ಎಲ್ಲೆಲ್ಲೂ ಘೋಷಣೆಗಳು ಇದರ ಎಸರಲ್ಲಿ ಕುದಿಯುತಿದೆ ಸಾರು

ಎಷ್ಟೋ ವರ್ಷಗಳಿಂದ ವಿಶ್ವದ ಅತೀ ವೇಗವಾಗಿ ಹೆಚ್ಚುತ್ತಿರುವ ಎಕಾನಮಿ, ವಿಶ್ವಗುರು, ಭಾರತದ ಡಂಗೂರವನ್ನು ವಿಶ್ವದೆಲ್ಲೆಡೆ ಬಜಾಯಿಸುತ್ತಿರುವ ದೇಶ, ಇಂಡಿಯನ್‌ ಕಲ್ಚರ್‌, ಇಂಡಿಯನ್‌ ಯೋಗ, ಇಂಡಿಯಾ ಗ್ರೇಟ್‌ ನ ಡಂಗೂರ ಸಾರುತ್ತಾ, ಕಳೆದ ಮೇ 10 ರಂದು ದೇಶದ ಗುಟ್ಟು ರಟ್ಟು ಮಾಡುತ್ತಾ ಪ್ರಧಾನಿ ಮೋದಿ, ಈ ದೇಶ ದೊಡ್ಡ ಕೆಸರಲ್ಲಿ ಹೂತೂಹೋಗಿದೆ ಎಂದು ಒಪ್ಪುತ್ತಾ, ಈ ದೇಶವಾಸಿಗಳಿಂದ ದೇಶವನ್ನು ರಕ್ಷಿಸಲು ಹಲವು ಅಪೀಲ್ ‌ಮುಂದಿಟ್ಟರು.

ಮುಂದಿನ 1 ವರ್ಷ ಚಿನ್ನ ಖರೀದಿಸಬೇಡಿ, ಏಕೆಂದರೆ ಹೊರಗಿನಿಂದ ಆಮದು ಮಾಡುವುದರಿಂದ, ಬಹಳಷ್ಟು ಫಾರಿನ್‌ ಎಕ್ಸ್ ಚೇಂಜ್‌ ಖರ್ಚಾಗುತ್ತದೆ, ಫಾರಿನ್‌ ಮನೀ ರಿಸರ್ವ್ ಕಡಿಮೆ ಆಗುತ್ತಿದೆ. ದೇಶದ ಹೆಂಗಸರಿಗೆ ಇದನ್ನು ಕಂಬನಿ ತುಂಬಿ ನುಡಿದರು, ಹೇ ದೇವಿಯರೇ, ಈ ದೇಶವನ್ನು ಕಾಪಾಡಿ, ತುಸು ತ್ಯಾಗ ಮಾಡಿ. ನಮ್ಮದೇನು… ಏನೋ ಒಂದು ಖರ್ಚಾಗುತ್ತಾ ಇರುತ್ತದೆ, 5 ಸ್ಟಾರ್‌ ಹೋಟೆಲ್ ‌ಮಾಡಿಸುತ್ತೇವೆ, ಮಂದಿರಗಳಿಗೆ ಚಿನ್ನ ಹೇರುತ್ತೇವೆ, ಆದರೆ ಈ ದೇವಿಯರು ಮಾತ್ರ 1 ವರ್ಷ ಚಿನ್ನ ಖರೀದಿಸಬಾರದು ಎಂದರು. ಮಂಗಳಸೂತ್ರ ಬೇಡ, ಈ ಮಾತನ್ನು ಆಡಲಿಲ್ಲ, ಆದರೆ ಹಿಂದೆಲ್ಲ ಮಂಗಳಸೂತ್ರ, ಸಿಂಧೂರಗಳನ್ನು ಚುನಾವಣಾ ಆಯುಧಗಳಾಗಿ ಬಳಸಿದ್ದರು.

ಮುಂದೆ ಅವರು ದೇವಿಯರಿಗೆ, ಭಾರತದ ಹೊರಗೆ ಪ್ರವಾಸಕ್ಕೆಂದು ಹೋಗದಿರಿ. ಅದಕ್ಕೆ ಬಹಳ ಫಾರಿನ್‌ ಕರೆನ್ಸಿ ಖರ್ಚಾಗುತ್ತದೆ, ಇದನ್ನೇ ಗಿಳಿಪಾಠ ಒಪ್ಪಿಸಿದರು. ಕೊಲ್ಲೀ ದೇಶದ ಕಾರ್ಮಿಕರು ಭಾರತಕ್ಕೆ ವಾಪಸ್ಸು ಬರಬಾರದೆಂಬ ಭಯ ಇದೆ. ಅವರುಗಳು ಕಳುಹಿಸುತ್ತಿರುವ ಫಾರಿನ್‌ ಕರೆನ್ಸಿ, ಫಾರಿನ್‌ ರಿಸರ್ವ್ ನ ಖಜಾನೆ ತುಂಬುತ್ತಿದೆ. ದೇವಿಯರಿಗೆ ಈ ಮಾತು ಹೇಳಿದ್ದಾಯ್ತು, ತಾನು ಮಾತ್ರ ಬಲು ಸಡಗರ ಸಂಭ್ರಮದಿಂದ 4 ದಿನಗಳ ಯೂರೋಪಿನ 4 ದೇಶಗಳ ಪ್ರವಾಸಕ್ಕೆ ಹೊರಟೇಬಿಟ್ಟರು.

ಅವರು ಕೊರೋನಾ ಕಾಲದ ತಟ್ಟೆಗೆ ಡೋಲು ಬಡಿಯುವಿಕೆಯನ್ನು ನೆನಪಿಸಿದರು. ಫಾರ್ಮುಲಾ ಅನುಸರಿಸಲು ಹೇಳಿದರು. ಹೆಂಗಸರು ಸದಾ ಮನೆಯಲ್ಲಿ ಅಡಗಿರಲಿ ಎಂದು ಅವರು ಬಯಸುತ್ತಾರೆ. ಮಧ್ಯಾಹ್ನ ವಿಶ್ರಾಂತಿ ಬಯಸುವ ಈ ಹೆಂಗಸರಿಗೆ, ಆಫೀಸಿಗೆಂದೂ ಹೋಗದ ಗಂಡಂದಿರ ಜವಾಬ್ದಾರಿಯನ್ನು 24 x 7 ಏಗಬೇಕೆಂದು ಸಲಹೆ ನೀಡಿದರು.

ಇವರು ತಮ್ಮ ಭಾಷಣದಲ್ಲಿ ಎಲ್ಲೂ ಜಾರ್‌ ಧಾಮ್ ಯಾತ್ರೆ, ಉಜ್ಜಯಿನಿಯ ಕುಂಭಮೇಳಕ್ಕೆ ಹೋಗಬೇಡಿ ಎನ್ನಲಿಲ್ಲ. ದೇವರ ಹೆಸರಲ್ಲಿ ಕಾಡಿ, ರಾಮನವಮಿ ಮೆರವಣಿಗೆ ಇರುವುದಿಲ್ಲ ಎನ್ನಲಿಲ್ಲ. ಇವೆಲ್ಲದರ ಮೇಲೆ ಇವರ ಪಕ್ಷದವರ ಪೂರ್ತಿ ಕಂಟ್ರೋಲ್ ಇದೆ. ಇದೇ ಆಧಾರದಿಂದ ಈ ಮಹಾನ್‌ ಸಲಹೆಗಳಿಂದ, ಹಲವು ದಿನಗಳ ಹಿಂದೆ ಅವರು ಪ.ಬಂಗಾಳಕ್ಕೆ ಸಾವಿರಾರು ಸಲ ಟ್ರಿಪ್ ಹೋಗಿ ಬಂದು ತಮ್ಮ ಮಂತ್ರಿಗಳಿಂದ, ಸಾಂಸದರಿಂದ ಆ ರಾಜ್ಯದ ಕಥೆ ಮುಗಿಸಿದರು.

ಇತ್ತೀಚೆಗೆ ಖಾಸಗಿ ಜೆಟ್‌, ಹೆಲಿಕಾಪ್ಟರ್‌ ಗಳ ನೆರವಿನಿಂದ ಚುನಾವಣೆ ಗೆಲ್ಲುತ್ತಾರೆ. ಅದು ಭಾರತದಲ್ಲಿ ಹೆಚ್ಚು ಬಳಕೆಯಲ್ಲಿಲ್ಲ. ಏವಿಯೇಶನ್‌ ಕಂಪನಿಗಳು ಚುನಾವಣೆಗಾಗಿ ಫಾರಿನ್‌ ಕರೆನ್ಸಿ ನೀಡಿ, ಇವುಗಳನ್ನು ಹೊರಗಿನಿಂದ ಬಾಡಿಗೆಗೆ ತರಿಸುತ್ತಾರೆ ಯಾವ ಆಪರೇಟರ್ಸ್‌ ನಿಂದ ಖರೀದಿಸಲಾಗುತ್ತದೆ. ಫೆಬ್ರವರಿ 28ರಂದೇ ಕೊಲ್ಲೀ ರಾಷ್ಟ್ರಗಳ ಯುದ್ಧ ಶುರುವಾದ ವಿಚಾರ ತಿಳಿಯಿತು, ಹೀಗಾಗಿ ಉಳಿತಾಯ ಅನಿವಾರ್ಯ. ಆದರೆ 30ನೇ ಏಪ್ರಿಲ್ ‌ಹೊತ್ತಿಗೆ ಪಾರ್ಟಿಗಾಗಿ ಪ.ಬಂಗಾಳನ್ನು ಗೆಲ್ಲುವುದು ಅನಿವಾರ್ಯವಾಗಿತ್ತು, ಆಗ ದೇಶ ಮುಖ್ಯ ಆಗಿರಲಿಲ್ಲ. ಮಮತಾ ಬ್ಯಾನರ್ಜಿ ಯಾರೋ ಫಾರಿನ್‌ ರೂಲರ್‌ ಎಂಬಂತೆ, ಆಕೆಯಿಂದ ದೇಶವನ್ನು ಲಿಬರೇಟ್‌ ಮಾಡಿಸಬೇಕಿತ್ತು.

ಇವರು ಆ ದೇವಿಯರಿಗೆ ಅಡುಗೆ ಎಣ್ಣೆ ಬಳಕೆ ಕಡಿಮೆ ಮಾಡಿ ಎಂದೂ ಹೇಳಿದರು. ಪಕೋಡಾ ಅಂಗಡಿ ಹೂಡು ದಿನಗೂಲಿಯ ಮಹಿಳೆಯರ ಮಿನಿ ಸ್ಟಾರ್ಟ್‌ ಅಪ್‌ ಹೊಗಳು ಪ್ರಧಾನಿ, ದೇವಿಯರಿಗೆ ಮಾತ್ರ ಕಡಿಮೆ ಎಣ್ಣೆ ಬಳಸುವ ಸಲಹೆ ನೀಡಿದರು. ಹೀಗಿರುವಾಗ ಎಲ್ಲೆಲ್ಲೂ ಘೋಷಣೆಗಳೇ ಹರಡಿ ಹೋಗಿ, ಅದರ ಎಸರಲ್ಲಿ ಸಾರು ಕುದಿಯುವಂತಾಗಿದೆ!

ದೇಶದ ಪರಿಸ್ಥಿತಿ ಸರಿ ಇಲ್ಲ, ಇದು ಎಷ್ಟೋ ವರ್ಷಗಳಿಂದ ಕಂಡು ಬರುತ್ತಿರುವ ಕಟು ಸತ್ಯ. ಈ ವಾದ ಸುಧಾರಿಸಲು `ಅಚೇ ದಿನ್‌ಆಯೇಂಗೆ’ ಎನ್ನುತ್ತವೇ ಮೋದಿ 2014ರಲ್ಲಿ ಪ್ರಧಾನಿ ಆಗಿಬಂದರು. ಕಳೆದ 12 ವರ್ಷಗಳಲ್ಲಿ ಏನಾಯಿತು? ಎಲ್ಲೋ ಬೇರೆ 2 ದೇಶಗಳಿಗೆ ಯುದ್ಧವಾದರೆ, ನಾವು ಇಷ್ಟೆಲ್ಲ ಮೈಪರಚಿಕೊಳ್ಳಬೇಕಾದ  ಪರಿಸ್ಥಿತಿ ಬಂದಿರುವುದಾದರೂ ಏಕೆ?

ನಮ್ಮ ದೇಶದಲ್ಲಿ ಏನಾದರೂ ಅನಗತ್ಯ ನಡೆಯುತ್ತಿದೆ ಎಂದರೆ, ಮೊದಲು ಮಂದಿರಗಳಲ್ಲಿ ನಡೆಯುತ್ತಿರುವ ಬರ್ಬಾದಿ ನಿಲ್ಲಿಸಿ! ಸರ್ಕಾರಿ ಅವ್ಯವಹಾರಗಳನ್ನು ತಡೆಗಟ್ಟಿ, ಮಂತ್ರಿಮಹೋದಯರ ಅಟ್ಟಹಾಸ ನಿಲ್ಲಿಸಿ, ರೈಡ್ಸ್ ನಿಂದ ಆಗುತ್ತಿರುವ ಖರ್ಚು ನಿಲ್ಲಿಸಿ, ಇದರ ದಿ ಎಂಡ್‌ ಕೇವಲ ಝೀರೋ ಅಷ್ಟೆ! ಪರೀಕ್ಷೆಗಳಲ್ಲಿ ನಡೆಯುವ ಅವ್ಯವಹಾರ ತಡೆಗಟ್ಟಿಸಿ, 22 ಸಲ ಪರೀಕ್ಷೆಯ ಖರ್ಚನ್ನು ನಿಯಂತ್ರಿಸಿ, ನಂತರ ವಿದ್ಯಾರ್ಥಿಗಳು ಮತ್ತೆ 2-3 ಸಲ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲೇಬೇಕೆಂಬ ಕಂಪಲ್ಶನ್‌ ನಿಲ್ಲಿಸಿ!

ಇಂಧನ ಉಳಿಸಬೇಕಿದ್ದರೆ, ರಸ್ತೆಗಳ ಎನ್‌ ಕ್ರೋಚ್‌ ಮೆಂಟ್‌ ನಿಲ್ಲಿಸಿ, ಆಗ ವಾಹನಗಳ ಟ್ರಾಫಿಕ್‌ ಜಾಮ್ ತಪ್ಪುತ್ತದೆ, ಇಕ್ಕಟ್ಟಾದ ರಸ್ತೆಗಳ ಗೋಳು ತಪ್ಪಿಸಿ, ಇಂತಹ ಉತ್ತಮ ಕೆಲಸಗಳಾಗಬೇಕು. ದೇವಿಯರ ಮೇಲೆ ದೇಶದ ಭಾರ ಹೊರಿಸದಿರಿ, ರಾಜಕೀಯ ಧುರೀಣರು ಇದನ್ನು ಹೊರಲಿ. ಪಾರ್ಟಿಗಳನ್ನು ಹುಡುಕಿ ಹುಡುಕಿ ಮುಸ್ಮಾನರನ್ನು ಕಾಡಿಸುವ ಬದಲು, ಪ್ರತಿ ಜಾಗದಲ್ಲೂ ತಾಂಡವಾಡುತ್ತಿರುವ ಭ್ರಷ್ಟಾಚಾರ ತೊಲಗಿಸಿ! ಆದರೆ ಇಂಥ ಕೆಲಸಗಳಾಗುವ ಹಾಗೆ ಕಾಣುತ್ತಿಲ್ಲ. ಪ್ರಧಾನಿ ಹೇಳಿದ್ದೇ ತಡ, ಭಕ್ತ ಮೀಡಿಯಾದವರು ಇದರ ಡಂಗೂರ ಸಾರಲು ಶುರುವಿಟ್ಟರು. ಗೋಲ್ಡ್ ಮರ್ಚೆಂಟ್‌ ಖಾಲಿ ಕುಳಿತರು, ಟ್ರಾವೆಲ್ ‌ಏಜೆಂಟ್ಸ್ ತಾವೇ ಟಿಕೆಟ್‌ ಪಡೆದರು. ದೇಶ ಎಂದಿನಂತೆ ಮತ್ತೆ ಸುಸ್ತಾಗಿ ಹೋಯಿತು. ಮಿಕ್ಕಿದ್ದೆಲ್ಲ ಹಾಗೇ ಹಾಗೆಯೇ ಉಳಿದಿದೆ!

ವರ್ಕಿಂಗ್‌ ಗರ್ಲ್ ಮನೆಯಲ್ಲೇ ಉಳಿಯಬೇಕಾದ ಅಸಹಾಯಕತೆ

ಸ್ವಾತಂತ್ರ್ಯ ದೊರಕಿತು, ಮಹಿಳೆಯರಿಗೆ ಸಮಾನತೆಯ ಹಕ್ಕು ದೊರಕಿತು. ಇದೀಗ 7 ದಶಕಗಳಿಗೂ ಹೆಚ್ಚು ಕಾಲ ಇದನ್ನು ಅನುಭವಿಸುತ್ತಿದ್ದೇವೆ. ಆದರೆ ಗಂಡಸರು ಇಂದಿಗೂ ಬಿಜೆಪಿ ಆ್ಯಟಿಟ್ಯೂಡ್‌ ಅಂದ್ರೆ, ಮೇಲ್ ಡಾಮಿನೇಟಿಂಗ್‌ ಸೊಸೈಟಿ ಮಾಡಿಟ್ಟಿದ್ದಾರೆ. ಇದಕ್ಕೆ ದೊಡ್ಡ ಉದಾ : ಹರಿಯಾಣಾದ ಜೆಂಡರ್‌ ರೇಶ್ಯೋ!  ಇದರಲ್ಲಿ ಕಳೆದ 2 ವರ್ಷಗಳಿಂದ 1000 ಹುಡುಗರಿಗೆ 825 ಹುಡುಗಿಯರು ಮಾತ್ರ ಇದ್ದಾರೆ. ಇದಂತೂ ದೊಡ್ಡ ಷಡ್ಯಂತ್ರವೇ ಸರಿ. ಇಲ್ಲಿನ ಪ್ರಧಾನ ಖಳ ಅಂದ್ರೆ ಧರ್ಮ! ಈ ಧರ್ಮದ ಕಾರಣದಿಂದಲೇ ಹೆಣ್ಣನ್ನು ಮೂಲೆಗುಂಪಾಗಿಸಿ, ಪತಿಗೆ ಪರಮೇಶ್ವರ ಪಟ್ಟ ಕಟ್ಟಾಗಿದೆ. ಹೆಣ್ಣು ಪಿತ, ಪತಿ, ಸುತರ ಅಧೀನದಲ್ಲಿರಬೇಕಂತೆ. ಹರಿಯಾಣದ ಹುಡುಗಿಯರು, ಎಲ್ಲಾ ಕ್ರೀಡೆಗಳಲ್ಲೂ ಹುಡುಗರಿಗಿಂತ ಹೆಚ್ಚೆಚ್ಚು ಪದಕ ಗಳಿಸುತ್ತಿದ್ದಾರೆ, ಅಲ್ಲಿನ ಖಾಪ್‌ ಪಂಚಾಯಿತಿಗಳ ಟೆರರ್‌ ನಲ್ಲೇ ಈಗಲೂ ವಾಸಿಸುತ್ತಿದ್ದಾರೆ ಎಂಬುದು ವಿಡಂಬನೆಯೇ ಸರಿ.

ದೇಶದ ಇತರ ಭಾಗ ಸಹ ಇದರಿಂದ ಮುಕ್ತವಾಗಿಲ್ಲ. ಸುಪ್ರೀಂ ಕೋರ್ಟ್‌ ಕೇರಳದ ಶಬರಿಮಲೆ ಮಂದಿರದ ವಿವಾದ ಇನ್ನೂ ಮುಂದುವರಿಸಿದೆ, ಅಲ್ಲಿ ಮೆನೋಪಾಸ್‌ ಆಗದ ಮಹಿಳೆಗೆ ಪ್ರವೇಶ ನಿಷಿದ್ಧ. ಬೇಕೆಂದೇ ಹೆಂಗಸರನ್ನು ಕೆಳಮಟ್ಟ ಮಾಡುವ ಇಂಥ ಕಡೆ ಮಹಿಳೆಯರಿಗೆ ಹೋಗಿ ತಾನೇ ಏನು ಲಾಭ? ಆದರೂ ಹಕ್ಕಿನ ಬಾಬತ್ತಿನಲ್ಲಿ ಪ್ರವೇಶ ಕೇಳುವುದರಲ್ಲಿ ತಪ್ಪಿಲ್ಲ. ಗಂಡಸು ಯಾವಾಗ ಬೇಕಾದರೂ ಹೋಗಬಹುದೆಂದರೆ ಹೆಣ್ಣೇಕೆ ಕೂಡದು?

ಹಿಂದೆ ಅನಾದಿ ಕಾಲದಲ್ಲಿ ಈ ನಿಯಮ ಜಾರಿಗೆ ಬಂದಾಗ ಹೆಣ್ಣಿಗೆ ಉನ್ನತ ಶಿಕ್ಷಣದ ಅವಕಾಶ ಇರಲಿಲ್ಲ. 50 ವರ್ಷದ ಹಿಂದೆ 8-10 ವಯಸ್ಸಿನ ಹೆಣ್ಣುಮಕ್ಕಳಿಗೆ ಮದುವೆ ಮಾಡಿ, ಬೇರೆ ಮನೆಗೆ ಕಳುಹಿಸಲಾಗುತ್ತಿತ್ತು. ಹಿಂದಿಯ `ಬಾಲಿಕಾ ವಧು’ (ಕನ್ನಡದ ಪುಟ್ಟಗೌರಿ ಮದುವೆ) ಧಾರಾವಾಹಿ ಫೇಮಸ್‌ ಆಗಿದ್ದೇ, ಅದರಲ್ಲಿನ ಷಡ್ಯಂತ್ರ, ಹೆಣ್ಣುಮಕ್ಕಳಿಗೆ ಬಾಲ್ಯ ವಿವಾಹ ಮಾಡಿ ಎಂದು ಹೇಳಿದ್ದಕ್ಕೆ!

ಇತ್ತೀಚೆಗೆ ಪ್ರೀನೇಟ್‌ ಟೆಸ್ಟ್ ಬಲು ಜನಪ್ರಿಯ. ಗರ್ಭಸ್ಥ ಶಿಶುವಿನ ಆರೋಗ್ಯ ತಪಾಸಣೆಯ ಹೆಸರಲ್ಲಿ ಏನೇನೋ ನಡೆಯುತ್ತದೆ. ಯಾವ ವೈದ್ಯರು ಇದಕ್ಕೆ ಸಹಕರಿಸುತ್ತಿದ್ದಾರೋ, ತಾವು ಧರ್ಮದ ಕೆಲಸ ಮಾಡುತ್ತಿದ್ದೇವೆ ಎಂದೇ ಭಾವಿಸುತ್ತಾರೆ. ಹೆಣ್ಣನ್ನು ಧರ್ಮ ಪಾಪದ ಕೂಪ ಎಂದೆಲ್ಲ ಬಣ್ಣಿಸುತ್ತದೆ.

ಪ್ರವಚನಕಾರರು ಸಾವಿರಾರು ಜನರ ಮುಂದೆ ಖುಲ್ಲಂಖುಲ್ಲ, ಪತಿ ಸೇವೆಯೇ ಪರಮ ಧರ್ಮ, ಎಂದಾಗ ಅದನ್ನು ಖಂಡಿಸುವವರು ಒಬ್ಬರೂ ಇಲ್ಲ! ಗಂಡು ಹೆಣ್ಣಿನ ಸಮಾನ ಮಿಲನದಿಂದ ಹುಟ್ಟಿದ ಹೆಣ್ಣು ಗಂಡಿಗಿಂತ ಹೇಗೆ ಕೀಳು? ಅನಾದಿಕಾಲದಿಂದಲೂ ಧರ್ಮ ಇದನ್ನೇ ಹೇಳುತ್ತಿದೆ. ಇಷ್ಟಾದರೂ ಹೆಂಗಸರೇ ತನುಮನಧನದಿಂದ ಧರ್ಮದ ಸೇವೆ ಮಾಡುತ್ತಾರೆ, ಇದರಿಂದ ಧರ್ಮ ಅವರನ್ನು ಮತ್ತಷ್ಟು ದುರ್ಬಲರಾಗಿಸಲು ಸಾಧ್ಯವಾಗಿದೆ.

ಲಿಂಗ ತಾರತಮ್ಯ ಒಂದೇ ಅಲ್ಲ, ಇಂದಿಗೂ ವರದಕ್ಷಿಣೆ ಪಿಡುಗು ಖಂಡಿತಾ ಅಡಗಿಲ್ಲ. ಕಳೆದ ವರ್ಷ ದೆಹಲಿಯಲ್ಲಿ 107ಕ್ಕೂ ಹೆಚ್ಚು ಹೆಣ್ಣುಮಕ್ಕಳ ಸಾವು ಈ ಕಾರಣದಿಂದಲೇ ಆಗಿದೆ. ಇದರ ಹಿಂದೆ ಅಡಗಿರುವ ಹೆಣ್ಣು  ಹೆತ್ತವರ ಗೋಳು ಹೇಳತೀರದು. ಸಮಾಜ, ಧರ್ಮದ ಆದೇಶದಂತೆ ಗಂಡಿಗೆ ತಮ್ಮ ಮನೆಯ ಹೆಣ್ಣನ್ನು ಒಪ್ಪಿಸಿ, ಜೊತೆಗೆ ಕೈತುಂಬಾ ವರದಕ್ಷಿಣೆ, ವರೋಪಚಾರ ಸಹ ನೀಡಿದ್ದಾರೆ. ಯಾವುದೋ ಕಾರಣಕ್ಕೆ ಪತಿಪತ್ನಿ ಸಂಬಂಧ ಹಳಸಿಕೊಂಡರೆ, ಅತ್ತೆಮನೆಯಲ್ಲಿ ಅವಳನ್ನು ಅತ್ಯಂತ ಗೋಳಾಡಿಸಿ, ಕೊಲೆಗೈಯ್ಯುತ್ತಾರೆ ಯಾ ಅವಳೇ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೇಪಿಸುತ್ತಾರೆ. ಇದರಲ್ಲಿ ದೋಷ ಧರ್ಮದ್ದೇ, ಕೊಟ್ಟ ಹೆಣ್ಣು ಕುಲಕ್ಕೆ ಹೊರಗು, ಎಂದೇಕೆ ಹೇಳಬೇಕು?

ಈ ಕಾರಣದಿಂದೀ ಪೇರೆಂಟ್ಸ್ ಪ್ರೆಗ್ನೆನ್ಸಿಯಲ್ಲೇ ಮಗುವಿನ ಲಿಂಗ ಯಾವುದೆಂದು ತಿಳಿಯಲು ಹಾತೊರೆದರೆ ಇದರಲ್ಲಿ ಆಶ್ಚರ್ಯವೇನಿದೆ? ಹೆಸರಿಗೆ ಮಾತ್ರ ನಮ್ಮಲ್ಲಿ ಹೆಣ್ಣಿಗೆ ಸಮಾನ ಗೌರವವಾದರ ಎಂಬ ಕಾನೂನಿದೆ. ಪ್ರಿನೇಟ್‌ ಟೆಸ್ಟ್ ಮಾಡಿಸುವುದು ಬೇಡ, ವರದಕ್ಷಿಣೆ ಕೇಸ್‌ ನಲ್ಲಿ ಗಂಡಿಗೆ ಜೀವಾವಧಿ ಶಿಕ್ಷೆ ಆಗಬಹುದು, ಆದರೆ ಉ.ಭಾರತದಲ್ಲಿ ಕರ್ವಾ ಚೌಥ್ ಹೆಸರಲ್ಲಿ ಧರ್ಮದ ಹೊಗಳಿಕೆ, ಮಂಗಳಸೂತ್ರ ಮಹಾನ್‌ ಎನ್ನುವವರು, ಪತಿಯೇ ಪರಮೇಶ್ವರ ಎನ್ನುವವರು ಶಿಕ್ಷಾರ್ಹರು ಎಂದೇಕೆ ಧರ್ಮದಲ್ಲಿ ಉಲ್ಲೇಖಿಸಿಲ್ಲ? ಇವರು ಸೋಶಿಯಲಿ ಟೀಕಾಟಿಪ್ಪಣಿಗೆ ಖಂಡಿತಾ ಸಿಲುಕುತ್ತಾರೆ. ಪೌರಾಣಿಕ ಕಥೆಗಳ ಮಹಿಮೆಗಳಿಗೂ ಕೊರತೆ ಇಲ್ಲ. ಅಲ್ಲೆಲ್ಲ ಹೆಣ್ಣನ್ನು ಅಬಲೆ, ಅಸಹಾಯಕಳು, ಅತಿ ದುರ್ಬಲಳು, ಪಿತ/ಪತಿಯ ಆಸರೆಗೆ ಬಿದ್ದವಳು ಎಂದೇ ಹೇಳಲಾಗುತ್ತದೆ. ಹೀಗಿರುವಾಗ ಯಾವ ಪೇರೆಂಟ್ಸ್ ಮತ್ತೆ ಮತ್ತೆ ಹೆಣ್ಣು ಹೆರಲು ಬಯಸುತ್ತಾರೆ?

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಣ್ಣುಮಕ್ಕಳು ಎಷ್ಟೇ ಉತ್ತಮ ಪರ್ಫಾರ್ಮೆನ್ಸ್ ನೀಡಿರಲಿ, 75% ಹುಡುಗಿಯರು ಅದರಲ್ಲೂ ವರ್ಕಿಂಗ್‌ ಗರ್ಲ್ಸ್, ಮನೆಯಲ್ಲೇ ಕೊಳೆಯುವಂತಾಗಲು ಧರ್ಮದ ಷಡ್ಯಂತ್ರವೇ ಕಾರಣ.

ಡೇಟಿಂಗ್‌ ಇದರಿಂದ ಅಪಾಯ ತಪ್ಪಿದ್ದಲ್ಲ

ಜರ್ಮನಿ ಒಂದು ಅತ್ಯಾಧುನಿಕ, ಅತಿ ಶ್ರೀಮಂತ, ಸುಶಿಕ್ಷಿತ ದೇಶ. ಆದರೆ ಅಲ್ಲಿನ ಪೊಲೀಸ್‌ ಚೀಫ್‌ ಡಿರ್ಕ್‌ ಪಿಗ್ಲೆ ಖುದ್ದು ತಾನಾಗಿಯೇ, ಹೆಣ್ಣು ಡೇಟಿಂಗ್‌ ಗೇ ಹೋದರೆ ಅಪಾಯ ತಪ್ಪಿದ್ದಲ್ಲ ಎಂದು ಭಾವಿಸುವಂತಾದರೆ ಏನು ಹೇಳುವುದು? ಏಕೆಂದರೆ ಡೇಟಿಂಗ್‌ ಹೆಸರಲ್ಲಿ ಅಲ್ಲಿ ಹೆಣ್ಣು ಹೊಡೆತ ಬಡಿತ, ಕೊಲೆಗೂ ಬಲಿಯಾಗಿದ್ದಾಳೆ. ಇದು ಎಷ್ಟು ಅಪಾಯಕಾರಿ ಎಂದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ವಿಶ್ವವಿಡೀ ಈಗ ಯುವಕರು ಅತಿ ಫ್ರಸ್ಟ್ರೇಟೆಡ್‌ ಆಗಿ, ತಮ್ಮನ್ನು `ಒಲ್ಲೆ’ ಎನ್ನುವ ಹೆಣ್ಣನ್ನು ಯಾವ ಮಟ್ಟಕ್ಕೂ ದಂಡಿಸಲು ಮುಂದಾಗುತ್ತಿದ್ದಾರೆ.

ಯಂಗ್‌ ಗರ್ಲ್ಸ್ ಮಾತ್ರವಲ್ಲ, ಹೆಂಗಸರು ಸಹ ಇದೀಗ ಅಲ್ಲಿ ಡೇಟಿಂಗ್‌ ಹೊರಡಲು ಹಿಂಜರಿಯುತ್ತಾರೆ. ಗಂಡಸರ ಮೇಲೆ ಅವರುಗಳಿಗೆ ನಂಬಿಕೆಯೇ ಹೋಗಿಬಿಟ್ಟಿದೆ. ಹೆಣ್ಣು ತನ್ನ ಲಿಮಿಟ್‌ ನಲ್ಲೇ ಇದ್ದು, ಪಾರ್ಟ್‌ ನರ್‌ ಯಾವುದೋ ಮಾತಿಗೆ `ಇಲ್ಲ’ ಅಂದು, ಅವನೇನಾದರೂ ಮಾಡಲು ಯತ್ನಿಸಿದರೆ ತಡೆದಾಗ, ಅಪಾಯ ಕಟ್ಟಿಟ್ಟ ಬುತ್ತಿ!

ಜರ್ಮನಿ ಮಾತ್ರವಲ್ಲ, ವಿಶ್ವದ ಬಹುತೇಕ ದೇಶಗಳಲ್ಲಿ, ಬಾಯ್‌ ಫ್ರೆಂಡ್ಸ್ ಯಾ ಇತರ ಪರಿಚಿತ ಗಂಡಸರು, ಹೆಣ್ಣಿನ ಮೇಲೆ ದೌರ್ಜನ್ಯ ಎಸಗುವುದು, ರೇಪ್‌ ಅತಿ ಮಾಮೂಲಿ ಅನಿಸಿಬಿಟ್ಟಿದೆ. ನಮ್ಮ ಭಾರತದಲ್ಲೂ ಪ್ರೇಮದ ಹೆಸರಲ್ಲಿ ನಂಬಿಸಿ, ಹೆಣ್ಣನ್ನು ತುಂಡುಗಳಾಗಿಸಿ ಸೂಟ್‌ ಕೇಸ್‌ ನಲ್ಲಿ ತುಂಬಿಸಿಡುವುದು ದಿನೇದಿನೇ ಕೇಳಿಬರುತ್ತಿದೆ.

ಜರ್ಮನಿಯ ಪೊಲೀಸ್‌ ಚೀಫ್‌ ಗಂಡಾದ್ದರಿಂದ, ಅವರ ಬಳಿ ಪೊಲೀಸ್‌ ಫೋರ್ಸ್‌ ಇದೆ, ಆದರೂ ಆತ ಡೇಟಿಂಗ್‌ ಅಪಾಯಕ್ಕೆ ಆಹ್ವಾನವೇ ಸರಿ ಅಂತಾರೆ. ಡೇಟಿಂಗ್‌ ಇಲ್ಲದಿದ್ದರೆ ಮದುವೆ ಇಲ್ಲ ಎಂದು ಅಲ್ಲಿನ ಗಂಡುಗಳು ದಬಾಯಿಸುತ್ತಾರೆ. ಅದು ಇಲ್ಲದಿದ್ದ ಮೇಲೆ ಸೆಕ್ಸ್, ಮದುವೆ, ಮಕ್ಕಳು ಎಲ್ಲಿಂದ ಬರಬೇಕು? ವಿಶ್ವದ ಅತಿ ನವನಾಗರಿಕ, ರಿಚ್‌ ದೇಶಗಳಲ್ಲಿ ಟ್ರಾಜಿಡಿ ತಪ್ಪಿದ್ದಲ್ಲ. ಅಲ್ಲಿನ ಹೆಂಗಸರು ಉದ್ಯೋಗಕ್ಕೆ ಸೇರಿದಂತೆ, ಗಂಡಸರಿಗೆ ಪ್ರತಿಸ್ಪರ್ಧಿಗಳಾಗುತ್ತಿದ್ದಾರೆ. ಎಷ್ಟೋ ಕ್ಷೇತ್ರಗಳಲ್ಲಿ ಗಂಡಸರನ್ನು ಹಿಂದಿಕ್ಕಿದ್ದಾರೆ.

ಆದರೆ ಕಷ್ಟ ಬಂದಿರುವುದೇ ಸಾಹಿತ್ಯ, ಮೀಡಿಯಾ, ಪೋರ್ನ್‌ ಇಂಡಸ್ಟ್ರಿ, ಸಿನಿಮಾ ಮಾತ್ರವಲ್ಲದೆ ಚರ್ಚ್‌, ಶಾಲಾ ಕಾಲೇಜುಗಳಲ್ಲಿ ಈಗಲೂ ಹೆಣ್ಣನ್ನು ಸೆಕೆಂಡರಿ ಎಂದೇ  ಪರಿಗಣಿಸಲಾಗುತ್ತಿದೆ. ಬುದ್ಧಿಶಕ್ತಿಗಿಂತ ತನ್ನ ದೈಹಿಕ ಶಕ್ತಿಯೇ ಹೆಚ್ಚು ಎಂದ ಗಂಡು ಸದಾ ಬೀಗುತ್ತಾನೆ, ಆದರೆ ಹಾಗೆಂದು ಎಲ್ಲೂ ಸಾಬೀತಾಗಿಲ್ಲ.

ಇಲ್ಲಿಯವರೆಗೆ ಕೌಟುಂಬಿಕ ಸಂರಚನೆ, ಭಾರತ ಹಾಗೂ ವಿದೇಶಗಳಲ್ಲಿರುವಂತೆ, ಅಲ್ಲಿ ಹೆಣ್ಣು ಗಂಡಿನಿಂದ ಹಲವು ಮಾತು ಅನ್ನಿಸಿಕೊಳ್ಳಬೇಕಾಗುತ್ತದೆ. ಆಕೆ ಅವನಿಗಿಂತ ಎಷ್ಟೇ ಸಮರ್ಥಳಾಗಿದ್ದರೂ ಈ ಕಟ್ಟುಪಾಡು ತಪ್ಪಿದ್ದಲ್ಲ. ಚರ್ಚ್‌ ಈ ವಿಷಯವನ್ನು ಬಹುವಾಗಿ ಎತ್ತಿಹಿಡಿಯುತ್ತದೆ. ವಿಶ್ವದ ಪವಿತ್ರ ಗ್ರಂಥಗಳಾದ ಪುರಾಣ, ಖುರಾನ್‌, ಬೈಬಲ್ ಇರಲಿ, ಎಲ್ಲದರಲ್ಲೂ ಹೆಣ್ಣು ಗಂಡಿನ ಅಡಿಯಾಳೆಂದೇ ಹೇಳಿದೆ. ಪಿತ, ಪತಿ, ಮಗನ ಮಾತಿಗೆ ಹೆಣ್ಣು ಕಟ್ಟುಬಿದ್ದಿರಲಿ ಎನ್ನುತ್ತದೆ. ಇದನ್ನು ಕೇಳಿ ಕೇಳಿ ಗಂಡು ಹೆಚ್ಚು ಅಹಂಕಾರಿ ಆಗುತ್ತಾನೆ. ಇಂದಿನ ಸುಶಿಕ್ಷಿತ, ಜಾಗೃತ ಹೆಣ್ಣು ಇದಕ್ಕೆ ತಯಾರಿಲ್ಲ!ಗಂಡಿಗೆ ಹೆ;್ಣನ ಪ್ರೀತಿ ಪ್ರೇಮ ಬೇಕಿದ್ದಲ್ಲಿ, ಅವಳ ಸಾಂಗತ್ಯ ಬೇಕಿದ್ದಲ್ಲಿ, ಅವಳ ಅಡುಗೆ, ಮನೆಯ ಸೇವಾಕಾರ್ಯ, ಮಕ್ಕಳು ಬೇಕಿದ್ದಲ್ಲಿ, ಅವಳನ್ನು ಸಮಾನವಾಗಿ ಗೌರವಿಸುವುದನ್ನು ಕಲಿಯಬೇಕು. ಅವಳು `ಬೇಡ’ ಎಂದಾಗ ಅರ್ಥೈಸಿಕೊಳ್ಳಬೇಕು, ಆಕೆ ಅವನ ಗುಲಾಮಳಲ್ಲ, ಸಪೋರ್ಟ್ ಸಿಸ್ಟಂ ಎಂದು ತಿಳಿಯಬೇಕು. ಗಂಡಿನ ಹಂಗಿಲ್ಲದೆ ಹೆಣ್ಣು ಒಂಟಿಯಾಗಿ ಬದುಕಿ ಬಾಳಬಲ್ಲಳು, ಆದರೆ ಗಂಡು ಹೆಣ್ಣಿನ ಜೊತೆ ಇಲ್ಲದೆ ಬಾಳಲಾರ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ