ಸೈಕಲ್‌ಗೀಗ ಡಿಮ್ಯಾಂಡೋ ಡಿಮ್ಯಾಂಡ್ : ಸೈಕಲ್‌ನ್ನು ಈಗ ಇನ್ನಷ್ಟು ಜನಪ್ರಿಯಗೊಳಿಸುವ ಪ್ರಯತ್ನ ಈಗ ಎಲ್ಲಾ ದೇಶಗಳಲ್ಲೂ ಕಂಡುಬರುತ್ತಿದೆ. ಕೆಲವು ದೇಶಗಳಲ್ಲಂತೂ ಪ್ರಮುಖ ಹೆದ್ದಾರಿಗಳ ಒಂದು ಬದಿಯನ್ನು ಸೈಕಲ್ ಚಾಲನೆಗೆಂದೇ ಮೀಸಲಿಡಲಾಗಿದೆ. ಇದಕ್ಕೆ ಸಪೋರ್ಟ್ ಮಾಡಲೆಂದೇ ಬ್ರಿಟನ್ನಿನ ರಾಜಕುಮಾರ ವಿಲಿಯಂ, ಕ್ಯಾಥರೀನ್ ಜೊತೆ ಒಂದು ಸೈಕಲ್ ರೇಸ್‌ನ್ನು ಉದ್ಘಾಟಿಸಲೆಂದು ಖುಷಿಯಾಗಿ ಧಾವಿಸಿ ಬಂದಿದ್ದಾನೆ. 101 ಚರಣಗಳ ಈ ರೇಸ್ ಇಂಗ್ಲೆಂಡ್‌ನಲ್ಲಿ ಶುರುವಾಗಿ ಪ್ಯಾರಿಸ್‌ನಲ್ಲಿ ಮುಗಿಯಿತು! ನಮ್ಮ ದೇಶದ ಎಲ್ಲಾ ಮಹಾನಗರಗಳಲ್ಲೂ ಇದನ್ನು ಮತ್ತೆ ಫ್ಯಾಷನ್‌ಗೆ ಮರಳಿಸುವ ತಯಾರಿ ನಡೆದಿದೆ, ನೀವು ಟ್ರೈ ಮಾಡಿ ನೋಡಿ!
ಮಾನವತೆಗೆ ಎಲ್ಲಿದೆ ಮರ್ಯಾದೆ? : ಮಕ್ಕಳನ್ನು ದತ್ತು ಪಡೆದು ಅವರನ್ನು ಮನೆಯ ಕೆಲಸದಾಳುಗಳಾಗಿ ಇರಿಸಿಕೊಳ್ಳುವುದು ಅಥವಾ ಸೆಕ್ಸ್ ಗೆ ಬಳಸಿಕೊಳ್ಳುವುದು ಆಧುನಿಕ ಯುಗದ ಲಕ್ಷಣವಾಗುತ್ತಿದೆ. ಈ ಕಾರಣ ಅವರು ಅಪಾರ ಯಾತನೆಪಡುವಂತಾಗುತ್ತದೆ. ಕಾಂಬೋಡಿಯಾದ ಒಬ್ಬ 4 ವರ್ಷದ ಹುಡುಗಿಯನ್ನು ಅವಳ ಮಾಲೀಕಳು 8-8 ಗಂಟೆ ಕಾಲ ಸರಪಳಿಯಿಂದ ಕಟ್ಟಿಹಾಕುತ್ತಿದ್ದಳು. ಬಹಳ ಕಷ್ಟದಿಂದ ಅವಳನ್ನು ಪೊಲೀಸ್ ನೆರವಿನೊಂದಿಗೆ ಬಿಡಿಸಿಕೊಳ್ಳಲಾಯಿತು. ನಮ್ಮ ದೇಶದಲ್ಲೂ ಇಂಥ ರಾಕ್ಷಸೀ ಕೃತ್ಯಕ್ಕೆ ಏನೇನೂ ಕೊರತೆಯಿಲ್ಲ.
ವಿಚಿತ್ರ ಹಬ್ಬ! : ಎಲ್ಲಾ ಧರ್ಮಗಳಲ್ಲೂ ಪವಾಡದ ಹೆಸರಿನಲ್ಲಿ ವಿಚಿತ್ರ ಹಬ್ಬಗಳು ಆಚರಣೆಯಲ್ಲಿವೆ. ರಷ್ಯಾದ ಬೇಲಾರೂಸ್‌ನಲ್ಲಿ ಇವಾನ್ ಕುಪಾಲಾ ನೈಟ್ ಎಂಬ ಹಬ್ಬದ ನೆಪದಲ್ಲಿ, ನಮ್ಮಲ್ಲಿ ಸಂಕ್ರಾಂತಿಗೆ ಗೋವುಗಳ ಕಿಚ್ಚು ಹಾಯಿಸುವಂತೆ ಇಲ್ಲಿ ತಾವೇ ಅದನ್ನು ಹಾರುತ್ತಾರೆ. ರೋಗಗಳು ದೂರವಾಗಿ, ಅದೃಷ್ಟ ಕೈಹಿಡಿಯುತ್ತದೆ ಎಂದು ನಂಬುತ್ತಾರೆ. ಅದು ಸಿಕ್ಕಿತೋ ಇಲ್ಲವೋ, ಭಲೇ ಮಜಾ ಎಂಬುದಂತೂ ನಿಜ.
ಅನುಪಮ ಕಲೆ : ಇಗೊಳ್ಳಿ, ಸ್ಟ್ರೀಟ್ ಆರ್ಟ್‌ನ ಮತ್ತೊಂದು ನಮೂನೆ! ಫ್ರಾಸ್ ನ ನಾತೆ ಎಂಬ ನಗರದಲ್ಲಿ ಭಾರೀ ಮೀನುಗಳ ಮೂಳೆಗಳ ಕಲಾತ್ಮಕ ಜೋಡಣೆ ಗಮನಿಸಿ.
ಇದೆಂಥ ಕುರುಡು ಪ್ರೀತಿ? : `ಏ…. ನನ್ನ ಮಗಳನ್ನು ಬೈಯಲು ನೀನ್ಯಾರು….? ಮಾಡ್ತೀನಿ ತಾಳು,’ ಎನ್ನುತ್ತಾ ಒಬ್ಬ ಕೋಪೋದ್ರಿಕ್ತಳಾದ ತಾಯಿ, ಫ್ರಾನ್ಸ್ ನ ಪ್ಯಾರಿಸ್ ನಗರದಲ್ಲಿ ತನ್ನ ಮಗಳ ಶಾಲೆಗೆ ನುಗ್ಗಿ ಅವಳ ಟೀಚರ್‌ನ ಜುಟ್ಟು ಹಿಡಿದು ತದುಕಿದ್ದಲ್ಲದೆ, ಎಲ್ಲಾ ಮಕ್ಕಳ ಮುಂದೆ ಬಾಕು ಹಾಕಿ ಬಿಡುವುದೇ? ಟೀಚರ್ ಅಲ್ಲೇ ಸ್ಪಾಟ್! ಅತಿಯಾದರೆ ಅಮೃತ ವಿಷ ಅಲ್ಲವೇ…..?
ಬೇಕೇಬೇಕು ಜಂತರ್ ಮಂತರ್ : ಸ್ಪೇನಿನ ಸರ್ಕಾರ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿದಿನ ನಡೆಯುವ ಹರತಾಳ, ಪ್ರದರ್ಶನಗಳಂಥ ಕಾರ್ಯಕ್ರಮಗಳ ಮೇಲೆ ನಿಷೇಧ ಹೇರಿದಾಗ ಅಲ್ಲಿನ ಮ್ಯಾಡ್ರಿಡ್ ನಗರದಲ್ಲಿ ಅದನ್ನು ವಿರೋಧಿಸಿ ಬಲವಾದ ಪ್ರದರ್ಶನ ನಡೆಯಿತು.
ಖುಲ್ಲಂಖುಲ್ಲ ಮಹಾಮಾರಿಯ ಮಾರಾಟ : ಅಮೆರಿಕಾದಲ್ಲಿ ಈಗ ಎಲ್ಲೆಡೆ ಮರಿಜುಲಾನಾದಂಥ ಮೃತ್ಯುಕಂಟಕ ಡ್ರಗ್ಸ್ ನ್ನು ಕಾನೂನುಬದ್ಧವಾಗಿಯೇ ಖುಲ್ಲಂಖುಲ್ಲ ಮಾರಲಾಗುತ್ತಿದೆ! ಸರ್ಕಾರವಂತೂ ಇದರ ಮಾರಾಟ ತಡೆಯಲಾಗದೆ ಕಣ್ಣೀರಿಡುತ್ತಿದೆ. ಎಸ್ಸಾ ಅಂಗಡಿಗಳಲ್ಲೂ ಈ ಲಘು ಮಾದಕ ಡ್ರಗ್ಸ್ ಧಾರಾಳ ಸಿಗುತ್ತಿದೆ. ಇದನ್ನು ಮೊದಲ ಸಲ ಪಡೆದ ಪ್ರತಿ ಗ್ರಾಹಕನೂ ತಾನೊಬ್ಬ ಸೆಲೆಬ್ರಿಟಿ ಆಗಿಹೋದೆ ಎಂಬಂತೆ ಬೀಗುತ್ತಿರುವುದು ಎಂಥ ವಿಪರ್ಯಾಸ!
ಆಹಾ… ಎಂಥ ಸ್ಮಾರ್ಟ್ ನನ್ನ ಚಿಂಟು! : ಪಾಂಡಾ ಆದಮಾತ್ರಕ್ಕೆ ಏನಂತೆ, ಬರ್ತ್‌ಡೇ ಆಚರಿಸಬಾರದು ಎಂದಿದೆಯೇ? ಅದರಲ್ಲೂ ಚೀನಾದ ಪಾಂಡಾಗಳು ಬಲು ಅಪರೂಪ, ಅಳಿದುಳಿದ ಕೆಲಕ್ಕೆ ಎಷ್ಟು ರಾಜೋಪಚಾರ ನಡೆಸಿದರೂ ಸಾಲದು. ತೈವಾನಿನ ರಾಜಧಾನಿ ತೈಪೆಯ ಮೃಗಾಲಯದಲ್ಲಿ ಈ ಬಾರಿ ಅದಕ್ಕೆ ಬರ್ತ್‌ಡೇ ಗ್ರೀಟಿಂಗ್ ಕಾರ್ಡ್ ಸಹ ನೀಡಲಾಯಿತು. ಈ ಪಾಂಡಾ ಮರಿಯನ್ನು ಬಲು ಕ್ಲಿಷ್ಟಕರ ಆರ್ಟಿಫಿಶಿಯಲ್ ಇನ್‌ಸೆಮಿನೇಶನ್ ಟೆಕ್ನಿಕ್‌ನಿಂದ ಪಡೆಯಲಾಗಿದೆ.