನಿಡುಸುಯ್ಯುವಳು. ಮನೆಮಂದಿಯೆಲ್ಲಾ ಬೇಕೆಂದೇ ತನ್ನ ತಲೆ ಕೆಡಿಸಿ ಮೊಸರಿನ ಗಡಿಗೆ ಮಾಡಿಟ್ಟಿದ್ದಾರೆ ಎಂದು ಕೂಗಾಡುವಳು. ವಯಸ್ಸಿಗೆ ಬಂದ ಮಕ್ಕಳಂತೂ ತನ್ನ ಮಾತು ಕಿವಿಗೇ ಹಾಕಿಕೊಳ್ಳುವುದಿಲ್ಲ ಎಂದು ಕೊರಗುವಳು.

ಹೀಗೆ ಅವಳ ಸ್ಥಿತಿ ತೀರಾ ಹದಗೆಟ್ಟಾಗ ಅವಳ ಪತಿ ಜಯಶ್ರೀಯನ್ನು ಸ್ತ್ರೀರೋಗ ತಜ್ಞರ ಬಳಿ ಕರೆದೊಯ್ದರು. ಅವಳನ್ನು ಸಾದ್ಯಂತರ ಪರೀಕ್ಷಿಸಿದ ವೈದ್ಯರು, ಈಕೆಗೆ ಏನೂ ರೋಗವಿಲ್ಲ, ಮುಟ್ಟಂತ್ಯ ಅಥವಾ ಮೆನೋಪಾಸ್‌ ಸ್ಟೇಜ್‌ ತಲುಪಿದ್ದಾಳೆ ಎಂದರು.

ಮೆನೋಪಾಸ್‌ ಎಂಬುದು ಹೆಣ್ಣಿನ ಜೀವನದ ಒಂದು ಅನಿವಾರ್ಯ ಘಟ್ಟ. ಇದರಲ್ಲಿ ಹೆಣ್ಣಿಗೆ ಸಹಜವಾಗಿಯೇ ದೈಹಿಕ, ಮಾನಸಿಕ ತೊಂದರೆಗಳು ಏರ್ಪಡುತ್ತವೆ. ಎಷ್ಟೋ ಸಲ ಪರಿಸ್ಥಿತಿ ಕೈ ಮೀರಿದಂತಾಗತ್ತದೆ, ಮೆನೋಪಾಸ್‌ ಒಂದು ರೋಗವಾಗಿ ತನ್ನನ್ನು ಕಾಡುತ್ತಿದೆ ಎಂದೇ ಅವಳು ಭಾವಿಸುತ್ತಾಳೆ.

ಹೆಣ್ಣಿನ ಗರ್ಭಾಶಯದಲ್ಲಿ ಆಂತರಿಕವಾಗಿ 2 ಅಂಡಾಶಯಗಳ ಜೋಡಣೆ ಇರುತ್ತದೆ. ಇವುಗಳಿಂದ ಈಸ್ಟ್ರೋಜೆನ್‌ಪ್ರೊಜೆಸ್ಟೆರಾನ್ ಎಂಬ ಆಂತರಿಕ ಸ್ರಾವ ಹರಿಯುತ್ತದೆ. ಈ ಹಾರ್ಮೋನುಗಳಿಂದ ಹೆಣ್ಣಿನ ದೈಹಿಕ ಹಾಗೂ ಮಾನಸಿಕ ಸಮತೋಲನ ಬ್ಯಾಲೆನ್ಸ್ ಆಗುತ್ತದೆ. ಆದರೆ ಹೆಂಗಸರು 40+ ಆಗುತ್ತಿದ್ದಂತೆ, ಕ್ರಮೇಣ ಈ ಆಂತರಿಕ ಸ್ರಾವ ನಿಧಾನವಾಗಿ ಕಡಿಮೆ ಆಗುತ್ತಾ ಹೋಗುತ್ತದೆ. ಇದರಿಂದಾಗಿ ತೊಂದರೆಗಳು ತಪ್ಪಿದ್ದಲ್ಲ. ಇದನ್ನೇ ಮುಟ್ಟಂತ್ಯದ ಸ್ಥಿತಿ ಎನ್ನುತ್ತಾರೆ. 45-50ರ ಒಳಗೆ ಪ್ರತಿ ಹೆಣ್ಣೂ ಈ ಸ್ಥಿತಿ ತಲುಪುತ್ತಾಳೆ.

ಮೆನೋಪಾಸ್‌ ಸ್ಥಿತಿ ತಲುಪಿದ ನಂತರ ಜೀವನವಿಡಿ ಅವಳು ಹಾಗೇ ಮುಂದುವರಿಯ ಬೇಕಾಗುತ್ತದೆ. ಈ ಪೋಸ್ಟ್ ಮೆನೋಪಾಸ್ ಸ್ಟೇಜ್‌ ನಲ್ಲಿ ಗಮನಿಸಕ್ಕ ಅಂಶಗಳು :

ದೈಹಿಕ ತೊಂದರೆಗಳು

ಆರಂಭದಲ್ಲಿ ಅನಿಯಮಿತ ಮುಟ್ಟು

ದೇಹದಲ್ಲಿ ದಿಢೀರ್‌ ಉಷ್ಣತೆ ಹೆಚ್ಚುವುದು, ಬೆವರುವಿಕೆ

ಹೃದಯ ಬಡಿತ ಏರುಪೇರು

ಆಗಾಗ ಯೂರಿನ್‌ ಇನ್‌ ಫೆಕ್ಷನ್‌

ಮತ್ತೆ ಮತ್ತೆ ಮೂತ್ರ ವಿಸರ್ಜನೆಯ ಹಿಂಸೆ

ಆ ಸಮಯದಲ್ಲಿ ಹೆಚ್ಚಿನ ನೋವು, ಉರಿ

ಇದರ ಕುರಿತಾಗಿ ಕಂಟ್ರೋಲ್ ಇರಲ್ಲ, ಹೆಚ್ಚು ಹೊಟ್ಟೆ ನುಲಿತ

ಯೋನಿಯಲ್ಲಿ ಹಲವು ಕಷ್ಟಗಳು

ಉರಿ, ನವೆ, ನೋವು ಮಾಮೂಲಿ

ತುಟಿ ಒಡೆದು ಬಿರುಕು ಬಿಡುವಂತೆಯೂ ಆಗುತ್ತದೆ

ಸ್ನಾಯು ಕೀಲುಗಳಲ್ಲಿ ಅಪಾರ ನೋವು

ಚರ್ಮ ಶುಷ್ಕವಾಗಿ, ಜೋತು ಬೀಳುವುದು

ಮಾನಸಿಕ ತೊಂದರೆಗಳು

ಅತ್ಯಧಿಕ ಟೆನ್ಶನ್‌

ಜೀವನದಲ್ಲಿ ನಿರ್ಲಿಪ್ತತೆ, ನೀರಸತನ, ನಿರಾಶಾವಾದ

ಹೆಚ್ಚು ಮರೆವು

ವಿನಾಕಾರಣ ಎಲ್ಲರ ಮೇಲೆ ಸಿಟ್ಟು, ಸಿಡುಕುವಿಕೆ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ