ಈ ಬ್ರಹ್ಮಾಂಡದಲ್ಲಿ ಮಾನವನ ಬುದ್ಧಿವಂತಿಕೆ ಹಾಗೂ ಮಾನವೀಯ ಸಂಬಂಧಗಳಿಗೆ ಮಿಗಿಲಾದ ದೊಡ್ಡ ರಹಸ್ಯ ಯಾವುದೂ ಇಲ್ಲ. ಈ ಮನೋವಿಜ್ಞಾನದಲ್ಲಿ ಆಳವಾದ ಸಸ್ಪೆನ್ಸ್ ಹಾಗೂ ರೋಮಾಂಚನ ತುಂಬಿಕೊಂಡರೆ, ಬೆಳ್ಳಿ ತೆರೆಯ ಮೇಲೆ ಒಂದು ಅದ್ಭುತ ಜಾದೂ ನಡೆಯುತ್ತದೆ. ಕೆಲವು ಚಿತ್ರಗಳು ಪತ್ತೇದಾರಿಕೆ ಮೂಲ ಹೊಂದಿದ್ದರೂ, ಅದು ಅಪರಾಧಿಯ ಶೋಧಕ್ಕಷ್ಟೇ ಸೀಮಿತಲ್ಲ. ಅದು ಮಾನವೀಯ ನಂಬಿಕೆ, ಭರವಸೆ, ಪ್ರೀತಿ, ದ್ವೇಷ, ಮೋಸ, ಸೇಡು ಎಲ್ಲದರ ಸಂಗಮವಾಗಿರುತ್ತದೆ. ಈ ಸೈಕಾಜಿಕಲ್ ಗೇಮ್ ನ ಹಿಂದೆ ಅಡಗಿರುವ ವಾಸ್ತವತೆ, `ಒಂದು ಪರ್ಫೆಕ್ಟ್ ಕ್ರೈಂ'ಗೆ ನಾಂದಿಯಾಗುತ್ತದೆ. ಹೀಗಾಗಿ ವೀಕ್ಷಕರನ್ನು ಇದು ಕೊನೆಯ ಕ್ಷಣದವರೆಗೂ ಕಟ್ಟಿಹಾಕುತ್ತದೆ. ಇಂಥ ಕುತೂಹಲಕಾರಿ ಸಸ್ಪೆನ್ಸ್, ಹಾರರ್‌, ಥ್ರಿಲ್ಲರ್‌ ಚಿತ್ರಗಳು ನೀಡುವ ಮಜವೇ ಬೇರೆ. ಈ ಎಲ್ಲಾ ಚಿತ್ರಗಳ ರಹಸ್ಯ ಭೇದಿಸುತ್ತಾ, ಅವುಗಳ ಸುತ್ತಾ ಹೆಣೆದಿರುವ ಮಾನವೀಯ ಸಂಬಂಧಗಳ ವಿಶ್ಲೇಷಣೆಯ ಒಂದು ಸಣ್ಣ ಪ್ರಯತ್ನವಿದು.

02-Kannada-film-Balaramana-Dinagalu

ಕನ್ನಡ :  ಬಲರಾಮನ ದಿನಗಳು

80ರ ದಶಕದಲ್ಲಿ ರೌಡಿ ಶೀಟರ್‌ ಬಲರಾಮ್ ಅಂದ್ರೆ ಇಡೀ ಬೆಂಗಳೂರು ಗಡಗಡ ನಡುಗುತ್ತಿತ್ತು, ಅಂಗಡಿ ಮುಂಗಟ್ಟು ತಂತಾನೇ ಮುಚ್ಚಿಕೊಳ್ಳುತ್ತಿದ್ದವು. ಆತ ಸೆಂಟ್ರಲ್ ಜೇಲಿನಲ್ಲಿ ಕೊಲೆಯಾಗಿ ಸುದ್ದಿಯಾದರು. ಈತನ ಕಥೆಯಾಧಾರಿತ ವಿನೋದ್‌ ಪ್ರಭಾಕರ್ ನಟಿಸಿರುವ, ಹಿಂದೆ `ಆ ದಿನಗಳು' ಖ್ಯಾತಿಯ ಕೆ.ಎಂ. ಚೈತನ್ಯರ ದಕ್ಷ ನಿರ್ದೇಶನದಲ್ಲಿ, ಅವರದೇ ಮೂಲ ಕಥೆಯೊಂದಿಗೆ ಮೂಡಿಬಂದಿರುವ ಯಶಸ್ವೀ ಚಿತ್ರವೇ `ಬಲರಾಮನ ದಿನಗಳು.'

ಜಯರಾಜ್‌, ಕೊತ್ವಾಲ್ ರಾಮಚಂದ್ರ, ಮುತ್ತಪ್ಪ ರೈರಂಥ ಘಟಾನುಘಟಿ ರೌಡಿಶೀಟರ್‌ ಗಳ ಕಥೆಯನ್ನು ಮುಂದಿಟ್ಟುಕೊಂಡು ಈ ಚಿತ್ರ ರೂಪುಗೊಂಡಿದೆ. ಅನ್ಯಾಯ ಕಂಡರೆ ಪ್ರತಿಭಟಿಸುವ ಬಲರಾಮ, ಈತನ ಪ್ರೇಯಸಿ ರೇವತಿ ಇವರ ಪ್ರೇಮದೊಂದಿಗೆ ಚಿತ್ರ ಮುಂದುವರಿಯುತ್ತದೆ. ಅವಳನ್ನು ಕಾಪಾಡಲು ಹೋಗಿ ಗೊತ್ತಿಲ್ಲದೆ ಅಚಾನಕ್‌ ಆಗಿ ರೌಡಿಯೊಬ್ಬನನ್ನು ಹತ್ಯೆ ಮಾಡುವ ಬಲರಾಮ, ಮುಂದೆ ಬೆಂಗಳೂರಿನ ಭೂಗತ ಜಗತ್ತಿಗೆ ಹೇಗೆ ಎಂಟ್ರಿ ಪಡೆದು ರೌಡಿಯಾದ, ದುಷ್ಟರ ಸಂಹಾರಕ್ಕೆ ಹೇಗೆ ಪಣ ತೊಟ್ಟ ಎಂಬ ಸಂಘರ್ಷವೇ ಚಿತ್ರದ ಉಳಿದಾರ್ಧ. ತನ್ನವರಿಂದಲೇ ಆತ ಮುಂದೆ ಸಾಯುವಂತಾಗುವುದೇ....? ಎಂಬುದೇ ಕ್ಲೈಮಾಕ್ಸ್.

ಈ ಚಿತ್ರದ ಮುಖ್ಯ ತಾರಾಗಣದಲ್ಲಿ ವಿ.ಪಿ. ಜೊತೆ ಪ್ರಿಯಾ ಆನಂದ್‌, ವಿನಯ್‌ ಗೌಡ, ಅತುಲ್ ಕುಲಕರ್ಣಿ, ಆಶಿಷ್‌ ವಿದ್ಯಾರ್ಥಿ, ಅವಿನಾಶ್‌, ರೇವತಿಯಂಥ ಘಟಾನುಘಟಿಗಳ ದಂಡೇ ಇದೆ. ಸಂಗೀತ ನಿರ್ದೇಶಕ ಸಂತೋಷ್‌ ನಾರಾಯಣ್‌ ರ ಈ ಚಿತ್ರದ ಪ್ಲಸ್ ಪಾಯಿಂಟ್‌.

03-Malyalam-film-Balan---the-boy

ಮಲೆಯಾಳಂ : ಬಾಲನ್‌ ದಿ ಬಾಯ್‌

ಇದೊಂದು ಅದ್ಭುತ ಸೈಕಲಾಜಿಕ್‌ ಡ್ರಾಮಾ ಆಗಿದ್ದು, ಕೇರಳದಲ್ಲಿ ಎಲ್ಲೆಡೆ ಯಶಸ್ವಿ ಎನಿಸಿದೆ. ಒಬ್ಬ ಪುಟ್ಟ ಬಾಲಕ ಬಾಲನ್‌ ಹಾಗೂ ಅವನ ತಾಯಿ ಜೇಲಿನಿಂದ ಬಿಡುಗಡೆಗೊಂಡು, ಹೇಗೋ ತಲೆಮರೆಸಿಕೊಂಡು ಸಮಾಜದಲ್ಲಿ ತಮ್ಮ ಬದುಕು ಕಟ್ಟಿಕೊಳ್ಳಲು, ಹಿಂದಿನ ಗತ ಕಾಡದಂತೆ ಎಚ್ಚರವಹಿಸುತ್ತಾ ಬದುಕಬಯಸುತ್ತಾರೆ. ಕೆಳ ಮಧ್ಯಮ ವರ್ಗದ ಬದುಕುಬವಣೆಗಳ ವಾಸ್ತವ ಕಟ್ಟಿಕೊಡು ಈ ಚಿತ್ರ, ತನ್ನ ಭಾವಾಭಿನಯದ ಉತ್ತುಂಗದ ಕಾರಣ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ತಾಯಿ ಮಗನ ಬಾಂಧವ್ಯದ ಚಿತ್ರದ ಹೂರಣ. ಎಂದಿನಂತೆ ಮಾತೃ ವಾತ್ಸಲ್ಯದ ಹಿರಿಮೆ, ಮದರ್‌ ಸೆಂಟಿಮೆಂಟಾಗಿ ಜೆನ್‌ Z ಪೀಳಿಗೆಯನ್ನು ಸೆಳೆಯುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ