ಸ್ವಾತಂತ್ರ್ಯ ಪೂರ್ವದ ಬಹುತೇಕ ಕನ್ನಡದ ಸಾಹಿತಿಗಳು ಪೌರಾಣಿಕ, ಐತಿಹಾಸಿಕ ಮತ್ತು ಕೆಲವೊಬ್ಬರು ಸಾಮಾಜಿಕವಾದ ವಿಷಯಗಳನ್ನೇ ತಮ್ಮ ಬಹುತೇಕ ಬರವಣಿಗೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರೆ, ಅವರಲ್ಲೊಬ್ಬರು ಮಾತ್ರವೇ ಕನ್ನಡ ಕಾವ್ಯ ಕ್ಷೇತ್ರದಲ್ಲಿ ನವ್ಯತೆ ಎಂಬ ಹೊಸ ಸಂಪ್ರದಾಯ ಬೆಳೆಸಿದವರು. ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮದ ಯುವಪ್ರವರ್ತಕರು. ಕಥೆ, ಕಾದಂಬರಿ, ನಾಟಕ, ವಿಮರ್ಶೆ ಮುಂತಾದ ಸಾಹಿತ್ಯ ಪ್ರಕಾರಗಳಿಗೆ ಹೊಸ ರೂಪು ಕೊಟ್ಟವರು. ಬೇಂದ್ರೆ, ಕಾರಂತರಂತಹ ದಿಗ್ಗಜರುಗಳೇ ಅವರ ಕಾವ್ಯ ಸೃಷ್ಟಿಗಳಿಗೆ ಮಾರು ಹೋಗಿದ್ದರು. ಸಾಕ್ಷಿ ಎಂಬ ಪತ್ರಿಕೆಯ ಸಂಪಾದಕರಾಗಿ ಸುಮಾರು ಇಪ್ಪತ್ತು ವರ್ಷಗಳಷ್ಟು ಅದನ್ನು ಮುನ್ನಡಿಸಿದ್ದವರು, ಗಾಂಧಿಯವರ ಸ್ವಾತಂತ್ರ್ಯ ಹೋರಾಟದ ಪ್ರಭಾವಕ್ಕೊಳಗಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲೂ ಭಾಗವಹಿಸಿದ್ದ ಹೋರಾಟಗಾರ, ಕವಿ, ಪ್ರಾಧ್ಯಾಪಕ, ಸಾಹಿತ್ಯ ಸಂಘಟಕ, ಬಲಪಂತೀಯ ರಾಜಕಾರಣಿ ಹೀಗೆ ಬಹುಮುಖ ಪ್ರತಿಭೆಯನ್ನು ಹೊಂದಿದ್ದಂತಹ ಶ್ರೀ ಎಂ. ಗೋಪಾಲಕೃಷ್ಣ ಅಡಿಗರ ಬಗ್ಗೆ ತಿಳಿಯೋಣ.

ಆಡಿಗರ ಮೊಗೇರಿಯ ಮನೆ18 ಫೆಬ್ರುವರಿ 1918ರಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಗೇರಿ ಎಂಬ ಹಳ್ಳಿಯಲ್ಲಿ. ಪುರೋಹಿತ ಮನೆತನದಲ್ಲಿ ಶ್ರೀ ಗೋಪಾಲಕೃಷ್ಣ ಅಡಿಗರ ಜನನವಾಯಿತು. ಅಡಿಗರ ತಂದೆ, ಅಜ್ಜ ಅಜ್ಜಿ, ಸೋದರತ್ತೆಯರು, ಚಿಕ್ಕಪ್ಪ ಎಲ್ಲರಿಗೂ ಪದ್ಯ ರಚನೆ ಮಾಡುವ ಅಭ್ಯಾಸವಿತ್ತು. ಅಡಿಗರ ತಂದೆ ರಾಮಪ್ಪ ಅಡಿಗ ಸಂಸ್ಕೃತದಲ್ಲಿ ಶ್ಲೋಕಗಳನ್ನು ಕನ್ನಡದಲ್ಲಿ ದೇಶಭಕ್ತಿ ಗೀತೆಗಳನ್ನು ರಚಿಸುತ್ತಿದ್ದರು. ಅಡಿಗರ ಅಜ್ಜಿಯ ತಮ್ಮ ಬವಳಾಡಿ ಹಿರಿಯಣ್ಣ ಹೆಬ್ಬಾರ ಹೆಸರಾಂತ ಯಕ್ಷಗಾನ ಪಾತ್ರಧಾರಿಯಾಗಿದ್ದರು. ಹೀಗಾಗಿಯೇ ಕಲೆ ಮತ್ತು ಸಾಹಿತ್ಯ ಎನ್ನುವುದು ಅವರಿಗೆ ಹುಟ್ಟಿನಿಂದಲೇ ರಕ್ತಗತವಾಗಿ ಬಂದಿತ್ತು ಎಂದರೂ ತಪ್ಪಾಗಲಾರದು. ಬಾಲ್ಯದಲ್ಲಿ ತಮ್ಮೂರಿನ ಸುತ್ತಮುತ್ತಲಲ್ಲಿ ಎಲ್ಲೇ ಯಕ್ಷಗಾನ ಪ್ರಸಂಗಗಳು ನಡೆದರೂ ಅಲ್ಲಿಗೆ ತಪ್ಪದೇ ಅಡಿಗರು ಹಾಜರಾಗುತ್ತಿದ್ದರಂತೆ. ಅಲ್ಲಿ ನೋಡಿದ ಪ್ರಸಂಗಗಳು, ಹಾಡುಗಳು, ಮಟ್ಟುಗಳ ಕುಣಿತದ ಭಂಗಿಗಳನ್ನು ಮನೆಗೆ ಹಿಂದಿರಿಗೆ ಬಂದ ಮೇಲೆ ಮನೆಯವರ ಮುಂದೆ ಮಾಡಿ ತೋರಿಸುತ್ತಿದ್ದರಂತೆ. ಇಂತಹ ವಾತಾವರಣದಲ್ಲಿ ಬೆಳೆದ ಅಡಿಗರು ತಮ್ಮ ಹದಿಮೂರನೇ ವಯಸ್ಸಿನಲ್ಲೇ ಪದ್ಯ ರಚನೆಗೆ ಮುಂದಾಗಿ, ಅದರಲ್ಲೂ ಭಾಮಿನಿ ಷಟ್ಪದಿ, ವಾರ್ಧಕ ಷಟ್ಪದಿಗಳ ಕಂದ ಪದ್ಯಗಳನ್ನು ರಚಿಸುತ್ತಿದ್ದರಲ್ಲಿ ಅತಿಶಯೋಕ್ತಿಯೇನಲ್ಲ.

ಬೈಂದೂರಿನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ ಅಡಿಗರು ಕುಂದಾಪುರದ ಹೈಸ್ಕೂಲಿನಲ್ಲಿ ಶಿಕ್ಷಣ ಮುಗಿಸಿದರು. ಇದೇ ಸಮಯದಲ್ಲಿ ಶಿವರಾಮ ಕಾರಂತರ ಅಣ್ಣ ಕೋಲ ಕಾರಂತರು ಅಡಿಗರಿಗೆ ಪರಿಚಯವಾಗಿ, ಅವರು ಒಳ್ಳೊಳ್ಳೆಯ ಪುಸ್ತಕಗಳನ್ನು ಅಡಿಗರಿಗೆ ಕೊಟ್ಟು ಅವುಗಳನ್ನು ಹೆಚ್ಚು ಹೆಚ್ಚಾಗಿ ಓದಲು ಪ್ರೋತ್ಸಾಹಿಸುತ್ತಿದ್ದರು. ಆಗೆಲ್ಲಾ ದೇಶಾದ್ಯಂತ ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟದ ಪರಾಕಾಷ್ಠೆಯ ಕಾಲ. ಶಾಲಾ ಕಾಲೇಜಿನ ಹುಡುಗರೆಲ್ಲರೂ ಸ್ವಪ್ರೇರಿತರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕುತ್ತಿದ್ದ ಕಾಲ. ಅಡಿಗರೂ ಇದಕ್ಕೆ ಹೊರತಾಗದೇ, ಅವರೂ ಕೂಡಾ ಹುಮ್ಮಸ್ಸಿನಿಂದಲೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಹೆಂಡದಂಗಡಿಯ ಮುಂದೆ ಜನರನ್ನು ಕಟ್ಟಿಕೊಂಡು ಧರಣಿ ನಡೆಸಿದ್ದರು. ಇದರ ಪರಿಣಾಮವಾಗಿ ಅಡಿಗರು ರಚಿಸಿದ ದೇಶಭಕ್ತಿಯ ಕುರಿತಾದ ಕವನಗಳು ಬೆಂಗಳೂರು, ಮಂಗಳೂರಿನ ಪತ್ರಿಕೆಗಳಲ್ಲಿ ಪ್ರಕಟವಾದವು. ಎಸ್.ಎಸ್.ಎಲ್.ಸಿ ಮುಗಿದ ನಂತರ ಅಡಿಗರು ಮೈಸೂರಿನ ಮಹಾರಾಜ ಕಾಲೇಜಿಗೆ ಸೇರಿ ಕೊಂಡಾಗಲೇ ಅಡಿಗರ ಬದುಕಿನಲ್ಲಿ ಮಹತ್ವದ ತಿರುವನ್ನು ಪಡೆದು ಕೊಂಡಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ