ಮಾರಿಕಾಂಬೆ ಅಂದ ತಕ್ಷಣ ನಮಗೆ ನೆನಪಾಗೋದೇ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಶಕ್ತಿ ದೇವತೆಯಾದ ಶಿರಸಿಯ ಶ್ರೀ ಮಾರಿಕಾಂಬೆ. ಕೋಟ್ಯಾಂತರ ಭಕ್ತರ ಆರಾಧ್ಯ ದೈವವಾಗಿರುವ ಮತ್ತು ಜನಪದ ಸಂಸ್ಕೃತಿಯಲ್ಲಿ ಪ್ರಮುಖ ಪಾತ್ರ ವಹಿಸುವ ಈ ದೇವಾಲಯದಲ್ಲಿ ಪ್ರತೀ ಎರಡು ವರ್ಷಗಳಿಗೊಮ್ಮೆ ಅತ್ಯಂತ ವೈಭವವಾಗಿ ನಡೆಯುವ ಮಾರಿಕಾಂಬಾ ಜಾತ್ರೆಯು ದೇಶಾದ್ಯಂತ ಅಪಾರ ಸಂಖ್ಯೆಯ ಭಕ್ತರನ್ನು ಆಕರ್ಷಿಸುತ್ತದೆ. ಅದೇ ರೀತಿ ಶಿರಸಿಯಿಂದ ಸುಮಾರು 70 ಕಿ.ಮೀ. ದೂರ ಇರುವ, ಸಹ್ಯಾದ್ರಿಯ ತಪ್ಪಲಿನ ಶಿವಮೊಗ್ಗ ಜಿಲ್ಲೆಗೆ ಸೇರಿರುವುಅ ಅಡಿಕೆ, ತೆಂಗುಗಳಂತಹ ಆರ್ಥಿಕ ಬೆಳೆಗಳ ನಡುವೆ ಇತಿಹಾಸ ಪ್ರಸಿದ್ಧ ಕೆಳದಿ ಮತ್ತು ಇಕ್ಕೇರಿಗಳಂತಹ ಐತಿಹ್ಯ ಇರುವ ಸುಂದರ ಪ್ರಕೃತಿಗಳ ಮಧ್ಯೆ ಸಾಗರ ಎಂಬ ಪಟ್ಟಣವಿದೆ. ಒಂದು ಕಾಲದಲ್ಲಿ ಅಲ್ಲಿನ ಜನರೇ ಹೇಳುತ್ತಿದ್ದಂತೆ ಶಿವಮೊಗ್ಗ ಜಿಲ್ಲಾ ಕೇಂದ್ರವಾದರೂ, ಆರ್ಥಿಕವಾಗಿ ಸಾಗರವೇ ಹೆಚ್ಚು ಪ್ರಾಭಲ್ಯ ಪಡೆದಿದ್ದ ಕಾರಣ, ಸಾಗರವೇ ಜಿಲ್ಲಾ ಕೇಂದ್ರವಾಗಬೇಕು ಎಂಬ ಕೂಗು ಇತ್ತು. ಇಂತಹ ಸಾಗರದಲ್ಲಿ ಆದಿ ಗುರು ಶ್ರೀ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಮಾರಿಕಾಂಬೆಯು ಇದ್ದು ಇಲ್ಲಿ ಪ್ರತೀ ಮೂರು ವರ್ಷಕ್ಕೊಮ್ಮೆ ಬಹಳ ವೈಭವದಿಂದ ಒಂದು ರೀತಿ ಮೈಸೂರು ದಸರಾ ನೆನೆಪಿಸುವಂತೆ ಸುಮಾರು ಒಂಭತ್ತು ದಿನಗಳ ಕಾಲ ಬಹಳ ಅದ್ದೂರಿಯಿಂದ ಶ್ರೀ ಮಾರಿಕಾಂಬೆಯ ಜಾತ್ರೆ ನಡೆಯುತ್ತದೆ. ಸಾಗರದ ಮಾರಿಕಾಂಬಾ ಜಾತ್ರೆಯ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.

ಐತಿಹ್ಯದ ಪ್ರಕಾರ ಕೆಳದಿಯ ಶಿವಪ್ಪನಾಯಕರು ಈ ಊರಿನ ಎಡ ಬಲದಲ್ಲಿರುವ ಇಕ್ಕೆರಿಯಲ್ಲಿ ರಾಜ್ಯಾಡಳಿತ ನಡೆಸಿದ್ದಾರೆ. ಅದೇ ರಾಜಮನೆತನದ ಸದಾಶಿವನಾಯಕನು ತನ್ನ ಆಡಳಿತ ಅವಧಿಯಲ್ಲಿ ಸಾಗರದಲ್ಲಿ ಭವ್ಯವಾದ ಶ್ರೀ ಮಹಾಗಣಪತಿ ದೇವಸ್ಥಾನ ಮತ್ತು ಗಣಪತಿ ಕೆರೆಯನ್ನು ನಿರ್ಮಿಸಿದರು.  ಮುಂದೆ ಆಡಳಿತಕ್ಕೆ ಬಂದ ಶಿವಪ್ಪನಾಯಕರು, ತಮ್ಮ ತಾತನ ಹೆಸರಿನಲ್ಲಿ ಈ ಪಟ್ಟಣಕ್ಕೆ ಸದಾಶಿವ ಸಾಗರ ಎಂದು ನಾಮಕರಣ ಮಾಡಿದ್ದರೂ, ನಂತರದ ದಿನಗಳಲ್ಲಿ ಸದಾಶಿವ ಮಾಯವಾಗಿ ಕೇವಲ ಸಾಗರ ಎಂಬ ಹೆಸರಿನಲ್ಲೇ ಚಾಲ್ತಿಯಲ್ಲಿದೆ ಎನ್ನುತ್ತಾರೆ ಅಲ್ಲಿನ ಸ್ಥಳೀಯರು. ಅನಂತರ ಕೆಳದಿ, ಇಕ್ಕೆರಿ ಸಂಸ್ಥಾನದ ಅರಸರು ತಮ್ಮ ಯುದ್ಧ ಸಾಮಗ್ರಿಗಳನ್ನು ಇದೇ ಊರಿನಲ್ಲಿ ಸಂಗ್ರಹಿಸಿ ಅವುಗಳ ರಕ್ಷಣೆಗಾಗಿ ಕೆಳದಿ ಇಕ್ಕೇರಿ ಸಂಸ್ಥಾನದ ಗಡಿ ದೇವತೆ ಮತ್ತು ಶಕ್ತಿ ದೇವತೆಯಾದ ಮಾರಿಕಾಂಬಾ ದೇವಿಯ ದೇವಾಲಯವನ್ನು ಜೀರ್ಣೋದ್ಧಾರ ಮಾಡಿಸಿ, ಅಲ್ಲಿ ನಿರಂತವಾಗಿ ಪೂಜೆಗಳು, ಉತ್ಸವಗಳು ಮತ್ತು ಜಾತ್ರೆಯನ್ನು ನಡೆಸಲು ಆರಂಭಿಸಿದರು ಎನ್ನುವ ಪ್ರತೀತಿ ಇದೆ. ಪ್ರತೀ ಮೂರು ವರ್ಷಗಳಿಗೊಮ್ಮೆ ಮಾಘ ಮಾಸದಲ್ಲಿ ಒಂಭತ್ತು ದಿನಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಬಡವ ಬಲ್ಲಿದ, ಮೇಲು ಕೀಳು ಎನ್ನುವ ಯಾವುದೇ ಬೇಧಭಾವವಿಲ್ಲದೇ ಎಲ್ಲರೂ ಒಟ್ಟಾಗಿ ಸೇರಿಕೊಂಡು ಇಡೀ ನಗರವನ್ನು ತಳಿರು ತೋರಣಗಳಿಂದ ಮತ್ತು ವಿದ್ಯುತ್ ದೀಪಾಲಂಕಾರಗಳಿಂದ ಸಿಂಗರಿಸಿ ಜಾತ್ರೆಯನ್ನು ಮಾಡಲಾಗುತ್ತದೆ. 1949ರ ವರೆಗೂ ಕೇವಲ ಒಂದು ದಿನ ಆಚರಿಸುತ್ತಿದ್ದ ಮಾರಿಕಾಂಬಾ ಜಾತ್ರೆ ಆನಂತರ 3, 5, 7 ದಿನಗಳ ಜಾತ್ರೆಯ ಆಚರಣೆಯಾಗಿ ಪ್ರಸ್ತುತ 9 ದಿನಗಳ ಜಾತ್ರೆಯಾಗಿದೆ. ಜಾತ್ರೆ ಆರಂಭವಾಗುವ 8 ದಿನಗಳ ಮುಂಚೆಯೇ ಇಡೀ ಊರಿಗೆ ಅಂಕೆ ಹಾಕುತ್ತಾರೆ. ಹೀಗೆ ಅಂಕೆ ಹಾಕಿದ ನಂತರ ಊರಿನಲ್ಲಿರುವವರು ಯಾಫೂ ಸಹಾ ಜಾತ್ರೆ ಮುಗಿಯುವವರೆಗೆ ಪರ ಊರಿಗೆ ಹೋಗಬಾರದು ಎಂಬ ನಿಯಮವಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ