ಒಂದು ಸಲ ಒಬ್ಬ ಹುಡುಗಿ ಕಾರಿನಿಂದ ಅಮಿತ್‌ನನ್ನು ಗುದ್ದಿ ಅಪಘಾತ ಮಾಡಿಸಿದಳು. ಗಾಯದ ತಪಾಸಣೆಗೆ ಅವನು ಡಾಕ್ಟರ್‌ ಬಳಿ ಬಂದ. ಬ್ಯಾಂಡೇಜ್‌ ಕಟ್ಟುತ್ತಾ ಡಾಕ್ಟರ್‌ ಕೇಳಿದರು, ``ಕಾರನ್ನು ಯಾರೋ ಒಬ್ಬ ಹುಡುಗಿ ಓಡಿಸುತ್ತಿದ್ದಾಳೆ ಅಂತ ಗೊತ್ತಾದ ಮೇಲೆ ಇನ್ನಷ್ಟು ಎಚ್ಚರಿಕೆಯಿಂದ ರಸ್ತೆ ಬದಿಗೆ ಸರಿದು ಹೋಗಬಾರದೇ?''

ಅಮಿತ್‌ ಯಾವುದೋ ಲೋಕದಲ್ಲಿದವನಂತೆ ಹೇಳಿದ, ``ಡಾಕ್ಟರ್‌.... ಯಾವ ರಸ್ತೆ... ಎಂಥ ರಸ್ತೆ...  ನಾನಂತೂ ಪಾರ್ಕ್‌ನಲ್ಲಿ ಅವಳ ಮಡಿಲಲ್ಲಿ ಒರಗಿ ಕನಸು ಕಾಣುತ್ತಿದ್ದೆ....''

ಅಪಘಾತ ಯಾಕಾಯಿತು ಎಂದು ಡಾಕ್ಟರ್‌ಗೆ ಅರ್ಥವಾಗದೆ ಇರುತ್ತದೆಯೇ?

ಬಹಳ ಹೊತ್ತಿನಿಂದ ಸುದರ್ಶನ್‌ ಒಂಟಿಯಾಗಿ ಪಾರ್ಕ್‌ನಲ್ಲಿ ಕುಳಿತಿದ್ದಾನೆಂದು ಅರಿತ ಅವನ ಗೆಳೆಯ ಕೇಳಿದ.

ರಾಹುಲ್ ‌: ಯಾಕೆ ಹೀಗೆ ಸಮಯ ಹಾಳು ಮಾಡುತ್ತಿದ್ದಿ?

ಸುದರ್ಶನ್‌ : ನಾನೀಗ ಸೇಡು ತೀರಿಸಿಕೊಳ್ಳುತ್ತಿದ್ದೀನಿ.....

ರಾಹುಲ್ ‌: ಯಾರ ಮೇಲೆ ಎಂಥ ಸೇಡು?

ಸುದರ್ಶನ್‌ : ಈ ಕೆಟ್ಟ ಕಾಲ ನನ್ನನ್ನು ಹಾಳು ಮಾಡಿತು. ಈಗ ಅದನ್ನು ಹಾಳು ಮಾಡುತ್ತಾ ನಾನು ಸೇಡು ತೀರಿಸಿಕೊಳ್ತಿದ್ದೀನಿ!

ಆ ದಿನ ಮಹೇಶ ಆಫೀಸಿಗೆ ರಜೆ ಹಾಕಿದ್ದ. ಅವನು ತಿಂಡಿ ಕಾಫಿ ಮುಗಿಸಿ ಹಾಯಾಗಿ ಟಿ.ವಿ. ನೋಡುತ್ತಾ ಕುಳಿತಿದ್ದ. ಅಷ್ಟರಲ್ಲಿ ಫೋನ್‌ ರಿಂಗಾಯಿತು. ಅವನು ರಿಸೀವರ್‌ ತೆಗೆದುಕೊಂಡ. ಹಲೋ ಎಂದು ಹೇಳುವ ಮೊದಲೇ, ಆ ಕಡೆಯಿಂದ ಹೇಳಿದ ಮಾತೇ ಎರಡೆರಡು ಸಲ ಕೇಳಿಬಂತು. ಅದನ್ನು ಕೇಳಿಸಿಕೊಂಡು ಮಹೇಶ್‌ ರೇಗಾಡಿಬಿಟ್ಟ, ``ಏಯ್‌.... ಸರಿಯಾದ ಮುಠ್ಠಾಳ ನೀನು! ನನ್ನನ್ನೇನು ಕಸ ಗುಡಿಸುವ ಕಾರ್ಪೋರೇಷನ್ನಿನವನು ಅಂದುಕೊಂಡ್ಯಾ?''

ಆಗ ಅವನ ಹೆಂಡತಿ ಪ್ರೀತಿಯಿಂದ ಕೇಳಿದಳು, ``ಯಾರ್ರೀ ಅದು ಫೋನ್‌ನಲ್ಲಿ....?''

``ಯಾವನಿಗ್ಗೊತ್ತು? ಯಾವನೋ ಬೇಕೂಫ ಫೋನ್‌ ಮಾಡಿ `ದಾರಿ ಕ್ಲೀನ್‌ಕ್ಲಿಯರ್‌ ತಾನೇ?' ಅಂತ ನನ್ನನ್ನು ಕೇಳ್ತಾನಲ್ಲ?'' ಎಂದು ಸಿಡುಕಿದ.

ಗಂಗವ್ವ ಮೊದಲ ಸಲ ಹಳ್ಳಿಯಿಂದ ಬೆಂಗಳೂರಿನ ಕಡೆಗೆ ರೈಲು ಹತ್ತಿದ್ದಳು. ಆಕಸ್ಮಿಕವಾಗಿ ಆಕೆ ರೈಲಿನ ಮೇಲೆ ಬರೆದಿದ್ದ ಒಂದು ಸೈನ್‌ ಬೋರ್ಡ್‌ ಗಮನಿಸಿದಳು. ಅದನ್ನು ಓದಿ ಆಕೆಗೆ ಬಹಳ ಕೋಪ ಬಂದಿತು. ಅದರಲ್ಲಿ ಹೀಗೆ ಬರೆಯಲಾಗಿತ್ತು, `ಟಿಕೆಟ್‌ ಇಲ್ಲದೆ ಪ್ರಯಾಣಿಸುವವರೇ... ಎಚ್ಚರ!'

``ಓಹೋ.... ಇದರರ್ಥ ಟಿಕೆಟ್‌ ಪಡೆದು ಪ್ರಯಾಣಿಸುವವರು ಹಾಳಾಗಿಹೋಗಲಿ ಅಂತ್ಲೇನು?'' ಎಂದು ಗುಡುಗಿದಾಗ ಕಂಪಾರ್ಟ್‌ಮೆಂಟ್‌ನಲ್ಲಿದ್ದವರೆಲ್ಲ ಬೆಚ್ಚಿಬಿದ್ದರು.

ವೀಣಾ ತನ್ನ ಗೆಳತಿ ಪ್ರೇಮಾಳಿಗೆ, ತಾನು ಮದುವೆಯಾಗಲಿದ್ದ ಹುಡುಗನನ್ನು ಪರಿಚಯಿಸಿದಳು. ನಂತರ ಅವನ ಕುರಿತಾಗಿ ಹರಟತೊಡಗಿದರು.

ಪ್ರೇಮಾ : ಹುಡುಗ ಏನೋ ಪರವಾಗಿಲ್ಲ, ಆದರೆ ಅವನು ನಗುವಾಗ ಅವನ ಉಬ್ಬಲ್ಲು  ಮಾತ್ರ ನೋಡೋಕ್ಕಾಗಲ್ಲ....

ವೀಣಾ : ಈಗೊಂದಿಷ್ಟು ಹಲ್ಲು ಕಿಸಿಯಲಿ ಬಿಡು, ಮದುವೆ ಆದಮೇಲೆ ಆ ಪ್ರಾಣಿಗೆ ನಾನೆಲ್ಲಿ ನಗುವ ಅವಕಾಶ ಕೊಡ್ತೀನಿ....!

ಹೊಸದಾಗಿ ಮದುವೆಯಾಗಿ ಮನೆತುಂಬಿದ ಸೊಸೆಗೆ ಅತ್ತೆ ತಮ್ಮ ಮನೆಯ ಪರಿಚಯ ಮಾಡಿಕೊಟ್ಟರು, ``ನೋಡಮ್ಮ... ನಾನು ಈ ಮನೆಯ ಗೃಹಮಂತ್ರಿ, ಜೊತೆಗೆ ಹಣಕಾಸು ಮಂತ್ರಿ ಕೂಡ. ನಿನ್ನ ಮಾವ ಮನೆಯ ವಿದೇಶಾಂಗ ಮಂತ್ರಿ. ನನ್ನ ಮಗ ಅಂದ್ರೆ ನಿನ್ನ ಗಂಡ ಈ ಮನೆಯ ರಾಜ್ಯಪಾಲ. ನನ್ನ  ಮಗಳು ಈ ಮನೆಯ ಮುಖ್ಯಮಂತ್ರಿ. ಈಗ ನೀನು ಹೇಳು... ನಿನಗೆ ಯಾವ ಖಾತೆ ಬೇಕು?''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ