ಮುಖ ನಮ್ಮ ವ್ಯಕ್ತಿತ್ವದ ಕನ್ನಡಿಯಾಗಿದೆ. ಈ ಕನ್ನಡಿಯನ್ನು ಕಲೆಗಳಿಲ್ಲದೆ ಸುಂದರವಾಗಿ ಮಾಡಲು ಮೇಕಪ್‌ನ ಸರಿಯಾದ ತಿಳಿವಳಿಕೆ ಅಗತ್ಯ. ಯಾವುದೇ ಮೇಕಪ್‌ ಬೇಸ್‌ನಿಂದ ಆರಂಭವಾಗುತ್ತದೆ. ಹೀಗಾಗಿ ಅದನ್ನು ಸ್ಕಿನ್‌ನ ಬ್ಯಾಕ್‌ ಡ್ರಾಪ್‌ ಎನ್ನಲಾಗಿದೆ. ಅದು ಮೇಕಪ್‌ ಮಾಡಲು ಪರ್ಫೆಕ್ಟ್ ಸ್ಕಿನ್‌ ಕೊಡುತ್ತದೆ. ನಾವೆಲ್ಲರೂ ಸಾಮಾನ್ಯವಾಗಿ ನಮ್ಮ ಸ್ಕಿನ್‌ಟೋನ್‌ಗೆ ಅನುಗುಣವಾಗಿ ಬೇಸ್‌ ಆರಿಸಿಕೊಳ್ಳುತ್ತೇವೆ. ಆದರೆ ಪರ್ಫೆಕ್ಟ್ ಸ್ಕಿನ್‌ಗಾಗಿ ನಿಮ್ಮ ಬೇಸ್‌ ನಿಮ್ಮ ಸ್ಕಿನ್‌ಗೆ ತಕ್ಕಂತೆ ಇರಬೇಕು.

ಬೇಸ್‌ನ ಆಯ್ಕೆ ಹೇಗೆ ಮಾಡಬೇಕೆಂದು ತಿಳಿಯೋಣ ಬನ್ನಿ.

ಬೇಸ್ಫಾರ್ಡ್ರೈ ಸ್ಕಿನ್

ಒಂದು ವೇಳೆ ನಿಮ್ಮ ಸ್ಕಿನ್‌ ಡ್ರೈ ಆಗಿದ್ದರೆ ನೀವು ಟಿಂಟೆಡ್‌ ಮಾಯಿಶ್ಟರೈಸರ್‌, ಕ್ರೀಂ ಬೇಸ್ಡ್ ಫೌಂಡೇಶನ್‌ ಅಥವಾ ಸೂಫ್ಲೆ ಉಪಯೋಗಿಸಬಹುದು.

ಟಿಂಟೆಡ್ಮಾಯಿಶ್ಚರೈಸರ್

ಒಂದು ವೇಳೆ ನಿಮ್ಮ ತ್ವಚೆ ಸ್ವಚವಾಗಿ, ಕಲೆಗಳಿಲ್ಲದೆ, ಕಾಂತಿಯುತವಾಗಿದ್ದರೆ ಬೇಸ್‌ ತಯಾರಿಸಲು ಟಿಂಟೆಡ್‌ ಮಾಯಿಶ್ಚರೈಸರ್ ಮಾತ್ರ ಉಪಯೋಗಿಸಿ. ಅದನ್ನು ಹಚ್ಚುವುದು ಬಹಳ ಸುಲಭ. ಮಾಯಿಶ್ಚರೈಸರ್‌ನ ಕೆಲವು ಹನಿಗಳನ್ನು ತೆಗೆದುಕೊಂಡು ಬೆರಳುಗಳಿಂದ ಮುಖದ ಮೇಲೆ ಅಲ್ಲಲ್ಲಿ ಡಾಟ್ಸ್ ಮಾಡಿ ಸಮಾನವಾಗಿ ಹರಡಿ. ಇದು ಎಸ್‌ಪಿಎಫ್‌ ಅಂದರೆ ಸನ್‌ ಪ್ರೊಟೆಕ್ಷನ್‌ ಫ್ಯಾಕ್ಟರ್‌ನೊಂದಿಗೂ ಇರುತ್ತದೆ. ಅದರಿಂದಾಗಿ ತ್ವಚೆಗೆ ಸುರಕ್ಷತೆ ಸಿಗುತ್ತದೆ. ಜೊತೆಗೆ ಇದು ನಮ್ಮ ತ್ವಚೆಗೆ ಜೋರು ಗಾಳಿ ಹಾಗೂ ಇತರ ಕಾರಣಗಳಿಂದಾಗುವ ಡ್ರನೆಸ್‌ನಿಂದ ರಕ್ಷಿಸಿ ಮಾಯಿಶ್ಚರೈಸ್‌ ಕೂಡ ಮಾಡುತ್ತದೆ.

ಕ್ರೀಂ ಬೇಸ್ಡ್ ಫೌಂಡೇಶನ್

ಇದು ಸ್ಕಿನ್‌ನ ಶುಷ್ಕತನವನ್ನು ಕಡಿಮೆಗೊಳಿಸಿ ಅದನ್ನು ಮಾಯಿಶ್ಚರೈಸ್‌ ಮಾಡುತ್ತದೆ. ಅದು ಡ್ರೈ ಸ್ಕಿನ್‌ ಇರುವವರಿಗೆ ಒಳ್ಳೆಯದು. ಅದನ್ನು ಹಚ್ಚುವುದರಿಂದ ಸ್ಕಿನ್‌ಗೆ ಪ್ರಾಪರ್‌ ಮಾಯಿಶ್ಚರ್‌ ಸಿಗುತ್ತದೆ. ಅದನ್ನು ಉಪಯೋಗಿಸುವುದೂ ಸುಲಭ. ಸ್ಪಾಚುರಾದಿಂದ ಕೊಂಚ ಬೇಸ್‌ನ್ನು ಕೈಗಳಲ್ಲಿ ತೆಗೆದುಕೊಂಡು ಸ್ಪಂಜ್‌ ಅಥವಾ ಬ್ರಶ್‌ನ ಸಹಾಯದಿಂದ ಇಡೀ ಮುಖದ ಮೇಲೆ ಸಮಾನವಾಗಿ ಹಚ್ಚಿ. ಇದನ್ನು ಸೆಟ್‌ ಮಾಡಲು ಪೌಡರ್‌ನ ಒಂದು ಪದರ ಹಚ್ಚುವುದು ಅಗತ್ಯ. ಅದರಿಂದ ಬೇಸ್‌ ಹೆಚ್ಚು ಹೊತ್ತು ಅಂಟಿಕೊಳ್ಳುತ್ತದೆ.

ಸೂಫ್ಲೆ

ಇದು ಬಹಳ ಹಗುರವಾಗಿದ್ದು ಮುಖದ ಮೇಲೆ ಲೈಟ್‌ ಕವರೇಜ್‌ ಕೊಡುತ್ತದೆ. ಸೂಫ್ಲೆ ಸ್ಪಾಚುರಾದ ಸಹಾಯದಿಂದ ಕೈಗಳಲ್ಲಿ ಕೊಂಚ ತೆಗೆದುಕೊಳ್ಳಿ. ನಂತರ ಬ್ರಶ್‌ ಅಥವಾ ಸ್ಪಂಜಿನ ಸಹಾಯದಿಂದ ಇಡೀ ಮುಖದ ಮೇಲೆ ಸಮಾನವಾಗಿ ಹಚ್ಚಿ.

ಬೇಸ್ಮತ್ತು ಆಯ್ಲಿ ಸ್ಕಿನ್

ನಿಮ್ಮ ಸ್ಕಿನ್‌ ಆಯ್ಲಿ ಆಗಿದ್ದು, ಹೆಚ್ಚು ಬೆವರು ಬರುತ್ತಿದ್ದರೆ ಟೂ ವೇ ಕೇಕ್‌ನ್ನು ಉಪಯೋಗಿಸುವುದು ಒಳ್ಳೆಯದು. ಏಕೆಂದರೆ ಅದು ವಾಟರ್‌ ಪ್ರೂಫ್‌ ಬೇಸ್‌. ಅದಲ್ಲದೆ, ನಿಮ್ಮ ಸ್ಕಿನ್‌ಗೆ ಪ್ಯಾನ್‌ ಸ್ಟಿಕ್‌ ಮತ್ತು ಮೂಸ್‌ ಕೂಡ ಉಪಯೋಗಿಸಬಹುದು.

ಪ್ಯಾನ್ಸ್ಟಿಕ್

ಇದು ಕ್ರೀಮೀ ಆಗಿದ್ದು ಸ್ಕಿನ್‌ನ್ನು ಮಾಯಿಶ್ಚರೈಸ್‌ ಮಾಡುತ್ತದೆ. ಜೊತೆಗೆ ವಾಟರ್‌ ಪ್ರೂಫ್‌ ಆಗಿರುವುದರಿಂದ ಆಯ್ಲಿ ಸ್ಕಿನ್‌ಗೆ ಒಳ್ಳೆಯದು.

ಟೂ ವೇ ಕೇಕ್

ಇದು ಕ್ವಿಕ್‌ ವಾಟರ್‌ ಪ್ರೂಫ್‌ಬೇಸ್‌ ಆಗಿದೆ. ಇದನ್ನು ಪರ್ಸ್‌ನಲ್ಲೂ ಕ್ಯಾರಿ ಮಾಡಬಹುದು. ಎಲ್ಲಿಯಾದರೂ ಟಚ್‌ ಅಪ್ ಕೊಡಬಹುದು. ಟೂ ವೇ ಕೇಕ್‌ನೊಂದಿಗೆ ಸ್ಪಂಜ್‌ ಸಿಗುತ್ತದೆ.

ಇದನ್ನು ಬೇಸ್‌ನಂತೆ ಉಪಯೋಗಿಸಲು ಸ್ಪಂಜ್‌ನ್ನು ಒದ್ದೆ ಮಾಡಿ ಇಡೀ ಮುಖದ ಮೇಲೆ ಹರಡಿ. ಟಚ್‌ ಅಪ್‌ ಕೊಡಲು ಒಣಗಿದ ಸ್ಪಂಜ್‌ ಉಪಯೋಗಿಸಿ. ಟೂ ವೇ ಕೇಕ್‌ ನಿಮ್ಮ ಸ್ಕಿನ್‌ಗೆ ಮ್ಯಾಚ್‌ ಆಗುತ್ತದೆಯೇ ಎಂದು ಗಮನಿಸಿ.

ಮೂಸ್

ಮೂಸ್‌ನ ಉಪಯೋಗ ಆಯಿಲಿ ಸ್ಕಿನ್‌ ಇರುವವರಿಗೆ ಬಹಳ ಉಪಯುಕ್ತವಾಗಿದೆ. ಅದನ್ನು ಮುಖಕ್ಕೆ ಹಚ್ಚಿದ ಕೂಡಲೇ ಪೌಡರ್‌ರೂಪದಲ್ಲಿ ಬದಲಾಗುತ್ತದೆ. ಆಗ ಬೆವರು ಬರುವುದಿಲ್ಲ. ಇದು ಹೆಚ್ಚುವರಿ ಆಯಿಲ್‌ನ್ನು ತೆಗೆದು ಫೇಸ್‌ಗೆ ಮ್ಯಾಟ್‌ ಫಿನಿಶ್‌ ಮತ್ತು ಲೈಟ್‌ ಲುಕ್‌ ಕೊಡುತ್ತದೆ. ಇದನ್ನು ಕೈಗಳಲ್ಲಿ ತೆಗೆದುಕೊಂಡು ಸ್ಪಂಜ್‌ ಅಥವಾ ಬ್ರಶ್‌ನ ಸಹಾಯದಿಂದ ಮುಖಕ್ಕೆ ಸಮಾನವಾಗಿ ಹಚ್ಚಿ.

ಬೇಸ್ಮತ್ತು ನಾರ್ಮಲ್ ಸ್ಕಿನ್

ನಿಮ್ಮ ಸ್ಕಿನ್‌ ನಾರ್ಮಲ್ ಆಗಿದ್ದರೆ ಫೌಂಡೇಶನ್‌ ಮತ್ತು ಕಾಂಪ್ಯಾಕ್ಟ್ ನಿಮಗೆ ಒಳ್ಳೆಯ ಆಪ್ಶನ್‌ ಆಗಿದೆ.

ಫೌಂಡೇಶನ್

ಇದು ಲಿಕ್ವಿಡ್‌ ರೂಪದಲ್ಲಿರುತ್ತದೆ. ಈಗ ಮಾರ್ಕೆಟ್‌ನಲ್ಲಿ ಪ್ರತಿ ಸ್ಕಿನ್‌ನ ಲೆಕ್ಕದಲ್ಲಿ ಬಹಳಷ್ಟು ಶೇಡ್‌ಗಳಲ್ಲಿ ಸಿಗುತ್ತವೆ. ಅದನ್ನು ಹಚ್ಚಿದ ಕೂಡಲೇ ಸ್ಕಿನ್‌ ಒಂದೇ ರೀತಿಯಲ್ಲಿ ಕಂಡುಬರುತ್ತವೆ. ಫೌಂಡೇಶನ್‌ ನಿಮ್ಮ ಸ್ಕಿನ್‌ಗೆ ಮ್ಯಾಚ್‌ ಮಾಡುತ್ತಾ ಒಂದು ಶೇಡ್ ಫೇರ್‌ ಹಚ್ಚಿ. ಇದನ್ನು ಕೈಗಳಲ್ಲಿ ತೆಗೆದುಕೊಂಡು ಇಂಡೆಕ್ಸ್ ಫಿಂಗರ್‌ನಿಂದ ಹಣೆ, ಮೂಗು, ಕೆನ್ನೆ, ಗದ್ದದ ಮೇಲೆ ಡಾಟ್ಸ್ ಇಡಿ.

ನಂತರ ಸ್ಪಂಜ್‌ ಅಥವಾ ಬ್ರಶ್‌ ಸಹಾಯದಿಂದ ಬ್ಲೆಂಡ್‌ ಮಾಡಿ. ಬೇಕಾದರೆ ಕೈಗಳನ್ನೂ ಬಳಸಬಹುದು. ಇದನ್ನು ಸೆಟ್‌ ಮಾಡಲು ಪೌಡರ್‌ನ ಒಂದು ಪದರ ಹಚ್ಚುವುದು ಅಗತ್ಯ. ಅದರಿಂದ ಬೇಸ್‌ ಹೆಚ್ಚು ಕಾಲ ಅಂಟಿರುತ್ತದೆ.

ಕಾಂಪ್ಯಾಕ್ಟ್

ಇದು ಪೌಡರ್‌ ಮತ್ತು ಫೌಂಡೇಶನ್‌ ಎರಡರ ಮಿಕ್ಸ್ ರೂಪವಾಗಿದೆ. ನೀವು ಎಲ್ಲಿಗೋ ಅರ್ಜೆಂಟಾಗಿ ಹೊರಟಿದ್ದು ನಿಮಗೆ ಸಮಯವಿಲ್ಲದಿದ್ದರೆ ಆಗ ನೀವು ಬರೀ ಕಾಂಪ್ಯಾಕ್ಟ್ ಉಪಯೋಗಿಸಬಹುದು. ಇದನ್ನು ಪಫ್‌ನಿಂದ ಹಚ್ಚಿ. ಆಗ ಪ್ರತಿ ಸ್ಕಿನ್‌ಗೆ ಮ್ಯಾಚ್‌ ಆಗುವ ಕಾಂಪ್ಯಾಕ್ಟ್ ಪೌಡರ್‌ ಮಾರುಕಟ್ಟೆಯಲ್ಲಿ ಲಭ್ಯವಿದೆ. ನಿಮ್ಮ ಸ್ಕಿನ್‌ ಟೋನ್‌ಗೆ ಮ್ಯಾಚ್‌ ಆಗುವ ಕಾಂಪ್ಯಾಕ್ಟ್ ಹಚ್ಚಿ. ಕಾಂಪ್ಯಾಕ್ಟ್ ನ್ನು ಟಚ್‌ ಅಪ್‌ ಕೊಡಲೂ ಸಹ ಉಪಯೋಗಿಸಬಹುದು.

ನ್ಯೂ ಫೌಂಡೇಶನ್

ಇನ್‌ ಮಾರ್ಕಿಟ್‌ ಸ್ಟುಡಿಯೋ ಫಿಕ್ಸ್, ಡರ್ಮಾ ಫೌಂಡೇಶನ್‌ ಮೂಸ್‌ ಮತ್ತು ಸೂಫ್ಲೆ ಈ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚಾಗಿವೆ.

ಸ್ಟುಡಿಯೋ ಫಿಕ್ಸ್ ಕವರೇಜ್‌ ನೀಡುತ್ತದೆ ಮತ್ತು ಮುಖದ ಮೇಲೆ ಹೆಚ್ಚು ಹೊತ್ತು ಇರುತ್ತದೆ.

ಡರ್ಮಾ ಫೌಂಡೇಶನ್

ಇಡು ಸ್ಟಿಕ್‌ ಫಾರ್ಮ್‌ನಲ್ಲಿದ್ದು ಕನ್ಸೀಲರ್‌ ಮತ್ತು ಬೇಸ್‌ ಎರಡರ ಕೆಲಸ ಮಾಡುತ್ತದೆ. ಇದು ಮುಖದ ಎಲ್ಲ ಕಲೆಗಳು ಮತ್ತು ಅಂಡರ್‌ ಐಸ್‌ ಡಾರ್ಕ್‌ ಸರ್ಕಲ್‌ಗಳನ್ನು ಅಡಗಿಸಿ ಮುಖಕ್ಕೆ ಪುಲ್ ಕವರೇಜ್‌ ನೀಡುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ