ನಿಮ್ಮ ದೇಹದಲ್ಲಿ ಅಧಿಕ ಕೂದಲಿದ್ದು, ನೀವು ಆ ಕಷ್ಟದಿಂದ ಪಾರಾಗಬಯಸಿದರೆ ಈ ಮಾಹಿತಿ ನಿಮಗೆ ಬಲು ಸಹಾಯಕ......!
ಪರ್ಫೆಕ್ಟ್ ಹೇರ್ ಲೆಸ್ ಆಗಿ ಕಾಣಿಸಿಕೊಳ್ಳಬೇಕೆಂಬುದು ಎಲ್ಲಾ ಹೆಂಗಸರ ಬಯಕೆ. ಅದರಲ್ಲೂ ಬೇಸಿಗೆಯಲ್ಲಿ ಶಾರ್ಟ್ ಡ್ರೆಸ್ ಧರಿಸಿದಾಗ ಇದು ಅನಿವಾರ್ಯವೇ ಆಗುತ್ತದೆ. ನೀವು ಶೇವಿಂಗ್, ವ್ಯಾಕ್ಸಿಂಗ್, ಟ್ವೀಟಿಂಗ್ ಮಾಡಿಸಿರಬಹುದು. ಮನೆಯಲ್ಲೇ ಕುಳಿತು ಲೇಸರ್ ಹೇರ್ ರಿಮೂವರ್ ನಿಂದ ಅನಗತ್ಯ ಕೂದಲಿನಿಂದ ಮುಕ್ತಿ ಪಡೆಯಬಹುದು.
ಲೇಸರ್ ಹೇರ್ ರಿಮೂವರ್ ಲೇಸರ್ ಬೆಳಕಿನ ಕಿರಣಗಳಿಂದ ಹೇರ್ ಫಾಲಿಕ್ಸ್ ನ್ನು ಸುಟ್ಟು ನಷ್ಟ ಪಡಿಸಲಾಗುತ್ತದೆ. ಇದರಿಂದ ಮುಂದೆ ಆ ಭಾಗದದಲ್ಲಿ ಕೂದಲು ಮೂಡಿ ಬರುವುದಿಲ್ಲ. ಈ ಪ್ರಕ್ರಿಯೆಯಲ್ಲಿ ಒಂದಕ್ಕಿಂತ ಹೆಚ್ಚಿನ ಸಿಟ್ಟಿಂಗ್ಸ್ ಇರುತ್ತವೆ.
ಸೆಲ್ಫ್ ಲೇಸರ್ ಹೇರ್ ರಿಮೂವರ್ : ಲೇಸರ್ ಟೆಕ್ನಿಕ್-2 ವಿಧಾನಗಳಿಂದ ಕೂದಲನ್ನು ನಿವಾರಿಸುತ್ತದೆ. ಒಂದು ಸ್ಪ್ರೇ ರಿಮೂವರ್ ಮತ್ತೊಂದು ಲೇಸರ್ ಹೇರ್ ರಿಮೂವರ್. ಎರಡೂ ಒಂದೇ ಟೆಕ್ನಿಕ್ ಆಧರಿಸಿ ಕೆಲಸ ಮಾಡುತ್ತವೆ. ಹೇರ್ ಫಾಲಿಕ್ಸ್ ನ್ನು ನಾಶ ಮಾಡಿಸುವುದು. ಸಾಮಾನ್ಯವಾಗಿ ಮನೆಗಳಲ್ಲಿ ಹ್ಯಾಂಡ್ ರಿಮೂನರ್ ನ್ನೇ ಬಳಸಲಾಗುತ್ತದೆ. ಅಸಲಿಗೆ, ಇದರಲ್ಲಿ ಲೇಸರ್ ಬೀಮ್ ಇಲ್ಲದಿದ್ದರೂ, ಇಂಟೆನ್ಸ್ ವೈಟ್ ಬೀಮ್ ಮೂಲಕ ಇದು ಟಾರ್ಗೆಟ್ ಏರಿಯಾ ಕೂದಲಿನ ಬುಡದವರೆಗೂ ತಲುಪಿ ಅದನ್ನು ನಾಶಪಡಿಸುತ್ತದೆ. ಇದರಿಂದಾಗಿ ಆ ಏರಿಯಾ ಬಹಳ ದಿನಗಳವರೆಗೂ ಹೇರ್ ಲೆಸ್ ಆಗಿರುತ್ತದೆ. ಇದನ್ನು ಮುಖದ ಮೇಲೂ ಬಳಸಬಹುದು, ಕಣ್ಣಿನ ಸುತ್ತಮುತ್ತ ಹುಷಾರಾಗಿರಿ.
ಸ್ಪ್ರೇ ಹೇರ್ ರಿಮೂವರ್ ಯಾರಿಗೆ ಸರಿಹೊಂದುತ್ತದೆ? : ಆಧುನಿಕ ತಾಂತ್ರಿಕತೆಯ ಫಲಸ್ವರೂಪವಾದ ಸ್ಪ್ರೇ ರಿಮೂವರ್ ಎಲ್ಲಾ ವಿಧದ ಅನಗತ್ಯ ಕೂದಲನ್ನು ನಿವಾರಿಸುವ ಹೊಣೆ ಹೊರುತ್ತದೆ. ಸಾಮಾನ್ಯವಾಗಿ ಚರ್ಮ ಮತ್ತು ಕೂದಲಿನ ಬಣ್ಣದಲ್ಲಿ ಕಾಂಟ್ರಾಸ್ಟ್ ಅಂದ್ರೆ ಸ್ಪಷ್ಟ ಅಂತರ ಇರುವುದರಿಂದ ಇದು ಉತ್ತಮ ಪರಿಣಾಮ ನೀಡುತ್ತದೆ. ಉದಾ.: ಫೇರ್ ಸ್ಕಿನ್‌ಡಾರ್ಕ್ ಸ್ಕಿನ್ ಗಳ ನಡುವೆ ಇದು ಅಂಥ ಉತ್ತಮ ಕೆಲಸ ಮಾಡದು, ಏಕೆಂದರೆ ಇದಕ್ಕೆ ಮೆಲನಿನ್‌ಫಾಲಿಕ್ಸ್ ನಡುವೆ ವ್ಯತ್ಯಾಸ ತಿಳಿಯಲು ಕಷ್ಟವಾಗುತ್ತದೆ. ಹೀಗಾದಾಗ ಸ್ಕಿನ್ ಬರ್ನ್ ಆಗುವ ಸಂಭವ ಇರುತ್ತದೆ.
ಸ್ಪ್ರೇ ಸೀಮಿತ ಪ್ರಕ್ರಿಯೆ : ಲೇಸರ್ ಗೆ ಹೋಲಿಸಿದರೆ ಸ್ಪ್ರೇ ಖಂಡಿತಾ ಹೆಚ್ಚು ಶಕ್ತಿಶಾಲಿಯಲ್ಲ. ಹೀಗಾಗಿ ಹೇರ್ ಫಾಲಿಕ್ಸ್ ನ್ನು ಪ್ರೊಫೆಷನ್ ಲೇಸರ್ ರಿಮೂವರ್ ತೆಗೆಯಬಲ್ಲಷ್ಟು ಸಮರ್ಥವಾಗಿ ಇದು ತೆಗೆದುಹಾಕದು, ಹೀಗಾಗಿ ಇದರ ಪರಿಣಾಮ ತುಸು ನಿಧಾನ. ಇದನ್ನು ಕಂಗಳ ಹತ್ತಿರ ಹಾಗೂ ತುಟಿಗಳ ಮೇಲೆ ಎಂದೂ ಬಳಸದಿರಿ. ಕಂಗಳ ಹತ್ತಿರ ಬಳಸಲೇಬೇಕಾಗಿ ಬಂದಾಗ, ಮೊದಲು ಕನ್ನಡಕ ಧರಿಸಿ ನಂತರ ಮುಂದುವರಿಯಿರಿ. ಗರ್ಭಾವಸ್ಥೆ, ಪ್ರವಸದ ನಂತರ ವೈದ್ಯರ ಸಲಹೆ ಇಲ್ಲದೆ ಇದನ್ನು ಬಳಸಬಾರದು.
ಸ್ಪ್ರೇ ಬಳಸುವ ಮೊದಲು : ಇದನ್ನು ಚಳಿಗಾಲದಲ್ಲಿ ಮೊದಲು ಬಳಸಿದರೆ ಲೇಸು. ಟಾರ್ಗೆಟ್‌ಏರಿಯಾ ಬಳಿ ಯಾವುದೇ ಪೌಡರ್, ಪರ್ಫ್ಯೂಮ್ ಯಾ ಕೆಮಿಕಲ್ಸ್ ಇರಬಾರದು. ಕೂದಲು ಹೆಚ್ಚು ಬೆಳೆದಿದ್ದರೆ, ಅದನ್ನು ಮೊದಲೇ 3-4 ಟ್ರಿಂ ಮಾಡಿಬಿಡಿ.