ಮೊಡವೆಗಳು ಯುವ ಜನರನ್ನು ಹಾಗೂ ಮಧ್ಯವಯಸ್ಕರನ್ನು ಯಾವುದೇ ವಯಸ್ಸಿನ ಭೇದವಿಲ್ಲದೆ ತೊಂದರೆಗೀಡು ಮಾಡುತ್ತವೆ. ಬೇಸಿಗೆಯ ದಿನಗಳಲ್ಲಂತೂ ಮೊಡವೆಗಳ ಸಮಸ್ಯೆ ಮತ್ತಷ್ಟು ತೀವ್ರ ರೂಪ ಪಡೆದುಕೊಳ್ಳುತ್ತದೆ. ಮೊಡವೆಗಳ ಸಮಸ್ಯೆ ನಿಮ್ಮ ಉತ್ಸಾಹವನ್ನೇ ಭಂಗಗೊಳಿಸಬಹುದು. ಮೊಡವೆಗಳು ಏಕೆ ಅಪಾಯಕಾರಿ ಎಂದರೆ, ಅವು ಕಲೆಗಳನ್ನು ಬಿಟ್ಟುಹೋಗುತ್ತವೆ.

ನಾವಿಲ್ಲಿ ಅವುಗಳಿಂದ ರಕ್ಷಿಸಿಕೊಳ್ಳುವ ಅವನ್ನು ನಿವಾರಿಸುವ ಉಪಾಯಗಳ ಬಗ್ಗೆ ತಿಳಿಸುತ್ತಿದ್ದೇವೆ.

ನಿಮ್ಮ ಆಹಾರವನ್ನು ಬದಲಿಸಿ : ಮೊಡವೆಗಳನ್ನು ನಿವಾರಿಸುವ ಹಾಗೂ ಅವುಗಳಿಂದ ದೂರ ಇರುವ ಒಳ್ಳೆಯ ಉಪಾಯವಿದು. ನಿಮ್ಮ ರಕ್ತ ಶರ್ಕರದ ಪ್ರಮಾಣವನ್ನು ತಕ್ಷಣವೇ ಹೆಚ್ಚಿಸುವ ಆಹಾರಗಳಿಂದ ದೂರವಿರಿ. ಇದು ಇನ್ಸುಲಿನ್‌ನ ಕಾರ್ಯವೈಖರಿಯನ್ನು ಬದಲಿಸಬಹುದು. ಹೀಗಾಗಿ ಗ್ರಂಥಿಗಳಲ್ಲಿ ಸಮಸ್ಯೆ  ಉಂಟಾಗಬಹುದು.  ಈ ಎಲ್ಲ ಕಾರಣಗಳಿಂದ ಆಹಾರದಲ್ಲಿ ಅಷ್ಟಿಷ್ಟು ಬದಲಾವಣೆ ಅತ್ಯವಶ್ಯಕ.

ನಿಮ್ಮ ಮುಖವನ್ನು ಸ್ವಚ್ಛಗೊಳಿಸಿ : ನಿಮ್ಮ ಮುಖವನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಿ. ಮಲಗುವ ಮುನ್ನ ಮೇಕಪ್ ಸ್ವಚ್ಛಗೊಳಿಸಿ. ಅದಕ್ಕಾಗಿ ಎಂತಹ ಮೇಕಪ್‌ ರಿಮೂವರ್‌ನ್ನು ಉಪಯೋಗಿಸಬೇಕೆಂದರೆ, ಅದು ಆಲ್ಕೋಹಾಲ್ ರಹಿತ ಆಗಿರಬೇಕು ಮತ್ತು ಮುಖ ಕೂಡ ಸ್ವಚ್ಛಗೊಳ್ಳಬೇಕು.

ಎಕ್ಸ್ ಫೋಲಿಯೇಟಿಂಗ್ಮಾಡಿಕೊಳ್ಳಿ : ಇದರಿಂದ ಚರ್ಮ ಮೃದುವಾಗಿ, ಸ್ವಚ್ಛವಾಗಿ ಕಂಡುಬರುತ್ತದೆ. ಇದರಿಂದ ಅದರ ರಚನೆಯಲ್ಲಿ ಸುಧಾರಣೆ ಕಂಡುಬರುತ್ತದೆ. ಎಕ್ಸ್ ಫೋಲಿಯೇಟಿಂಗ್‌ನಿಂದ ಮೃತ ಚರ್ಮದಿಂದ ಮುಕ್ತಿ ಪಡೆಯಬಹುದು ಹಾಗೂ ತ್ವಚೆ ಕಳೆಗುಂದಿದಂತೆ ಕಂಡುಬರುವುದಿಲ್ಲ.

ಮುಖವನ್ನು ಸ್ಪರ್ಶಿಸಬೇಡಿ : ಈ ಕೆಲಸ ತುಂಬಾ ಕಷ್ಟಕರ. ಏಕೆಂದರೆ ಎಲ್ಲರೂ ದಿನವಿಡೀ ಹಲವಾರು ಸಾರಿ ಮುಖವನ್ನು ಮುಟ್ಟುವ ಅಭ್ಯಾಸ ಹೊಂದಿರುತ್ತಾರೆ. ಆದರೆ ಕೈಗಳಿಂದ ಮುಖ ಮುಟ್ಟುವಾಗ ಸ್ಕ್ರ್ಯಾಚ್‌ ಬೀಳದಂತೆ ನೋಡಿಕೊಳ್ಳಿ. ಏಕೆಂದರೆ ಮೊಡವೆಗಳಾಗುವ ಸಾಧ್ಯತೆ ಇರುತ್ತದೆ. ಅದೇ ರೀತಿ ಕೊಳಕು ಕೈಗಳಿಂದ ಮುಖ ಮುಟ್ಟಿಕೊಳ್ಳುವಾಗ ಎಚ್ಚರದಿಂದಿರಿ. ಅದರಿಂದ ಬೇರೆ ತೆರನಾದ ಚರ್ಮದ ಸಮಸ್ಯೆಗಳು ಶುರುವಾಗಬಹುದು.

ಸದಾ ಮಾಯಿಶ್ಚರೈಸರ್ಲೇಪಿಸಿ : ತೈಲ ತ್ವಚೆ ಮೊಡವೆಗಳಿಗೆ ದಾರಿ ಮಾಡಿಕೊಡುತ್ತದೆ. ನಿಮ್ಮ ತ್ವಚೆ ಶುಷ್ಕವಾಗಿದ್ದರೆ ದೇಹ ಸೀಬಮ್ ತಯಾರು ಮಾಡುವಲ್ಲಿ ಸಮಸ್ಯೆಯಾಗುತ್ತದೆ. ಪ್ರತಿದಿನ ಮುಂಜಾನೆ ಮುಖ ತೊಳೆದುಕೊಂಡ ಬಳಿಕ ಮಾಯಿಶ್ಚರೈಸರ್ ಲೇಪಿಸಿ. ನಿಮ್ಮ ಚರ್ಮಕ್ಕೆ ಹೊಂದುವಂತಹ ಮಾಯಿಶ್ಚರೈಸರ್‌ನ್ನೇ ಉಪಯೋಗಿಸಿ.

ಸಾಕಷ್ಟು ನೀರು ಕುಡಿಯಿರಿ : ಪ್ರತಿದಿನ 8 ಗ್ಲಾಸ್‌ ನೀರು ಕುಡಿಯಬೇಕೆಂದು ನಾನಲ್ಲ ಕೇಳಿದ್ದೇವೆ. ವಾಸ್ತವದಲ್ಲಿ ನಾವು ಅಷ್ಟೊಂದು ನೀರು ಕುಡಿಯುತ್ತಿದ್ದೇವೆಯೇ? ನೀರು ನಿಮ್ಮ ತ್ವಚೆಯನ್ನು ಶುದ್ಧಗೊಳಿಸುತ್ತದೆ. ಮೊಡವೆಗಳಿಂದಲೂ ರಕ್ಷಿಸುತ್ತದೆ. ಹೀಗಾಗಿ ನೀವು ಸಾಕಷ್ಟು ನೀರು ಕುಡಿದಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಲೇಸರ್ಟ್ರೀಟ್ಮೆಂಟ್ಅನುಸರಿಸಿ : ಒಂದು ವೇಳೆ ಮೇಲ್ಕಂಡ ಉಪಾಯಗಳು ನಿಮ್ಮನ್ನು ಮೊಡವೆಗಳಿಂದ ರಕ್ಷಿಸಲು ಅಷ್ಟೇನೂ ಪರಿಣಾಮಕಾರಿ ಎನಿಸದಿದ್ದರೆ, ಚರ್ಮ ರೋಗ ತಜ್ಞರನ್ನು ಭೇಟಿಯಾಗಿರಿ, ಡರ್ಮೆಟಾಲಜಿಸ್ಟರು ಲೇಸರ್‌ ಟ್ರೀಟ್‌ಮೆಂಟ್ ಮಾಡಿಸಿಕೊಳ್ಳಲು ಸಲಹೆ ನೀಡುತ್ತಾರೆ. ಪ್ರಬಲ ಲೇಸರ್‌ ಕಿರಣಗಳು ಮೊಡವೆಗಳು ಕಾರಣವಾಗುವ ಗ್ರಂಥಿಗಳನ್ನು ನಿವಾರಣೆ ಮಾಡಿ ಸಮಸ್ಯೆಗೆ ಕಡಿವಾಣ ಹಾಕುತ್ತವೆ. ಇದು ಹೆಚ್ಚಿನ ಸಮಯ ತೆಗೆದುಕೊಳ್ಳುವುದಿಲ್ಲ. ನೋವು ಕೂಡ ಅನಿಸುವುದಿಲ್ಲ. ಹಲವು ಸಿಟಿಂಗ್‌ಗಳಲ್ಲಿ ಈ ಪ್ರಕ್ರಿಯೆಗೆ ಒಳಗಾಗಬೇಕಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ