ಮದುವೆಯ ಹೆಸರಿನಲ್ಲಿ ಜೀವನದಲ್ಲಿ ದುಃಖಪಡುವುದು ತಪ್ಪು. ಸ್ವಲ್ಪ ಬುದ್ಧಿವಂತಿಕೆ ಉಪಯೋಗಿಸಿಕೊಂಡು ಅದನ್ನು ಹೇಗೆ ನಿಭಾಯಿಸಬಹುದು ಎಂಬುದನ್ನು ಅರಿಯುವುದು ಅತ್ಯಗತ್ಯ.........!

ರಂಜಿತ್‌ ಮತ್ತು ಅಕ್ಷತಾ ಪ್ರೇಮ ವಿವಾಹವಾಗಿ ಸುಮಾರು 4 ವರ್ಷಗಳಾಗಿದ್ದವು. ದಂಪತಿಗೆ ಚಿಕ್ಕ ಮಗಳಿದ್ದಳು. ಆದರೆ ಇಬ್ಬರ ನಡುವೆ ಇದ್ದ ಪ್ರೀತಿ ಎಲ್ಲಿ ಹಾರಿ ಹೋಯಿತು ಎಂಬುದೇ ಗೊತ್ತಾಗಲಿಲ್ಲ. ಇಬ್ಬರೂ ಶತ್ರುಗಳಂತೆ ಕೋಪದಲ್ಲಿ ಸದಾ ಕುದಿಯುತ್ತಿದ್ದರು. ಅವರಿಬ್ಬರ ಜಗಳ ಎಲ್ಲೆಂದರಲ್ಲಿ, ಯಾವಾಗ ಬೇಕಾದರೂ ಶುರುವಾಗುತ್ತಿತ್ತು. ಇಬ್ಬರಿಗೂ ಕೋಪ ಬಂದಾಗ ತಾವು ಯಾರ ಮುಂದೆ ಜಗಳವಾಡುತ್ತಿದ್ದೇವೆ ಎಂಬ ಅರಿವು ಅವರಿಗೆ ಇರುತ್ತಿರಲಿಲ್ಲ. ಇವರ ಜಗಳವನ್ನು ಮಗಳು ಗಾಬರಿಯಿಂದ ನೋಡುತ್ತಿದ್ದಳು.

ಒಮ್ಮೆ ರಂಜಿತ್‌ತಾಯಿ ಮಗ ಸೊಸೆಯ ಮನೆಗೆ ಹೋಗಿದ್ದರು. ಮಗ ಸೊಸೆ ತಮ್ಮ ಅಭ್ಯಾಸದಂತೆ ತಾಯಿಯ ಎದುರೇ ಜಗಳವಾಡುತ್ತಿದ್ದರು. ಹೆಚ್ಚಿನ ವಾದಗಳು ಮನೆಯ ಕೆಲಸದ ಕುರಿತಾಗಿಯೇ ಇರುತ್ತಿದ್ದ. ರಂಜಿತ್‌ ಕೆಲಸಕ್ಕೆ ಹೋಗಬೇಕಿದ್ದರಿಂದ ಅಕ್ಷತಾ ತನಗೆ ಸಹಾಯ ಮಾಡಬೇಕು ಎಂದುಕೊಳ್ಳುತ್ತಿದ್ದ. ಆದರೆ ಅಕ್ಷತಾ ಯಾವಾಗಲೂ ತನಗೆ ಇಷ್ಟ ಬಂದಾಗ ಕೆಲಸ ಮಾಡುವ ಮನಸ್ಸಿನವಳಾಗಿದ್ದಳು. ಅವಳಿಗೆ ಮನಸ್ಸಿದ್ದರೆ ಕೆಲಸ ಮಾಡುತ್ತಿದ್ದಳು. ಇಲ್ಲದಿದ್ದರೆ ಆ ಕಡೆ ತಿರುಗಿ ನೋಡುತ್ತಿರಲಿಲ್ಲ.

ಇವರಿಬ್ಬರ ವೈಮನಸ್ಸಿನ ವಾತಾವರಣದಿಂದ ಭಯಗೊಂಡ ರಂಜಿತ್‌ ತಾಯಿ, ``ನಿಮ್ಮಿಬ್ಬರಲ್ಲಿ ಹೊಂದಾಣಿಕೆ ಆಗದಿದ್ದರೆ, ನೀವಿಬ್ಬರೂ ಬೇರೆಯಾಗಿ ವಾಸಿಸಬಹುದು. ಬಲವಂತವಾಗಿ ಒಟ್ಟಿಗೆ ಅತೃಪ್ತಿಯಿಂದ ಬದುಕುವ ಅಗತ್ಯವಿಲ್ಲ. ನಿಮ್ಮ ನಡವಳಿಕೆಗಳು ನಿಮ್ಮ ಮಗುವಿನ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ.

``ನೀವಿಬ್ಬರೂ ಒಬ್ಬರನ್ನೊಬ್ಬರು ಯಾವ ಗುಣಗಳಿಂದಾಗಿ ಲವ್ ಮ್ಯಾರೇಜ್‌ ಮಾಡಿಕೊಂಡಿರಿ ಎಂಬ ಬಗ್ಗೆ ಮೊದಲು ಯೋಚಿಸಿ. ನೀವು ಪರಸ್ಪರ ಬಹಳ ಇಷ್ಟಪಡುತ್ತೀರ ಎಂದೇ ನಾವು ಭಾವಿಸಿದ್ದೆ. ಆದರೆ ಇಂದು ನಿಮ್ಮ ನಡವಳಿಕೆಗಳನ್ನು ನೋಡಿದರೆ ಹಾಗನ್ನಿಸುತ್ತಿಲ್ಲ. ಇಂತಹ  ಪರಿಸ್ಥಿತಿಯಲ್ಲಿ ನೀವು ಬೇರೆಯಾಗಿರುವುದು ಉತ್ತಮ,'' ಎಂದು ಹೇಳಿದರು.

ನಂತರ ಇಬ್ಬರೂ ತಮ್ಮ ವಿರುದ್ಧವಾಗಿದ್ದ ಮನೋಭಾವವನ್ನು ಸರಿಪಡಿಸಿಕೊಳ್ಳಲು ನಿರ್ಧರಿಸಿದರು. ಒಬ್ಬರನ್ನೊಬ್ಬರು ಅರಿತುಕೊಳ್ಳಲು ಆರಂಭಿಸಿದರು. ಪರಸ್ಪರರ ಬಗ್ಗೆ ಸೂಕ್ಷ್ಮವಾಗಿ ನೋಡಿಕೊಂಡರು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಚಿಕ್ಕಪುಟ್ಟ ವಿಷಯಗಳಿಗೆ ಜಗಳ

ಇಲ್ಲಿ ಇಬ್ಬರೂ ಒಂದೇ ರೀತಿಯ ಸ್ವಭಾವದವರಾಗಿದ್ದರು ಮತ್ತು ಆಕಸ್ಮಿಕವಾಗಿ ಘಟನೆಗಳು ಸಂಭವಿಸಿದವು. ಕೆಲವೊಮ್ಮೆ ದಂಪತಿಯಲ್ಲಿ ಒಬ್ಬ ವ್ಯಕ್ತಿ ತುಂಬಾ ಕೋಪದ ಸ್ವಭಾವ ಹೊಂದಿರುತ್ತಾರೆ. ಈ ಕೋಪದ ವರ್ತನೆ ಯಾರಿಗಾದರೂ ಸಂಭವಿಸಿಬಹುದು. ಅಂತಹ ನಡವಳಿಕೆಯನ್ನು ಹೊಂದಿರುವವರು ಇತರರ ಮೇಲೆ ಸಿಡುಕಲು ಆರಂಭಿಸುತ್ತಾರೆ. ಅಲ್ಲದೆ, ಚಿಕ್ಕಪುಟ್ಟ ವಿಷಯಗಳಿಗೂ ಕೋಪಗೊಳ್ಳುತ್ತಾರೆ. ಸಂಗಾತಿಯ ಎದುರು ಬಹಳ ಕೆಟ್ಟದಾಗಿ ವರ್ತಿಸುತ್ತಾರೆ. ಪ್ರೀತಿ, ಗೌರವ, ಕಾಳಜಿ ಮತ್ತು ಸಂವೇದನಾಶೀಲತೆ ಅವರ ನಿಘಂಟಿನಿಂದ ಕಾಣೆಯಾಗಿಬಿಟ್ಟಿರುತ್ತವೆ.

ಅನೇಕ ಬಾರಿ ಅಂತಹ ಗಂಡ ಅಥವಾ ಹೆಂಡತಿ ಇತರರ ಮುಂದೆ ಚೆನ್ನಾಗಿಯೇ ನಡೆದುಕೊಳ್ಳುತ್ತಾರೆ. ಇತರರೊಂದಿಗೆ ಅವರ ನಡವಳಿಕೆಯೂ ಸಹ ಪ್ರೀತಿಯಿಂದ ಕೂಡಿರುತ್ತದೆ. ಕೋಪಗೊಂಡ ಸಂಗಾತಿ ಎರಡು ರೀತಿಯಲ್ಲಿರುತ್ತಾರೆ. ಒಬ್ಬರು ಯಾವಾಗಲೂ ತಮ್ಮ ಸಂಗಾತಿಯ ಮೇಲೆ ಕೋಪಗೊಳ್ಳುವವರಾಗಿದ್ದರೆ, ಇನ್ನೊಬ್ಬರ ಕೋಪ ಅನಿರೀಕ್ಷಿತವಾಗಿರುತ್ತದೆ. ಅವರು ಯಾವುದಾದರೂ ಕೆಲಸದಲ್ಲಿ ಮಗ್ನರಾಗಿರುತ್ತಾರೆ. ಎರಡು ಪಾತ್ರೆಗಳು ಇರುವಲ್ಲಿ ಕೆಲವು ಘರ್ಷಣೆಗಳು ಉಂಟಾಗುತ್ತವೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಆದರೆ, ಕೆಲವು ವರ್ತನೆಗಳು ಹೆಚ್ಚು ಹೆಚ್ಚು ಪುನರಾವರ್ತನೆಯಾದಾಗ ಅದು ಚಿಂತನೆಯ ವಿಷಯವಾಗಿರುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ