ಕಥೆ - ಪದ್ಮಾ ಉಮೇಶ್‌

ಆಧುನಿಕ ಕಾಲದವಳಾದ ಮಾಧುರಿ, ತನ್ನನ್ನು ಸದಾ ಸುತ್ತಮುತ್ತಲಿನ ಹಿರಿಯರು, ಮನೆಯವರು ಎಲ್ಲರೊಂದಿಗೂ ಹೋಲಿಸಿಕೊಳ್ಳುತ್ತಾ, ಈಗಿನ ಕಾಲದವರಾದ ತಾವು ಎಲ್ಲದರಲ್ಲೂ ಏಕೆ ಉತ್ಸಾಹ ಕಳೆದುಕೊಂಡಿದ್ದೇವೆ ಎಂದು ಚಿಂತಿಸತೊಡಗಿದಳು. ಇದಕ್ಕೆ ಪರಿಹಾರವಿದೆಯೇ....?

ಮಾಧುರಿ ರೊಟ್ಟಿ ಬಡಿದು, ಹೆಂಚಿನ ಮೇಲೆ ಹಾಕುತ್ತಿದ್ದಾಗ ಅವಳ ಫೋನ್‌ ಹೊಡೆದುಕೊಂಡಿತು. ಸ್ಕ್ರೀನ್‌ ಮೇಲೆ ತಾಯಿಯ ಫೋಟೋ ನೋಡಿ ಮುಖದ ಮೇಲೆ ಮಂದಹಾಸ ಮೂಡಿತು. ``ಗುಡ್‌ ಮಾರ್ನಿಂಗ್‌ ಮಮ್ಮಿ,'' ಎಂದಳು.

``ಹೇಳಮ್ಮಾ ಗುಮ್ಮಿ.....'' ಎಂದು ಆ ಕಡೆಯಿಂದ ನಗು ಹರಿದು ಬಂದಾಗ ಮಾಧುರಿಗೆ ಅಮೃತ ಸಿಂಚನವಾದಂತೆ ಅನಿಸಿತು. ಮಾಧುರಿ ತಾಯಿಯನ್ನು, `ಅಮ್ಮಾ....' ಎಂದೇ ಕರೆಯುತ್ತಿದ್ದಳಾದರೂ ಬೆಳಗ್ಗೆ ಬರುವ ಫೋನ್‌ ನಲ್ಲಿ ಮಾತ್ರ ಪ್ರೀತಿಯಿಂದ ಮಮ್ಮಿ ಎಂದು ಸಂಬೋಧಿಸುತ್ತಿದ್ದಳು.

`ಮಾಧುರಿ ನನ್ನ ಕರ್ಚೀಫ್‌ ಎಲ್ಲಿ.....?' ಎನ್ನುವ ಕೂಗು ಫೋನಿನಲ್ಲಿ ಹಿಂದಿನಿಂದ ಕೇಳಿಸಿದ್ದರಿಂದ, ``ನಿನ್ನ ಗಂಡ ಇನ್ನೂ ಆಫೀಸಿಗೆ ಹೋಗಿಲ್ಲವೇನೋ.... ನಿನ್ನ ಗಂಡನ್ನ ಕಳಿಸಿ, ಟಿಫನ್‌ ಮುಗಿಸಿಕೋ, ಆಮೇಲೆ ಮಾಡ್ತೀನಿ,'' ಎಂದು ಫೋನ್‌ ಇಟ್ಟರು.

ಅವರಿಗೆ ಏನಾದ್ರೂ ಹೇಳೋದು ಕೇಳೋದು ಇದ್ದರೇನೆ ಇಷ್ಟು ಬೆಳಗ್ಗೆ ಫೋನ್‌ ಮಾಡೋದು ಎಂದು ಮಾಧುರಿಗೆ ಗೊತ್ತಿತ್ತು. ಬಂಧುಬಳಗದ, ಅಣ್ಣತಮ್ಮ, ಅಕ್ಕಂದಿರ ಅಥವಾ ತಮ್ಮ ಸುತ್ತಮುತ್ತ ಇರುವವರ ಬಗ್ಗೆ ಯಾವುದಾದರೊಂದು ಹೊಸ ವಿಷಯ ಸಿಕ್ಕರೂ ಅದನ್ನು ಹೇಳುವವರೆಗೆ ಅವರಿಗೆ ಸಮಾಧಾನ ಇರುತ್ತಿರಲಿಲ್ಲ. ಹಾಗೆಯೇ ಮಾಧುರಿಗೆ ಸಂಬಂಧಪಟ್ಟ ವಿಚಾರ, ಅವಳ ಸುತ್ತಮುತ್ತಲಿನ ವಿಚಾರ ವಿನಿಮಯ ಮಾಡಿಕೊಂಡರೇನೇ ಅವರಿಗೆ ಸಮಾಧಾನ. ಮಾಧುರಿ ಪಕ್ಕದ ಮನೆಯ ಹುಡುಗಿಯ ಮದುವೆ ಫಿಕ್ಸ್ ಆಗಿತ್ತು. ಅದರ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಲು ಅಮ್ಮ ಕುತೂಹಲದಿಂದಿದ್ದಾರೆ ಎಂದು ಮಾಧುರಿಗೆ ಗೊತ್ತಿತ್ತು. ಗಂಡ ಆಫೀಸ್‌ ಗೆ ಹೋದ ನಂತರ ಟಿಫನ್‌ ಮಾಡುತ್ತಾ ಫೋನ್‌ ತೆಗೆದುಕೊಂಡು, ಅಮ್ಮನಿಗೆ ಕರೆ ಮಾಡಿದಳು.

ಫೋನ್‌ ಕರೆ ಸ್ವೀಕರಿಸಿದ ಮಾಧುರಿಯ ಅಮ್ಮ, ``ಕಸ ಮುಸುರೆ ಮಾಡೋಕೆ ಕೆಲಸದವರು ಬರ್ತಾರೆ, ಬಟ್ಟೆ ಒಗೆಯೋಕೆ ವಾಷಿಂಗ್‌ ಮೆಷಿನ್‌ ಇದೆ, ಆದರೂ ಬೆಳಗ್ಗೆ 11 ಗಂಟೆ ಆದ್ರೂ ನಿನ್ನ ಕೆಲಸ ಮುಗಿಯೋಲ್ಲ. ಏನು ಕೆಲಸ ಮಾಡ್ತೀಯಾ ನೀನು. ನಾವು 7 ಗಂಟೆಗೆಲ್ಲಾ ಮನೆ ಬದುಕು ಮಾಡಿಕೊಂಡು ಹೊಲಕ್ಕೆ ಹೋಗ್ತಿದ್ವಿ....'' ಎಂದರು.

``ನೀವು ರೊಟ್ಟಿ ಬಡಿದು, ಅನ್ನ ಬೇಳೆ ಮಾಡಿದರೆ ಮುಗೀತು. ನಮ್ಮ ಮನೇಲಿ ಹಾಗೆ ನಡೆಯುತ್ತಾ.... ನಿನ್ನ ಮೊಮ್ಮಗನಿಗೆ ಒಂದು ತಿಂಡಿ, ಬಾಕ್ಸ್ ಗೆ ರೈಸ್‌ ಐಟಂ, ನಿನ್ನ ಅಳಿಯ ರೈಸ್‌ ಐಟಂ ನನಗೆ ಬೇಡ. ಬೇರೆ ಏನಾದರೂ ಮಾಡು ಅಂತಾರೆ. ನನಗೆ ಕೆಲಸ ಮಾಡಿ ಮಾಡಿ ಸುಸ್ತು ಆಗುತ್ತೇ ಅಂದ್ರೆ.... ಇವರೂ ನಿನ್ನ ತರನೇ ಎಲ್ಲದಕ್ಕೂ ಕೆಲಸದವರು ಇದಾರೆ, ಬಟ್ಟೆಗೆ ಮೆಷಿನ್‌ ಇದೆ, ಮನೇಲಿ ಇನ್ನೇನು ಕೆಲಸ ಮಾಡ್ತೀಯಾ ಅಂತಾರೆ....! ಎಲ್ಲರೂ ನನ್ನನ್ನು ಏನು ಅಂದುಕೊಂಡಿದೀರಾ....'' ಎಂದು ಮಾಧುರಿ ತುಸು ಏರು ದನಿಯಲ್ಲಿ ಕೇಳಿದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ