ದೈಹಿಕ ಕೊರತೆಯನ್ನು ಈಕೆ ತಮ್ಮ ದೌರ್ಬಲ್ಯ ಆಗಿಸಿಕೊಳ್ಳಲಿಲ್ಲ

ಸ್ಪೋರ್ಟ್ಸ್ ವುಮನ್‌ ಅವಾರ್ಡ್‌

`ಆಕಾಶದಲ್ಲಿ ಒಂದು ರಂಧ್ರ ಇಲ್ಲ ಎಂದವರಾರು? ಸರಿಯಾಗಿ ಗುರಿಯಿಟ್ಟು ಒಂದು ಕಲ್ಲು ಬೀಸಿ ನೋಡಿ!’ ಉ. ಭಾರತದಲ್ಲಿ ಅತಿ ಪ್ರಸಿದ್ಧವಾದ ಈ ನಾಣ್ನುಡಿಯನ್ನು ಶೀತಲ್ ದೇವಿ, ಕೇವಲ 17 ವರ್ಷವಿದ್ದಾಗಲೇ ಚರಿತಾರ್ಥ ಆಗಿಸಿದ್ದಾರೆ. ಆಕೆ ಪ್ಯಾರಿಸ್ ಪ್ಯಾರಾಲಿಂಪಿಕ್‌ 2024ರಲ್ಲಿ ಮಿಕ್ಸ್ಡ್ ಕಾಂಪೌಂಡ್‌ ಆರ್ಚರಿಯಲ್ಲಿ ಕಂಚಿನ ಪದಕ ಗೆದ್ದರು. ಈಕೆಯನ್ನು ಕಂಡು ಎಷ್ಟೋ ಯುವತಿಯರು ಪ್ರೇರಣೆ ಪಡೆದಿದ್ದಾರೆ, ಆತ್ಮವಿಶ್ವಾಸ ಎಂಬುದು ನಮ್ಮ ನಂಬಿಕೆ ಶ್ರದ್ಧೆಗಳಲ್ಲಿ ತುಂಬಿರಬೇಕು.

ಎಷ್ಟೋ ಹುಡುಗಿಯರು ಸ್ಪೋರ್ಟ್ಸ್ ಕುರಿತು ಜಾಗೃತರಾಗಿದ್ದಾರೆ, ಆರ್ಚರಿಯನ್ನು ಬಯಸಿ ತಮ್ಮದಾಗಿಸಿಕೊಂಡಿದ್ದಾರೆ. ಈ ಕಾರಣದಿಂದಲೇ 20ನೇ ಮಾರ್ಚ್‌ ರಂದು, ದೆಹಲಿಯ ಟ್ರಾಂಕೋರ್‌ ಹೌಸ್‌ ನಲ್ಲಿ ಗೃಹಶೋಭಾ ಇನ್‌ ಸ್ಪೈರ್‌ ಅವಾರ್ಡ್ಸ್ ಶೀತಲ್ ದೇವಿಗೆ ಸ್ಪೋರ್ಡ್ಸ್ ಅವಾರ್ಡ್ಸ್ ಇತ್ತು ಸನ್ಮಾನಿಸಲಾಯಿತು.

ಪ್ಯಾರಾಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಪಡೆಯುವುದು ಎಂಬುದು ಬಹಳ ಸ್ವಾರಸ್ಯಕರ ವಿಷಯ. ಈಕೆ ಭಾರತದ ಅತಿ ಕಿರಿಯ ಪ್ಯಾರಾಲಿಂಪಿಕ್‌ ಮೆಡಲಿಸ್ಟ್ ಎಂಬ ಕೀರ್ತಿಗೆ ಭಾಜನರು. ಇಡೀ ಪ್ಯಾರಾಲಿಂಪಿಕ್‌ ನ ಇತಿಹಾಸದಲ್ಲೇ ದಿ ಮೋಸ್ಟ್ ಸಕ್ಸೆಸ್‌ ಫುಲ್ 2ನೇ ಆರ್ವಿಸ್‌ ಆರ್ಚರ್‌ ಎನಿಸಿದ್ದಾರೆ.

ಇದು ಖಂಡಿತಾ ಸಾಧಾರಣ ವಿಷಯವಲ್ಲ. ಶೀತಲ್ ಜಮ್ಮು ಕಾಶ್ಮೀರದ ಸಣ್ಣ ಹಳ್ಳಿಯ ಲೋಯಿಧರ್‌ ಗೆ ಸೇರಿದಾಕೆ. ಅಸಲಿ ಟ್ರಾಜಿಡಿ ಅಂದ್ರೆ, ಈಕೆ ಮೂಲತಃ ಪೇಕೋಮೇಟಿಯಾದಂಥ ಗಂಭೀರ ಕಾಯಿಲೆಗೆ ತುತ್ತಾಗಿದ್ದರು. ಇದರಿಂದಾಗಿ ಕೈಕಾಲುಗಳ ಬೆಳವಣಿಗೆ 100% ನಿಂತುಹೋಗುತ್ತದೆ. ಈಕೆ ಮುಂದೆ ಬೆಳೆದಂತೆಲ್ಲ, ಅವರ ಕೈಗಳು ಬೆಳೆಯಲೇ ಇಲ್ಲ.

ಆತ್ಮವಿಶ್ವಾಸವೇ ಮೂಲಶಕ್ತಿ ಆಯ್ತು

ಹಾಗೆಂದ ಮಾತ್ರಕ್ಕೆ ಆಕಾಶ ಮುಟ್ಟಬೇಕು ಎನ್ನುವವರು ಸುಮ್ಮನೆ ಕೂಡುವರೇ? ಮುಂದೆ ಶೀತಲ್ ಆಕಾಶಕ್ಕೆ ಏಣಿ ಹಾಕಿದರು ಎಂದರೆ ಉತ್ಪ್ರೇಕ್ಷೆಯಲ್ಲ. ಜೊತೆಗೆ ಈಕೆ ತನ್ನ ದೈಹಿಕ ಅಸಹಾಯಕತೆಯನ್ನು ತಮ್ಮ ದೌರ್ಬಲ್ಯ ಆಗಿಸಿಕೊಳ್ಳಲಿಲ್ಲ, ಬದಲಿಗೆ `ಸಾಹಸೇ ಧೈರ್ಯೇ ಲಕ್ಷ್ಮಿ!’ ಎಂಬಂತೆ ತಮ್ಮ ಮನದ ಆತ್ಮವಿಶ್ವಾಸವನ್ನೇ ಮೂಲಶಕ್ತಿ ಆಗಿಸಿಕೊಂಡರು.

ಈ ಕಾರಣದಿಂದಲೇ 2023ರಲ್ಲಿ ವರ್ಲ್ಡ್ ಆರ್ಚರಿ ಪ್ಯಾರಾ ಚಾಂಪಿಯನ್‌ ಶಿಪ್‌ ನಲ್ಲಿ ಆಕೆ ಇಂಟರ್‌ ನ್ಯಾಶನಲಿ ಡೆಬ್ಯು ಆಗಿ ಸಿಲ್ವರ್ ಮೆಡಲ್ ಗೆದ್ದುಕೊಂಡರು. ಆಕೆ ಈ ಪದಕವನ್ನು ಈ ಚಾಂಪಿಯನ್‌ ಶಿಪ್‌ ನಲ್ಲಿ ಗೆದ್ದಂಥ ಮೊದಲ ಆರ್ವಿ‌ಸ್‌ಮಹಿಳಾ ಆರ್ಚರ್ ಎನಿಸಿದರು!

ಕ್ರೀಡೆಯಲ್ಲಿ ಸಾಧನೆ ಮಾಡಬೇಕೆನ್ನುವ ಅವರ ಈ ಆತ್ಮಸ್ಥೈರ್ಯಕ್ಕೆ ಯಾರಾದರೂ ತಲೆದೂಗಬೇಕಾದ್ದೇ! 2023ರಲ್ಲಿ ಆಕೆ ಏಷ್ಯಾ  ಪ್ಯಾರಾ ಗೇಮ್ಸ್ ನಲ್ಲಿ ಗೋಲ್ಡ್ ಮೆಡಲ್ ಗೆದ್ದರು. ಈ ಜರ್ನಿ ಖಂಡಿತಾ ಸುಲಭದ್ದಲ್ಲ. ಇದರ ಹಿಂದಿನ ಸಂಘರ್ಷ  ಎದುರಿಸಿದವರಿಗಷ್ಟೇ ಗೊತ್ತು.

ಶೀತಲ್ ಚಿಕ್ಕವಳಿದ್ದಾಗ, ಆಕೆಯ ಅಚ್ಚುಮೆಚ್ಚಿನ ಆಟ ಅಂದ್ರೆ, ಮರಕೋತಿ! ಮರವೇರುವ ಚಾಕಚಕ್ಯತೆ ಆಕೆಯ ದೇಹದ ಮೇಲ್ಭಾಗವನ್ನು ಸದೃಢವಾಗಿಸಿತು. ಪ್ಯಾರಾ ಆರ್ಚರಿಯಲ್ಲಿ ಶೀತಲ್ ದೇವಿ ಕೆರಿಯರ್‌ ಮುಂದುವರಿಸಲು, ಇಂಡಿಯನ್‌ ಆರ್ಮಿ ಸಹ ಪ್ರಧಾನ ಪಾತ್ರ ವಹಿಸಿತು. 2021ರಲ್ಲಿ ಜಮ್ಮು ಕಾಶ್ಮೀರದ ಕಿಶ್‌ ತಾಡಾದಲ್ಲಿ ಇಂಡಿಯನ್‌ ಆರ್ಮಿ ಒಂದು ಯೂಥ್‌ ಆ್ಯಕ್ಟಿವಿಟಿ ಪ್ರೋಗ್ರಾಂ ಅರೇಂಜ್‌ ಮಾಡಿತ್ತು. ಅಲ್ಲಿ ಈಕೆ ತನ್ನ ಪ್ರತಿಭೆ ಮೆರೆದು ಸೈ ಎನಿಸಿಕೊಂಡರು.

ಈಕೆಯ ಕೋಚ್‌ ಆರಂಭದಲ್ಲಿ ಇವರನ್ನು ಪ್ರೋಸ್ಥೆಟಿಕ್ಸ್ ಜೊತೆ ಪ್ರಾಕ್ಟೀಸ್‌ ಮಾಡುವ ಪ್ಲಾನ್‌ ನೀಡಿದರು. ಆದರೆ ಅದು ಕಾರ್ಯಗತ ಆಗಲಿಲ್ಲ. ಒಂದಿಷ್ಟು ರಿಸರ್ಚ್‌ ಮಾಡಿದಾಗ, ಪ್ಯಾರಾ ಪ್ಲೇಯರ್‌ ಮ್ಯಾಟ್‌ ಸ್ಟೂರ್‌ ವುಮೆನ್‌ ರ ಕುರಿತು ಅರಿತುಕೊಂಡರು. ಆತ ಸಹ ಆರ್ವಿ‌ಸ್‌ ಆರ್ಚರ್‌. ಆತ ಲಂಡನ್‌ 2012 ಪ್ಯಾರಾಲಿಂಪಿಕ್ಸ್ ನಲ್ಲಿ ರಜತ ಪದಕ ಗೆಲ್ಲಲು ತನ್ನ ಕಾಲುಗಳನ್ನಷ್ಟೆ ಬಳಸಿಕೊಂಡಿದ್ದ.

ಒಂದು ಮುಖ್ಯ ತಿರುವು

ಇದಂತೂ ಶೀತಲ್ ಪಾಲಿಗೆ ಟರ್ನಿಂಗ್‌ ಪಾಯಿಂಟ್‌. ಆಕೆ ಅದೇ ವಿದ್ಯೆ ತನ್ನದಾಗಿಸಿಕೊಂಡು ಮ್ಯಾಟ್‌ ತರಹವೇ ಆಡಿದರು. ಇದರಲ್ಲಿ ಕಾಲು, ಅದರ ಬೆರಳುಗಳ ನೆರವಿನಿಂದಲೇ ಆರ್ಚರಿ ಹಿಡಿದಿಟ್ಟು, ಕಮಾನನ್ನು ಹೆಗಲಿನಿಂದ ಎಳೆಯಬೇಕಷ್ಟೆ!

ಶೀತಲ್ ಮಾಜಿ ಆರ್ಚರ್‌ ಪ್ಲೇಯರ್‌ ಕುಲದೀಪ್‌ ವೇದನಾನ್‌ ರ ಅಕ್ಯಾಡೆಮಿ ಸೇರಿದರು. ಅಲ್ಲಿಂದ ಸತತ ಅಭ್ಯಾಸ ಶುರು. ಇಂದಿನ ಆಧುನಿಕ ಯುವ ಪೀಳಿಗೆಗೆ ಶೀತಲ್ ಒಬ್ಬ ಮಾದರಿ ಮಾಡೆಲ್ ಎಂಬುದರಲ್ಲಿ 2 ಮಾತಿಲ್ಲ. ಯಾವ ಪರಿಸ್ಥಿತಿಯಿಂದ ಆಕೆ ಬಂದವರು, ಏನೆಲ್ಲ ಸಂಕಷ್ಟ ಸಹಿಸಿದರು, ಇದನ್ನೆಲ್ಲ ಆಧುನಿಕರು ಕಲಿಯಬೇಕಷ್ಟೆ. ಪರಿಸ್ಥಿತಿ ಏನೇ ಇರಲಿ, ಶ್ರದ್ಧೆ ಒಂದಿದ್ದರೇ ಯಾವುದೂ ಅಸಾಧ್ಯವಲ್ಲ!

– ರೋಹಿತ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ