ಸೆಕ್ಸ್ ಎಂಬುದು ಪ್ರಕೃತಿ ಮಾನವರಿಗಿತ್ತ ಒಂದು ಅಮೂಲ್ಯ ಕೊಡುಗೆ, ಆದರೆ ನಿಮ್ಮ ಸಂಗಾತಿ ವಿಷಯದಲ್ಲಿ ಅನಾಸಕ್ತಿ ತೋರಿದರೆ, ಅದರಿಂದ ಸೈಡ್ಎಫೆಕ್ಟ್ ಖಂಡಿತಾ ತಪ್ಪದು.....

ಸಾಮಾನ್ಯವಾಗಿ ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಸರಾಸರಿ 5-6 ಸಾವಿರ ಸಲ ಸೆಕ್ಸ್ ಹೊಂದುತ್ತಾನೆ. ಇದು ಅವರವರ ಪರ್ಸನಲ್ ವಿಚಾರ ಎಂಬುದಂತೂ ಖಚಿತ. ಎಷ್ಟು ಸಲ ಈ ಕ್ರಿಯೆಯ ಆನಂದ ಪಡೆಯುವುದು, ಬಿಡುವುದು ಎಂಬುದು ಅವರವರ ಆಯ್ಕೆಗೆ ಬಿಟ್ಟಿದ್ದು. ಆದರೆ ಇದರ ಕೊರತೆಯಿಂದಾಗಿ ನಿಮ್ಮ ದೇಹದ ಮೇಲೆ ಎಂತೆಂಥ ಸೈಡ್‌ ಎಫೆಕ್ಟ್ ಆಗಲಿದೆ, ವಿವರವಾಗಿ ತಿಳಿಯೋಣವೇ? :

ತಜ್ಞರ ಅಭಿಪ್ರಾಯ : ನಿಮ್ಮ ಸೆಕ್ಸ್ ಡ್ರೈವ್ ‌ಗಾಗಿ ಉತ್ತಮ ಸಲಹೆ ಎಂದರೆ, `ಯೂಸ್‌ ಇಟ್‌ಲೂಸ್‌ ಇಟ್‌!'

``ಯಾರು ಸೆಕ್ಸ್ ನಿಂದ ದೂರ ಇರಬಯಸುತ್ತಾರೋ, ಅವರು ಸದಾ ಸುಸ್ತು ಎನ್ನುತ್ತಿರುತ್ತಾರೆ. ಕ್ರಮೇಣ ಅವರಲ್ಲಿ ಸೆಕ್ಸ್ ಕುರಿತ ಆಸೆ ಕಮರಿಹೋಗ ತೊಡಗುತ್ತದೆ. ನನ್ನ ಕ್ಲೈಂಟ್ಸ್ ಸದಾ ಹೇಳುತ್ತಿರುತ್ತಾರೆ, `ಔಟ್‌ ಆಫ್‌ ಸೈಟ್‌ ಈಸ್‌ ಔಟ್‌ ಆಫ್‌ ಮೈಂಡ್‌!' ಅಂಥವರಿಗೆ ಈ ಮೇಲಿನ ಸಲಹೆ ಅಕ್ಷರಶಃ ಒಪ್ಪುತ್ತದೆ.''

ಬಹಳ ಅಂತರ ಖಂಡಿತಾ ಒಳ್ಳೆಯದಲ್ಲ : 35-40+ನ ಹೆಂಗಸರು ಬಹಳ ದಿನಗಳ ನಂತರ ಸೆಕ್ಸ್ ಗೆ ಒಪ್ಪುತ್ತಾರೆ, ಆಗ ಅವರಿಗೆ ಲ್ಯೂಬ್ರಿಕೇಶನ್‌ ಸಮಸ್ಯೆ ಎದುರಾಗಬಹುದು. ವಜೈನ್‌ ಮಸಲ್ಸ್ ‌ದುರ್ಬಲ ಆಗಬಹುದು, ಈಸ್ಟ್ರೋಜೆನ್‌ ಹಾರ್ಮೋನ್‌ ಕಡಿಮೆ ಆಗಬಹುದು. 20-30 ವಯಸ್ಸಿನ ಯುವತಿಯರು ಸೆಕ್ಸ್ ನಲ್ಲಿ ಪಾಲ್ಗೊಳ್ಳದಿದ್ದರೂ ಸಹ, ಅವರ ಈಸ್ಟ್ರೋಜೆನ್‌ ಲೆವೆಲ್ ‌ಸಮರ್ಪಕ ಆಗಿರುತ್ತದೆ, ಅವರ ಅಂಗಾಂಶ (ಟಿಶ್ಯೂ) ಹೆಲ್ದಿ ಆಗಿರುತ್ತದೆ. ಆದರೆ 40+ನ ಹೆಂಗಸರ ಸ್ಥಿತಿ ಖಂಡಿತಾ ಹೀಗಿರುವುದಿಲ್ಲ. ಹೀಗಾಗಿ ಸೆಕ್ಸ್ ನ್ನು ಬಹಳ ಕಾಲ ಮುಂದೂಡುತ್ತಾ ಅಂತರ ಕಾಯ್ದುಕೊಳ್ಳುವುದು ಖಂಡಿತಾ ಒಳ್ಳೆಯದಲ್ಲ.

ನಿಯಮಿತವಾಗಿ ಸೆಕ್ಸ್ ನಲ್ಲಿ ಪಾಲ್ಗೊಳ್ಳಿ : ಯಾವ ಹೆಂಗಸರು ಮುಟ್ಟಂತ್ಯ (ಮೆನೋಪಾಸ್‌) ಕ್ಕೆ ಹತ್ತಿರವಾಗಿರುತ್ತಾರೋ, ಅಂಥವರು ಸೆಕ್ಸ್ ನಿಂದಲೂ ದೂರ ಉಳಿಯ ಬಯಸಿದರೆ, ಅವರ ವಯಸ್ಸು ಹೆಚ್ಚುತ್ತಾ ಹೋದಂತೆ ಅವರ ವಜೈನ್‌ ಮಸಲ್ಸ್ ಅತಿ ದುರ್ಬಲ ಆಗುತ್ತಾ ಹೋಗುತ್ತದೆ. ಮುಂದೆ ಅವರು ಸೆಕ್ಸ್ ಬಯಸಿದರೂ, ಅದು ಅವರಿಗೆ ಹೆಚ್ಚಿನ ನೋವು ಉಂಟು ಮಾಡಬಹುದು.

ಮುಟ್ಟಂತ್ಯ ಸಮೀಪಿಸುತ್ತಿದೆ ಎಂದು ಅರಿವಾದಾಗ, ವಜೈನ್‌ ಹೆಲ್ತ್ ಚುರುಕಾಗಿಸಲು, ಹೆಚ್ಚು ಹೆಚ್ಚು ಸಮಯ ಸೆಕ್ಸ್ ನಲ್ಲಿ ಪಾಲ್ಗೊಳ್ಳುವಂತೆ ಉ.ಅಮೆರಿಕಾದ ಲೈಂಗಿಕ ತಜ್ಞರು ವಿಶೇಷ ಸಲಹೆ ನೀಡುತ್ತಾರೆ.

ದೇಹದ ಮೇಲಾಗುವ ಪರಿಣಾಮ : ಈ ವಿಷಯ ನಿಮಗೆ ವಿಚಿತ್ರ ಅನಿಸಬಹುದು, ಕೆಲವರು ನಂಬದೆ ಇರಬಹುದು, ಪೀರಿಯಡ್ಸ್ ನಲ್ಲಿ ಸೆಕ್ಸ್ ನಿಂದಾಗಿ ಮೆನ್‌ ಸ್ಟ್ರುಯೆಲ್ ‌ಕ್ರಾಂಟಮ್ ಕಡಿಮೆ ಆದೀತು. ಪೀರಿಯಡ್ಸ್ ಸಂದರ್ಭದಲ್ಲಿ ಸೆಕ್ಸ್ ನಿಂದ ಎಂಡಾರ್ಫಿಸ್ ಹೆಚ್ಚುತ್ತದೆ. ಇದರಿಂದ ಮುಟ್ಟಿನ ಸಮಯದಲ್ಲಿ ಕಾಡುವ ನೋವು ಎಷ್ಟೋ ತಪ್ಪುತ್ತದೆ. ಗರ್ಭಕೋಶ (ಯೂಟಿರಸ್‌) ಒಂದು ಮಾಂಸಖಂಡವಾಗಿದ್ದು, ಆರ್ಗೆಝಂ ಸಂದರ್ಭದಲ್ಲಿ ರಕ್ತ ಸಂಚಾರ ಅತಿ ತೀವ್ರವಾಗುತ್ತದೆ, ಇದರಿಂದಾಗಿ ಪೀರಿಯಡ್ಸ್ ಸಮಯದ ಕ್ರಾಂಟಮ್ ಎಷ್ಟೋ ಕಡಿಮೆ ಆಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ