ಶರತ್ ಚಂದ್ರ

ಕಿಸ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿ ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿ ಈಗ ಬಾಲಿವುಡ್ ನಲ್ಲಿ ಕೂಡ ಬ್ಯುಸಿಯಾಗಿರುವ ಕನ್ನಡತಿ ಶ್ರೀಲೀಲಾಳನ್ನು ಇನ್ನು ಮುಂದೆ ಡಾ. ಶ್ರೀಲೀಲಾ ಎಂದು ಕರೆಯಬೇಕಾಗುತ್ತದೆ. ಚಿತ್ರರಂಗದಲ್ಲಿ ಗೌರವ ಡಾಕ್ಟರೇಟ್ ಪಡೆಯುವುದು ಸರ್ವೇ ಸಾಮಾನ್ಯ.

1000870167

ಆದರೆ ಶ್ರೀಲೀಲಾ ಆರು ವರ್ಷ MBBS ಓದಿ ಪುಣೆಯ ಡಿ. ವೈ. ಪಾಟೀಲ್ ಮೆಡಿಕಲ್ ಕಾಲೇಜುನಲ್ಲಿ ಪಾಸು ಮಾಡಿ ಡಾಕ್ಟರ್ ಆಗಿದ್ದಾಳೆ.ತನ್ನ 24 ನೇ ವಯಸ್ಸಿಗೆ ಸಿನಿಮಾದಲ್ಲಿ ಅಭಿನಯಿಸಿ ಎಕ್ಸಾಮ್ ಪಾಸ್ ಮಾಡಿರುವ ಶ್ರೀಲೀಲಾ ಗೆ ಅಭಿಮಾನಿಗಳಿಂದ ಹಾಗೂ ಚಿತ್ರರಂಗದಿಂದ ಮೆಚ್ಚುಗೆಯ ಮಹಪೂರ ಹರಿದು ಬರುತ್ತಿದೆ.

1000870168

ಆಕೆಯ ಘಟಿಕೋತ್ಸವದ ಚಿತ್ರಗಳು ಇಂಟರ್ನೆಟ್ನಲ್ಲಿ ಹರಿದಾಡುತ್ತಿವೆ. ಶ್ರೀಲೀಲಾ ತಾಯಿ ಕೂಡ ಡಾಕ್ಟರ್ ಆಗಿದ್ದು ಸ್ತ್ರೀ ರೋಗ ತಜ್ಞೆಯಾಗಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತಾಯಿಯ ಆಸೆಯಂತೆ ಚಿತ್ರರಂಗ ದಲ್ಲಿ ಅವಕಾಶದ ಮಹಾ ಪೂರಾ ಹರಿದು ಬರುತ್ತಿದ್ದರೂ ಕೂಡ ವೈದ್ಯಕೀಯ ಪದವಿ ಯನ್ನು ಶ್ರೀಲೀಲಾ ಪೂರೈಸಿದ್ದಾರೆ.

1000870152

ಕನ್ನಡದ ಕಿಸ್ ಮತ್ತು ಬೈ ಟೂ ಲವ್ ಭರಾಟೆ  ಚಿತ್ರದ ನಂತರ ಪೆಳ್ಳಿ ಸಂದಡಿ ಚಿತ್ರದ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿದ ಶ್ರೀ ಲೀಲಾ ಮತ್ತೆ ಕನ್ನಡದತ್ತ ಮುಖ ಮಾಡಲಿಲ್ಲ. ಕಳೆದ ವರ್ಷ ಜೂನಿಯರ್ ಎನ್ನುವ  ದ್ವಿಭಾಷ ಚಿತ್ರದಲ್ಲಿ ನಟಿಸಿದ್ದರು ಅಷ್ಟೇ.

ಬಾಲಿವುಡ್ನಲ್ಲಿ ಆಶೀಕಿ 3 ಸೇರಿ ಒಂದಷ್ಟು  ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಶ್ರೀಲೀಲಾ ಗೆ ಸ್ಕೆತಸ್ಕೋಪ್ ಹಾಕುವಷ್ಟು ಟೈಮ್ ಇರೋದಿಲ್ಲ ಅನ್ನೋದು ಸತ್ಯ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ