ಪ್ರಿಯಾಂಕಾ ಚೋಪ್ರಾ

ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ತನ್ನ ಅಂತಾರಾಷ್ಟ್ರೀಯ ವೆಬ್‌ ಸೀರೀಸ್‌ `ಸಿಟಾಡೆಲ್‌' ಕುರಿತಾಗಿ ಬಹಳ ಚರ್ಚೆಯಲ್ಲಿದ್ದಾಳೆ. ಸುಮಾರು 25 ಸಾವಿರ ಕೋಟಿ ಬಂಡವಾಳದಿಂದ ತಯಾರಾದ ಈ ವೆಬ್‌ ಸೀರೀಸ್‌, ಪ್ರದರ್ಶನಕ್ಕೆ ಮುಂಚೆಯೇ ಚರ್ಚೆಗೆ ಒಳಗಾಯಿತು. ಇದರ ಪ್ರಮೋಶನ್‌ ಗಾಗಿ ಪ್ರಿಯಾಂಕಾ ತನ್ನ ಪತಿ ನಿಕ್‌ ಜೋನ್ಸ್, ಮಗಳು ಮಾಲತಿ ಜೊತೆ ಮುಂಬೈಗೆ ಬಂದಿದ್ದಳು.

ಭಾರತ ತಲುಪುವ ಮೊದಲು ಪ್ರಿಯಾಂಕಾ ಒಂದು ಅಂತಾರಾಷ್ಟ್ರೀಯ ಚಾನೆಲ್ ‌ಗಾಗಿ ನೀಡಿದ್ದ ಸಂದರ್ಶನದಿಂದಲೂ ಹೆಚ್ಚು ಚರ್ಚೆಗೊಳಗಾಗಿದ್ದಳು. ಅವಳು ಬಾಲಿವುಡ್‌ ನಲ್ಲಿನ ತನ್ನ ಚಿತ್ರಗಳ ನಟನೆಯ ಕುರಿತಾಗಿ ಎಲ್ಲರಿಗೂ ಶಾಕ್‌ ತರಿಸುವಂಥ ಮಾತುಗಳನ್ನು ಹಂಚಿಕೊಂಡಿದ್ದಳು. ಬಾಲಿವುಡ್‌ ನಲ್ಲಿ ತುಂಬಿರುವ ನ್ಯಾಪೋಟಿಸಮ್, ಬಾಯ್‌ ಕಾಟ್‌ ಟ್ರೆಂಡ್‌, ಪುರುಷಪ್ರಧಾನ ಇಂಡಸ್ಟ್ರಿ ಕುರಿತು ಹಲವು ಟೀಕೆ ಮಾಡಿದ್ದಳು. `ಸಿಟಾಡೆಲ್‌'ನಲ್ಲಿ ಕಾಣಿಸಿಕೊಳ್ಳಲು ಅವಳ ಮುಖ್ಯ ಗುರಿಯೇನು? ಈ ಸೀರೀಸ್‌ ನಲ್ಲಿ ನಟಿಸಿದ ಅವಳ ಅನುಭವ ಹೇಗಿತ್ತು? ಇಂಥ ಹಲವು ಪ್ರಶ್ನೆಗಳನ್ನು ಪ್ರಿಯಾಂಕಾ ಗೃಹಶೋಭಾ ಜೊತೆ ಹಂಚಿಕೊಂಡಿದ್ದಾಳೆ.

ಬಹಳ ವರ್ಷಗಳ ನಂತರ ನೀನು ಮತ್ತೊಮ್ಮೆ ನಿನ್ನ ಅಂತಾರಾಷ್ಟ್ರೀಯ ವೆಬ್ಸೀರೀಸ್‌ `ಸಿಟಾಡೆಲ್‌' ಪ್ರಮೋಶನ್ಗಾಗಿ ಮುಂಬೈಗೆ ಬಂದಿರುವೆ. ಇದರಲ್ಲಿ ಪಾಲ್ಗೊಳ್ಳಲು ನೀನು ಎಷ್ಟು ಉತ್ಸಾಹಿತಳಾಗಿದ್ದೆ? ಇದರಲ್ಲಿ ನಿನ್ನ ಪಾತ್ರವೇನು?

ಬಹಳ ದಿನಗಳ ನಂತರ ಮುಂಬೈಗೆ ಬಂದು ನಾನು ಬಲು ಖುಷಿಯಾಗಿದ್ದೀನಿ! ನಮ್ಮ ಮನೆಗೆ ಬರುವುದು ಅಂದ್ರೆ ಯಾರಿಗೆ ತಾನೇ ಖುಷಿ ಅನಿಸಲ್ಲ? ನಿಕ್‌ ಮತ್ತು ಮಾಲತಿಗೂ ಮುಂಬೈ ನಗರ ಬಹಳ ಹಿಡಿಸಿದೆ. ಈ ಸೀರೀಸ್‌ ನ ಪ್ರಮೋಶನ್‌ ಕುರಿತು ಹೇಳುವುದಾದರೆ, ಈ `ಸಿಟಾಡೆಲ್‌' ಸೀರೀಸ್‌ ನನ್ನ ಪಾಲಿಗೆ ದೊಡ್ಡ ಟರ್ನಿಂಗ್‌ ಪಾಯಿಂಟ್‌. ಏಕೆಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತಿ ಭವ್ಯ ವಿಧಾನದಲ್ಲಿ ತಯಾರಿಸಲಾದ ಸೀರೀಸ್‌ ಇದು. ಇದರಲ್ಲಿ ನಾನು ನಾಯಕಿ ಎಂಬುದು ಗಮನಾರ್ಹ! ಇದರಲ್ಲಿ ನನ್ನದು ನಾದಿಯಾ ಸಿನ್ಹಾಳ ಪಾತ್ರ. ಆಕೆ ಒಬ್ಬ ಸ್ತ್ರೀ ಪತ್ತೇದಾರಿಣಿ. ಇದೊಂದು ಭಯಂಕರ ಸ್ಪೈ ಥ್ರಿಲ್ಲರ್‌ ವೆಬ್‌ ಸೀರೀಸ್‌, ಇದರಲ್ಲಿ ನನ್ನ ಜೊತೆ ಹಾಲಿವುಡ್‌ ನ ನಟ ರಿಚರ್ಡ್‌ ಮ್ಯಾಡಿಸನ್‌ ನಾಯಕ ಆಗಿದ್ದಾನೆ. ನಾನು ಈ ಸೀರೀಸ್‌ ನಲ್ಲಿ ಬಹಳಷ್ಟು ಅಪಾಯಕಾರಿ ಸ್ಟಂಟ್‌ ಸೀನ್ಸ್ ಮಾಡಿದ್ದೇನೆ, ಈ ತರಹ ಹಿಂದೆ ಎಂದೂ ಮಾಡಿರಲಿಲ್ಲ.

ಸಿಟಾಡೆಲ್ ‌ಒಂದು ಅತಿ ದೊಡ್ಡ ಸರಣಿ ಧಾರಾವಾಹಿ. ಇದರಲ್ಲಿ ಹಲವಾರು ಸ್ಪೈ ಜಾಸೂಸ್‌ ಇರುತ್ತಾರೆ, ಇವರುಗಳು ಬೇರೆ ಬೇರೆ ನಗರಗಳಲ್ಲಿ ಬೇರೆ ಬೇರೆ ವೇಷಭೂಷಣಗಳಲ್ಲಿ ಮಾಮೂಲಿ ನಾಗರಿಕರಂತೆ ಹರಡಿ ಹೋಗಿರುತ್ತಾರೆ. ಇವರುಗಳ ಮುಖ್ಯ ಗುರಿ, ತಮ್ಮ ದೇಶ ರಕ್ಷಣೆ. ತಮ್ಮ ದೇಶದಲ್ಲೇ ಅಡಗಿರುವ ವಿರೋಧಿಗಳ ನಾಶ ಇವರ ಗುರಿ. ಇದಕ್ಕಾಗಿ ಇವರು ಯಾವ ಮಟ್ಟದ ಕೆಲಸಕ್ಕೂ ರೆಡಿ. ಹಲವಾರು ಸ್ಪೈಗಳ ಹಾಗೇ, ನಾನೂ ಒಬ್ಬಳಾಗಿದ್ದು, ಎಲ್ಲರಂತೆ ವೈವಾಹಿಕ ಜೀವನ ನಡೆಸುತ್ತಿರುತ್ತೇನೆ. ಇಲ್ಲಿ ನನ್ನ ಪತಿ ಸಹ ಸ್ಪೈ ಆಗಿರುತ್ತಾನೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ