ನಿಮ್ಮ ಪತಿ ಅಡುಗೆ ಕೆಲಸದಲ್ಲಿ ನಿಮಗೆ ಸಹಾಯ ಮಾಡಬೇಕೆಂದು ನೀವು ಬಯಸಿದರೆ, ಈ ವಿಷಯಗಳನ್ನು ನೆನಪಿನಲ್ಲಿಡಿ.....
ಕುಕಿಂಗ್ ಪ್ರೇಮಿ ಚಿನ್ಮಯ್ ವಾರಾಂತ್ಯದಲ್ಲಿ ಬಟರ್ ಪನ್ನೀರ್ ಮಸಾಲಾ ಮಾಡಲು ಅಡುಗೆಮನೆಗೆ ಬಂದ ತಕ್ಷಣ, ಸ್ವಲ್ಪ ಸಮಯದ ನಂತರ ಬೇಸರಗೊಂಡು ತನ್ನ ಪತ್ನಿ ಜೂಲಿಯನ್ನು ಕೂಗಿ ಕರೆದು, ``ನಾನು ಅಡುಗೆಮನೆಗೆ ಬಂದಾಗೆಲ್ಲಾ ನನ್ನ ಕೈಗೆ ಏನೂ ಸಿಗುವುದಿಲ್ಲ. ಕೆಲವೊಮ್ಮೆ ಉಪ್ಪು ಸಿಗದಿದ್ದರೆ, ಮತ್ತೆ ಕೆಲವೊಮ್ಮೆ ಮೆಣಸಿನಪುಡಿ ಸಿಗುವುದಿಲ್ಲ. ನೀನು ಹೇಗೆ ಅಡುಗೆ ಮಾಡ್ತೇವೋ ನನಗಂತೂ ಅರ್ಥವಾಗುವುದಿಲ್ಲ,'' ಎಂದ.
``ಉಫ್.... ಅದು ಮುಗಿದಿತ್ತು ಬೇರೆ ತುಂಬಿಡಲು ಮರೆತಿದ್ದೆ. ಈಗ ಅದನ್ನು ತುಂಬಿಸಿಡ್ತೀನಿ,'' ಎಂದಳು.
ಆದರೆ ಅಷ್ಟು ಹೊತ್ತಿಗಾಗಲೇ ಚಿನ್ಮಯ್ ನ ಅಡುಗೆ ಮಾಡುವ ಮೂಡ್ ಹಾಳಾಗಿ ಹೋಗಿತ್ತು. ನಂತರ ಜೂಲಿಯೇ ಇಡೀ ಭೋಜನವನ್ನು ತಯಾರಿಸಬೇಕಾಯಿತು.
ಶಾಲಿನಿ ಮತ್ತು ಅವಳ ಪತಿ ಅನಿಲ್ ಒಂದೇ ಆಫೀಸ್ ನಲ್ಲಿ ಕೆಲಸ ಮಾಡುತ್ತಿದ್ದರು. ಸಂಜೆ ಆಫೀಸ್ ನಿಂದ ಹಿಂದಿರುಗಿದ ನಂತರ, ಶಾಲಿನಿ ಸ್ಟವ್ ಮೇಲೆ ಚಹಾಕ್ಕೆ ಇಟ್ಟು, ಗಂಡ ಅನಿಲ್ ಗೆ ಉಪಾಹಾರ ತಯಾರಿಸಲು ಹೇಳಿದಳು. ಆದರೆ ಸ್ವಲ್ಪ ಸಮಯದಲ್ಲೇ ಇಬ್ಬರೂ ಜಗಳವಾಡಲು ಪ್ರಾರಂಭಿಸಿದರು.
``ಇದೇಕೆ ಅಡುಗೆ ಸಾಮಗ್ರಿಗಳು ಬಾಕ್ಸ್ ನಲ್ಲಿ ಒಂದೂ ಇರುವುದಿಲ್ಲ. ಪ್ರತಿ ಭಾನುವಾರ ಅವುಗಳನ್ನು ಆಯಾ ಕಂಟೇನರ್ ನಲ್ಲಿ ತುಂಬಿಸಿಡು.''
``ನೀನೇ ಆ ಕೆಲಸ ಮಾಡಿದರೆ ಏನಾಗುತ್ತೇ.....?''
``ಆಯಾ ಕಂಟೇನರ್ ನಲ್ಲಿ ಆಯಾ ವಸ್ತುಗಳನ್ನು ತುಂಬಿಸಿಡುವುದು ದೊಡ್ಡ ಕೆಲಸವಲ್ಲ. ವಸ್ತುಗಳನ್ನು ಹುಡುಕುವುದೇ ದೊಡ್ಡ ಸಮಸ್ಯೆ. ನೀನು ಇಟ್ಟಿರುವ ವಸ್ತುಗಳು ನಿನಗೇ ಸಿಗುವುದಿಲ್ಲ... ಇನ್ನು ನನಗೆ ಹೇಗೆ ಸಿಗುತ್ತೆ.....?''
ಹೀಗೆ ಅವರಿಬ್ಬರ ನಡುವೆ ವಾದವಿವಾದವಾಗಿ ಅವರಲ್ಲಿದ್ದ ಸಾಮರಸ್ಯ ಎಲ್ಲಿ ಕಳೆದುಹೋಯಿತು ಎಂಬ ಅರಿವೇ ಅವರಿಗೆ ಬರಲಿಲ್ಲ.
ಇದು ಕೇವಲ ಚಿನ್ಮಯ್ ಹಾಗೂ ಅನಿಲ್ ರ ಸಮಸ್ಯೆ ಮಾತ್ರವಲ್ಲ, ಹೆಚ್ಚಿನ ಪುರುಷರ ಸಮಸ್ಯೆ ಇದೇ ಆಗಿದೆ. ಅವರು ತಮ್ಮ ಪತ್ನಿಯರಿಗೆ ಅಡುಗೆಮನೆಯಲ್ಲಿ ಸಹಾಯ ಮಾಡಲು ಪ್ರಯತ್ನಿಸಿದಾಗಲೆಲ್ಲಾ ಅವರಿಗೆ ಬೇಕಾದ ವಸ್ತುಗಳು ಯಾವುದೂ ಅವರ ಕೈಗೆ ಸಿಗುವುದಿಲ್ಲ.
ಶತಮಾನಗಳಿಂದ, ಮಹಿಳೆಯರು ತಮ್ಮ ಮನೆಗಳಲ್ಲಿ ಅಡುಗೆಮನೆಯನ್ನು ನಿರ್ವಹಿಸುತ್ತಿದ್ದಾರೆ. ಅಡುಗೆಮನೆ ಮತ್ತು ಅದರ ವಸ್ತುಗಳನ್ನು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಜೋಡಿಸಿಕೊಂಡಿರುತ್ತಾರೆ. ಅದರ ಪರಿಣಾಮ, ಅವರಿಗೆ ಅಲ್ಲಿ ಕೆಲಸ ಮಾಡುವುದು ಸುಲಭವಾಗಿರುತ್ತದೆ. ಆದರೆ, ಬೇರೆಯವರಿಗೆ ಅದು ಅಷ್ಟೇ ಕಷ್ಟಕರವಾಗಿರುತ್ತದೆ.
ಇಂದು ಹೆಚ್ಚಿನ ದಂಪತಿ ಉದ್ಯೋಗಸ್ಥರಾಗಿರುತ್ತಾರೆ. ಹಾಗಾಗಿ ಪತ್ನಿ ತನ್ನ ಪತಿ ಸಹ ಅಡುಗೆಮನೆಯ ಜವಾಬ್ದಾರಿ ಹಂಚಿಕೊಳ್ಳಲಿ ಎಂದು ಬಯಸುತ್ತಾಳೆ. ಇತ್ತೀಚಿನ ದಿನಗಳಲ್ಲಿ ಪುರುಷರು ಸಹ ತಮ್ಮ ಪತ್ನಿಗೆ ಕೆಲಸದಲ್ಲಿ ಸಹಾಯ ಮಾಡಲು ಬಯಸುತ್ತಾರೆ. ಆದರೆ ಮೊದಲನೆಯದಾಗಿ ಅವರಿಗೆ ಬಾಲ್ಯದಿಂದಲೂ ಅಡುಗೆಮನೆಯ ಕೆಲಸ ನಿಭಾಯಿಸಲು ಕಲಿಸಿರುವುದಿಲ್ಲ. ಮತ್ತೊಂದೆಡೆ ಅವರು ಅಡುಗೆಮನೆಯಲ್ಲಿ ಕೆಲಸ ಮಾಡಲು ಬಯಸಿದಾಗೆಲ್ಲಾ ಅಡುಗೆಮನೆಯ ವ್ಯವಸ್ಥೆಯಲ್ಲಿ ಅನಾನುಕೂಲತೆ ಅನುಭವಿಸುತ್ತಾರೆ.
ಇಂತಹ ಪರಿಸ್ಥಿತಿಯಲ್ಲಿ ಇಂದಿನ ಕಾಲದಲ್ಲಿ ನಿಮ್ಮ ಪತಿ ಸಹ ಅದರಲ್ಲಿ ಆರಾಮವಾಗಿ ಕೆಲಸ ಮಾಡುವ ರೀತಿಯಲ್ಲಿ ಅಡುಗೆಮನೆಯನ್ನು ಜೋಡಿಸುವುದು ಅವಶ್ಯಕ. ನಿಮ್ಮ ಪತಿ ಅಡುಗೆ ಕೆಲಸದಲ್ಲಿ ನಿಮಗೆ ಸಹಾಯ ಮಾಡಬೇಕೆಂದು ಬಯಸಿದರೆ, ನಿಮ್ಮ ಅಡುಗೆಮನೆಯಲ್ಲಿ ಈ ಕೆಳಗಿನ ವಿಷಯಗಳನ್ನು ಪಾಲಿಸುವುದು ಒಳ್ಳೆಯದು :





