ಮೀನ್‌ ಆರೋಡಾ ಶಿಕ್ಷಣ ಕ್ಷೇತ್ರದಲ್ಲಿ ಒಂದು ಚಿರಪರಿಚಿತ ಹೆಸರು. ಮೀನ್‌ ಶಾಮ ರಾಂಕ್‌ ಪ್ರೀಸ್ಕೂಲ್‌ನ ಎಕ್ಸಿಕ್ಯುಟಿವ್ ‌ಡೈರೆಕ್ಟರ್‌ಮತ್ತು ಶಾಮ್ ಪೇರ್ಡ್‌ ಫ್ಯೂಚರಿಸ್ಟ್ ಶಾಲೆಯ ಫೌಂಡರ್‌ ಡೈರೆಕ್ಟರ್‌ ಕೂಡ ಆಗಿದ್ದಾರೆ.  ಅವರೊಡನೆ ನಡೆಸಿದ ಮಾತುಕಥೆಯ ಕೆಲವು ಮುಖ್ಯ ಅಂಶಗಳು ಹೀಗಿವೆ :

ಪ್ಲೇ ಸ್ಕೂಲ್ ‌ಆಯ್ಕೆ ಮಾಡುವಾಗ ಮೊದಲು ಮಕ್ಕಳ ಸುರಕ್ಷತೆ ಬಗ್ಗೆ ಹಾಗೂ ಪ್ಲೇ ಸ್ಕೂಲ್ ‌ಮನೆಯಿಂದ ಎಷ್ಟು ದೂರವಿದೆ ಎಂಬುದನ್ನು ಗಮನಿಸಿ.

ಸ್ಕೂಲಿನ ಸಕ್ಸಸ್‌ ಬಗ್ಗೆ ಹಾಗೂ ಅದು ಎಷ್ಟು ವರ್ಷಗಳಿಂದ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದೆ ಎಂದು ತಿಳಿದುಕೊಳ್ಳಿ.

ಪ್ರತಿ 5 ಕಿ.ಮೀ. ದೂರದಲ್ಲಿ ನಿಮಗೆ ಶಾಮ ರಾಕ್‌ ಸ್ಕೂಲ್ ‌ಸಿಗುತ್ತದೆ.

ಶಾಲೆಗೆ ಹೋಗಿ ಅದರಲ್ಲಿ ಯಾವ ರೀತಿಯ ಸೌಲಭ್ಯಗಳಿವೆ ಎಂದು ತಿಳಿದುಕೊಳ್ಳಿ.

ಆ ಶಾಲೆಯಿಂದ ಉತ್ತೀರ್ಣರಾದ ಮಕ್ಕಳ ಪೋಷಕರೊಂದಿಗೆ ಮಾತನಾಡಿ.

ಮಕ್ಕಳಿಗೆ ಎಂದೂ ಸುಳ್ಳು ಹೇಳಬೇಡಿ.

ಮಕ್ಕಳು ಹಟ ಮಾಡಿದರೆ ಬೈಯುವ ಬದಲು ತಿಳಿವಳಿಕೆ ಹೇಳಿ.

ಆಗಾಗ್ಗೆ ಅವರ ಬ್ಯಾಗ್‌ನ್ನು ಚೆಕ್‌ ಮಾಡಿ.

ಮಕ್ಕಳಿಗೆ ಯಾವುದರಲ್ಲಿ ಆಸಕ್ತಿ ಇದೆ ಎಂದು ತಿಳಿದುಕೊಳ್ಳಿ. ಅವರಿಗೆ ಎಲ್ಲವನ್ನೂ ಮಾಡಲು ಬಿಡಿ. ಅದರಿಂದ ತಮಗೆ ಯಾವುದರಲ್ಲಿ ಹೆಚ್ಚು ಆಸಕ್ತಿ ಇದೆ ಎಂದು ಅವರಿಗೆ ತಿಳಿಯುತ್ತದೆ. ನಂತರ ಅವರು ತಮಗೆ ಆಸಕ್ತಿಯುಳ್ಳ ಕ್ಷೇತ್ರಕ್ಕೆ ಹೋಗಲು ಬಿಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ