ತುಂತುರು ಮಳೆ ಹನಿಗಳ ಈ ಕಾಲದಲ್ಲಿ, ಆಯ್ಲಿ ಸ್ಕಿನ್ ಗೆ ಆರೈಕೆ ನೀಡಿ ಗ್ಲೋ ತರಿಸುವುದು ಹೇಗೆ......?
ನಮ್ಮ ಚರ್ಮದಲ್ಲಿ ಸೆಬೇಶಿಯನ್ ಗ್ರಂಥಿಗಳು (ಚರ್ಮದಲ್ಲಿ ನೈಸರ್ಗಿಕವಾಗಿ ತೈಲ ಉತ್ಪಾದಿಸುವ ಗ್ರಂಥಿ) ಅಗತ್ಯಕ್ಕಿಂತಲೂ ಅತ್ಯಧಿಕ ಸಕ್ರಿಯವಾದರೆ, ನಮ್ಮ ಚರ್ಮ ಬಲು ಜಿಡ್ಡು ಜಿಡ್ಡಾಗುವಂತೆ ಮಾಡಿ, ಕಲೆಗುರುತು ಮೂಡಿಸುತ್ತವೆ.
ಬದಲಾಗುವ ಋತು (ಸೀಸನ್ಸ್) ಆಯ್ಲಿ ಸ್ಕಿನ್ ಗೆ ಮೂಲ. ಹೆಚ್ಚು ಹ್ಯುಮಿಡಿಟಿ ಕಾರಣ, ಚರ್ಮದಿಂದ ಹೆಚ್ಚು ಬೆವರು ಸ್ರವಿಸಲ್ಪಡುತ್ತದೆ. ಇದು ಚರ್ಮ ಹೆಚ್ಚು ಆಯ್ಲಿ ಆಗುವಂತೆ ಮಾಡಿಬಿಡುತ್ತದೆ. ಈ ಸಮಸ್ಯೆಯಿಂದ ಪಾರಾಗಲು ಚರ್ಮದ ಸ್ವಚ್ಛತೆ, ಶುಭ್ರತೆ ಕಡೆ ವಿಶೇಷ ಗಮನ ಹರಿಸಬೇಕು.
ಆಯ್ಲಿ ಸ್ಕಿನ್ : ಸಂಭವನೀಯ ಕಾರಣಗಳು
ಆನುವಂಶೀಯತೆ : ಆಯ್ಲಿ ಸ್ಕಿನ್ ಆಗಲು ಆನುವಂಶೀಯತೆಯೂ ಒಂದು ಪ್ರಮುಖ ಕಾರಣ. ತಾಯಿ ತಂದೆ ಅಥವಾ ಒಡಹುಟ್ಟಿದವರಿಗೆ ಆಯ್ಲಿ ಸ್ಕಿನ್ ಇದ್ದರೆ, ಅದು ನಿಮಗೂ ಬರುವುದರಲ್ಲಿ ಆಶ್ಚರ್ಯವಿಲ್ಲ. ಈ ಸಮಸ್ಯೆ ಅತಿ ಹೆಚ್ಚಾಗುವ ಮೊದಲೇ ಚರ್ಮ ತಜ್ಞರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಿರಿ.
ಅಧಿಕ ಮೇಕಪ್ ಮಾಡಿಕೊಳ್ಳುವುದು : ಕೆಲವು ಹೆಂಗಸರು ಓಪನ್ ಪೋರ್ಸ್ ಹಾಗೂ ಸುಕ್ಕು ನಿರಿಗೆ ಅಡಗಿಸಲು ಅತಿ ಹೆಚ್ಚು ಮೇಕಪ್ ಮಾಡಿಕೊಳ್ಳುತ್ತಾರೆ. ಆದರೆ ಹೆಚ್ಚು ಕೆಮಿಕಲ್ಸ್ ಬೆರೆತಿರುವ ಇಂಥ ಕಾಸ್ಮೆಟಿಕ್ಸ್ ನ್ನು ಮತ್ತೆ ಮತ್ತೆ ಬಳಸುವುದರಿಂದ, ಚರ್ಮಕ್ಕೆ ಹಾನಿ ತಪ್ಪಿದ್ದಲ್ಲ. ಬ್ಯೂಟಿಫುಲ್ ಗೆಟ್ ಅಪ್ ಬೇಕೆಂದು ಸಿಕ್ಕಾಪಟ್ಟೆ ಮೇಕಪ್ ಮಾಡಿಕೊಂಡು ಇಂಥ ಸಮಸ್ಯೆ ತಂದುಕೊಳ್ಳಬೇಡಿ.
ಹಾರ್ಮೋನ್ ಬದಲಾವಣೆ : ದೇಹದಲ್ಲಿ ಉಂಟಾಗುವ ಹಾರ್ಮೋನುಗಳ ಬದಲಾವಣೆಗಳಿಂದಾಗಿಯೂ ಆಯ್ಲಿ ಸ್ಕಿನ್ ಗೆ ಕಾರಣವಾಗಬಹುದು. ಹೆಂಗಸರಲ್ಲಿ ಆ್ಯಂಡ್ರೋಜನ್ ಹಾರ್ಮೋನ್ ಹೆಚ್ಚು ಕಡಿಮೆ ಆಗುತ್ತಾ ಇರುತ್ತದೆ. ಹೀಗಾಗಿ ಇದು ಸೆಬೇಶಿಯಸ್ ಗ್ಲಾಂಡ್ಸ್ ಮೇಲೆ ದಟ್ಟ ಪ್ರಭಾವ ಬೀರಿ, ಅದು ಸಕ್ರಿಯಗೊಳ್ಳುವಂತೆ ಮಾಡುತ್ತದೆ. ಇದೇ ಹಾರ್ಮೋನ್ ಇಂಬ್ಯಾಲೆನ್ಸ್ ನಿಂದಾಗಿ ಗಂಡಸರಿಗೆ ಟೆಸ್ಟೆಸ್ಟರಾನ್ ಹಾರ್ಮೋನ್ ಅಧಿಕ ಸಕ್ರಿಯಗೊಂಡು, ಗಂಡಸರಿಗೂ ಆಯ್ಲಿ ಸ್ಕಿನ್ ಸಮಸ್ಯೆ ಕಾಡಲು ಆರಂಭಿಸುತ್ತದೆ.
ಆಯ್ಲಿ ಚರ್ಮದಿಂದ ಪಾರಾಗುವಿಕೆ
ನಿಮ್ಮ ಮುಖ ಸದಾ ಸ್ವಚ್ಛ ಶುಭ್ರವಾಗಿರಲಿ : ಪ್ರತಿದಿನ ಕನಿಷ್ಠ 2-3 ಸಲವಾದರೂ ತಣ್ಣೀರಿನಿಂದ ಮುಖ ತೊಳೆದು, ಉತ್ತಮ ಗುಣಮಟ್ಟದ ಫೇಸ್ ವಾಶ್ ಬಳಸಿರಿ. ಮಲಗುವ ಮುನ್ನ ಅಗತ್ಯ ಮತ್ತೊಮ್ಮೆ ತೊಳೆಯಿರಿ. 3-4 ಸಲಕ್ಕಿಂತ ಹೆಚ್ಚಿಗೆ ಬೇಡ, ಇಲ್ಲದಿದ್ದರೆ ಚರ್ಮ ಡ್ರೈ ಆದೀತು. ಹಾಗೆಯೇ ಬಿಸಿ ನೀರು ಸಹ ಬಳಸಬೇಡಿ. ಮುಖದ ಚರ್ಮವನ್ನು ಶುಚಿಯಾಗಿಡಲು ಸದಾ ಸಲ್ಛರ್, ಸ್ಯಾಲಿಸಿಲಿಕ್ ಆ್ಯಸಿಡ್, ಟೀಟ್ರೀ ಆಯಿಲ್ ಯುಕ್ತ ಕ್ಲೆನ್ಸರ್/ಫೇಸ್ ವಾಶ್ ಬಳಸಿಕೊಳ್ಳಿ.
ಸರಿಯಾದ ರೀತಿಯಲ್ಲಿ ಮೇಕಪ್ ಮಾಡಿ : ನೀವು ಬೆಳಗಿನ ಹೊತ್ತು ಮೇಕಪ್ ಮಾಡುವಾಗ ಮೊಟ್ಟ ಮೊದಲು ನಿಮ್ಮ ಜಿಡ್ಡುಗಟ್ಟಿದ ಚರ್ಮವನ್ನು ಸರಿಪಡಿಸಲು, ಪ್ರೈಮರ್ ಯಾ ಬೇಸ್ ಹಚ್ಚಬೇಕು. ಇದು ಇಡೀ ದಿನ ಚರ್ಮದ ಹೆಚ್ಚುವರಿ ತೈಲವನ್ನು ಹೀರಿಕೊಳ್ಳುತ್ತಾ ಇರುತ್ತದೆ. ಇದರಿಂದ ಚರ್ಮ ಫ್ರೆಶ್‌ಆಯಿಲ್ ರಹಿತವಾಗಿ ಕಾಣುತ್ತದೆ. ನಿಮ್ಮ ಮುಖದ ಝೋನ್ ನ ಅತಿ ಎತ್ತರದ ಭಾಗ ಅಂದ್ರೆ ಹಣೆ, ಮೂಗಿನ ಬಳಿಯ ಹೆಚ್ಚುವರಿ ಸೀಬಂ ಹೋಗಲಾಡಿಸಲು, ಟಾಲ್ಕಂ ಪೌಡರ್ ಸಹ ಬಳಸಿಕೊಳ್ಳಿ. ನಿಮ್ಮ ಎಲ್ಲಾ ಬ್ಯೂಟಿ ಪ್ರಾಡಕ್ಟ್ಸ್ ಆಯಿಲ್ ಫ್ರೀ ಆಗಿರಬೇಕು, ಮೊಡವೆ ಉಂಟು ಮಾಡುವಂಥದ್ದು ಆಗಿರಬಾರದು ಎಂಬುದನ್ನು ಗಮನಿಸಿಕೊಳ್ಳಿ. ಕ್ರೀಂ ಬದಲಾಗಿ ಪೌಡರ್ ಬ್ಲಶ್ ಹಾಗೂ ಐಶ್ಯಾಡೋ ಬಳಸಿಕೊಳ್ಳಿ.





