ಸ್ಟಾಂಡ್‌ ಅಪ್‌ ಕಮೆಡಿಯನ್‌, ಲೇಖಕಿ, ಪರ್ಫಾರ್ಮರ್‌

ಪರ್ಫಾರ್ಮಿಂಗ್‌ ಆರ್ಟ್ಸ್ ಅಚೀವರ್‌ ಅವಾರ್ಡ್‌

“ಹ್ಯೂಮರ್‌ಅಂದ್ರೆ ನನ್ನ ಪಾಲಿಗೆ ಜನರನ್ನು ಕೇವಲ ನಗಿಸುವುದಷ್ಟೇ ಅಲ್ಲ, ಹೇಳದೆ ಇರುವ ಅನೇಕ ವಿಚಾರಗಳನ್ನು ಇಲ್ಲಿ ಹಂಚಿಕೊಳ್ಳುವ ವೇದಿಕೆಯೂ ಹೌದು….!”

ಪೈನಿಯರಿಂಗ್‌ ಫೀಮೇಲ್ ‌ಸ್ಟಾಂಡ್‌ ಅಪ್‌ ಕಾಮಿಕ್‌ಕಲ್ಚರ್‌ ವಾಯ್ಸ್ ನೀತೀ ಪಾಲ್ಟಾ, ಭಾರತದ ಉತ್ಕೃಷ್ಟ ಸ್ಟಾಂಡ್‌ ಅಪ್ ಕಮೆಡಿಯನ್ಸ್ ರಲ್ಲಿ ಒಬ್ಬರು. ತಮ್ಮ ಚುರುಕು ಬುದ್ಧಿ, ಸಾಮಾಜಿಕ ಅವಲೋಕನ, ನಿರ್ಭಯ ದೃಷ್ಟಿಕೋನಕ್ಕೆ ಹೆಸರಾದವರು. ಮಾನವ ಸಂಬಂಧಗಳು, ಗಂಡು ಹೆಣ್ಣಿನ ಭೇದಭಾವ, ದೈನಂದಿನ ಏರಿಳಿತಗಳು ಎಲ್ಲದರ ಕುರಿತೂ ಲೀಲಾಜಾಲವಾಗಿ ಪಟಪಟನೆ ಮಾತನಾಡುತ್ತಾರೆ. ವ್ಯಕ್ತಿಗತ ಅನುಭವ, ಸಾಮಾಜಿಕ ಟೀಕೆ ಟಿಪ್ಪಣಿ, ಸಾಂಸ್ಕೃತಿಕ ವಿಚಾರವಿಮರ್ಶೆಗಳು ಇವರ ಮಾತುಗಳಲ್ಲಿನ ಬಂಡವಾಳ. ವೀಕ್ಷಕರನ್ನು ನಗಿಸುವುದಷ್ಟೇ ಅಲ್ಲ, ಸಾಮಾಜಿಕ ಸಂದೇಶ ನೀಡಿ ಜಾಗೃತಿ ಮೂಡಿಸುತ್ತಾರೆ.

ಆರಂಭದ ಜೀವನ, ಬೆಳೆದ ಬಗೆ : ಈಕೆ ತಮ್ಮ ಕೆರಿಯರ್‌ ನ್ನು ಜಾಹೀರಾತು, ಟಿವಿ ಲೇಖನಗಳಿಂದ ಆರಂಭಿಸಿದರು. ಸ್ವಯಂ ಆಸಕ್ತಿ ಬೆಳೆಸಿಕೊಂಡು 2010ರಿಂದ ಸ್ಟಾಂಡ್‌ ಅಪ್‌ ಕಾಮಿಡಿ ಕಾರ್ಯಕ್ರಮ ನಡೆಸಿಕೊಡಲು ಆರಂಭಿಸಿದರು. ನಿಧಾನವಾಗಿ ಭಾರತದ ನಂ.1 ಎನಿಸಿದರು. ಅದರಲ್ಲೂ ಈ ನಿಟ್ಟಿನಲ್ಲಿ ಮಹಿಳಾ ಕಮೆಡಿಯನ್ಸ್ ಅಪರೂಪವಾಗಿದ್ದ ಕಾಲಕ್ಕೇ ತಮ್ಮ ಐಡೆಂಟಿಟಿ ಸ್ಥಾಪಿಸಿಕೊಂಡರು. ಭಾರತದಾದ್ಯಂತ ಎಲ್ಲಾ ಮಹಾನಗರಗಳು, ಅಂತಾರಾಷ್ಟ್ರೀಯ ಮಟ್ಟದಲ್ಲೂ ಇವರು ಮನೆಮಾತಾಗಿ ಎಲ್ಲರ ಹೃದಯ ಗೆದ್ದರು.

ಕಲಾತ್ಮಕ ಐಡೆಂಟಿಟಿ : ಇವರ ಮೂಲ ವಿಷಯ ಸಾಮಾಜಿಕ ಟೀಕೆ ಟಿಪ್ಪಣಿ, ಕುರೀತಿ ನೀತಿ, ವ್ಯಕ್ತಿಗತ ಅನುಭವ, ಸಾಂಸ್ಕೃತಿಕ ಸಮೀಕ್ಷೆಗಳಿಂದ ತುಂಬಿದೆ. ಹಾಸ್ಯ, ವ್ಯಂಗ್ಯ, ವಿಡಂಬನೆ, ಗಟ್ಟಿ ವಿಷಯವಸ್ತು ಇವರ ಮಾತಿನ ಅಂತರಾಳ.

ಕೆಲಸ ಕಲಾತ್ಮಕ ಅಭ್ಯಾಸ : ನೀತೀ ದೇಶೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಟ್ಟಿ ನೆಲೆ ಕಂಡುಕೊಂಡವರು. ಇವರ ಕಾಮಿಡಿ ಸ್ಪೆಷಲ್ಸ್ ಡಿಜಿಟಲ್ ಕ್ಲಿಪ್ಸ್ ವ್ಯಾಪಕ ರೂಪದಲ್ಲಿ ಪ್ರಚಲಿತ. ಅಮೆಝಾನ್‌ ಪ್ರೈಮಿನ ಜನಪ್ರಿಯ ಕಾಮಿಡಿ ಸೀರೀಸ್‌ ಕಾಮಿಕ್‌ ಸ್ತಾನ್ ನಲ್ಲಿ ಮೆಂಟರ್‌ಜಜ್‌ ಆಗಿ ವಿಖ್ಯಾತರು. ಮನರಂಜನೆ, ಸಾಮಾಜಿಕ ಸಂದೇಶಗಳೇ ಇವರ ಮಾತಿನ ಹೂರಣ.

ಈಕೆ ವಿಶೇಷವಾಗಿ ಆಂಗ್ಲ ಸ್ಟಾಂಡ್‌ ಅಪ್‌ ಕಾಮಿಡಿಗಳಲ್ಲಿ ಮಹಿಳಾ ದೃಷ್ಟಿಕೋನಕ್ಕೆ ಆದ್ಯತೆ ನೀಡುತ್ತಾರೆ. ತಮ್ಮ ಕೆಲಸದ ಮಾಧ್ಯಮದಿಂದ ಭಾರತೀಯ ಕಾಮಿಡಿಗೆ ಅಧಿಕ ಮಹತ್ವ ಸಿಗುವಂತೆ ಮಾಡಿದ್ದಾರೆ.

ಪ್ರಶಸ್ತಿಪುರಸ್ಕಾರ : ರಾ ಓವರ್‌ ಫೆಲ್ಸ್ ಇಂಡಿಯಾದಲ್ಲಿ ಬೆಸ್ಟ್ ಸ್ಟಾಂಡ್‌ ಅಪ್‌ ಕಾಮಿಕ್‌ ಆಗಿ ಆಯ್ಕೆ. 2013ರಲ್ಲಿ `ಮೆಲ್ಬೋರ್ನ್ ಇಂಟರ್‌ ನ್ಯಾಶನಲ್ ಕಾಮಿಡಿ ಫೆಸ್ಟಿವ್‌’ನಲ್ಲಿ ಪ್ರದರ್ಶನ ನೀಡಿದ ಮೊಟ್ಟ ಮೊದಲ ಭಾರತೀಯ ಮಹಿಳೆ. ಕಾಮಿಕ್‌ ಸ್ಪಾನ್ (ಸೀರೀಸ್‌ 3+4)ನಲ್ಲಿ ಸತತ ಮೆಂಟಲ್ ಜಜ್‌.

ಇನ್‌ ಸ್ಪೈರ್‌ ಅವಾರ್ಡ್ ಸ್ಪೆಷಲ್ : “ನಾನಾಗಿ ಕಾಮಿಡಿ ಆರಿಸಿಕೊಂಡಿದ್ದಲ್ಲ, ಅದಾಗಿ ಕಾಮಿಡಿ ನನ್ನ ಜೀವನದಲ್ಲಿ ಬಂತು! ಪ್ರವೃತ್ತಿಯಿಂದ ಲೇಖಕಿಯಾದ ನಾನು, ಸತತ ಬರೆಯುತ್ತಿದ್ದೆ. ಬೆಳಗ್ಗೆ ಬರೆದ ಜೋಕ್ಸ್ ಇಡೀ ದಿನ ಎಷ್ಟು ಮಹಾ ಪ್ರಭಾವಶಾಲಿಯಾಗಿತ್ತು ಎಂದು ಸಂಜೆ ಪರೀಕ್ಷಿಸುತ್ತಿದ್ದೆ. ಈ ರೀತಿ ನಾನು ನುರಿತ ಸ್ಟಾಂಡ್‌ ಅಪ್‌ ಕಮೆಡಿಯನ್‌ ಆದೆ,” ಎಂದು ಗೃಹಶೋಭಾ ಇನ್‌ ಸ್ಪೈರ್‌ಅವಾರ್ಡ್‌ ಕಾರ್ಯಕ್ರಮದಲ್ಲಿ ಈಕೆ ಹಂಚಿಕೊಂಡರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ