- ರಾಘವೇಂದ್ರ ಅಡಿಗ ಎಚ್ಚೆನ್.

ಬೆಂಗಳೂರು, 16 ಫೆಬ್ರವರಿ 2026:  ಭಾರತದ ಪ್ರಮುಖ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಜೈನ್ (ಡೀಮ್ಡ್ -ಟು-ಬಿ) ವಿಶ್ವವಿದ್ಯಾಲಯವು “ಸಾಮಾಜಿಕ ಮೌಲ್ಯಗಳ ಕುಸಿತ ಮತ್ತು ಅದರ ಪರಿಣಾಮಗಳು” ಎಂಬ ವಿಷಯದ ಮೇಲೆ ಸಮ್ಮೇಳನವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಭಾರತದ ಸುಪ್ರೀಂ  ಕೋರ್ಟಿನ ಮಾಜಿ ನ್ಯಾಯಮೂರ್ತಿ ಹಾಗೂ ಮಾಜಿ ಲೋಕಾಯುಕ್ತ  ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರು  ಮುಖ್ಯ   ಅತಿಥಿಯಾಗಿ ಆಗಮಿಸಿದ್ದರು.
ಸಮಕಾಲೀನ ಸಮಾಜದಲ್ಲಿ ನೈತಿಕ ಮೌಲ್ಯಗಳ ಅಗತ್ಯತೆ ಕುರಿತು ಮಾತನಾಡಿದ ಅವರು, ಲಾಲಸೆ ಮತ್ತು ಕುಸಿಯುತ್ತಿರುವ ನೈತಿಕತೆಯ ಪರಿಣಾಮಗಳ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ  ಅವರು “ಇಂದಿನ ಸಮಾಜದ ಅನೇಕ ಸಮಸ್ಯೆಗಳ ಮೂಲ ಕಾರಣ ನಿಯಂತ್ರಣವಿಲ್ಲದ ಲಾಲಸೆ. ಲಾಲಸೆಗೆ ಮಿತಿ ಇಲ್ಲದಾಗ ಭ್ರಷ್ಟಾಚಾರ ಅನಿವಾರ್ಯವಾಗುತ್ತದೆ" ಎಂದು  ಹೇಳಿದರು.

ಸಮಾಜದ ಆದ್ಯತೆಗಳು ಮತ್ತು ಮೌಲ್ಯಗಳಲ್ಲಿ ಆಗುತ್ತಿರುವ ಬದಲಾವಣೆಯನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು, ಪ್ರಾಮಾಣಿಕತೆಗೆ ಇಂದಿನ ಸಮಾಜದಲ್ಲಿ  ಗೌರವ ಕಡಿಮೆಯಾಗಿರುವುದನ್ನು ಉಲ್ಲೇಖಿಸಿದರು. ಹಾಗೂ  “ಒಮ್ಮೆ ಸಮಾಜವು ಪ್ರಾಮಾಣಿಕತೆಯನ್ನು ಗೌರವಿಸುತ್ತಿತ್ತು ಮತ್ತು ತಪ್ಪು ಮಾಡಿದವರನ್ನು ಕಠಿಣ ನೈತಿಕ ಮೌಲ್ಯಗಳ ಮೂಲಕ ಶಿಕ್ಷಿಸುತ್ತಿತ್ತು. ಇಂದು ಹಣ ಮತ್ತು ಅಧಿಕಾರಕ್ಕೆ ಗೌರವ ಸಿಗುತ್ತಿದೆ; ಆದರೆ ಪ್ರಾಮಾಣಿಕತೆಯನ್ನು ಕಡೆಗಣಿಸಲಾಗುತ್ತಿದೆ.” ಎಂದು ಅವರು ಹೇಳಿದರು.

Pic 1

ನೈತಿಕ ಆಶಯದ ಮಹತ್ವವನ್ನು ವಿವರಿಸುತ್ತಾ ಅವರು ಸಂತೃಪ್ತಿಯ ನಿಜವಾದ ಅರ್ಥವನ್ನು ವಿವರಿಸಿದರು “ಸಂತೃಪ್ತಿ ಎಂದರೆ ಆಸೆಯಿಲ್ಲದಿರುವುದು ಅಲ್ಲ; ಅದು ಸತ್ಯ ಮತ್ತು ನ್ಯಾಯಯುತ ಮಾರ್ಗದಲ್ಲಿ ಯಶಸ್ಸನ್ನು ಸಾಧಿಸುವ ಸಾಮರ್ಥ್ಯ" ಎಂದು ಅಭಿಪ್ರಾಯಪಟ್ಟರು. ಇದರೊಂದಿಗೆ ಅವರು “ನಿಜವಾದ ಸಂತೋಷವು ಪ್ರಾಮಾಣಿಕ ಆದಾಯದಿಂದ ಬರುತ್ತದೆ; ಅಕ್ರಮವಾಗಿ ಗಳಿಸಿದ ಸಂಪತ್ತಿನಿಂದ ಅಲ್ಲ", ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಜೈನ್ (ಡೀಮ್ಡ್ -ಟು-ಬಿ) ವಿಶ್ವವಿದ್ಯಾಲಯದ ಪ್ರೊ-ವೈಸ್ ಚಾನ್ಸಲರ್ ಡಾ. ದಿನೇಶ್ ನೀಲಕಂಠ್ ಮಾತನಾಡಿ ಸಾಮಾಜಿಕ ಮೌಲ್ಯಗಳ ಮಹತ್ವವನ್ನು ಒತ್ತಿ ಹೇಳಿದರು ಮತ್ತು “ಸಿದ್ಧಾಂತಗಳಿಲ್ಲದ ಪ್ರಗತಿ ಎಂದರೆ ಉದ್ದೇಶವಿಲ್ಲದ ಸಮೃದ್ಧಿ. ಮಾನವ ಮೌಲ್ಯಗಳು ಪರಂಪರೆ ಮಾತ್ರವಲ್ಲ, ಅವು ನಮ್ಮ ವರ್ತನೆ ಮತ್ತು ಮನೋಭಾವವನ್ನು ಮಾರ್ಗದರ್ಶಿಸುವ ನೈತಿಕ ದಿಕ್ಕು ತೋರಿಸುವ ಸಾಧನ. ಇಂದಿನ ಪ್ರಗತಿಯ ಪೈಪೋಟಿಯ ಜಗತ್ತಿನಲ್ಲಿ ಪ್ರಾಮಾಣಿಕತೆ ಮತ್ತು ನೈತಿಕತೆ ಕಡಿಮೆಯಾಗುತ್ತಿರುವಾಗ, ನಾವು ಭೌತಿಕವಾಗಿ ಅಭಿವೃದ್ಧಿಯಾದರೂ ನೈತಿಕವಾಗಿ ದಿವಾಳಿಯಾದ ಭವಿಷ್ಯವನ್ನು ನಿರ್ಮಿಸುವ ಅಪಾಯದಲ್ಲಿದ್ದೇವೆ.” ಎಂದು ಹೇಳಿದರು.
ವಿಚಾರಸಂಕಿರಣದ ಆಯೋಜಕಿಯಾದ  ಸಹ-ಪ್ರಾಧ್ಯಾಪಕಿ ಡಾ. ಟಿ ರೂಪಾ ಅವರು "ಮಾನವೀಯತೆ ಎಂಬುದು ಅಪರಿಚಿತರನ್ನು ಒಂದು ಕುಟುಂಬದಂತೆ ಬೆಸೆಯುವ ಅತ್ಯಂತ ಸೂಕ್ಷ್ಮವಾದ ನೂಲು.ಸಹಾನುಭೂತಿ ಎಂಬುದು ಮಾನವೀಯತೆಯ ಹೃದಯಬಡಿತವಿದ್ದಂತೆ, ಆ ಸಹಾನುಭೂತಿ ಇಲ್ಲವಾದಲ್ಲಿ ಹೃದಯ ಬಡಿತ  ಕೇವಲ ಗದ್ದಲವಾಗಷ್ಟೇ ಉಳಿಯುತ್ತೇವೆ," ಎಂದು  ನುಡಿದರು. ಹಾಗೂ ಇದೇ ಸಂದರ್ಭದಲ್ಲಿ ಅವರು ಕಾರ್ಯಕ್ರಮದ ಸಂಘಟನಾ ಸಮಿತಿಯ ಶ್ರಮವನ್ನು ಶ್ಲಾಘಿಸಿದರು. ಜೊತೆಗೆ ಎನ್‌ಸಿಸಿ (NCC) ಕೆಡೆಟ್‌ಗಳು ಮತ್ತು ಎನ್‌ಸಿಸಿ ಅಧಿಕಾರಿ ಮೇಜರ್ ರೇಖಾ ಸಿನ್ಹಾ ಅವರ ಅವಿರತ ಪ್ರಯತ್ನಗಳನ್ನು ವಿಶೇಷವಾಗಿ ಗುರುತಿಸಿ ಪ್ರಶಂಸಿಸಿದರು.
ಈ ಸಮ್ಮೇಳನವು  ಉತ್ತಮ ಮತ್ತು ನೈತಿಕ ಭವಿಷ್ಯ ನಿರ್ಮಾಣಕ್ಕೆ ಸಾಮಾಜಿಕ ಮೌಲ್ಯಗಳ ಅಗತ್ಯತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿತು. ಜೊತೆಗೆ ಇಂದಿನ ಸಮಾಜದಲ್ಲಿ ನಾಗರಿಕರ ನೈತಿಕ, ಸಾಂಸ್ಕೃತಿಕ ಮತ್ತು ಸಂವಿಧಾನಾತ್ಮಕ ಜವಾಬ್ದಾರಿಗಳ ಬಗ್ಗೆ ವಿದ್ಯಾರ್ಥಿಗಳ ಚಿಂತನೆಗೆ ಉತ್ತೇಜನ ನೀಡಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ