- ರಾಘವೇಂದ್ರ ಅಡಿಗ ಎಚ್ಚೆನ್.

ರಾಜ್ಯದಲ್ಲಿ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷಾ ದಿನಾಂಕಗಳನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪರೀಕ್ಷಾ ವೇಳಾಪಟ್ಟಿಯ ಜೊತೆಗೆ ಫಲಿತಾಂಶ ಪ್ರಕಟವಾಗುವ ಸಂಭಾವ್ಯ ದಿನಾಂಕವನ್ನೂ ಈಗಲೇ ಪ್ರಕಟಿಸಲಾಗಿದೆ
ಪರೀಕ್ಷೆಗೆ ಹಾಜರಾಗುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಸಾರಿಗೆ ಇಲಾಖೆಯಿಂದ ಸಿಹಿಸುದ್ದಿ ಸಿಕ್ಕಿದ್ದು, ಪರೀಕ್ಷಾ ಅಕ್ರಮ ತಡೆಯಲು ಶಿಕ್ಷಣ ಇಲಾಖೆ ಕಠಿಣ ಕ್ರಮಗಳನ್ನೂ ಜಾರಿಗೊಳಿಸಿದೆ.
ವಿದ್ಯಾರ್ಥಿಗಳ ಅಂಕಿ-ಅಂಶ:

• ದ್ವಿತೀಯ ಪಿಯುಸಿ: ಒಟ್ಟು 7,10,363 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. (ಹೊಸಬರು: 6.46 ಲಕ್ಷ, ಪುನರಾವರ್ತಿತ: 50 ಸಾವಿರ, ಖಾಸಗಿ: 13 ಸಾವಿರ).
• ಎಸ್‌ಎಸ್‌ಎಲ್‌ಸಿ: ಒಟ್ಟು 9,02,889 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. (ಹೊಸಬರು: 8.12 ಲಕ್ಷ, ಪುನರಾವರ್ತಿತ: 62 ಸಾವಿರ, ಖಾಸಗಿ: 27 ಸಾವಿರ).
ವಿದ್ಯಾರ್ಥಿಗಳಿಗೆ ಬಸ್ ಫ್ರೀಭಾಗ್ಯ
ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳಿಗೆ ಕೆಎಸ್‌ಆರ್‌ಟಿಸಿ (KSRTC) ಮತ್ತು ಬಿಎಂಟಿಸಿ (BMTC) ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ವಿದ್ಯಾರ್ಥಿಗಳು ತಮ್ಮ ‘ಪರೀಕ್ಷಾ ಪ್ರವೇಶ ಪತ್ರ’ (Hall Ticket) ತೋರಿಸಿ ಪರೀಕ್ಷಾ ಕೇಂದ್ರಕ್ಕೆ ತೆರಳಲು ಮತ್ತು ಮನೆಗೆ ಮರಳಲು ಉಚಿತವಾಗಿ ಪ್ರಯಾಣಿಸಬಹುದು.
ಪ್ರಶ್ನೆ ಪತ್ರಿಕೆ ಸೋರಿಕೆ ವದಂತಿ ಹಬ್ಬಿಸುವವರ ವಿರುದ್ಧ ಇಲಾಖೆ ಸಮರ ಸಾರಿದೆ. ವಾಟ್ಸಾಪ್, ಟೆಲಿಗ್ರಾಮ್, ಇನ್ಸ್ಟಾಗ್ರಾಮ್‌ಗಳಲ್ಲಿ "ಪ್ರಶ್ನೆ ಪತ್ರಿಕೆ ಸಿಗುತ್ತದೆ" ಎಂದು ಸುಳ್ಳು ಪೋಸ್ಟ್ ಹಾಕುವ ಅಕೌಂಟ್ಗಳ ಮೇಲೆ ವಿಶೇಷ ನಿಗಾ ಇಡಲಾಗಿದೆ. ಆರ್ಥಿಕ ಲಾಭಕ್ಕಾಗಿ ಸುಳ್ಳು ಸುದ್ದಿ ಹಬ್ಬಿಸಿದರೆ 'ಭಾರತೀಯ ನ್ಯಾಯ ಸಂಹಿತೆ' ಅಡಿಯಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಪ್ರಮುಖ ದಿನಾಂಕಗಳು (ಪರೀಕ್ಷೆ-1 & ಫಲಿತಾಂಶ)
• ದ್ವಿತೀಯ ಪಿಯುಸಿ ಪರೀಕ್ಷೆ: ಫೆಬ್ರವರಿ 28 ರಿಂದ ಮಾರ್ಚ್ 17 ರವರೆಗೆ.
• ಫಲಿತಾಂಶ (ಸಂಭಾವ್ಯ): ಏಪ್ರಿಲ್ 7, 2026.
• ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಮಾರ್ಚ್ 18 ರಿಂದ ಏಪ್ರಿಲ್ 2 ರವರೆಗೆ.
• ಫಲಿತಾಂಶ (ಸಂಭಾವ್ಯ): ಏಪ್ರಿಲ್ 24, 2026.
ದ್ವಿತೀಯ ಪಿಯುಸಿ ಪರೀಕ್ಷೆ-1 ವೇಳಾಪಟ್ಟಿ

ಫೆ. 28: ಕನ್ನಡ, ಅರೇಬಿಕ್
ಮಾ. 02: ಭೂಗೋಳ ಶಾಸ್ತ್ರ, ಸಂಖ್ಯಾಶಾಸ್ತ್ರ, ಮನಃಶಾಸ್ತ್ರ
ಮಾ. 03: ಇಂಗ್ಲಿಷ್
ಮಾ. 04: ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
ಮಾ. 05: ಇತಿಹಾಸ
ಮಾ. 06: ಭೌತಶಾಸ್ತ್ರ (Physics)
ಮಾ. 07: ಐಚ್ಛಿಕ ಕನ್ನಡ, ವ್ಯವಹಾರ ಅಧ್ಯಯನ, ಭೂಗರ್ಭ ಶಾಸ್ತ್ರ
ಮಾ. 09: ರಸಾಯನಶಾಸ್ತ್ರ (Chemistry), ಶಿಕ್ಷಣಶಾಸ್ತ್ರ, ಮೂಲ ಗಣಿತ
ಮಾ. 10: ಅರ್ಥಶಾಸ್ತ್ರ (Economics)
ಮಾ. 11: ತರ್ಕಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗೃಹ ವಿಜ್ಞಾನ
ಮಾ. 12: ಹಿಂದಿ
ಮಾ. 13: ರಾಜ್ಯಶಾಸ್ತ್ರ
ಮಾ. 14: ಲೆಕ್ಕಶಾಸ್ತ್ರ (Accountancy), ಗಣಿತ (Maths)
ಮಾ. 16: ಸಮಾಜಶಾಸ್ತ್ರ, ಜೀವಶಾಸ್ತ್ರ (Biology), ಗಣಕ ವಿಜ್ಞಾನ (Computer Science)
ಮಾ. 17: ಹಿಂದೂಸ್ತಾನಿ ಸಂಗೀತ, ಆಟೋಮೊಬೈಲ್, ಹೆಲ್ತ್ ಕೇರ್

ಎಸ್ಎಸ್ಎಲ್ಸಿ ಪರೀಕ್ಷೆ-1 ವೇಳಾಪಟ್ಟಿ:

ಮಾ. 18: ಪ್ರಥಮ ಭಾಷೆ
ಮಾ. 23: ವಿಜ್ಞಾನ
ಮಾ. 25: ದ್ವಿತೀಯ ಭಾಷೆ
ಮಾ. 28: ಗಣಿತ
ಮಾ. 30: ತೃತೀಯ ಭಾಷೆ
ಏ. 02: ಸಮಾಜ ವಿಜ್ಞಾನ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ