ಅಮೆರಿಕಾದ ಪ್ರವಾಸಕ್ಕೆಂದು ಹೊರಡುವರು, ಅದ್ಭುತ ಅನುಪಮ ನಗರ ಸಿಯಾಟೆಲ್ ಗೆ ಭೇಟಿ ನೀಡದೆ ಇರಲಾರರು. ಇಲ್ಲಿನ ರೋಮಾಂಚಕಾರಿ ಅನುಭವ ಅಂಥದ್ದು.......!

ಅಮೆರಿಕಾದ ವಾಶಿಂಗ್ಟನ್‌ ರಾಜ್ಯದ ಸಿಯಾಟೆಲ್ ‌ನಗರ ಎಂಥವರನ್ನೂ ತನ್ನತ್ತ ಆಕರ್ಷಿಸುತ್ತದೆ! ಇದು ಉ. ಅಮೆರಿಕಾದ ಪೆಸಿಫಿಕ್ ವಾಯವ್ಯ ಪ್ರದೇಶದಲ್ಲಿ ಕೆನಡಾ ಅಮೆರಿಕಾದ ಗಡಿ ಪ್ರದೇಶದಲ್ಲಿ ಬರುತ್ತದೆ. ವಾಶಿಂಗ್ಟನ್‌ ರಾಜ್ಯದ ಪೆಸಿಫಿಕ್‌ ಮಹಾಸಾಗರದ ಇನ್ ವೆಟ್‌ ಪುಜೀಟ್‌ ಸೌಂಡ್‌ ನ ದಡದಲ್ಲಿದೆ. ಸಿಯಾಟೆಲ್ ‌ಒಂದು ಸುಂದರ ಆಧುನಿಕ ಪೋರ್ಟ್‌ ಸಿಟಿ. ಪೆಸಿಫಿಕ್‌ ನ ವಾಯವ್ಯ ಪ್ರದೇಶದ ಪರ್ವತ ಶ್ರೇಣಿಗಳು, ಮನೋಹರ ಝರಿಗಳು, ಐಸ್‌ ತುಂಬಿದ ಮೌಂಟ್‌ ವೇನಿಯರ್‌, ಕಾಸ್ಕೇಡ್‌ ವೌಂಟೆನ್‌ ರೇಂಜ್‌, ಒಲಿಂಪಿಕ್‌ ವೌಂಟೆನ್ಸ್, ರೇನ್‌ ಫಾರೆಸ್ಟ್ ಇತ್ಯಾದಿ ತಮ್ಮ ನೈಸರ್ಗಿಕ ಸೌಂದರ್ಯಕ್ಕೆ ಇಲ್ಲಿ ಹೆಸರಾಗಿವೆ.

ಎವರ್ಗ್ರೀನ್ಸಿಟಿ

ಎಲ್ಲರೂ ಸಿಯಾಟೆಲ್ ಸಿಟಿಯನ್ನು ಪ್ರೀತಿಯಿಂದ ಡಿಜಿಟಲ್ ಸಿಟಿ, ಜೆಟ್‌ ಸಿಟಿ (ಬೋಯಿಂಗ್‌ ವಿಮಾನ ಕಾರ್ಖಾನೆ), ಎಮರಾಲ್ಡ್ ಸಿಟಿ (ಸದಾ ಹಸಿರು ಮರಗಳ ಸಾಮ್ರಜ್ಯ), ಇತ್ಯಾದಿ ಹೆಸರುಗಳಿಂದಲೂ ಕರೆಯುತ್ತಾರೆ. ಕಳೆದ 30 ವರ್ಷಗಳಲ್ಲಿ ಈ ನಗರದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ.

ಗ್ರೇಟರ್‌ ಸಿಯಾಟೆಲ್ ‌ಗೆ ಅಮೆರಿಕಾದಲ್ಲಿ ಈಗ ಪ್ರಥಮ ಸ್ಥಾನವಿದೆ. ಇಲ್ಲಿ ಸೈನ್ಸ್, ಟೆಕ್ನಾಲಜಿ, ಎಂಜಿನಿಯರಿಂಗ್‌ ಇತ್ಯಾದಿಗಳಲ್ಲಿ ನುರಿತ ಮಂದಿಗೆ ಹೆಚ್ಚು ನೌಕರಿಗಳ ಅವಕಾಶವಿದೆ, ಹಾಗಾಗಿ ಭಾರತೀಯ ನಿಪುಣರು ಇಲ್ಲಿ ಹೆಚ್ಚಾಗಿದ್ದಾರೆ. ಮೈಕ್ರೋಸಾಫ್ಟ್, ಅಮೆಝಾನ್‌, ಎಕ್ಸ್ ಪೀಡಿಯಾ, FB‌, ಗೂಗಲ್, ಆ್ಯಪ್‌, ಸ್ಟಾರ್‌ ಬಕ್‌ ಕಾಫಿ, ಬೋಯಿಂಗ್‌ ಇತ್ಯಾದಿ ಗ್ಲೋಬಲ್ ಕಂಪನಿಗಳು, ಬಿಲ್ ಮೆಲಿಂಡಾ ಗೇಟ್ಸ್, ಫೌಂಡೇಶನ್‌ ನಂಥ ಚ್ಯಾರೀಟಸ್‌ ನ ಕಾರುಬಾರುಗಳು ಇಲ್ಲಿ ದಂಡಿಯಾಗಿ ಕಂಡುಬರುತ್ತಿವೆ.

ವಿಶ್ವದ ಬಹುತೇಕ ದೇಶದ ಮಂದಿ ಇಲ್ಲಿ ನೌಕರಿಗಾಗಿ ಬರುತ್ತಾರೆ. ಇಲ್ಲಿನ ಪ್ರತಿಭಾವಂತರಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಮಂದಿ ಭಾರತೀಯರೇ ಇದ್ದಾರೆಂದರೆ, ಅವರಿಗಿಲ್ಲಿ ಎಷ್ಟು ಡಿಮ್ಯಾಂಡ್‌ ಎಂದು ಗೊತ್ತಾಗುತ್ತದೆ. ಇಲ್ಲಿನ ಸಂಬಳ, ಇತರ ಅನುಕೂಲಗಳೂ ಬಲು ಆಕರ್ಷಕ. ಸಿಯಾಟೆಲ್ ‌ನ `ಯೂನಿವರ್ಸಿಟಿ ಆಫ್‌ ವಾಶಿಂಗ್ಟನ್‌' ತನ್ನ ಶಿಕ್ಷಣದ ಮಟ್ಟ ಹಾಗೂ ಬಯಾಜಿಕಲ್

ವಿಜ್ಞಾನ ವಿಷಯಗಳಲ್ಲಿ ಉತ್ತಮ ಸಂಶೋಧನೆಗಳಿಗಾಗಿ ಕೀರ್ತಿ ಪಡೆದಿದೆ.

ಗ್ರೇಟರ್‌ ಸಿಯಾಟೆಲ್ ‌ನಲ್ಲಿ ಅನೇಕ ಭಾರತೀಯರ ಕಿರಾಣಿ ಅಂಗಡಿ, ಹೋಟೆಲ್ ಗಳಲ್ಲದೆ, ಸಂಘ ಸಂಸ್ಥೆಗಳೂ ಬೇಕಾದಷ್ಟಿವೆ. ಭಾರತೀಯ ಆಹಾರ ಪದಾರ್ಥಗಳು ಇಲ್ಲಿನ ಎಲ್ಲಾ ನಗರಗಳ ಮನೆಮಾತು.

Golden-chain.jfif

ಆದರೆ ಗ್ರೇಟರ್‌ ಸಿಯಾಟೆಲ್ ‌ಬಲು ದುಬಾರಿ ಸಿಟಿ, ಮನೆ ಬಾಡಿಗೆಗಳಂತೂ ನಮ್ಮ ಮುಂಬೈಗೆ ತಾತನಂತಿದೆ. ಇಲ್ಲಿ ವಿಭಿನ್ನ ಜಾತಿ, ಧರ್ಮ, ಸಂಸ್ಕೃತಿಗಳ ಜನರು ಪ್ರೀತಿ ವಿಶ್ವಾಸಗಳಿಂದ ಬಾಳುತ್ತಾರೆ. ನಗರವಾಸಿಗಳು ಅತಿ ಪ್ರಗತಿಶೀಲ ವಿಚಾರಧಾರೆಯವರು, ಜೊತೆಗೆ ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರು.

ಹೀಗಾಗಿ ಇಲ್ಲಿ ಜನ ತಮ್ಮ ಸ್ವಇಚ್ಛೆಯಿಂದ ಸಸ್ಯಾಹಾರಿಗಳಾಗಿರಲು ಬಯಸುತ್ತಾರೆ. ನಮ್ಮ ಭಾರತದಲ್ಲಿ `ವಿಭಿನ್ನತೆಯಲ್ಲಿ ಏಕತೆ'ಯ ಸಂಗಮದಂತೆ ಇಲ್ಲಿಯೂ ಜನ ವಿಭಿನ್ನರಾದರೂ ಒಗ್ಗಟ್ಟಿನಿಂದ ಕೂಡಿದ್ದು, ಚೆರ್ರಿ ಬ್ಲಾಸಮ್, ಟ್ಯೂಲಿಪ್‌ ಫೆಸ್ಟಿವ್ ‌ಮುಂತಾದ ಅನೇಕ ಉತ್ಸವಗಳಲ್ಲಿ ಒಟ್ಟಾಗಿ ಭಾಗವಹಿಸುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ