ಬಾಲಿವುಡ್ನಲ್ಲಿ ಕೆರಿಯರ್ಹುಡುಕುತ್ತಿರುವ ಶರ್ಲಿ

24 ವರ್ಷದ ಶರ್ಲಿ ಸೇತಿಯಾಳ ತವರೂರು ನ್ಯೂಝಿಲೆಂಡ್‌. ಈಕೆ ಗಾಯಕಿ ಮಾತ್ರವಲ್ಲ, ಉತ್ತಮ ನಟಿಯೂ ಹೌದು. ಈಕೆ ಹಿಂದಿಯಲ್ಲಿ `ಜೆಂಟಲ್ ಮ್ಯಾನ್‌, ಮಸ್ಕಾ, ಛತ್ರೀವಾಲಿ' ಹಾಗೂ ತೆಲುಗಿನ `ಕೃಷ್ಣ ವೃಂದ ವಿಹಾರಿ' ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾಳೆ. ಸದ್ಯಕ್ಕಂತೂ ಯಾವುದೇ ದೊಡ್ಡ ಪ್ರಾಜೆಕ್ಟ್ ಇರದ ಶರ್ಲಿ, ಇನ್‌ ಸ್ಟಾಗ್ರಾಮ್ ನಲ್ಲಿ ತನ್ನ ರೀಲ್ಸ್ ಪೋಸ್ಟ್ ಮಾಡುತ್ತಿದ್ದಾಳೆ. ಇವಳ ನಟನೆಯತ್ತ ಕಣ್ಣು ಹಾಯಿಸದ ಬಾಲಿವುಡ್‌ ಪ್ರಿಯರು, ಇವಳನ್ನು ಕೇವಲ ಬಿಚ್ಚಮ್ಮಳಾಗಿ ಐಟಂ ಸಾಂಗ್ಸ್ ನಲ್ಲಿ ನೋಡಬಯಸುತ್ತಾರೆ. ಇದನ್ನರಿಯದ ಶರ್ಲಿ, ಸಿಕ್ಕಿದ ಅವಕಾಶ ಬಳಸಿಕೊಳ್ಳುತ್ತಾ ಕುಣಿಯುತ್ತಿದ್ದಾಳೆ. ಆ್ಯಲೀ ಆ್ಯರಾಮ್, ಜ್ಯಾಕ್‌ ಲೀನ್‌ ಫರ್ನಾಂಡೀಸ್‌ ಮುಂತಾದವರು ಈಗಾಗಲೇ ಈ ಪಟ್ಟಿಗೆ ಸೇರಿದ್ದಾಯ್ತು. ಸಿಕ್ಕಿದ ಅಲ್ಪ ಐಟಂಗಳಲ್ಲೇ ತೃಪ್ತಿಪಡುತ್ತಾ, ಕೆರಿಯರ್‌ ಕಾಣದೇ ಅವರು ಕಂಗಾಲಾಗಿದ್ದಾರೆ. ಅಂದಹಾಗೆ ನೋರಾ ಪಥೇಹಿಯ ಕೆರಿಯರ್‌ ಸಹ ತೀರ ಕಾಣದ ದೋಣಿಯಾಗಿದೆ. ಇದರ ಬದಲು ಈಕೆ ತವರೂರಿಗೆ ಮರಳಿ ಯಾವುದಾದರೂ ಉತ್ತಮ ಪ್ರಾಜೆಕ್ಟ್ ಕೈಗೊಳ್ಳುವುದು ಮೇಲು!

Ehsash-Channa

ಸ್ಟೈಲಿಶ್ಆದಳು ಎಹಸಾಸ್

`ಮೈ ಫ್ರೆಂಡ್‌ ಗಣೇಶ' ಚಿತ್ರದ ಬಾಲನಟಿ ನಿಮಗೆ ನೆನಪಿದ್ದಾಳಾ? ಹೌದು, ಅದೇ ಎಹಸಾಸ್‌ ಚನ್ನಾ ಇದೀಗ ಹಿರಿಯ ನಟಿಯಾಗಿ ಮಿಂಚಲು ಬರುತ್ತಿದ್ದಾಳೆ. `ಕೋಟಾ ಫ್ಯಾಕ್ಟ್ರಿ, ಹಾಸ್ಟೆಲ್ ಡೇಸ್‌'ನಂಥ ದೊಡ್ಡ ಚಿತ್ರಗಳಲ್ಲಿ ಸಣ್ಣ ಪಾತ್ರದಲ್ಲಿ ಬಂದು ಹೋಗಿದ್ದಾಳೆ. ಇಷ್ಟು ಮಾತ್ರವಲ್ಲ, ಎಹಸಾಸ್‌ ಇದೀಗ ಬಲು ಸ್ಟೈಲಿಶ್‌ಗ್ಲಾಮರಸ್‌ ಎನಿಸಿದ್ದಾಳೆ! ಇವಳ ಸೋಶಿಯಲ್ ಮೀಡಿಯಾ ಗ್ಲಾಮರಸ್‌ಫೋಟೋಗಳಿಂದ ತುಂಬಿ ತುಳುಕುತ್ತಿದೆ. ಹುಡುಗರಿರಲಿ, ಹುಡುಗಿಯರೂ ಇವಳ ಅಭಿಮಾನಿಗಳಿಗಾಗಿ FB ‌ಫಾಲೋ ಮಾಡ್ತಿದ್ದಾರೆ. ತನ್ನ ಈ ಅತ್ಯಾಧುನಿಕ ವೈಯಾರದಿಂದಾಗಿ, ಈಕೆ ಎಲ್ಲಾ ಬಾಲಿವುಡ್‌ ನ ಪ್ರಮುಖ ಇವೆಂಟ್ಸ್ ಗಳಲ್ಲೂ ಮಿಂಚಿಂಗೋ ಮಿಂಚಿಂಗು! ಇದೇನಿದು? ಬೇಬಿ ಶ್ಯಾಮಿಲಿ ತರಹ ಚೋಟುದ್ದ ಇದ್ದ ಈ ಬಾಲಪ್ರತಿಭೆ ಅದ್ಯಾವಾಗ ಇಷ್ಟೆತ್ತರಕ್ಕೆ ಬೆಳೆದುಬಿಟ್ಟಿದೆ? ಎಂದು ಬಾಲಿವುಡ್‌ ಮಂದಿ ಕಣ್‌ ಕಣ್‌ ಬಿಡುತ್ತಿದ್ದಾರೆ.

banita-sandhu

ಪ್ರತಿಭೆ ಏನೋ ಇದೆ, ಕೆಲಸ ಮಾತ್ರ ಇಲ್ಲ

ವನಿತಾ ಸಂಧೂಳ ಕೆಲಸವನ್ನು `ಅಕ್ಟೋಬರ್‌' ಚಿತ್ರದಲ್ಲಿ ಎಲ್ಲರೂ ಮೆಚ್ಚಿಕೊಂಡರು. `ಸರ್ದಾರ್‌ ಉದಮ್ ಸಿಂಗ್‌, ಆದಿತ್ಯ ವರ್ಮ' ಚಿತ್ರಗಳಲ್ಲೂ ಈಕೆಯ ನಟನೆಯ ಕುರಿತಾಗಿ ಒಳ್ಳೆಯ ಮಾತುಗಳು ಕೇಳಿಬಂದವು. ಇಷ್ಟು ಮಾತ್ರವಲ್ಲದೆ, ಈಕೆ ಬ್ರಿಟಿಷ್ ಡಾರ್ಕ್‌ ಕಾಮಿಡಿ `ಎಟರ್ನ್‌ ಬ್ಯೂಟಿ' ಚಿತ್ರದಲ್ಲೂ ಮಿಂಚಿದಳು. ಇಷ್ಟೆಲ್ಲ ಅಖಂಡ ಪ್ರತಿಭೆ ಇದ್ದರೂ, ಈಗ ಇವಳ ಬಳಿ ಯಾವ ಬಾಲಿವುಡ್‌ ಚಿತ್ರ ಇಲ್ಲ. ಸದ್ಯಕ್ಕೆ ಈಕೆಯ ಬಳಿ ಒಂದೇ ಒಂದು ತೆಲುಗು ಚಿತ್ರ `ಝೀ-2' ಮಾತ್ರ ಇದೆ. ಬಾಲಿವುಡ್‌ ನ ಹುಚ್ಚು ಖೋಡಿ ನಿರ್ಮಾಪಕರು ಮುದಿ ಸ್ಟಾರ್‌ ಗಳತ್ತಲೇ ಹಣದ ಹೊಳೆ ಹರಿಸುತ್ತಿದ್ದಾರೆಯೇ ಹೊರತು ಇಂಥ ಅಪ್ಪಟ ಪ್ರತಿಭೆಗಳತ್ತ ಗಮನಹರಿಸುತ್ತಿಲ್ಲ. ಹೀಗಾಗಿಯೇ ಬಾಲಿವುಡ್‌ ನ ಚಿತ್ರಗಳೆಲ್ಲ ಸಾಲಾಗಿ ಮಖಾಡೆ ಮಲಗುತ್ತಿವೆ. ಬಾಲಿವುಡ್‌ ಒಂದೇ ಅಲ್ಲಮ್ಮ, ದಕ್ಷಿಣದ ಚಿತ್ರಗಳಲ್ಲಿ ಗಟ್ಟಿ ನಿರ್ದೇಶಕರನ್ನು ಭೇಟಿಯಾಗು ಎಂದು ಹಿತೈಷಿಗಳು ಸಲಹೆ ನೀಡುತ್ತಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ