ಕಥೆ -  ಸವಿತಾ ರಮೇಶ್‌

ಮಧ್ಯಮ ವರ್ಗದ ಸಾಂಸಾರಿಕ ಜೀವನದ ಜಂಜಾಟಗಳಿಗೆ ಸಿಲುಕಿ ಶ್ರವಂತಿ ತತ್ತರಿಸಿ ಹೋಗಿದ್ದಳು. ಪತಿಯ ಅಕಾಲಿಕ ಮರಣ, ಮುಂದೆ ಮಗಳು ಮದುವೆಯಾಗಿ ಹೋದನಂತರ ಇವಳು ಸಂಪೂರ್ಣ ಏಕಾಂಗಿಯಾದಳು. ಮುಂದೆ ಶ್ರವಂತಿಯ ಭವಿಷ್ಯ......?

ಶ್ರವಂತಿ ಟೈಮ್ ನೋಡುತ್ತಾ ಬೇಗ ಮನೆಗೆಲಸ ಮುಗಿಸುತ್ತಿದ್ದಳು. ಇಂದು ಹತ್ತು ಗಂಟೆಗೆ ಒಂದು ಕಾಲೇಜಿನಲ್ಲಿ ಇಂಟರ್‌ ವ್ಯೂ ಇತ್ತು.  `ದೇವರೇ ಈ ಕಾಲೇಜಿನಲ್ಲಿ ಕೆಲಸ ಸಿಕ್ಕುವ ಹಾಗೆ ಮಾಡು. ಮನೆಗೂ ಹತ್ತಿರವಿದೆ,' ಎಂದು ಯೋಚಿಸುತ್ತಾ ಬೇಗ ಕೆಲಸ ಮುಗಿಸಿ ತಲೆ ಬಾಚಿಕೊಳ್ಳಲು ಕನ್ನಡಿ ಮುಂದೆ ನಿಂತಳು.`ಎಷ್ಟೊಂದು ಬಿಳಿ ಕೂದಲು. ಈ ವಯಸ್ಸಿನಲ್ಲಿ ನನ್ನನ್ನು ಕೆಲಸಕ್ಕೆ ತೆಗೆದುಕೊಳ್ತಾರಾ.....? ಈ ಪ್ರಯತ್ನ ಮಾಡೋಣ. ಅಣ್ಣ ಮ್ಯಾನೇಜ್‌ ಮೆಂಟ್‌ ಬಳಿ ಮಾತನಾಡಿದ್ದೇನೆ ಎಂದಿದ್ದಾನೆ. ಹೇಗೂ ತನಗೆ ಕಾಲೇಜ್‌ ಹಾಗೂ ಟ್ಯುಟೋರಿಯಲ್ ನಲ್ಲಿ ಪಾಠ ಮಾಡಿ ಅಭ್ಯಾಸವಿದೆ,' ಎಂದು ಯೋಚಿಸುತ್ತಲೇ ರೆಡಿಯಾದಳು.

ಶ್ರವಂತಿ ಹಾಗೂ ಮಾಧವನಿಗೆ ಇಬ್ಬರೂ ಹೆಣ್ಣುಮಕ್ಕಳು. ಶ್ರವಂತಿಯ ಗಂಡ ಮಾಧವನಿಗೆ ಒಳ್ಳೆಯ ಕೆಲಸವಿರಲಿಲ್ಲ. ಯಾವುದೋ ಪ್ರೈವೇಟ್‌ ಕಂಪನಿಯಲ್ಲಿ ಅಕೌಂಟೆಂಟ್‌ ಆಗಿ ಕೆಲಸ ಮಾಡುತ್ತಿದ್ದ. ಬರುವ ಸಂಬಳ ಏನೇನಕ್ಕೂ ಸಾಲುತ್ತಿರಲಿಲ್ಲ. ಡಿಗ್ರಿ ಮುಗಿಸಿದ್ದ ಶ್ರವಂತಿ ಸ್ಕೂಲಿನಲ್ಲಿ ಟೀಚರ್‌ ಆಗಿ ಕೆಲಸ ಮಾಡುತ್ತಿದ್ದಳು.

ಬರೀ ಡಿಗ್ರಿಯಾದರೆ ಸ್ಕೂಲ್ ‌ನಲ್ಲಿ ಕೆಲಸ ಸಿಕ್ಕುವುದು ಕಷ್ಟ. ಅಲ್ಲದೆ ಶ್ರವಂತಿ ಪಾಠ ಮಾಡುವುದು ಸಂಸ್ಕೃತವಾದ ಕಾರಣ, ವಾರದಲ್ಲಿ ಮೂರು ದಿನ ಮಾತ್ರ ಕೆಲಸ, ಕಡಿಮೆ ಸಂಬಳ ಸಿಗುತ್ತಿತ್ತು. ಆದರೂ ಹೋಗುತ್ತಿದ್ದಳು. ಸ್ಕೂಲಿನಿಂದ ಮಕ್ಕಳು ಬಂದ ನಂತರ ಪರಿಚಯದವರ ಅಕ್ಕಪಕ್ಕದವರ ಮನೆಯಲ್ಲಿ ಇರಲು ವ್ಯವಸ್ಥೆ ಮಾಡಿದ್ದಳು. ಹೀಗೆ ಸಾಕು ಸಾಲದ ರೀತಿಯಲ್ಲಿ ಸಂಸಾರ ಮಾಡುತ್ತಿದ್ದರು.

ಈ ಸಮಯದಲ್ಲಿಯೇ ಕಾಲೇಜಿನಲ್ಲಿ ಪಾಠ ಮಾಡುವ ಆಸೆಯಿಂದ ಸಂಸ್ಕೃತದಲ್ಲಿ ಪ್ರೈವೇಟ್‌ ನಲ್ಲಿ ಪರೀಕ್ಷೆ ಕಟ್ಟಿ ಮಾಸ್ಟರ್‌ ಡಿಗ್ರಿ ಮುಗಿಸಿಕೊಂಡಳು. ಸಣ್ಣ ಸಣ್ಣ ಪ್ರೈವೇಟ್‌ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಳು. ಒಂದೇ ಕಡೆ ಪರ್ಮನೆಂಟ್‌ ಕೆಲಸ ಸಿಕ್ಕಿರಲಿಲ್ಲ. ವರ್ಷಾವರ್ಷ ಬೇರೆ ಬೇರೆ ಕಾಲೇಜುಗಳಿಗೆ ಹೋಗಬೇಕಿತ್ತು.

ಗಂಡನ ಸಂಬಳ, ಇವಳದ್ದೂ ಸೇರಿ ಹೇಗೋ ಸಾಕಾಗುತ್ತಿತ್ತು. ಮಕ್ಕಳಿಗೆ ಒಳ್ಳೆಯ ಎಜುಕೇಶನ್‌ ಕೊಡಿಸಬೇಕು ಎಂದು ಬ್ಯಾಂಕಿನಲ್ಲಿ ಲೋನ್‌ ಮಾಡಿ ದೊಡ್ಡವಳನ್ನು ಎಂಜಿನಿಯರಿಂಗ್‌ ಗೆ ಸೇರಿಸಿದರು.

ಅಷ್ಟರಲ್ಲಿ ಇವರಿಗೂ ವಯಸ್ಸಾಗುತ್ತಿದ್ದಂತೆ, ಕೆಲಸ ಮಾಡಲು ಕಷ್ಟವಾಗುತ್ತಿತ್ತು. ಕಾಲೇಜು, ಅಲ್ಲಿಯ ರಾಜಕೀಯ ಕಂಡು ಒಮ್ಮೊಮ್ಮೆ ಜೀವನವೇ ಬೇಸರವಾಗುತ್ತಿತ್ತು. ಅಟ್ಲೀಸ್ಟ್ ಮಗಳಾದರೂ ಓದಿ ಅವಳಿಗೊಂದು ಒಳ್ಳೆಯ ಕೆಲಸವಾದರೆ ಸಾಕು ಎಂದು ಕಾಯುತ್ತಿದ್ದರು. ಅಂದುಕೊಂಡಂತೆ ಮಗಳು ಎಂಜಿನಿಯರಿಂಗ್‌ ಮುಗಿಸಿದಳು. ಚಿಕ್ಕವಳು ಇನ್ನೂ ಒಂಬತ್ತನೇ ಕ್ಲಾಸ್ ಓದುತ್ತಿದ್ದಳು. ದೊಡ್ಡ ಮಗಳಿಗೆ ಇನ್ನೂ ಕೆಲಸವಾಗಿರಲಿಲ್ಲ.

ಅಷ್ಟರಲ್ಲಿ ಒಂದು ದಿನ ಮಾಧವ ಆಫೀಸ್‌ ನಲ್ಲಿ ತಲೆಸುತ್ತು ಬಂದು ಬಿದ್ದುಬಿಟ್ಟ. ಹಾಸ್ಪಿಟಲ್ ಗೆ ಅಡ್ಮಿಟ್‌ ಮಾಡಿ ಇವರಿಗೆ ಎಂದು ಫೋನ್‌ ಮಾಡಿದರು. ನಾಲ್ಕು ದಿನ ಆಸ್ಪತ್ರೆಯಲ್ಲಿ ಇದ್ದ ಮಾಧವ ಹೆಂಡತಿ ಮಕ್ಕಳನ್ನು ಅನಾಥರನ್ನಾಗಿಸಿ ಹೋಗಿಬಿಟ್ಟ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ