ಆ್ಯಪಲ್ ಟೀ

ಸಾಮಗ್ರಿ : 2 ಮಾಗಿದ ಸೇಬಿನ ಹೋಳು, ಒಂದಿಷ್ಟು ಗ್ರೀನ್‌ ಟೀ ಬ್ಯಾಗ್ಸ್, 1 ತುಂಡು ಚಕ್ಕೆ, ರುಚಿಗೆ ತಕ್ಕಷ್ಟು ಸಕ್ಕರೆ, ಜೇನುತುಪ್ಪ, ನಿಂಬೆರಸ, ತುಸು ತುರಿದ ಶುಂಠಿ, ಅಗತ್ಯವಿದ್ದಷ್ಟು ನೀರು.

ವಿಧಾನ : ಮೊದಲು ಸೇಬಿನ ಸಿಪ್ಪೆ ಹೆರೆದು, ಹೋಳಾಗಿಸಿ ನೀಟಾಗಿ ಮಿಕ್ಸಿಯಲ್ಲಿ ತಿರುವಿಕೊಳ್ಳಿ. ಇದನ್ನು ಬಿಸಿ ನೀರಿಗೆ ಹಾಕಿ ಕುದಿಸಿರಿ. ಜೊತೆಗೆ ಗ್ರೀನ್‌ ಟೀ ಬ್ಯಾಗ್‌, ಚಕ್ಕೆ, ತುರಿದ ಶುಂಠಿ ಸಹ ಇರಲಿ. 10 ನಿಮಿಷ ಬಿಟ್ಟು ಕೆಳಗಿಸಿ, ನೀಟಾಗಿ ಸೋಸಿಕೊಳ್ಳಿ ಇದಕ್ಕೆ ಸಕ್ಕರೆ, ಜೇನು, ನಿಂಬೆ ರಸ ಬೆರೆಸಿ, ತಕ್ಷಣ ಸವಿಯಲು ಕೊಡಿ.

Cookry-2

ವೆಡ್ಡಿಂಗ್ವೆಲ್ ಕಂ ಡ್ರಿಂಕ್

ಸಾಮಗ್ರಿ : ತುಪ್ಪದಲ್ಲಿ ಹುರಿದು ಪುಡಿ ಮಾಡಿದ ಗೋಡಂಬಿ, ಬಾದಾಮಿ, ಪಿಸ್ತಾ, ದ್ರಾಕ್ಷಿ ತುಸು ತೇದ ಜಾಯಿಕಾಯಿ, ಜಾಪತ್ರೆ, ಕಾದಾರಿದ ಹಾಲು, ಹಾಲಲ್ಲಿ ನೆನೆಸಿದ ಕೇಸರಿ, ಕಾಳು ಮೆಣಸು, ಚಿಟಕಿ ಉಪ್ಪು, ಅರಿಶಿನ, ಏಲಕ್ಕಿಪುಡಿ, ಒಣಶುಂಠಿ ಪುಡಿ, ಒಣ ಗುಲಾಬಿ ದಳಗಳು, ಸಕ್ಕರೆ.

ವಿಧಾನ : ಮಿಕ್ಸಿಗೆ ಎಲ್ಲಾ ಡ್ರೈ ಫ್ರೂಟ್ಸ್, ಹಾಲಲ್ಲಿ ನೆನೆಸಿದ ದ್ರಾಕ್ಷಿ, ಮಸಾಲೆ, ಗುಲಾಬಿ ದಳಗಳೊಂದಿಗೆ ತುಸು ಹಾಲು ಬೆರೆಸಿ ನುಣ್ಣಗೆ ಪೇಸ್ಟ್ ಮಾಡಿ. ನಂತರ ಇದನ್ನು ಅಗತ್ಯವಿದ್ದಷ್ಟು ಕಾದಾರಿದ ಹಾಲಿಗೆ ಬೆರೆಸಿಕೊಂಡು ಸಕ್ಕರೆ ಜೊತೆ ಕದಡುತ್ತಾ ಹದನಾಗಿ ಕಾಯಿಸಿ. ಬಿಸಿ ಬಿಸಿಯಾಗಿ ಇದನ್ನು ಸವಿಯಲು ಕೊಡಿ.

cookry-7

ಮಿಕ್ಸ್ಡ್ ವೆಜ್ಟೊಮೇಟೊ ಸೂಪ್

ಸಾಮಗ್ರಿ : ಮಾಗಿದ 5-6 ಹುಳಿ ಟೊಮೇಟೊ, ತುಸು ಹೆಚ್ಚಿದ ಬೀನ್ಸ್, ಕ್ಯಾರೆಟ್‌, ಸೌತೇಕಾಯಿ, ಬೀಟ್‌ ರೂಟ್‌, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಟೊಮೇಟೊ ಕೆಚಪ್‌, ಬ್ರೆಡ್‌ ಕ್ರೂಟಾನ್ಸ್, ತುಸು ತುಪ್ಪ.

ವಿಧಾನ : ಪ್ರೆಶರ್‌ ಕುಕರ್‌ ನಲ್ಲಿ ಮೊದಲು ತುಪ್ಪ ಬಿಸಿ ಮಾಡಿ ಬ್ರೆಡ್‌ ಚೂರು ಹಾಕಿ ಕರಿದು ತೆಗೆಯಿರಿ. ನಂತರ ಇದಕ್ಕೆ ಧಾರಾಳ ನೀರು ಬೆರೆಸಿ, ಸಣ್ಣಗೆ ಹೆಚ್ಚಿದ ತರಕಾರಿ ಹಾಕಿ ಹದನಾಗಿ ಬೇಯಿಸಿ. ಕೆಳಗಿಳಿಸಿ ಆರಿದ ನಂತರ ಇದನ್ನು ಸೋಸಿ, ವೆಜ್‌ ಸ್ಟಾಕ್ ಬೇರ್ಪಡಿಸಿ. ಅದನ್ನು ಒಲೆಯ ಮೇಲಿರಿಸಿ ಉಪ್ಪು, ಮೆಣಸು, ಕೆಚಪ್‌ ಬೆರೆಸಿ ಮಂದ ಉರಿಯಲ್ಲಿ ಹದನಾಗಿ ಕುದಿಸಿ. ಕೊನೆಯಲ್ಲಿ ಬ್ರೆಡ್‌ ಚೂರು ಬೆರೆಸಿ, ಬಿಸಿ ಬಿಸಿಯಾಗಿ ಊಟಕ್ಕೆ ಮೊದಲು ಸವಿಯಲು ಕೊಡಿ.

cookry-8

ಚಿಕನ್ಸೂಪ್

ಸಾಮಗ್ರಿ : 3-4 ಪೀಸ್‌ ಬೋನ್‌ ಲೆಸ್‌ ಚಿಕನ್‌, ಹೆಚ್ಚಿದ 1 ಆಲೂ, ಅರ್ಧ ಸೌತೇಕಾಯಿ, 2 ಈರುಳ್ಳಿ, 8-10 ಎಸಳು ಬೆಳ್ಳುಳ್ಳಿ, 1 ತುಂಡು ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು.

ವಿಧಾನ : ಮೇಲಿನ ಎಲ್ಲಾ ಪದಾರ್ಥಗಳನ್ನು ಕುಕ್ಕರಿನಲ್ಲಿ ಬೇಯಿಸಿಕೊಂಡು ಕೆಳಗಿಳಿಸಿ. ಚೆನ್ನಾಗಿ ಆರಿದ ನಂತರ ಮಿಕ್ಸಿಗೆ ಹಾಕಿ ಬ್ಲೆಂಡ್‌ ಮಾಡಿ. ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಈ ಮಿಶ್ರಣ ಅದಕ್ಕೆ ಬೆರೆಸಿ, ಉಪ್ಪು ಮೆಣಸು ಸೇರಿಸಿ ಕುದಿಸಿ, ಬಿಸಿ ಬಿಸಿಯಾಗಿ ಸವಿಯಲು ಕೊಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ