ನಿಮ್ಮ ಸೌಂದರ್ಯದ ಬಗ್ಗೆ ಯಾವಾಗಲೂ ಜಾಗರೂಕರಾಗಿರಲು ಬಯಸುವಿರಾದರೆ ನಿಮ್ಮ ಕಾಸ್ಮೆಟಿಕ್‌ ಬಾಕ್ಸಿನಲ್ಲಿ ಸೇರಿ ನಿಮ್ಮ ಸೌಂದರ್ಯಕ್ಕೆ ಇನ್ನೆರಡು ಕೋಡು ಮೂಡಿಸುವಂತಹ ಯಾವ ಯಾವ ಉತ್ಪನ್ನಗಳು ಮಾರುಕಟ್ಟೆಯಲ್ಲಿವೆ ಎಂದು ತಿಳಿದುಕೊಳ್ಳುವುದು ಬಹಳ ಅಗತ್ಯ. ಇದರ ಜೊತೆಗೆ ನೀವು ಕೊಳ್ಳಬೇಕೆಂದಿರುವ ಕಾಸ್ಮೆಟಿಕ್‌ ಪ್ರಾಡಕ್ಟ್ ಟ್ರೆಂಡ್‌ನಲ್ಲಿದೆಯೇ ಇಲ್ಲವೇ ಎಂಬುದನ್ನು ಅಗತ್ಯವಾಗಿ ತಿಳಿದುಕೊಳ್ಳಿ.

ಜೊತೆಗೆ ಮೇಕಪ್‌ನಲ್ಲಿ ಹೊಸದು ಯಾವುದು? ಯಾವುದು ಹಳೆಯದಾಯಿತು ಎಂಬುದನ್ನೂ ತಿಳಿದುಕೊಳ್ಳಬೇಕು.

ಸನ್‌ಸ್ಕ್ರೀನ್‌ ಬೇಸಿಗೆಯಾಗಲಿ, ಚಳಿಗಾಲವಾಗಲೀ, ಸನ್‌ಸ್ಕ್ರೀನ್‌ನ್ನು ನಿಮ್ಮ ಕಾಸ್ಮೆಟಿಕ್‌ ಬಾಕ್ಸಿನಲ್ಲಿಟ್ಟುಕೊಳ್ಳಿ. ವಿಶೇಷವಾಗಿ ಬೇಸಿಗೆಯಲ್ಲಿ ಮನೆಯಿಂದ ಆಚೆ ಹೊರಡುವ ಅರ್ಧ ಗಂಟೆ ಮೊದಲು ಸನ್‌ಸ್ಕ್ರೀನ್‌ ಹಚ್ಚುವುದು ಬಹಳ ಅಗತ್ಯ. ನಿಮ್ಮ ತ್ವಚೆಗೆ ತಕ್ಕಂತೆ ಎಸ್‌ಪಿಎಫ್‌ ಅಥವಾ 30+ ಸನ್‌ಸ್ಕ್ರೀನ್‌ನ್ನು ಆರಿಸಿಕೊಳ್ಳಿ.

ಇದಕ್ಕಾಗಿ ನೀವು ನೇಚರ್‌ ಎಸೆನ್ಸ್ ನ ಸನ್‌ ಬರ್ನ್‌ ಎಸ್‌ಪಿಎಫ್‌/40, ಲ್ಯಾಕ್ಟೋ ಟ್ಯಾನ್‌ ಕ್ಲಿಯರ್‌, ಲ್ಯಾಕ್ಮೆ ಫಂಡಮೆಂಟ್ಸ್‌ ಅಲ್ಟ್ರಾ ಮ್ಯಾಟ್‌ ಸನ್‌ಸ್ಕ್ರೀನ್‌, ಲೋಟಸ್‌ ಮತ್ತು ಆಯುರ್‌ ಹರ್ಬಲ್ ಸನ್‌ಸ್ಕ್ರೀನ್‌ ನಿಮ್ಮ ತ್ವಚೆಗೆ ತಕ್ಕಂತೆ ಖರೀದಿಸಬಹುದು.

ಮೇಕಪ್‌ ಬೇಸ್‌

Mekeup-2

ಕಾಸ್ಮೆಟಿಕ್‌ ಬಾಕ್ಸ್ ನ ಇನ್ನೊಂದು ಪ್ರಮುಖ ಭಾಗ ಮೇಕಪ್‌ ಬೇಸ್‌ ಅಂದರೆ ಫೌಂಡೇಶನ್‌. ಇದು ನಿಮ್ಮ ಮುಖದ ಕಲೆಗಳನ್ನು ಅಡಗಿಸುವಲ್ಲಿ ಸಹಾಯ ಮಾಡುತ್ತದೆ. ಇದರಿಂದ ನಿಮ್ಮ ಸ್ಕಿನ್‌ ಈವನ್‌ ಟೋನ್‌ ಆಗಿ ಕಾಣುತ್ತದೆ. ಅದಕ್ಕೆ ನೀವು ಲ್ಯಾಕ್ಮೆ ನೈನ್‌ ಟು ಫೈಲ್‌, ಕಲರ್‌ ಎಸೆನ್ಸ್ ಮೇಕಪ್‌ ಬೇಸ್‌, ಲೋರಿಯಲ್, ರೋಲ್ ‌ಆನ್‌ ಟು ಮ್ಯಾಚ್‌ ಫೌಂಡೇಶನ್‌ ಕೂಡ ಉಪಯೋಗಿಸಬಹುದು. ಫೌಂಡೇಶನ್‌ನ ಲೈಟ್‌ ಎಫೆಕ್ಟ್ ಟಚ್‌ ಆಗಬೇಕು. ಇಲ್ಲದಿದ್ದರೆ ಫೌಂಡೇಶನ್‌ನ ಥಿಕ್‌ ಲೇಯರ್ ನಿಮ್ಮ ಮೇಕಪ್‌ನ್ನು ಹಾಳು ಮಾಡುತ್ತದೆ. ಕೇಕ್‌ ಫೌಂಡೇಶನ್‌ ಫ್ಯಾಷನ್‌ನಿಂದ ಔಟ್‌ ಆಗಿಬಿಟ್ಟಿದೆ.

ಕಾಂಪ್ಯಾಕ್ಟ್

Mekeup-3

ಕಾಂಪ್ಯಾಕ್ಟ್ ನಿಮ್ಮ ಸ್ಕಿನ್‌ನಿಂದ ಹೆಚ್ಚುವರಿ ಆಯಿಲ್‌ನ್ನು ಕಡಿಮೆಗೊಳಿಸಿ ಈವನ್‌ ಲುಕ್ಸ್ ಕೊಡುತ್ತದೆ. ಆದ್ದರಿಂದ ಕಾಸ್ಮೆಟಿಕ್‌ ಬಾಕ್ಸ್ ನಲ್ಲಿ ಇದನ್ನು ಸೇರಿಸಲು ಮರೆಯದಿರಿ. ಲ್ಯಾಕ್ಮೆ, ಲೋಟಸ್‌, ಹರ್ಬಲ್ ನ್ಯಾಚುರಲ್ ಬ್ಲೆಂಡ್‌, ಕಲರ್‌ ಬಾರ್‌ ಕಾಂಪ್ಯಾಕ್ಟ್ ಉತ್ತಮ ಆಯ್ಕೆ. ಕಾಂಪ್ಯಾಕ್ಟ್ ನ್ನು ಎಂದಿಗೂ ಓವರ್‌ ಡೇಪ್‌ ಮಾಡಬೇಡಿ. ಏಕೆಂದರೆ ಓವರ್‌ ಡೇಪಿಂಗ್‌ ಕಾಂಪ್ಯಾಕ್ಟ್ ಫ್ಯಾಷನ್ ನಲ್ಲಿ ಇಲ್ಲ.

ಬ್ಲಶರ್

Mekeup-4

ಮೇಕಪ್‌ ಬಾಕ್ಸ್ ನ ನಾಲ್ಕನೇ ಭಾಗ ಬ್ಲಶರ್‌. ಈಗ ನ್ಯೂಡ್‌ ಮೇಕಪ್‌ ಟ್ರೆಂಡ್‌ನಲ್ಲಿದ್ದು ಅದನ್ನು ಗಮನದಲ್ಲಿಟ್ಟುಕೊಂಡು ಪೀಚ್‌, ಪಿಂಕ್‌ ಪ್ಲಮ್, ಲೈಟ್‌ ಬ್ರಾಂಝ್ ಬ್ಲಶರ್‌ನ್ನು ಉಪಯೋಗಿಸಿ. ಇದರೊಂದಿಗೇ ಶೈನಿ ಎಫೆಕ್ಟ್ ಬ್ಲಶರ್‌ನ್ನೂ ಉಪಯೋಗಿಸಬಹುದು. ಪೀಚ್‌, ಪಿಂಕ್‌ ಬ್ಲಶರ್‌ ಕಲರ್‌ ಎಸೆನ್ಸ್, ಮೆಬಿಲಿನ್‌ ಡ್ರೀಮ್ ಮೂಜ್‌ ಬ್ಲಶ್‌, ದಿ ಬಾಡಿ ಶಾಪ್‌ ಚೀಕ್‌ ಬ್ಲಶ್‌ ಉತ್ತಮ ಆಯ್ಕೆಗಳಾಗಿವೆ. ಗಾಢ ರೆಡ್‌, ಬ್ರೌನ್‌, ಮೆರೂನ್‌ ಬ್ಲಶರ್‌ ಚಾಲ್ತಿಯಲ್ಲಿಲ್ಲ.

ಐ ಶ್ಯಾಡೋ

Mekeup-5

ಕಣ್ಣುಗಳನ್ನು ಹೈಲೈಟ್‌ ಮಾಡಲು ಐ ಶ್ಯಾಡೋ ಉಪಯೋಗಿಸಿ. ಈಗ ಸ್ಮೋಕಿ ಐ ಮೇಕಪ್‌ ಸಾಕಷ್ಟು ಚಾಲ್ತಿಯಲ್ಲಿದೆ. ಕಣ್ಣುಗಳನ್ನು ಹೈಲೈಟ್‌ ಮಾಡಲು ಸಿಲ್ವರ್‌ ಮತ್ತು ತೆಳು ಸ್ಲೇಟ್‌ ಬಣ್ಣದ ಐ ಕಲರ್‌ ಉಪಯೋಗಿಸಿ. ಹೆವಿ ಗ್ಲಿಟರ್‌ ಉಪಯೋಗಿಸಬೇಡಿ. ಈಗೀಗ ಫಾರೆಸ್ಟ್ ಗ್ರೀನ್‌, ಪಿಂಕ್‌ ಬ್ರೀಜ್‌, ಪರ್ಲ್ ಐ ಶೇಡ್ಸ್ ಚಾಲ್ತಿಯಲ್ಲಿವೆ. ಏವನ್‌ ಟ್ರೂ ಕಲರ್‌, ಕಲರ್‌ಎಸೆನ್ಸ್, ರೆವ್ಲಾನ್‌ ಉತ್ತಮವಾಗಿರುತ್ತವೆ.

ಮಸ್ಕರಾ ಮತ್ತು ಐ ಲೈನರ್

Mekeup-6

ಈಗೀಗ ಐ ಮೇಕಪ್‌ನಲ್ಲಿ ಲಿಕ್ವಿಡ್‌ ಮತ್ತು ವಾಲ್ಯೂಮ್ ಜೆಲ್ ‌ಪ್ರಾಡಕ್ಟ್ ಗಳನ್ನು ಪ್ರಶಂಸಿಸಲಾಗುತ್ತಿದೆ. ಮಸ್ಕರಾದಲ್ಲೂ ವಿಭಿನ್ನ ಬಣ್ಣಗಳು ಬರುತ್ತಿವೆ. ಅವುಗಳಲ್ಲಿ ಟ್ರಾನ್ಸ್ ಪರೆಂಟ್‌, ಬ್ಲ್ಯೂ, ಕಾಪರ್‌, ಸಿಲ್ವರ್‌, ಟರ್ಕಿಶ್‌ ಸಾಕಷ್ಟು ಪ್ರಚಲಿತವಾಗಿವೆ. ವಿಶೇಷವಾಗಿ ಕಾಜಲ್ ಮತ್ತು ಲೈನರ್‌ ಹಚ್ಚಿದ ನಂತರ ನಿಮ್ಮ ರೆಪ್ಪೆಗಳ ಮೇಲೆ ಮಸ್ಕರಾದ 2-3 ಕೋಟ್‌ಗಳನ್ನು ಹಾಕಿ ಅವನ್ನು ಕರ್ಲ್ ಮಾಡಿ. ಏವನ್‌, ಮೆಬಿಲಿನ್‌, ರೆವ್ಲಾನ್‌ ಉತ್ತಮವಾಗಿರುತ್ತವೆ. ಡ್ರೈ ಮೇಕಪ್‌ ಔಟ್‌ ಆಫ್‌ ಫ್ಯಾಷನ್‌ ಆಗಿದೆ. ಬ್ರೌನ್‌ ಐ ಪೆನ್ಸಿಲ್ ಉಪಯೋಗಿಸಬೇಡಿ. ಇವೇ ಬ್ರ್ಯಾಂಡ್‌ಗಳ ವಿಭಿನ್ನ ರೀತಿಯ ಐ ಪೆನ್ಸಿಲ್‌ಗಳು ಮಾರ್ಕೆಟ್‌ನಲ್ಲಿ ಲಭ್ಯವಿವೆ.

ಲಿಪ್‌ಸ್ಟಿಕ್‌

Mekeup-7

ಈಗ ಲಿಪ್‌ಸ್ಟಿಕ್‌ಗಿಂತ ಹೆಚ್ಚಾಗಿ ಲಿಪ್‌ ಗ್ಲಾಸ್‌ ಮತ್ತು ಲಿಪ್‌ ಬಾಮ್ ಚಾಲ್ತಿಯಲ್ಲಿವೆ. ವಿಶೇಷವಾಗಿ ಡೇ ಮೇಕಪ್‌ನಲ್ಲಿ ಲಿಪ್‌ ಗ್ಲಾಸ್ ಹಾಗೂ ರಾತ್ರಿಯಲ್ಲಿ ಡಾರ್ಕ್‌ ಅಥವಾ ಮೀಡಿಯಂ ಲಿಪ್‌ಸ್ಟಿಕ್‌ ಆರಿಸಿಕೊಳ್ಳಬಹುದು. ನಿಮ್ಮ ಕಾಸ್ಮೆಟಿಕ್‌ ಬಾಕ್ಸ್ ನಲ್ಲಿ ಲಿಪ್‌ಸ್ಟಿಕ್ ನೊಂದಿಗೆ ಲಿಪ್‌ ಗ್ಲಾಸ್‌ನ ಮಹತ್ವವನ್ನೂ ಅರಿತುಕೊಳ್ಳಿ. ಲಿಪ್‌ಗ್ಲಾಸ್‌ನಲ್ಲಿ ಲೋರಿಯಲ್, ನಿವ್ಯಾ ಉತ್ತಮ ಬ್ರ್ಯಾಂಡ್‌ ಆಗಿವೆ. ಲಿಪ್‌ಸ್ಟಿಕ್‌ನಲ್ಲಿ ಕಲರ್‌ ಎಸೆನ್ಸ್, ರೆವ್ಲಾನ್‌, ಮೆಬಿಲಿನ್‌ ಕೂಡ ಉತ್ತಮ. ನ್ಯೂಡ್‌ ಶೇಡ್ಸ್ ಸಾಕಷ್ಟು ಚಾಲ್ತಿಯಲ್ಲಿದೆ. ಆದ್ದರಿಂದ ಇನ್ನೂ ನಿಮ್ಮ ಮೇಕಪ್‌ ಬಾಕ್ಸ್ ನಲ್ಲಿ ಅಗತ್ಯವಾಗಿ ಸೇರಿಸಿಕೊಳ್ಳಿ.

ನೇಲ್ ಪೇಂಟ್

Mekeup-8

ಆರ್ಟಿಫಿಶಿಯಲ್ ನೇಲ್ ‌ಮತ್ತು ಅವುಗಳ ಮೇಲೆ ನೇಲ್ ಆರ್ಟ್‌ ಈಗ ಚಾಲ್ತಿಯಲ್ಲಿವೆ. ಆದ್ದರಿಂದ ಪ್ಲೇನ್‌ ನೇಲ್ ಪಾಲಿಶ್‌ ಹಚ್ಚಿ ಅದರ ಮೇಲೆ ಇನ್ನೊಂದು ನೇಲ್ ‌ಪಾಲಿಶ್‌ನಿಂದ ಡಿಸೈನ್‌ ಮಾಡಿ. ಚೌಕಾಕಾರದ ಉಗುರು ಕೂಡ ಫ್ಯಾಷನ್‌ನ ಒಂದು ಭಾಗವಾಗಿದೆ. ನ್ಯೂಡ್‌ ಹಾಗೂ ಬ್ರೈಟ್‌ ಎರಡೂ ಕಲರ್‌ ಫ್ಯಾಷನ್‌ನಲ್ಲಿದೆ. ಗಾಢ ಬಣ್ಣಗಳಿಂದ ಕೊಂಚ ದೂರ ಇರಿ. ವಿಶೇಷವಾಗಿ ಡೇ ಟೈಂನಲ್ಲಿ. ಹೆಚ್ಚು ಉದ್ದದ ಉಗುರುಗಳು ಫ್ಯಾಷನ್‌ನಲ್ಲಿ ಇಲ್ಲ. ರೆವ್ಲಾನ್‌, ಲ್ಯಾಕ್ಮೆ, ಮೆಬಿಲಿನ್‌ ಉತ್ತಮ ಬ್ರ್ಯಾಂಡ್ ಗಳಾಗಿವೆ.

ಆ್ಯಂಟಿ ಏಜಿಂಗ್‌ ಕ್ರೀಂ

Mekeup-9

ನಿಮ್ಮ ಮೇಕಪ್‌ ಬಾಕ್ಸ್ ನಲ್ಲಿ ಆ್ಯಂಟಿ ಏಜಿಂಗ್‌ ಕ್ರೀಂ ಇಡಲು ಮರೆಯದಿರಿ. ವಿಶೇಷವಾಗಿ ನಿಮ್ಮ ಸೌಂದರ್ಯ ಬಹಳ ಹೊತ್ತು ಇರಬೇಕೆಂದುಕೊಂಡಾಗ. ಲೋರಿಯಲ್ ರೀಲೈಟ್‌ ಲಿಫ್ಟ್ ನೈಟ್‌, ಗಾರ್ನಿಯರ್‌ ರಿಂಕ್‌ ಲಿಫ್ಟ್, ನೇಚರ್‌ ಎಸೆನ್ಸ್, ಏಜ್‌ ಡಿಫೈನ್ ಕ್ರೀಂ ಮತ್ತು ಪಾಂಡ್ಸ್ ಗೋಲ್ಡ್ ರೇಡಿಯನ್ಸ್ ನಿಮಗೆ ಬಳಸಲು ಉತ್ತಮವಾದ ಉತ್ಪನ್ನಗಳು.

– ವನಿತಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ