ಏಕಾಂಗಿತನವನ್ನು ಹೊರೆ ಎಂದು ಭಾವಿಸುವವರು ಈ ಲೇಖನದಲ್ಲಿ ಉಲ್ಲೇಖಿಸಿರುವ ವ್ಯಕ್ತಿಗಳ ಜೀವನಶೈಲಿ ಅರಿತರೆ ಅವರ ಯೋಚನೆಯ ಶೈಲಿಯೇ ಬದಲಾಗಿಬಿಡಬಹುದು……..

ಇಂದಿನ ದಿನಗಳಲ್ಲಿ ಬಹಳಷ್ಟು ಜನರು ಏಕಾಂಗಿಯಾಗಿ ವಾಸಿಸುತ್ತಿದ್ದಾರೆ. ಅಂಥವರಲ್ಲಿ ನೀವು ಒಬ್ಬರಾಗಿದ್ದರೆ, ಏಕಾಂಗಿಯಾಗಿ ವಾಸಿಸುವುದು ನಿಮಗೆ ಅತ್ಯಂತ ಕಷ್ಟಕರ ಸಂಗತಿ ಎನಿಸುತ್ತದೆಯೇ? ನೀವು ನಿಮ್ಮ ಏಕಾಂಗಿತನದ ಸಮಯವನ್ನು ಎಂಜಾಯ್ ಮಾಡುವ ಬದಲು ರಿಲ್ಯಾಕ್ಸ್ ಮಾಡುವ ಬದಲು ಅತ್ತಿತ್ತ ಎಡತಾಕುತ್ತಾ ಏನು ಮಾಡಬೇಕೆಂದು ಯೋಚನೆ ಮಾಡುವುದರಲ್ಲಿ ಕಳೆಯುತ್ತಿದ್ದೀರಾ?

ನೀವು ಅದೇ ರೀತಿ ಮಾಡುವವರಾಗಿದ್ದರೆ, ಈ ಕೆಳಕಂಡ ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳಿ :

65 ವರ್ಷದ ಶ್ಯಾಮಲಾ ಏಕಾಂಗಿಯಾಗಿ ವಾಸಿಸುತ್ತಾರೆ. ಅವರ ಪತಿ ನಿಧನರಾಗಿದ್ದಾರೆ, ಮಗಳು ತನ್ನ ಗಂಡನ ಜೊತೆ ಆಸ್ಟ್ರೇಲಿಯಾದಲ್ಲಿದ್ದಾಳೆ. ಶ್ಯಾಮಲಾ ಎಲ್ಲರಿಗೂ ಪ್ರೇರಣದಾಯಿ ಆಗಿದ್ದಾರೆ. ಅವರು ಯಾರೊಬ್ಬರ ಮೇಲೂ ಆಶ್ರಿತರಾಗಿದ್ದುದನ್ನು ನಾನು ಕಂಡಿಲ್ಲ. ಅವರು ತಮ್ಮ ಏಕಾಂಗಿತನವನ್ನು ಅತ್ಯಂತ ಪಾಸಿಟಿವ್ ಆಗಿ ತೆಗೆದುಕೊಳ್ಳುತ್ತಾರೆ. ಅವರಿಗೆ ಏನಾದರೂ ಅನಾರೋಗ್ಯದ ಸಮಸ್ಯೆಯಾದರೆ ಅವರು ತಾವೇ ವೈದ್ಯರ ಬಳಿ ತೋರಿಸಿಕೊಳ್ಳುತ್ತಾರೆ. ತನ್ನ ಜೊತೆ ಯಾರಾದರೂ ಬರಬೇಕು ಎಂದು ಅವರು ಅಪೇಕ್ಷೆ ಪಡುವುದಿಲ್ಲ. ಮನೆಗೆಲಸದವಳು ಅಗತ್ಯ ಕೆಲಸಗಳನ್ನು ಮಾಡಿ ಹೋದರೆ ಸಾಕು, ಉಳಿದ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಾರೆ.

ತಿಂಗಳಿಗೆ ಒಂದು ಸಲ ತಮ್ಮ ಅಕ್ಕ ತಂಗಿಯರ ಮನೆಗೆ ಹೋಗುತ್ತಾರೆ. ಹೋಗುವಾಗ ತಾವೇ ಕ್ಯಾಬ್‌ ಬುಕ್‌ ಮಾಡುತ್ತಾರೆ. ಅದನ್ನು ಬಿಟ್ಟರೆ ಅವರು ಪ್ರತಿದಿನ ಸಂಜೆ ಹೊರಗೆ ವಾಕಿಂಗ್‌ ಹೋಗುತ್ತಾರೆ. ಅಲ್ಲಿ ಸಮಾನ ಮನಸ್ಕರ ಜೊತೆ ಕುಳಿತು ವಿಚಾರ ವಿನಿಮಯ ಮಾಡುತ್ತಾರೆ. ಹರಟೆ ಹೊಡೆಯುತ್ತಾರೆ. ತಮ್ಮ ಸೊಸೆಯಂದಿರು, ಕುಟುಂಬದವರನ್ನು ದ್ವೇಷಿಸುವ ಮಹಿಳೆಯವರನ್ನೆಂದೂ ಅವರು ತಮ್ಮ ಹತ್ತಿರ ಸುಳಿಯಲು ಕೊಡುವುದಿಲ್ಲ.

ಅವರಿಗೆ ಏಕಾಂಗಿತನ ಕಾಡುವುದಿಲ್ಲ ಎಂದಲ್ಲ, ಆದರೆ ಅವರು ಅದನ್ನು ಸ್ವೀಕರಿಸಿಬಿಟ್ಟಿದ್ದಾರೆ. ಜೊತೆಗೆ ಅದನ್ನು ಎಂಜಾಯ್‌ ಕೂಡ ಮಾಡುತ್ತಾರೆ. ತಮ್ಮ ಗ್ರೂಪ್‌ ನಲ್ಲಿ ಯಾರಿಗಾದರೂ ಪಾರ್ಟಿ ಮಾಡಬೇಕಿದ್ದರೆ ಅವರು ಅದನ್ನು ತಮ್ಮ ಮನೆಗಳಲ್ಲಿ ಮಾಡಲು ಆಗದಿದ್ದರೆ, ಆಂಟಿ ತಮ್ಮ ಮನೆಯಲ್ಲಿಯೇ ಪಾರ್ಟಿ ಮಾಡಲು ಅವಕಾಶ ಕೊಡುತ್ತಾರೆ. ಈ ಬಗ್ಗೆ ಆಂಟಿ ನಗುತ್ತಲೇ, ``ನಮ್ಮ ಮನೆಯಲ್ಲಿ ಪಾರ್ಟಿ ಮಾಡಿಕೊಳ್ಳಿ. ಆ ಪ್ರಯುಕ್ತ ನಮ್ಮ ಮನೆಯ ಕ್ರಾಕರಿ ಆದರೂ ಹೊರಗೆ ಬರುತ್ತವೆ,'' ಈ ರೀತಿ ಪಾರ್ಟಿ ಅವರ ಮನೆಯಲ್ಲಿ ಯಶಸ್ವಿಯಾಗಿ ಆಯೋಜಿಸಲ್ಪಡುತ್ತವೆ.

ಜೀವನದಲ್ಲಿ ಯಾರಾದರೂ ಏಕಾಂಗಿಯಾಗಿ ವಾಸಿಸಬೇಕಾಗಿ ಬಂದರೆ ಅದಕ್ಕೆ ಶ್ಯಾಮಲಾ ಆಂಟಿಯ ಪ್ರೇರಣೆ ಪಡೆಯುತ್ತಾರೆ.

ನಿರ್ಮಲಾರ ಮಗಸೊಸೆ ವಿದೇಶದಿಂದ ಮೈಸೂರಿಗೆ ಬಂದುಬಿಟ್ಟರೆ ಅವರ ಮನಸ್ಸು ಖುಷಿಯಿಂದ ಕುಣಿದು ಬಿಡುತ್ತದೆ. ಅವರು ತಮ್ಮ ಪತಿ ಜೊತೆ ಸೇರಿ ಹಲವು ಯೋಜನೆಗಳನ್ನು ಹಾಕುತ್ತಾರೆ. ಅವರಿಗೆ ಇಷ್ಟವಾಗುವಂತಹ ಅದೆಷ್ಟೋ ತಿಂಡಿಗಳನ್ನು ಮಾಡಿ ಇಡುತ್ತಾರೆ. ಅವರು ಮನೆಗೆ ಬಂದಾಗ ಮನಸ್ಸು ಖುಷಿಯಿಂದ ಕುಣಿಯುತ್ತದೆ. ಆದರೆ ಅವರು ಹೊರಟು ಹೋದ ಬಳಿಕ ಏಕಾಂಗಿತನದ ಖಿನ್ನತೆ ಹಲವು ದಿನಗಳ ಕಾಲ ಅವರನ್ನು ಆವರಿಸಿಕೊಂಡಿರುತ್ತದೆ. ಆದರೆ ಕ್ರಮೇಣ ಮಗಸೊಸೆಯ ಬದಲಾಗುತ್ತಿರುವ ಲೈಫ್‌ ಸ್ಟೈಲ್ ‌ಅವರ ಯೋಚನೆಯ ರೀತಿನೀತಿಯನ್ನೇ ಬದಲಿಸಿಬಿಟ್ಟಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ