ನಟಿ, ಹೋಸ್ಟ್, ವೆಲ್ ನೆಸ್ ಬಾಡಿ ಪಾಸಿಟಿವಿಟಿ ಕಂಟೆಂಟ್ ಕ್ರಿಯೇಟರ್
ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಎಂಪವರ್ ಮೆಂಟ್
``ಹೆಂಗಸರು ಇಂತಿಂಥದ್ದೇ ನಿಶ್ಚಿತ ಬ್ಯೂಟಿ ಸ್ಯಾಂಡರ್ಡ್ ನಲ್ಲಿ ಫಿಟ್ ಆಗಲೇಬೇಕು ಎಂಬ ಅಗತ್ಯವೇನೂ ಇಲ್ಲ.....''
``ನಮ್ಮನ್ನು ನಾವು ಬದಲಾಯಿಸಿಕೊಳ್ಳುವುದಕ್ಕಿಂತ, ಇರುವಂತೆಯೇ ನಮ್ಮನ್ನು ನಾವು ಒಪ್ಪಿಕೊಳ್ಳುವುದು ಮುಖ್ಯ!'' ಎನ್ನುತ್ತಾರೆ ಇಂಡಿಯನ್ ಎಂಟರ್ ಟೇನ್ ಮೆಂಟ್ ಇಂಡಸ್ಟ್ರಿಯ ಅತಿ ವಿಖ್ಯಾತರಾದ, ಟಿವಿ ಲೋಕದ ಜನಪ್ರಿಯತೆಯಿಂದ ಮುಂದೆ ಡಿಜಿಟಲ್ ಸ್ಪೇಸ್ ನಲ್ಲಿ ಸಂವೇದನಾಶೀಲ, ಪ್ರಾಮಾಣಿಕ, ಪ್ರೇರಣಾ ಐಡೆಂಟಿಟಿ ಗಳಿಸಿರುವ ಮಿನೀ ಮಾಥುರ್!
ಈಕೆ ಇಂದು ಕೇವಲ ನಟಿ, ಹೋಸ್ಟ್ ಅಲ್ಲ. ಬದಲಿಗೆ ವೆಲ್ ನೆಸ್, ಹೆಚ್ಚುತ್ತಿರುವ ಮನಸ್ಸಿನಿಂದಾಗಿ ದೇಹ ಹಾಗೂ ಆರೋಗ್ಯದಲ್ಲಾಗುತ್ತಿರುವ ಬದಲಾವಣೆ ಮತ್ತು ವುಮನ್ ಎಂಪವರ್ ಮೆಂಟ್ ಕುರಿತಾಗಿ ದಿಟ್ಟ, ನೇರ, ಪರಿಣಾಮಕಾರಿಯಾಗಿ ಮಾತನಾಡುವ ಸ್ವಭಾವ ಮಿನೀಯದು. ಸೋಶಿಯಲ್ ಮೀಡಿಯಾದಲ್ಲಿ ಕೇವಲ `ಪರ್ಫೆಕ್ಟ್ ಇಮೇಜ್'ಗೆ ಮಾತ್ರ ಮನ್ನಣೆ, ಆದರೆ ಮಿನೀ ವಾಸ್ತವಿಕತೆ, ಆತ್ಮಸ್ವೀಕಾರವನ್ನೇ ದೊಡ್ಡದಾಗಿ ಭಾವಿಸಿದರು. ಮಹಿಳೆಯ ಸ್ತ್ರೀಯೋಚಿತ ಸ್ವಾಸ್ಥ್ಯ, ಮುಟ್ಟಂತ್ಯ, ಬೊಜ್ಜು, ಬಿಳಿ ಕೂದಲು, ಸುಕ್ಕಾದ ಮುಖ ಎಲ್ಲವನ್ನೂ ಹೇಗೆ ಸಹಜವಾಗಿ ತೆಗೆದುಕೊಳ್ಳಬೇಕೆಂದು ಕಂಟೆಂಟ್ ಮಾಡುತ್ತಾರೆ.
ಆರಂಭದ ಹಂತದಲ್ಲಿ ಡಿಜಿಟಲ್ ಐಡೆಂಟಿಟಿವರೆಗೂ : ಜಾಹೀರಾತು ಸಂಸ್ಥೆಗಳಿಂದ ಈಕೆ ಕೆರಿಯರ್ ಆರಂಭಿಸಿದರು. ನಂತರ ಕಿರುತೆರೆಯ ನಟಿಯಾಗಿ ಮಿಂಚಿದರು. ಜನಪ್ರಿಯ `ಇಂಡಿಯನ್ ಐಡ್' ಶೋನಲ್ಲಿ ಹೋಸ್ಟ್ ಆಗಿ ಹೆಚ್ಚು ಕಾಲ ಇದ್ದರು. ನಟನೆ, ನಿರ್ಮಾಣ, ಟ್ರಾವೆಲ್, ಲೈಫ್ ಸ್ಟೈಲ್, ಕಂಟೆಂಟ್ ಇತ್ಯಾದಿ ಎಲ್ಲಾ ಕ್ಷೇತ್ರದಲ್ಲೂ ಕೈಯಾಡಿಸಿದ್ದಾರೆ. ಬಂಜೆತನ, ತಾಯ್ತನ, ಪ್ರೌಢಾವಸ್ಥೆ, ಹಾರ್ಮೋನ್ ಬದಲಾಣೆ ಇತ್ಯಾದಿ ಎಲ್ಲವನ್ನೂ ತಮ್ಮ ಡಿಜಿಟಲ್ ಪ್ಲಾಟ್ ಫಾರ್ಮ್ ನಲ್ಲಿ ಹಂಚಿಕೊಳ್ಳುತ್ತಾರೆ.
ತೋರ್ಪಡಿಕೆಗಿಂತ ಹೆಚ್ಚಾಗಿ ಸೆಲ್ಫ್ ಡಿಸ್ಕವರಿಯತ್ತ ಪೋಕಸ್ : ಮಿನೀಯ ಕಂಟೆಂಟ್ ಹೊರಗಿನ ತೋರ್ಪಡಿಕೆಗಿಂತ ಅಧಿಕ ಹೋಲಿಸ್ಟಿಕ್ ವೆಲ್ ನೆಸ್ ನತ್ತ ಕೇಂದ್ರಿತವಾಗಿದೆ. ಮಧ್ಯ ವಯಸ್ಕ ಮಹಿಳೆಯ ಆರೋಗ್ಯ, ಹಾರ್ಮೋನ್ ಬ್ಯಾಲೆನ್ಸ್, 40+ನವರ ಫಿಟ್ ನೆಸ್, ಜೀವನಶೈಲಿ, ಬಾಡಿ ಪಾಸಿಟಿವಿಟಿ ಇತ್ಯಾದಿ ಇವರ ಕಂಟೆಂಟ್ ನ ಮುಖ್ಯ ವಿಷಯ. ಮಾನಸಿಕ ಆರೋಗ್ಯ, ಭಾವನಾತ್ಮಕ ಸಮತೋಲನ, ಪರಿಪಕ್ವತೆ, ಕೌಟುಂಬಿಕ ಜೀವನದ ಮಹತ್ವಕ್ಕೆ ಆದ್ಯತೆ. ಇವರು `ಪ್ರೋ ಏಜ್'ಗೆ ಹೆಚ್ಚಿನ ಮಹತ್ವ ನೀಡುತ್ತಾರೆ.
ಪ್ರಭಾವ ಹಾಗೂ ಸಾಮಾಜಿಕ ಪಾತ್ರ : ಬಾಡಿ ಶೇಮಿಂಗ್‌ಆಬ್ಜೆಕ್ಟಿಫಿಕೇಶನ್ ವಿರುದ್ಧ ಮುಕ್ತವಾಗಿ ಮಹಿಳೆಯನ್ನು ಎಚ್ಚರಿಸುತ್ತಾರೆ. ನಿಶ್ಚಿತ ಬ್ಯೂಟಿ ಸ್ಟಾಂಡರ್ಡ್ ಎಂಬ ಮಾನದಂಡಕ್ಕೆ ಅಂಟಿಕೊಳ್ಳದೆ ಕಾನ್ಛಿಡೆನ್ಸ್ ಬೆಳೆಸಿಕೊಳ್ಳಬೇಕು ಎನ್ನುತ್ತಾರೆ.
ಸಾಧನೆ ಮತ್ತು ಡಿಜಿಟಲ್ ಪ್ರಭಾವ : ಇನ್ ಸ್ಟಾಗ್ರಾಮ್ ನಲ್ಲಿ 6 ಲಕ್ಷಕ್ಕೂ ಅಧಿಕ ಫಾಲೋಯೆರ್ಸ್! ರೀಲ್ಸ್, ಮಾಹಿತಿಪೂರ್ಕ ಖಾಸಗಿ ಚರ್ಚೆಗಳು. 35+ ಹಾಗೂ 55+ ನಡುವಿನವರ ಕುರಿತು ವಿಶೇಷ ಕಾಳಜಿ.
ಪ್ರಶಸ್ತಿ, ಪುರಸ್ಕಾರ ಹಾಗೂ ಐಡೆಂಟಿಟಿ : ಇಂಡಿಯನ್ ಐಡ್ ಸಹಿತ ಅನೇಕ ಟಿವಿ ಶೋಗಳಿಂದ ಪ್ರಖ್ಯಾತಿ. `ಮೈಂಡ್ ದಿ ಮಲ್ಹೋತ್ರಾ' ಸೀರೀಸ್ ನಟನೆಗಾಗಿ ಪ್ರಶಂಸೆ, ಪುರಸ್ಕಾರಗಳು. ನಿರ್ಮಾಪಕಿ, ಪ್ರೆಸೆಂಟರ್, ಲೈಫ್ ಸ್ಟೈಲ್ ಸ್ಟೋರಿ ಟೆಲರ್ ರೂಪದಲ್ಲಿ ವ್ಯಾಪಕ ಐಡೆಂಟಿಟಿ. ವೆಲ್ ನೆಸ್‌ಬಾಡಿ ಪಾಸಿಟಿವಿಟಿ ಕಾನ್ವರ್ಸೇಶನ್ಸ್ ನ ಅತಿ ಪ್ರಭಾವಶಾಲಿ ಡಿಜಿಟಲ್.





