ಬೆಂಗಳೂರನ್ನೇ ಬೆಚ್ಚಿಬೀಳಿಸಿರುವ ಕ್ಯಾಬ್ ಡ್ರೈವರ್ ತನ್ನ ಪತ್ನಿ ಮತ್ತು ಆಕೆಯ ಕುಟುಂಬದ ಆರು ಮಂದಿಯನ್ನು ಹತ್ಯೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.
ಆರೋಪಿ ಇಂದುಶೇಖರ್ ಮನೆಯಲ್ಲಿ ಮಸಾಲೆ ರುಬ್ಬಲು ಬಳಸುವ ರುಬ್ಬುಗುಂಡಿನಿಂದ ಇಡೀ ಕುಟಂಬವನ್ನೇ ಹತ್ಯೆ ಮಾಡಿದ್ದಾನೆ. ಪತ್ನಿ, ಪತ್ನಿಯ ತಾಯಿ, ಪತ್ನಿಯ ಅಣ್ಣಂದಿರು, ಅತ್ತಿಗೆಯರನ್ನು ಇಂದುಶೇಖರ್ ಮನೆಗೆ ಕರೆಸಿ ಪೂರ್ವನಿಯೋಜಿತವಾಗಿ ಸಂಚು ರೂಪಿಸಿ ಕೊಲೆಗೈದಿದ್ದಾನೆ. ಈ ಪ್ರಕರಣದ ಪ್ರಾಥಮಿಕ ತನಿಖೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
ರಾಜಾಜಿನಗರ ಪೊಲೀಸ್ ಠಾಣೆಗೆ ಭೇಟಿ ನೀಡಿದ ಪೊಲೀಸ್ ಆಯುಕ್ತರು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಲವು ದಿನಗಳ ಹಿಂದೆ ತಮ್ಮ ಸಂಬಂಧಿಕರು ಕಾಣೆಯಾಗಿದ್ದಾರೆ ಎಂದು ಇಂದುಶೇಖರ್ ಪತ್ನಿಯ ಸಂಬಂಧಿಕರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಬಳಿಕ ದೂರುದಾರರಿಗೆ ತಮ್ಮದೇ ಕೆಲವು ಸಂಬಂಧಿಕರ ಮೇಲೆ ಅನುಮಾನ ವ್ಯಕ್ತವಾಗಿತ್ತು. ಈ ಸಂಬಂಧ ಪೊಲೀಸರು ಇಂದುಶೇಖರ್ ನನ್ನು ಬಂಧಿಸಿದರು. ಆತ ಕಳೆದ 15ರಿಂದ 20 ದಿನಗಳ ಅವಧಿಯಲ್ಲಿ (ಈ ಬಗ್ಗೆ ಇನ್ನೂ ಪರಿಶೀಲನೆ ನಡೆಯಬೇಕಿದೆ) ಏಳು ಮಂದಿಯನ್ನು ಕೊಲೆ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ. ಕೊಲೆಯಾದ ಏಳು ಮಂದಿಯೂ ಆತನ ಸಂಬಂಧಿಕರೇ ಆಗಿದ್ದಾರೆ ಎಂದರು.
ಇನ್ನೂ ಆಘಾತಕಾರಿ ಸಂಗತಿಯೆಂದರೆ, ಆತ ತನ್ನ ಪತ್ನಿ ಹಾಗೂ ಪತ್ನಿಯ ಕಡೆಯ ಸಂಬಂಧಿಕರನ್ನೂ ಕೊಲೆ ಮಾಡಿದ್ದಾನೆ. ಕೊಲೆಯಾದ ಏಳು ಮಂದಿ ಪತ್ನಿಯ ಕಡೆಯ ಎರಡು ಕುಟುಂಬಗಳಿಗೆ ಸೇರಿದ ಸಂಬಂಧಿಕರಾಗಿದ್ದಾರೆ. ಕುಟುಂಬದೊಳಗೆ ನಡೆದಿರುವ ಅತ್ಯಂತ ಗಂಭೀರ ಅಪರಾಧ ಇದಾಗಿದೆ. ಆರು ಮಂದಿಯಲ್ಲಿ ಒಬ್ಬ ಅಪ್ರಾಪ್ತ ಬಾಲಕನನ್ನೂ ಕೊಲೆ ಮಾಡಲಾಗಿದೆ.
ಈ ಘಟನೆ ಹೇಗೆ ನಡೆದಿದೆ ಎಂಬುದನ್ನು ಎಲ್ಲ ಆಯಾಮಗಳಿಂದಲೂ ಪರಿಶೀಲಿಸುತ್ತಿದ್ದೇವೆ. ಆರೋಪಿ ನೀಡಿರುವ ಹೇಳಿಕೆಯ ಪ್ರಕಾರ, ಆತ ಸಂಬಂಧಿಕರನ್ನು ಒಬ್ಬೊಬ್ಬರನ್ನಾಗಿ ಮನೆಗೆ ಕರೆಸಿಕೊಂಡು ಕೊಲೆ ಮಾಡಿ, ಮೃತದೇಹಗಳನ್ನು ತಾನು ಸೂಚಿಸಿರುವ ಸ್ಥಳಗಳಲ್ಲಿ ವಿಲೇವಾರಿ ಮಾಡಿದ್ದಾನೆ. ಈ ಬಗ್ಗೆ ಆಯಾ ಪ್ರದೇಶಗಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಪರಿಶೀಲನೆ ನಡೆಸುತ್ತಿದ್ದೇವೆ. ಆರೋಪಿ ನೀಡಿರುವ ಮಾಹಿತಿಯ ಪ್ರಕಾರ, ಇನ್ನೂ ಆರು ಮೃತದೇಹಗಳು ಪತ್ತೆಯಾಗಬೇಕಿವೆ ಎಂದು ತಿಳಿಸಿದರು.
ಆರೋಪಿ ಸ್ವಇಚ್ಚೆ ಹೇಳಿಕೆ ಪ್ರಕಾರ 7 ಜನರ ಸಾಯಿಸಿದ್ದೀನಿ ಅಂದಿದ್ದಾನೆ. ವೈಯುಕ್ತಿಕ ಕಾರಣಕ್ಕೆ ಕೊಲೆ ಅಂದಿದ್ದಾನೆ. ಆರೋಪಿಯನ್ನು ಹಿಡಿಯುವಾಗ ಮಗುವೊಂದನ್ನು ರಕ್ಷಣೆ ಮಾಡಲಾಗಿದೆ. ಮಗುವನ್ನು ಸಾಯಿಸೋ ಪ್ಲಾನ್ ಕೂಡ ಮಾಡಿದ್ದ. ಅಲ್ಲದೇ ಆರೋಪಿಗೆ ಅಪ್ರಾಪ್ತ ಮಗಳು ಸಾಥ್ ನೀಡಿದ್ದಾಳೆ. ಅಪ್ರಾಪ್ತ ಮಗಳಿಗೆ ಆರೋಪಿ ಬ್ರೈನ್ ವಾಷ್ ಮಾಡಿದ್ದಾನೆ. ನಂತರ 15 ರಿಂದ 20 ದಿನಗಳ ಅಂತರದಲ್ಲಿ ಒಬ್ಬೊಬ್ಬರೇ ಮಿಸ್ ಆಗಿದ್ದಾರೆ. ನವೆಂಬರ್ 3ಕ್ಕೆ ಮಿಸ್ಸಿಂಗ್ ಕಪ್ಲೆಂಟ್ ಆಗಿದೆ ಎಂದು ವಿವರಿಸಿದರು.





