ಬೇಸಿಗೆಯ ದಿನಗಳಲ್ಲಿ ಬೆವರು ನಿಮ್ಮ ಅಲಂಕಾರವನ್ನು ಬಸವಳಿಯದಂತೆ ಮಾಡಲು ಈ ಸಲಹೆ ಅನುಸರಿಸಿ :

ಮೊದಲು ನಿಮ್ಮ ಮುಖವನ್ನು ಉತ್ತಮ ಫೇಸ್‌ವಾಶ್‌ನಿಂದ ಸ್ವಚ್ಛಗೊಳಿಸಿ. ನಂತರ ಕೂಲ್ ‌ಕ್ಲೆನ್ಸಿಂಗ್‌ ಮಿಲ್ಕ್ ನಿಂದ ಮುಖ, ಕುತ್ತಿಗೆ, ಕಿವಿಗಳನ್ನು ಶುಭ್ರಗೊಳಿಸಿ. ನಂತರ ತಣ್ಣೀರಿನಿಂದ ತೊಳೆಯಿರಿ. 1-2 ನಿಮಿಷಗಳ ನಂತರ ಐಸ್‌ ತುಂಡನ್ನು ಮುಖ, ಕುತ್ತಿಗೆ, ಕಿವಿಗಳೆಲ್ಲ ಕಡೆ ಸವರಿಕೊಳ್ಳಿ, ಆಗ ಚರ್ಮದಲ್ಲಿ ಆರ್ದ್ರತೆ ಕೂಡುತ್ತದೆ. ಹೀಗೆ ಮಾಡಿದ ನಂತರ ಮೇಕಪ್‌ಮಾಡಿಕೊಳ್ಳುವುದರಿಂದ ಅದು ಬೆವರಿನಿಂದ ಹರಿದು ಹೋಗುವುದಿಲ್ಲ.

ಈಗ ಯಾವುದಾದರೂ ಕೂಲ್ ‌ಫೇರ್‌ನೆಸ್‌ ಕ್ರೀಮಿಗೆ 2 ಹನಿ ಫೌಂಡೇಶನ್‌ ಬೆರೆಸಿ, ಕುತ್ತಿಗೆ ಮುಖದ ಮೇಲೆ ನಿಧಾನವಾಗಿ ಒಂದೇ ದಿಕ್ಕಿನಲ್ಲಿ ಹಚ್ಚಬೇಕು. 2 ನಿಮಿಷ ಬಿಟ್ಟು ಕಾಂಪ್ಯಾಕ್ಟ್ ಹಚ್ಚಬೇಕು. ಹೆಚ್ಚುವರಿ ಪೌಡರ್‌ನ್ನು ಹತ್ತಿಯಿಂದ ಒರೆಸಿ ತೆಗೆದುಬಿಡಿ. ನಂತರ ಕೆನ್ನೆ ಮೇಲೆ ತೆಳುವಾಗಿ ರೂರ್‌ ಹಚ್ಚಬೇಕು.

ಕಾಡಿಗೆ ಇಷ್ಟವೆಂದರೆ ಹಚ್ಚಿಕೊಳ್ಳಿ. ಏಕೆಂದರೆ ಇದು ಗೌರವರ್ಣ ಅಥವಾ ಶ್ಯಾಮಲ ವರ್ಣದವರು ಇಬ್ಬರಿಗೂ ಚೆನ್ನಾಗಿ ಒಪ್ಪುತ್ತದೆ. ಅದು ಕಂಗಳ ಹೊರಗೆ ಇಣುಕದಂತೆ ಎಚ್ಚರಿಕೆಯಿಂದ ಬಳಸಿರಿ.

ಈ ಬೇಸಿಗೆಯಲ್ಲಿ ತುಟಿಗಳಿಗೆ ಲೈಟ್‌ ಕಲರ್‌ ಲಿಪ್‌ಸ್ಟಿಕ್‌ ಬಳಸಬೇಕು. ಇದನ್ನು ಹಚ್ಚುವ ಮೊದಲು ತುಟಿಗಳಿಗೆ ಐಸ್‌ ತೀಡಿರಿ. ನಂತರ ಬ್ರಶ್‌ನಿಂದ ತುಟಿಗಳ ಶೇಪ್‌ ಸರಿಪಡಿಸಿ, ಲಿಪ್‌ಸ್ಟಿಕ್‌ ಹಚ್ಚಬೇಕು. ಬಿಸಿಲೇರಿದರೂ ಅದು ಹರಡುವುದಿಲ್ಲ.

ಮುಖದ ಆಕಾರಕ್ಕೆ ತಕ್ಕಂತೆ ಹೇರ್‌ ಸ್ಟೈಲ್ ‌ಮಾಡಿಕೊಳ್ಳಿ. ಗುಂಡಗಿನ ಮುಖಕ್ಕೆ ನಡುವೆ ಬೈತಲೆಯ ಶೈಲಿ, ಮಿನಿ ಅಥವಾ ಉದ್ದನೆ ಪಫ್‌ ಮಾಡಿಕೊಳ್ಳಿ.

ನಿಮ್ಮ ಮೈ ಬಣ್ಣಕ್ಕೆ ಅನುಸಾರವಾಗಿ ಒಡವೆಗಳನ್ನು ಆರಿಸಿ. ನಿಮ್ಮದು ಶ್ಯಾಮಲ ವರ್ಣವಾದರೆ ಬೆಳ್ಳಿ, ವಜ್ರದ ಆಭರಣ ಧರಿಸಿ. ನಿಮ್ಮದು ಗೌರವರ್ಣವಾದರೆ, ಚಿನ್ನದ ಆಭರಣ ಧರಿಸಿ. ಈ ಬೇಸಿಗೆಗೆ ಮುತ್ತಿನ ಆಭರಣ ಹೆಚ್ಚು ಸೂಕ್ತ. ಬೆಳ್ಳಿ ಮತ್ತು ಮುತ್ತಿನ ಆಭರಣಗಳು ಶೀತಲತೆಯ ಅನುಭೂತಿ ನೀಡುತ್ತವೆ. ಅದರಿಂದ ಚರ್ಮಕ್ಕೆ ಹಿತಕರ ಎನಿಸುತ್ತದೆ. ಭಾರಿ ಒಡವೆಗಳನ್ನು ಧರಿಸದಿರಿ.

ನಿಮ್ಮ ಉಡುಗೆ ಸಹ ಮೈ ಬಣ್ಣ ಹಾಗೂ ನಿಮ್ಮ ಎತ್ತರದ ಅನುಸಾರ ಇರಲಿ. ಗೌರವರ್ಣದವರು ಡಾರ್ಕ್‌ ಬಣ್ಣಗಳಾದ ಕೆಂಪು, ಮೆರೂನ್‌ ಮುಂತಾದ ಹಾಗೂ ಶ್ಯಾಮಲ ವರ್ಣದವರು ಗುಲಾಬಿ, ಹಳದಿ, ಲೈಟ್‌ ರೆಡ್‌, ಕಿತ್ತಳೆ, ನೀಲಿ ಇತ್ಯಾದಿ ಆರಿಸಬೇಕು. ಈ ಬೇಸಿಗೆಯಲ್ಲಿ ಹತ್ತಿ, ಖಾದಿಯ ಫ್ಯಾಬ್ರಿಕ್ಸ್ ನ ಲೈಟ್‌ ಕಲರ್‌ ಆರಿಸುವುದೇ ಸೂಕ್ತ. ಬಿಳಿ ಬಣ್ಣ ಎಲ್ಲರಿಗೂ ಒಪ್ಪುತ್ತದೆ.

ಅರ್ಚನಾ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ