ಅದು 1973-74ನೇ ಇಸ್ವಿಯಿರಬಹುದು. ವಾಟಾಳ್ ನಾಗರಾಜರ ಕನ್ನಡ ಹೋರಾಟದ ಉಚ್ಛ್ರಾಯ ಸ್ಥಿತಿ. ರಾಜಾಜೀನಗರದ ಬಳಿ ಅವರು ಏರ್ಪಡಿಸಿದ ಕನ್ನಡ ರಾಜ್ಯೋತ್ಸವದಲ್ಲಿ ಮಾ.ಹಿರಣ್ಣಯ್ಯನವರ ನಾಟಕ ಪ್ರದರ್ಶನಕ್ಕೆ ಕರೆದುಕೊಂಡು ಹೋದ ನಮ್ಮ ತಂದೆಯವರು ಮೊತ್ತ ಮೊದಲಬಾರಿಗೆ ನನಗೆ ಶ್ರೀ ಮಾ.ಹಿರಣ್ಣಯ್ಯನವರ ಪರಿಚಯ ಮಾಡಿಸಿಕೊಟ್ಟರು. ಆನಂತರ ಪ್ರತೀ ವರ್ಷವೂ ನಮ್ಮ ಬಿಇಎಲ್ ಲಲಿತಕಲಾ ಅಕಾಡೆಮಿಯವರು ನಡೆಸುತ್ತಿದ್ದ ಬೇಸಿಗೆ ಮೇಳದಲ್ಲಿ ಹಿರಣ್ಣಯ್ಯನವರ ಒಂದಲ್ಲಾ ಒಂದು ನಾಟಕದ ಪ್ರದರ್ಶನ ಕಡ್ಡಾಯವಾಗಿದ್ದು, ಅವರ ನಾಟಕಗಳನ್ನು ನೋಡಿ ಬೆಳೆದೆ ಎಂದರೆ ತಪ್ಪಾಗಲಾರದು. ಇನ್ನು ಎಂಬತ್ತರ ದಶಕದಲ್ಲಿ ಟೇಪ್ ರೆಕಾರ್ಡರ್ಗಳ ಜಮಾನ. ಅದಕ್ಕೆ ತಕ್ಕಂತೆ ಹಿರಣ್ಣಯ್ಯನವರು ತಮ್ಮ ಹಲವಾರು ನಾಟಕಗಳ ಕ್ಯಾಸೆಟ್ ರೂಪದ ಮುಖಾಂತರ ರಾಜ್ಯಾದ್ಯಾಂತ ಎಲ್ಲರ ಮನೆ ಮತ್ತು ಮನವನ್ನು ತಲುಪಿದರು ಎಂಬುದು ಅಕ್ಷರಶಃ ಸತ್ಯ. ಅಂತೆಯೇ ನಮ್ಮ ಮನೆಯಲ್ಲಿಯೂ ಅವರ ಹಲವಾರು ಕ್ಯಾಸೆಟ್ಗಳನ್ನು ಕೊಂಡು ತಂದು ಅವರ ಪ್ರತಿಯೊಂದು ನಾಟಕಗಳೂ ನನಗೆ ಕಂಠಪಾಠವಾಗಿದ್ದವು. ಹೀಗೆ ನನ್ನ ಮತ್ತು ಹಿರಣ್ಣಯ್ಯನವರ ಏಕಲವ್ಯ ಮತ್ತು ದ್ರೋಣಾಚಾರ್ಯರ ರೀತಿಯ ಶಿಷ್ಯ ಮತ್ತು ಗುರುಗಳ ಸಂಬಂಧ ಬೆಳೆಯುತ್ತಾ ಬಂದಿತು.

1983ನೇ ಇಸ್ವಿ. ಆಗಿನ್ನೂ ಶ್ರೀಮತಿ ಇಂದಿರಾಗಾಂಧಿಯವರು ನಮ್ಮ ದೇಶದ ಪ್ರಧಾನಿಗಳಾಗಿದ್ದರು ನಾನಾಗ 8ನೇ ತರಗತಿಯಲ್ಲಿದ್ದೆ.. ನಮ್ಮ ಶಾಲಾ ವಾರ್ಷಿಕೋತ್ಸವದ ಸಂದರ್ಭಕ್ಕೆ ನಾನು ಮಾ. ಹಿರಣ್ಣಯ್ಯನವರ ಪಶ್ಚಾತ್ತಾಪ ನಾಟಕದ ಏಕಪಾತ್ರಾಭಿನಯ ಮಾಡುವವನಿದ್ದೆ. ಕಾರ್ಯಕ್ರಮದ ರಿಹರ್ಸಲ್ ದಿನ ಎಲ್ಲಾ ಕಾರ್ಯಕ್ರಮಗಳನ್ನು ನಮ್ಮ ಮುಖ್ಯೋಪಾಧ್ಯಾಯರು ಮತ್ತು ಉಪಮುಖ್ಯೋಪಾಧ್ಯಾಯರು ನೋಡಿ, ಅಳೆದು, ತೂಗಿ, ಒಪ್ಪಿಗೆ ಕೊಟ್ಟ ಮೇಲಷ್ಟೇ, ಶಾಲಾ ವಾರ್ಷಿಕೋತ್ಸವದಿನದಂದು ಪ್ರದರ್ಶಿತವಾಗುತ್ತಿತ್ತು. ಅಂತೆಯೇ ಎಲ್ಲರ ಸಮ್ಮುಖದಲ್ಲಿ ನಾನೂ ಪಶ್ಚಾತ್ತಾಪ ನಾಟಕದ ಏಕಪಾತ್ರಾಭಿನಯ ಮಾಡಿ ತೋರಿಸಿ ಸೈ ಎನಿಸಿಕೊಂಡೆ. ಮಾರನೇಯ ದಿನ ಶಾಲಾ ವಾರ್ಷಿಕೋತ್ಸವದಂದು, ಹಿಂದೆ ನೃತ್ಯ ಅಥವಾ ನಾಟಕಕ್ಕೆ ರಂಗ ಸಜ್ಜಿಕೆ ಮಾಡಿಕೊಳ್ಳುವ ಸಮಯದಲ್ಲಿ ತೆರೆಯ ಮುಂದಿನ ಸಣ್ಣ ಭಾಗದಲ್ಲಿ ನನ್ನ ಏಕಪಾತ್ರಾಭಿನಯಕ್ಕೆ ಅನುವು ಮಾಡಿಕೊಟ್ಟಿದ್ದರು. ಬಿಇಎಲ್ ಕಲಾಕ್ಷೇತ್ರದಲ್ಲಿ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರನ್ನು ನೋಡಿದ ಕೂಡಲೇ ನನ್ನಲ್ಲಿನ ಉತ್ಸಾಹ ಇನ್ನೂ ಇಮ್ಮಡಿಯಾಗಿ, ನನ್ನ ಹಲವಾರು ಸಂಭಾಷಣೆಗೆ ಬಾರೀ ಕರತಾಡನಗಳ ಮುಖಾಂತರ ನನ್ನ ಎಕಪಾತ್ರಾಭಿನಯ ಅತ್ಯಂತ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದ ನಂತರ ಹಲವರು ಸ್ನೇಹಿತರು ಮತ್ತು ಪೋಷಕರು ನನ್ನ ಅಭಿನಯ ಮತ್ತು ಡೈಲಾಗ್ ಡೆಲಿವರಿಯನ್ನು ಹೊಗಳಿದ್ದು ನನ್ನನ್ನು ಅಟ್ಟಕ್ಕೇರಿಸಿತ್ತು. ಆದರೆ ಆ ಉತ್ಸಾಹ ಹೆಚ್ಚು ಕಾಲ ಬಾಳಲಿಲ್ಲ. ನಮ್ಮ ಶಿಕ್ಷಕರೊಬ್ಬರು ನಮ್ಮ ಉಪಮುಖ್ಯೋಪಾಧ್ಯಾಯರು ನನ್ನನ್ನು ಹುಡುಕುತ್ತಿದ್ದಾರೆಂದೂ ಅವರನ್ನು ಈ ಕೂಡಲೇ ಕಾಣ ಬೇಕೆಂದು ತಿಳಿಸಿದರು. ಬಹುಶಃ ನನ್ನನ್ನು ಹೊಗಳಲು ಕರೆದಿರ ಬಹುದು ಎಂದು ಅವರನ್ನು ಭೇಟಿಯಾಗಲು ಹೋದರೆ, ನನ್ನ ಆಗಮನವನ್ನೇ ಕಾಯುತ್ತಿದ್ದಂತೆ ನಾನು ಹೋದ ಕೂಡಲೇ ಕಿವಿಯನ್ನು ಹಿಂಡಿ ಏನೋ ಭಡವಾ, ಈ ಸಣ್ಣ ವಯಸ್ಸಿನಲ್ಲಿಯೇ ರಾಜಕೀಯ ಪುಡಾರಿಯಾಗಲೂ ಹೋರಟಿದ್ದೀಯಾ? ಎಂದು ಹೇಳುತ್ತಾ ಫಟಾರ್ ಎಂದು ಕೆನ್ನೆಗೆ ಬಾರಿಸಿದರು. ಮೊದಲೇ ಕುಳ್ಳಗೆ ಸಣ್ಣಗಿದ್ದೆ. ಕಿವಿ ಹಿಂಡಿದ ನೋವನ್ನೇ ಸಹಿಸಿಕೊಳ್ಳಲು ಒದ್ದಾಡುತ್ತಿದ್ದವನಿಗೆ ಅದೂ ಎಲ್ಲರ ಸಮ್ಮುಖದಲ್ಲೇ, ನನ್ನ ನುಣುಪಾದ ಕೆನ್ನೆಯ ಮೇಲೆ ಅಚಾನಕ್ಕಾಗಿ ಬಿದ್ದ ಏಟು ತಡೆಯಲು ಆಗದೇ ಕಣ್ಣಿನಿಂದ ನೀರು ಧಾರಾಕಾರವಾಗಿ ಬಂದು ಬಿಟ್ಟಿತು. ನನ್ನ ಕಣ್ಣೀರು ನೋಡಿದ ಕೂಡಲೇ ನಮ್ಮ ಶಿಕ್ಷರಿಗೂ ನನ್ನ ಮೇಲಿದ್ದ ಕೋಪ ಜರ್ ಎಂದು ಇಳಿದು ಬಿಟ್ಟಿತು. ಕೂಡಲೇ ನನ್ನ ಪರಿಸ್ಥಿತಿಯನ್ನು ತಿಳಿ ಗೊಳಿಸಲು ನನ್ನನ್ನು ಸಂತೈಸುತ್ತಾ , ನೆನ್ನೆ ರಿಸರ್ಸಲ್ ಸಮಯದಲ್ಲಿ ಇಲ್ಲದಿದ್ದ ಕೆಲವಾರು ಸಂಭಾಷಣೆಗಳನ್ನು ಇಂದೇಕೇ ಹೇಳಿದೆ? ಎಂದು ಕೇಳಿದರು. ಆಗ ನನಗೆ ಗೊತ್ತಾದ ಸಂಗತಿ ಏನೆಂದರೆ, ಪಶ್ವಾತ್ತಾಪ ನಾಟಕದ ಒಂದು ಸಂದರ್ಭದಲ್ಲಿ, ಪ್ರಪಂಚದಲ್ಲಿ ಎಲ್ಲರಿಗೂ ಎರಡು ಕೈ ಇದ್ದರೇ, ನಮ್ಮ ದೇಶದಲ್ಲಿ ಮಾತ್ರ ಎಲ್ಲರಿಗೂ ಮೂರು ಕೈ ಎನ್ನುತ್ತಾರೆ. ಅದು ಯಾವುದು ಆ ಮೂರನೇ ಕೈ ಎಂದರೆ, ಅದೇ ನಮ್ಮ ಮಾತಾಜೀ ಇಂದಿರಮ್ಮನ ಕೈ. ಅದುವೇ ಮೊಗುಚೇ ಕೈ. ಅದು ದೇಶವನ್ನು ಹೀಗೆ ಬೇಕಾದರೂ ಹಾಕಬಹುದು. ಇಲ್ಲವೇ ಹಾಗೆ ಬೇಕಾದರೂ ಹಾಕಬಹುದು ಎಂದಿದೆ. ರಿಹರ್ಸಲ್ ಸಮಯದಲ್ಲಿ ಈ ಸಂಭಾಷಣೆಯನ್ನು ನಾನು ಮರೆತಿದ್ದ ಕಾರಣ ಹೇಳಿರಲಿಲ್ಲ. ಆದರೆ ವಾರ್ಷಿಕೋತ್ಸವದ ದಿನ ನನ್ನ ಆಭಿನಯದ ರಭಸದಲ್ಲಿ ಸುಲಲಿತವಾಗಿ ಮೇಲಿನ ಸಂಭಾಷಣೆ ಹೊರಬಂದು ಅಂದಿನ ನಮ್ಮ ಪ್ರಧಾನಿಯವರನ್ನು ಒಬ್ಬ ಯಕ್ಶಶ್ಚಿತ್ ಬಾಲಕ, ಅದೂ ತಮ್ಮ ಶಾಲೆಯ ವಿಧ್ಯಾರ್ಥಿ ನಿಂದನೆ ಮಾಡಿದ್ದು ನಮ್ಮ ಶಿಕ್ಷಕರನ್ನು ಕಕ್ಕಾಬಿಕ್ಕಿಯಾಗಿಸಿತ್ತು ಮತ್ತು ಕೋಪ ತರಿಸಿತ್ತು. ನಂತರ ಆ ಸಂಭಾಷಣೆ ಮೂಲ ನಾಟಕದಲ್ಲಿ ಹಾಗೆಯೇ ಇದೆ ಎಂಬುದನ್ನು ನಮ್ಮ ಕನ್ನಡ ಪ್ರಾಧ್ಯಾಪಕರು ಹೇಳಿದಾಗ, ಹಿರಣ್ಣಯ್ಯನವರು ದೊಡ್ಡ ನಟರು ಅವರು ಏನು ಬೇಕಾದರೂ ಹೇಳಿ ದಕ್ಕಿಸಿಕೊಳ್ಳುತ್ತಾರೆ. ಇವನು ಸಣ್ಣವ. ಇನ್ನೂ ರಾಜಕೀಯ ತಿಳಿಯದವ. ಹೀಗೆಲ್ಲಾ ಮಾತಾನಾಡಬಾರದು ಎಂದು ಎಚ್ಚರಿಕೆ ನೀಡಿ ಮನೆಗೆ ಕಳುಹಿಸಿಕೊಟ್ಟಿದ್ದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ