ಧರ್ಮ ಮತ್ತು ಆಚಾರ ವಿಚಾರಗಳ ಹೆಸರಿನಲ್ಲಿ ಯಾವುದೇ ವಿವಾಹವನ್ನು ಎಳೆದಾಡುವ ಬದಲು ಅದ್ಭುತವಾಗಿ ಮಾಡುವುದು ಉತ್ತಮ. ಮದುವೆ ನಿಮ್ಮ ಸ್ಮರಣೆಯಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡಬೇಕೆಂದು ನೀವು ಬಯಸಿದರೆ, ರೀತಿ ಮಾಡಿ......!

ಪ್ರತಿಯೊಬ್ಬರ ಜೀವನದಲ್ಲೂ  ಮದುವೆ ಎಂಬುದು ಅತ್ಯಂತ ಸುಂದರವಾದ ಸಮಯ. ಇದೊಂದು ಮರೆಯಲಾಗದ ಕ್ಷಣಗಳ ಪಯಣ. ಪ್ರತಿಯೊಬ್ಬರೂ ತಮ್ಮ ಕನಸುಗಳು ನನಸಾಗುವುದನ್ನು ನೋಡಲು ಬಯಸುತ್ತಾರೆ. ತಮ್ಮ ದಾಂಪತ್ಯಕ್ಕೆ ಕಾಲಿಡುವ ಮುನ್ನ ತಾವು ಮಾಡಬೇಕಾದ ಕೆಲಸಗಳನ್ನು ಬಹಳ ದಿನಗಳಿಂದ ಕಲ್ಪಿಸಿಕೊಂಡು ನಿರ್ವಹಿಸಲು ಬಯಸುತ್ತಾರೆ.

ಮದುವೆ ಕೇವಲ ಇಬ್ಬರು ವ್ಯಕ್ತಿಗಳ ಮಧ್ಯೆ ಮಾತ್ರ ನಡೆಯುವ ಸಂಬಂಧವಲ್ಲ. ಅದು ಎರಡು ಕುಟುಂಬಗಳ ಒಗ್ಗೂಡುವಿಕೆ. ವಧೂವರರ ಕುಟುಂಬಗಳು ಈ ಮದುವೆಯನ್ನು ಸ್ಮರಣೀಯ ಮತ್ತು ಅದ್ಭುತವಾಗಿಸಲು ಬಯಸುತ್ತಾರೆ. ಆ ಕ್ಷಣಗಳನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಾ ಸಂತಸಪಡಲು ಬಯಸುತ್ತಾರೆ. ನೀವು ಶ್ರೀಮಂತರಾಗಲಿ ಅಥವಾ ಸಾಮಾನ್ಯ ಕುಟುಂಬಕ್ಕೆ ಸೇರಿದವರೇ ಆಗಿರಬಹುದು, ನಿಮ್ಮಲ್ಲಿ ಅಗತ್ಯವಿರುವುದು ಮನಸ್ಸಿನ ಉತ್ಸಾಹ ಮತ್ತು ಸರಿಯಾದ ವ್ಯವಸ್ಥೆ. ಕೆಲವು ಅನನ್ಯವಾದ ಆಲೋಚನೆ ಮತ್ತು ಸೃಜನಶೀಲ ಚಿಂತನೆಗಳಿಂದ ವಿವಾಹದ ಪ್ರತಿ ಕ್ಷಣವನ್ನೂ ಸ್ಮರಣೀಯ ಆಗಿಸಬಹುದು.

ಬನ್ನಿ, ನಿಮ್ಮ ಮನೆಯಲ್ಲಿ ನಡೆಯುವ ವಿವಾಹವನ್ನು ಯಾವ ರೀತಿ ಸ್ಮರಣೀಯ ಹಾಗೂ ಅದ್ಭುತವಾಗಿ ನಡೆಸಬಹುದು ಎಂಬುದನ್ನು ತಿಳಿಯೋಣ :

ಮದುವೆಗಾಗಿ ಪ್ಲಾನಿಂಗ್ಮಾಡಿ

ಮದುವೆಯ ವ್ಯವಸ್ಥೆಗಳನ್ನು ಮಾಡಿಕೊಳ್ಳುವಾಗ ಯಾವ್ಯಾವ ವಿಷಯಗಳು ಗಮನದಲ್ಲಿ ಇರಬೇಕು ಎಂಬುದರ ಬಗ್ಗೆ ನಗರದ ಖ್ಯಾತ  ವೆಡ್ಡಿಂಗ್‌ ಪ್ಲಾನರ್ಸ್‌ ನೀಡುವ ವಿವರಣೆ ಗಮನಿಸೋಣವೇ...?

ಮೊದಲನೆಯದಾಗಿ ಮದುವೆ ತಯಾರಿಗೆ ನೀವು ಕೆಲವು ಯೋಜನೆಗಳನ್ನು ರೂಪಿಸಿಕೊಳ್ಳುವುದು ಬಹಳ ಮುಖ್ಯ.

ನೀವು ಸ್ಥಳೀಯವಾಗಿ ಅಥವಾ ಬೇರೆ ಗಮ್ಯ ಸ್ಥಳದಲ್ಲಿ ವಿವಾಹವಾಗಲು ನಿರ್ಧರಿಸಿದ್ದೀರೆಂಬುದು ಸ್ಪಷ್ಟವಾಗಿರಲಿ. ನಿಮ್ಮ ಬಜೆಟ್ ಪ್ರಕಾರ ಸ್ಥಳ ಮತ್ತು ಅತಿಥಿಗಳ ಪಟ್ಟಿಯನ್ನು ತಯಾರಿಸಿ. ನಿಶ್ಚಿತಾರ್ಥ, ಅರಿಶಿನ, ಸಂಗೀತ, ಮೆಹೆಂದಿ ಸೇರಿದಂತೆ ಮದುವೆಯಲ್ಲಿ ಯಾವ್ಯಾವ ಶಾಸ್ತ್ರ ಸಂಪ್ರದಾಯಗಳನ್ನು ನೆರವೇರಿಸಬೇಕು ಎಂಬುದನ್ನು ನಿರ್ಧರಿಸಿಕೊಳ್ಳಿ. ಸಮಯ ಮತ್ತು ಬಜೆಟ್‌ ಸಮಸ್ಯೆ ಇದ್ದರೆ 2-3 ಕಾರ್ಯಕ್ರಮಗಳನ್ನು ಒಟ್ಟಿಗೆ ಸೇರಿಸಿ ಮಾಡಬಹುದು.

ಪ್ರತಿ ಕಾರ್ಯಕ್ರಮದ ಒಟ್ಟುಗೂಡಿಸುವಿಕೆಯನ್ನು ಮೊದಲೇ ನಿರ್ಧರಿಸಿ. ಇದರ ನಂತರ, ಡೆಕೋರೇಟ್‌, ಎಂಟರ್‌ ಟೈನರ್‌, ಮೇಕಪ್‌ ಆರ್ಟಿಸ್ಟ್, ವಾದ್ಯದವರು, ಕೇಟರಿಂಗ್‌ ಮುಂತಾದವರ ಪಟ್ಟಿ ತಯಾರಿಸಿ. ಈಗ ಎಲ್ಲಾ ಯೋಜನೆ ಮತ್ತು ವ್ಯವಸ್ಥೆಗಳನ್ನು ವೆಡ್ಡಿಂಗ್‌ ಪ್ಲಾನರ್‌ ಗೆ ನಿರ್ವಹಿಸಲು ತಿಳಿಸಿ ಅಥವಾ ಕುಟುಂಬದ ಒಂದಿಬ್ಬರು ಸದಸ್ಯರಿಗೆ ಈ ಎಲ್ಲಾ ವ್ಯವಸ್ಥೆಗಳ ಜವಾಬ್ದಾರಿ ವಹಿಸಿಕೊಡಿ.

IB129900-129900120751220-SM382748

ಮದುವೆ ಕಾರ್ಯಕ್ಕೆ ಸ್ಥಳ ಆಯ್ಕೆ ಮಾಡಿಕೊಳ್ಳುವುದು ಒಂದು ಪ್ರಮುಖ ನಿರ್ಧಾರವಾಗಿದೆ. ನೀವು ಆವರಿಸಿಕೊಳ್ಳುವ ಜಾಗ ಲಾನ್‌, ಪೂಲ್ ‌ಸೈಡ್‌, ಔತಣ ಕೂಟ ಇತ್ಯಾದಿಗಳಂತಹ ಬಹು ಆಯ್ಕೆಗಳನ್ನು ಹೊಂದಿರಬೇಕು ಎಂಬುದು ನೆನಪಿನಲ್ಲಿರಲಿ. ಇದು ಉತ್ತಮ ಸೌಲಭ್ಯಗಳನ್ನು ಹೊಂದಿರಬೇಕು. ಆಹಾರ, ವಿಮರ್ಶೆಗಳು ಸಹ ಉತ್ತಮವಾಗಿರಬೇಕು ಮತ್ತು ಮದುವೆ ಸ್ನೇಹಪರವಾಗಿರಬೇಕು. ಹೆಚ್ಚು ಟ್ರಾಫಿಕ್‌ ಜಾಮ್ ಇರುವ ಪ್ರದೇಶಗಳಾಗಿ ಇರಬಾರದು. ಮೆಟ್ರೋ ಸ್ಟೇಷನ್‌ ಗೆ ಹತ್ತಿರವಾಗಿರುವುದು ಉತ್ತಮ. ಆಗ ನಿಮ್ಮ ಅತಿಥಿಗಳು ಕಾರ್ಯಕ್ರಮದ ಸ್ಥಳ ತಲುಪಲು ಯಾವುದೇ ಸಮಸ್ಯೆ ಎದುರಿಸುವುದಿಲ್ಲ. ಕಾರ್ಪೋರೇಟ್‌ ಕಾರ್ಯಕ್ರಮಗಳನ್ನು ನಿರ್ವಹಿಸುವ ಅನೇಕ ಸಂಸ್ಥೆಗಳು ಮಾರುಕಟ್ಟೆಯಲ್ಲಿವೆ. ಆದರೆ, ಅವರಿಗೆ ವಿವಾಹದ ಕಾರ್ಯಗಳನ್ನು ನಿರ್ವಹಿಸುವ ಹೆಚ್ಚಿನ ಅನುಭವ ಇರುವುದಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ